ಯೆಹೋವನ ಪ್ರೀತಿಯ ಕುಟುಂಬ
1. ಏಕಾಂತ ಹತಾಶೆ ತುಂಬಿದ
ಬಾಳು ಬರುಡಾಯ್ತು, ನಿರಾಶೆ ಕಾಡಿತು.
ಮನವ ಬಿಚ್ಚಿ ಮಾತನಾಡೊ ಮಿತ್ರರ,
ಪ್ರೀತಿ ಬೆಂಬಲ ಕಾಣೋ ಹಂಬಲ.
2. ನನ್ನ ಅಪೇಕ್ಷೆ ಈಡೇರಿತು.
ಈ ಹೊಸದಾದ ಸಂಬಂಧ ನನ್ನನ್ನು ಸೇರಿತು.
ನನ್ ಸಂತೋಷಕ್ಕೀಗ ಎಲ್ಲೇ ಇಲ್ಲದೆ
ಹಾರೋ ಹಾಗಿದೆ, ನನ್ನ ಕುಟುಂಬ ಇಲ್ಲಿದೆ.
(ಅನುಪಲ್ಲವಿ)
ನನ್ ಸ್ವಂತ ಭಾಷೆ ಆಡೋರಲ್ಲ, ಬಣ್ಣ ಒಂದಲ್ಲಾ.
ಕರುಳಾ ಸಂಬಂಧವಾ ಮೀರೋ ಬಾಂಧವ್ಯ.
ಎಲ್ಲೂ ನೋಡಿಲ್ಲ ನಾನು ಈ ವಾತ್ಸಲ್ಯವನ್ನು.
ನಮ್ಮ ಈ ಬಂಧ, ಓ ಯೆಹೋವ ನಿನ್ನಿಂದ.
3. ಪ್ರೀತಿ ಆಪ್ತತೆ ನಮ್ ಆದ್ಯತೆ.
ನಕ್ಷತ್ರ ಸೈನ್ಯದಂತೆ ಈ ನಮ್ಮ ಐಕ್ಯತೆ.
ಸ್ನೇಹಕ್ಕಾಗಿ ಜೀವ ನೀಡೋ ಸಂಬಂಧ,
ನಮ್ಮ ಈ ಬಂಧ, ಓ ಯೆಹೋವ ನಿನ್ನಿಂದ.
(ಅನುಪಲ್ಲವಿ)
ಎಲ್ಲೂ ನೋಡಿಲ್ಲ ನಾನು ಈ ವಾತ್ಸಲ್ಯವನ್ನು.
ನಮ್ಮ ಈ ಬಂಧ, ಓ ಯೆಹೋವ ನಿನ್ನಿಂದ.
4. ದೇವಾ ಯೆಹೋವ ಸಮೀಪ ಸೆಳೆದು
ಪ್ರೀತಿಯ ಮಡಿಲಲ್ಲಿ ಬಿಗಿದಪ್ಪಿಕೊಂಡನು.
ಚಿರಕಾಲ ಬಾಳೋ ಸ್ನೇಹ ಸಂಬಂಧ,
ನಮ್ಮ ಈ ಬಂಧ, ಓ ಯೆಹೋವ ನಿನ್ನಿಂದ.
ನಮ್ಮ ಅನುಬಂಧ ನಿನ್ನಿಂದ.
ನಿನ್ನಿಂದ,
ಈ ಬಂಧ.