ಕೀರ್ತನೆ 98:1-9
-
ಯೆಹೋವ ನಮ್ಮ ರಕ್ಷಕ ಮತ್ತು ನೀತಿಯ ನ್ಯಾಯಾಧೀಶ
-
ಯೆಹೋವ ಹೇಗೆ ರಕ್ಷಿಸ್ತಾನೆ ಅಂತ ತೋರಿಸಿಕೊಟ್ಟಿದ್ದಾನೆ (2, 3)
-
ಮಧುರ ಗೀತೆ.
98 ಯೆಹೋವನಿಗೆ ಹೊಸ ಹಾಡನ್ನ ಹಾಡಿ,+ಯಾಕಂದ್ರೆ ಆತನು ಅದ್ಭುತಗಳನ್ನ ಮಾಡಿದ್ದಾನೆ.+
ಆತನ ಬಲಗೈ, ಆತನ ಪವಿತ್ರ ತೋಳು ರಕ್ಷಣೆ ತಂದಿದೆ.*+
2 ಯೆಹೋವ ತಾನು ಹೇಗೆ ರಕ್ಷಿಸ್ತಾನೆ ಅಂತ ತೋರಿಸ್ಕೊಟ್ಟಿದ್ದಾನೆ,+ದೇಶಗಳ ಮುಂದೆ ತನ್ನ ನೀತಿಯನ್ನ ಬಯಲು ಮಾಡಿದ್ದಾನೆ.+
3 ಇಸ್ರಾಯೇಲ್ ಮನೆತನದ ಕಡೆ ತನಗಿರೋ ಶಾಶ್ವತ ಪ್ರೀತಿ ಮತ್ತು ನಂಬಿಗಸ್ತಿಕೆಯನ್ನ ನೆನಪಿಸ್ಕೊಂಡಿದ್ದಾನೆ.+
ನಮ್ಮ ದೇವರು ಹೇಗೆ ರಕ್ಷಿಸ್ತಾನೆ ಅನ್ನೋದನ್ನ* ಇಡೀ ಭೂಮಿ ನೋಡಿದೆ.+
4 ಇಡೀ ಭೂಮಿಯ ಜನ್ರೇ, ಯೆಹೋವ ಗೆದ್ದಿದ್ದಕ್ಕೆ ಜೈಕಾರ ಹಾಕಿ.
ಉಲ್ಲಾಸಪಡಿ, ಸಂಭ್ರಮದಿಂದ ಕೂಗಿ, ಹಾಡಿ ಹೊಗಳಿ.*+
5 ತಂತಿವಾದ್ಯದ ಜೊತೆ ಯೆಹೋವನಿಗೆ ಸ್ತುತಿಗೀತೆಗಳನ್ನ ಹಾಡಿ,*ವಾದ್ಯಗಳನ್ನ ನುಡಿಸ್ತಾ, ಮಧುರ ಗೀತೆಗಳನ್ನ ಹಾಡ್ತಾ ಆತನನ್ನ ಕೊಂಡಾಡಿ.
6 ತುತ್ತೂರಿಗಳಿಂದ, ಕೊಂಬುಗಳ ಶಬ್ದದಿಂದ+ರಾಜನಾದ ಯೆಹೋವನ ಮುಂದೆ ಜೈಕಾರ ಹಾಕಿ.
7 ಸಮುದ್ರ ಅದ್ರಲ್ಲಿರೋ ಎಲ್ಲವೂಭೂಮಿ ಅದ್ರಲ್ಲಿ ವಾಸವಾಗಿರೋ ಎಲ್ಲವೂ ಜೈಕಾರ ಹಾಕಲಿ.
8 ನದಿಗಳು ಚಪ್ಪಾಳೆ ಹೊಡೀಲಿ,ಬೆಟ್ಟಗಳೆಲ್ಲ ಒಟ್ಟುಸೇರಿ ಜೈಕಾರ ಹಾಕಲಿ.+
9 ಯೆಹೋವನ ಮುಂದೆ ಜೈಕಾರ ಹಾಕಲಿ,ಯಾಕಂದ್ರೆ ಆತನು ಇಡೀ ಭೂಮಿಗೆ ನ್ಯಾಯತೀರಿಸೋಕೆ ಬರ್ತಿದ್ದಾನೆ.*
ಆತನು ಇಡೀ ಲೋಕವನ್ನ ನೀತಿಯಿಂದ ತೀರ್ಪು ಮಾಡ್ತಾನೆ.+
ಜನಾಂಗಗಳನ್ನ ನ್ಯಾಯದಿಂದ ತೀರ್ಪು ಮಾಡ್ತಾನೆ.+
ಪಾದಟಿಪ್ಪಣಿ
^ ಅಥವಾ “ಆತನಿಗೆ ಜಯ ತಂದಿದೆ.”
^ ಅಥವಾ “ದೇವರ ವಿಜಯವನ್ನ.”
^ ಅಥವಾ “ಸಂಗೀತ ರಚಿಸಿ.”
^ ಅಥವಾ “ಸಂಗೀತ ರಚಿಸಿ.”
^ ಅಥವಾ “ಬಂದಿದ್ದಾನೆ.”