ಹೆಚ್ಚುತ್ತಿರೋ ಒಂಟಿತನಕ್ಕೆ ಪರಿಹಾರ
“ಅಮೇರಿಕಾದ ಅರ್ಧದಷ್ಟು ವಯಸ್ಕರಿಗೆ ಒಂಟಿತನ ಕಾಡ್ತಿದೆ. ಅದರಲ್ಲಿ ಯುವಜನರೇ ಜಾಸ್ತಿ.”—ಅವರ್ ಎಪಿಡೆಮಿಕ್ ಆಫ್ ಲೋನ್ಲಿನೆಸ್ ಆ್ಯಂಡ್ ಐಸೋಲೇಶನ್: ದ ಯು.ಎಸ್ ಸರ್ಜನ್ ಜನರಲ್ಸ್ ಅಡ್ವೈಸರಿ ಆನ್ ದ ಹೀಲಿಂಗ್ ಎಫೆಕ್ಟ್ಸ್ ಆಫ್ ಸೋಶಿಯಲ್ ಕನೆಕ್ಷನ್ ಆ್ಯಂಡ್ ಕಮ್ಯುನಿಟಿ, 2023.
ಒಂಟಿತನ ಅನ್ನೋದು ಒಂದು ದೊಡ್ಡ ಆರೋಗ್ಯ ಸಮಸ್ಯೆ. ಹಾಗಾಗಿ ಈ ಸಮಸ್ಯೆಯಿಂದ ಹೊರಬರೋಕೆ, ಜನರು ಬೇರೆಯವರ ಜೊತೆ ಬೆರೆಯೋ ತರ ಪ್ರೋತ್ಸಾಹ ಕೊಡೋದಕ್ಕೆ ಮತ್ತು ಬಡ ರಾಷ್ಟ್ರ ಆಗಿರಲಿ, ಶ್ರೀಮಂತ ರಾಷ್ಟ್ರ ಆಗಿರಲಿ ಒಂಟಿತನದಿಂದ ಕಷ್ಟಪಡೋ ಎಲ್ಲರಿಗೂ ಸಹಾಯ ಮಾಡೋಕೆ ವಿಶ್ವ ಆರೋಗ್ಯ ಸಂಸ್ಥೆ ಕೆಲವರನ್ನ ನೇಮಿಸಿದೆ.—ವಿಶ್ವ ಆರೋಗ್ಯ ಸಂಸ್ಥೆ, ನವೆಂಬರ್ 15, 2023.
ಒಂಟಿತನ ಅನ್ನೋ ಸುಳಿಗೆ ಸಿಲುಕದೆ ಜನರ ಜೊತೆ ಸ್ನೇಹ ಸಂಬಂಧ ಬೆಳೆಸ್ಕೊಳ್ಳೋಕೆ ಬೈಬಲ್ ಒಳ್ಳೇ ಸಲಹೆಗಳನ್ನ ಕೊಡುತ್ತೆ.
ನಿಮಗೆ ಸಹಾಯ ಮಾಡೋ ಬೈಬಲ್ ಸಲಹೆಗಳು
ನಿಮ್ಮನ್ನ ಒಂಟಿಯಾಗಿರೋ ತರ ಮಾಡೋ ವಿಷಯಗಳಿಂದ ದೂರ ಇರಿ. ಅಂದ್ರೆ ಸೋಶಿಯಲ್ ಮೀಡಿಯಾದಲ್ಲೇ ಮುಳುಗಿರಬೇಡಿ, ಅಲ್ಲಿ ನಿಜವಾದ ಸ್ನೇಹಿತರು ಸಿಗಲ್ಲ. ಬದಲಿಗೆ ಬೇರೆಯವರ ಜೊತೆ ಮಾತಾಡಿ ಅವರ ಜೊತೆ ಸಮಯ ಕಳೆಯಿರಿ, ಆಗ ನಿಜ ಸ್ನೇಹಿತರು ಸಿಗ್ತಾರೆ.
ಬೈಬಲ್ ತತ್ವ: “ನಿಜವಾದ ಸ್ನೇಹಿತ ಎಲ್ಲ ಸಮಯದಲ್ಲೂ ಪ್ರೀತಿಸ್ತಾನೆ. ಕಷ್ಟಕಾಲದಲ್ಲಿ ಅವನು ನಿಮ್ಮ ಸಹೋದರನಾಗ್ತಾನೆ.”—ಜ್ಞಾನೋಕ್ತಿ 17:17.
ಬೇರೆಯವರಿಗೆ ಸಹಾಯ ಮಾಡೋಕೆ ಅವಕಾಶಗಳಿಗಾಗಿ ಹುಡುಕಿ. ಬೇರೆಯವರಿಗೆ ನಮ್ಮ ಕೈಲಾದ ಸಹಾಯ ಮಾಡಿದಾಗ ಅವರ ಜೊತೆ ಫ್ರೆಂಡ್ ಆಗೋದಷ್ಟೇ ಅಲ್ಲ, ಅದು ನಮಗೂ ಖುಷಿ ಕೊಡುತ್ತೆ.
ಬೈಬಲ್ ತತ್ವ: “ತಗೊಳ್ಳೋದಕ್ಕಿಂತ ಕೊಡೋದ್ರಲ್ಲಿ ಜಾಸ್ತಿ ಖುಷಿ ಸಿಗುತ್ತೆ.”—ಅಪೊಸ್ತಲರ ಕಾರ್ಯ 20:35.
ಬೇರೆಯವರ ಜೊತೆ ಫ್ರೆಂಡ್ಸ್ ಆಗೋಕೆ ಬೈಬಲ್ ನಮಗೆ ಒಳ್ಳೆ ಸಲಹೆ ಕೊಡುತ್ತೆ, ಅದನ್ನ ತಿಳ್ಕೊಳ್ಳೋಕೆ ನಮ್ಮ ವೆಬ್ಸೈಟ್ ನೋಡಿ.