ಸ್ಮರಣೆಯ ಅಭಿಯಾನ
ಯೇಸು ಅಪರಾಧಗಳಿಗೆ ಅಂತ್ಯ ತರುತ್ತಾನೆ
ಅನ್ಯಾಯಕ್ಕೆ ಒಳಗಾಗಿ ಸಮಸ್ಯೆಗಳನ್ನ ಅನುಭವಿಸುವಾಗ ಎಷ್ಟು ಕಷ್ಟ ಆಗುತ್ತೆ ಅಂತ ಯೇಸುಗೆ ಚೆನ್ನಾಗಿ ಅರ್ಥ ಆಗುತ್ತೆ. ಯಾಕಂದ್ರೆ ಅವನ ಮೇಲೂ ಸುಳ್ಳಾರೋಪ ಹಾಕಿದ್ರು, ಕಾನೂನಿಗೆ ವಿರುದ್ಧವಾಗಿ ಹೊಡೆದ್ರು, ಅನ್ಯಾಯವಾಗಿ ವಿಚಾರಣೆ ಮಾಡಿ ಶಿಕ್ಷೆ ಕೊಟ್ಟರು, ತುಂಬಾ ಚಿತ್ರಹಿಂಸೆ ಕೊಟ್ಟು ಹಿಂಸಾ ಕಂಬಕ್ಕೂ ಹಾಕಿದ್ರು. ಅವನು ಯಾವ ತಪ್ಪು ಮಾಡಿಲ್ಲ ಅಂದ್ರೂ “ತುಂಬ ಜನ್ರಿಗಾಗಿ ತನ್ನ ಪ್ರಾಣವನ್ನ ಬಿಡುಗಡೆಯ ಬೆಲೆಯಾಗಿ” ಕೊಟ್ಟನು. (ಮತ್ತಾಯ 20:28; ಯೋಹಾನ 15:13) ಯೇಸು ಈಗ ದೇವರ ಸರ್ಕಾರದ ರಾಜನಾಗಿದ್ದಾನೆ, ಆತನು ತುಂಬಾ ಬೇಗ ಎಲ್ಲಾ ಕಡೆ ನಡೀತಿರೋ ಅನ್ಯಾಯ ಮತ್ತು ಅಪರಾಧಗಳನ್ನ ಶಾಶ್ವತವಾಗಿ ತೆಗೆದುಹಾಕ್ತಾನೆ.—ಯೆಶಾಯ 42:3.
ಯೇಸು ಆಳ್ವಿಕೆ ಮಾಡುವಾಗ ಲೋಕ ಹೀಗಿರುತ್ತೆ ಅಂತ ಬೈಬಲ್ ಹೇಳುತ್ತೆ:
“ಕೆಟ್ಟವರು ಇಲ್ಲದೆ ಹೋಗ್ತಾರೆ. ಅವರಿದ್ದ ಜಾಗದಲ್ಲಿ ಅವ್ರನ್ನ ಹುಡುಕಿದ್ರೂ, ಅವರು ನಿನಗೆ ಸಿಗೋದೇ ಇಲ್ಲ. ಆದ್ರೆ ದೀನ ಜನ್ರು ಭೂಮಿಯನ್ನ ಆಸ್ತಿಯಾಗಿ ಪಡ್ಕೊತಾರೆ, ನೆಮ್ಮದಿಯಾಗಿ ಖುಷಿಖುಷಿಯಾಗಿ ಅದನ್ನ ಅನುಭವಿಸ್ತಾರೆ.”—ಕೀರ್ತನೆ 37:10, 11.
ಯೇಸು ಈ ಹಿಂದೆ ಮಾಡಿರೋ ಮತ್ತು ಮುಂದೆ ಮಾಡಲಿರೋ ವಿಷಯಗಳಿಗೆ ನಾವು ಹೇಗೆ ಥ್ಯಾಂಕ್ಸ್ ಹೇಳಬಹುದು? ಲೂಕ 22:19ರಲ್ಲಿ ಯೇಸು ತನ್ನ ಹಿಂಬಾಲಕರಿಗೆ ತನ್ನ ಮರಣವನ್ನ ನೆನಪಿಸಿಕೊಳ್ಳೋಕೆ ಹೇಳಿದನು. ಅದಕ್ಕೇ ಪ್ರತಿ ವರ್ಷ ಯೆಹೋವನ ಸಾಕ್ಷಿಗಳು ಆತನ ಮರಣವನ್ನ ಸ್ಮರಿಸೋಕೆ ಒಟ್ಟಿಗೆ ಸೇರಿ ಬರ್ತಾರೆ. 2024, ಮಾರ್ಚ್ 24ರ ಭಾನುವಾರದಂದು ನಡೆಯೋ ಯೇಸುವಿನ ಮರಣದ ಸ್ಮರಣೆಗೆ ನಿಮ್ಮನ್ನ ಆಮಂತ್ರಿಸಲು ಖುಷಿಪಡ್ತೀವಿ.