ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೀವು ಕೊಡೋ ಕಾಣಿಕೆಗಳಿಂದ ಆಗುವ ಪ್ರಯೋಜನಗಳು

ವಿಡಿಯೋ ಕಾನ್ಫರೆನ್ಸಿಂಗ್‌ ಮೂಲಕ ಕೂಟಗಳು ಹೇಗೆ ನಡೆಯುತ್ತೆ ಗೊತ್ತಾ?

ವಿಡಿಯೋ ಕಾನ್ಫರೆನ್ಸಿಂಗ್‌ ಮೂಲಕ ಕೂಟಗಳು ಹೇಗೆ ನಡೆಯುತ್ತೆ ಗೊತ್ತಾ?

ಜೂನ್‌ 26, 2020

 ಕೋವಿಡ್‌ 19 ಸಾಂಕ್ರಾಮಿಕ ರೋಗದಿಂದ ಅನೇಕ ದೇಶಗಳ ಸರ್ಕಾರಗಳು, ಜನರು ಗುಂಪಾಗಿ ಸೇರೋದನ್ನ ನಿಷೇಧಿಸಿವೆ. ಮತ್ತೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಅಂತ ಹೇಳಿದ್ದಾರೆ. ಯೆಹೋವನ ಸಾಕ್ಷಿಗಳು ಈ ಮಾತಿನ ಪ್ರಕಾರ ನಡ್ಕೊತಾರೆ. ಅದೇ ಸಮಯದಲ್ಲಿ ಕೂಟಗಳನ್ನ ನಡೆಸೋಕೂ ಇಷ್ಟಪಡ್ತಾರೆ. ಇದನ್ನ ಅವ್ರು ವಿಡಿಯೋ ಕಾನ್ಫರೆನ್ಸಿಂಗ್‌ ಆ್ಯಪ್‌ ಅಂದ್ರೆ ಜೂಮ್‌ ಆಪ್‌ ಮೂಲಕ ಮಾಡ್ತಾರೆ.

 ಕೂಟಗಳು ನಡೆಯೋವಾಗ ಯಾವುದೇ ರೀತಿ ಅಡಚಣೆ ಆಗಬಾರದು ಅಂತ ಸಭೆಗಳಿಗಾಗಿ ಜೂಮ್‌ ಅಪ್ಲಿಕೇಶನ್‌ ಅಕೌಂಟ್‌ಗಳನ್ನ ತಗೊಳೋದಿಕ್ಕೆ ಆಡಳಿತ ಮಂಡಲಿ ಲೋಕವ್ಯಾಪಕ ಕಾಣಿಕೆಗಳನ್ನ ಉಪಯೋಗಿಸಲು ಅನುಮತಿ ಕೊಡ್ತು. ಈ ತರ ಅಕೌಂಟನ್ನ ತಗೋಬೇಕಾದ್ರೆ 1,200 ರಿಂದ 1,500 ರೂಪಾಯಿ ಬೇಕು. ಯಾವ ಸಭೆಗಳಿಗೆ ಇಷ್ಟು ದುಡ್ಡು ಕೊಟ್ಟು ವಿಡಿಯೋ ಕಾನ್ಫರೆನ್ಸಿಂಗ್‌ ಅಕೌಂಟನ್ನ ತಗೊಳ್ಳೋಕೆ ಆಗೋದಿಲ್ವೋ ಅಂಥವ್ರಿಗೆ ಈ ಏರ್ಪಾಡಿಂದ ತುಂಬಾ ಪ್ರಯೋಜ್ನ ಆಗಿದೆ. ಈ ಮುಂಚೆ ಅವ್ರು ಉಪಯೋಗಿಸ್ತಿದ್ದ ಫ್ರೀ ಆ್ಯಪ್‌ಗಳು ಸುರಕ್ಷಿತವಾಗಿರಲಿಲ್ಲ ಮತ್ತು ತುಂಬಾ ಜನ ಕನೆಕ್ಟ್‌ ಆಗೋದಕ್ಕೆ ಆಗ್ತಿರಲಿಲ್ಲ. ಆದ್ರೆ ಈಗ ಸಂಘಟನೆ ಕೊಟ್ಟಿರೋ ಈ ಅಕೌಂಟಿಂದ ತುಂಬಾ ಜನ ಕನೆಕ್ಟ್‌ ಆಗಬಹುದು. ಮತ್ತೆ ಇದು ಸುರಕ್ಷಿತವಾಗಿದೆ. ಪ್ರಪಂಚದಲ್ಲಿ 170ಕ್ಕಿಂತ ಹೆಚ್ಚು ದೇಶಗಳಲ್ಲಿ ಸುಮಾರು 65,000 ಸಭೆಗಳು ಸಂಘಟನೆ ಮಾಡಿರೋ ಈ ಏರ್ಪಾಡಿಂದ ತುಂಬಾ ಪ್ರಯೋಜ್ನ ಪಡ್ಕೊಂಡಿದೆ.

 ಉತ್ತರ ಇಂಡೋನೇಷ್ಯದ ಕೈರಾಗಿ ಸಭೆ, ಮೊದ್ಲು ವಿಡಿಯೋ ಕಾನ್ಫರೆನ್ಸ್‌ಗಾಗಿ ಫ್ರೀ ಆ್ಯಪ್‌ಗಳನ್ನ ಬಳಸ್ತಿತ್ತು. ಆದ್ರೆ ಈಗ ಜೂಮ್‌ ಆ್ಯಪ್‌ ಬಳಸಿ ಕೂಟಗಳನ್ನ ನಡೆಸ್ತಿದೆ. ಅದ್ರ ಬಗ್ಗೆ ಬ್ರದರ್‌ ಹಾಡಿ ಸಾಂಟೋಸೋ ಹೀಗೆ ಹೇಳಿದ್ರು: “ಮೊಬೈಲ್‌ ಟ್ಯಾಬ್‌ನ ಹೇಗೆ ಬಳಸಬೇಕು ಅಂತ ಗೊತ್ತಿಲ್ಲದೇ ಇರೋರು ಕೂಡ ಕೂಟಗಳನ್ನ ನೋಡಿ ಆನಂದಿಸೋಕೆ ಆಗ್ತಿದೆ. ಯಾಕಂದ್ರೆ ಇಡೀ ಕೂಟನ ಮತ್ತೆ ಮತ್ತೆ ಲಾಗ್‌ಇನ್‌ ಮಾಡಿ ನೋಡಬೇಕಾಗಿಲ್ಲ. ಒಂದೇ ಸಲ ಆರಾಮಾಗಿ ನೋಡಬಹುದು.”

 ಇಕ್ಟಡಾರ್‌ನ ಗುವಾಕಿಲ್‌ ನಗರದ ಸಭೆಯ ಹಿರಿಯರಾದ ಲೆಸ್ಟರ್‌ ಹೀಹಾನ್‌ ಜೂನಿಯರ್‌ ಹೀಗೆ ಹೇಳಿದ್ರು: “ಕೆಲವು ಸಭೆಯ ಸಹೋದರ ಸಹೋದರಿಯರು ತುಂಬಾ ಬಡವ್ರು. ಅವ್ರಿಗೆ ಜೂಮ್‌ ಅಕೌಂಟ್‌ ತಗೊಳ್ಳೋಕೆ ತುಂಬಾ ಕಷ್ಟ. ಸಂಘಟನೆ ನಮ್ಮ ಸಭೆಗೆ ಈ ಅಕೌಂಟನ್ನ ಕೊಟ್ಟಾಗಿಂದ ನಮ್ಮ ಕೂಟಗಳು ಯಾವುದೇ ಅಡೆತಡೆ ಇಲ್ಲದೇ ಸರಾಗವಾಗಿ ನಡೀತಿದೆ. ತುಂಬಾ ಜನ ಕೂಟಗಳಿಗೆ ಹಾಜರಾಗ್ತಿದ್ದಾರೆ.”

 ಜಾಂಬಿಯಾದ ಉತ್ತರ ನೌವೇರ್‌ ವಲಯದ ಜಾನ್‌ಸನ್‌ ಮುವಾನ್ಜ ಅನ್ನೋ ಹಿರಿಯ ಹೀಗೆ ಹೇಳಿದ್ರು, “ನಮ್ಮ ಸಂಘಟನೆ ಜೂಮ್‌ ಆ್ಯಪ್‌ ಮೂಲಕ ಕೂಟಗಳನ್ನ ನಡೆಸಿದಾಗಿಂದ ‘ನಾವು ಸಹೋದರ ಸಹೋದರಿಯರಿಗೆ ಹತ್ರ ಆಗಿದ್ದೀವಿ. ಅಷ್ಟೇ ಅಲ್ಲ ಯೆಹೋವ ದೇವ್ರು ನಮ್ಮನ್ನ ತುಂಬಾ ಪ್ರೀತಿ ಮಾಡ್ತಾರೆ, ನಮ್ಮ ಬಗ್ಗೆ ಕಾಳಜಿ ವಹಿಸ್ತಾರೆ’ ಅಂತ ತುಂಬಾ ಸಹೋದರ ಸಹೋದರಿಯರು ಹೇಳಿದ್ದಾರೆ.”

 ಸಂಘಟನೆ, ವಿಪತ್ತು ಪರಿಹಾರ ಕೆಲಸಕ್ಕಾಗಿ ಕೊಟ್ಟ ಕಾಣಿಕೆಗಳಿಂದ ಈ ಜೂಮ್‌ ಅಕೌಂಟ್‌ಗಳನ್ನ ಖರೀದಿ ಮಾಡಿದೆ. ಈ ಕಾಣಿಕೆಗಳು ಲೋಕವ್ಯಾಪಕ ಕೆಲಸಕ್ಕಾಗಿ ನಮ್ಮ ಸಹೋದರ ಸಹೋದರಿಯರು ಕೊಟ್ಟ ಸ್ವಯಂ ಪ್ರೇರಿತ ಕಾಣಿಕೆಗಳಾಗಿವೆ. ಈ ಕಾಣಿಕೆಗಳನ್ನ ಲೋಕದ ಬೇರೆ ಬೇರೆ ಕಡೆ ವಿಪತ್ತು ಪರಿಹಾರ ಕೆಲ್ಸಗಳಿಗಾಗಿ ಬಳಸಲಾಗುತ್ತೆ. ಅವ್ರು ಈ ಕಾಣಿಕೆಗಳನ್ನ donate.isa4310.com ಮೂಲಕ ಕೊಡ್ತಾರೆ. ನಿಮ್ಮ ಈ ಉದಾರ ಕಾಣಿಕೆಗಳಿಗೆ ತುಂಬಾ ತುಂಬಾ ಧನ್ಯವಾದಗಳು.—2 ಕೊರಿಂಥ 8:14.