ಕೀರ್ತನೆ 80:1-19

  • ಇಸ್ರಾಯೇಲಿನ ಕುರುಬ ಮತ್ತೆ ಮುಂಚಿನ ಸ್ಥಿತಿಗೆ ತರುವಂತೆ ಬೇಡಿಕೊಳ್ತಾನೆ

    • “ದೇವರೇ, ಇನ್ನೊಂದು ಸಾರಿ ದಯೆ ತೋರಿಸು” (3)

    • ಇಸ್ರಾಯೇಲ್‌ ದೇವರ ದ್ರಾಕ್ಷಿಬಳ್ಳಿ (8-15)

ಗಾಯಕರ ನಿರ್ದೇಶಕನಿಗೆ ಸೂಚನೆ, “ಲಿಲಿ” ಅನ್ನೋ ರಾಗದಲ್ಲಿ ಹಾಡಬೇಕು. ನೆನಪಲ್ಲಿಡೋಕೆ ಆಸಾಫನ+ ಮಧುರ ಗೀತೆ. 80  ಇಸ್ರಾಯೇಲಿನ ಕುರುಬನೇ, ಯೋಸೇಫನನ್ನ ಕುರಿಗಳ ತರ ನಡೆಸುವವನೇ ಕೇಳು.+ ಕೆರೂಬಿಗಳ ಮೇಲೆ* ಕೂತಿರುವವನೇ+ ನಿನ್ನ ಬೆಳಕನ್ನ ಪ್ರಕಾಶಿಸು.*   ಎಫ್ರಾಯೀಮ್‌, ಬೆನ್ಯಾಮೀನ್‌ ಮತ್ತು ಮನಸ್ಸೆಯ ಮುಂದೆ,ನೀನು ನಿನ್ನ ಶಕ್ತಿಯನ್ನ ತೋರಿಸು,+ಬಂದು ನಮ್ಮನ್ನ ಕಾಪಾಡು.+   ದೇವರೇ, ಇನ್ನೊಂದು ಸಾರಿ ದಯೆ ತೋರಿಸು,+ನಮಗೆ ರಕ್ಷಣೆ ಸಿಗೋ ಹಾಗೆ ನಿನ್ನ ಮುಖದ ಕಾಂತಿಯನ್ನ ನಮ್ಮ ಮೇಲೆ ಪ್ರಕಾಶಿಸು.+   ಸೈನ್ಯಗಳ ದೇವರಾದ ಯೆಹೋವನೇ, ನೀನು ನಿನ್ನ ಜನ್ರನ್ನ ಎಲ್ಲಿ ತನಕ ವಿರೋಧಿಸ್ತೀಯ? ಅವ್ರ ಪ್ರಾರ್ಥನೆಗಳನ್ನ ಎಲ್ಲಿ ತನಕ ಕೇಳದೆ ಇರ್ತಿಯ?+   ನೀನು ಅವ್ರಿಗೆ ಕಣ್ಣೀರನ್ನ ಊಟವಾಗಿ ಕೊಟ್ಟೆ,ಕಣ್ಣೀರಧಾರೆಯನ್ನ ಕುಡಿಯೋ ತರ ಮಾಡಿದೆ.   ನಮ್ಮ ಅಕ್ಕಪಕ್ಕದವರು ನಮ್ಮ ಜೊತೆ ಜಗಳ ಆಡೋಕೆ ಬಿಟ್ಟೆ,ನಮ್ಮ ಶತ್ರುಗಳು ಮನಸ್ಸಿಗೆ ಬಂದ ಹಾಗೆ ಮಾತಾಡಿ ನಮಗೆ ಗೇಲಿಮಾಡ್ತಾ ಇದ್ದಾರೆ.+   ಸೈನ್ಯಗಳ ದೇವರೇ, ಇನ್ನೊಂದು ಸಾರಿ ದಯೆ ತೋರಿಸು,ನಮಗೆ ರಕ್ಷಣೆ ಸಿಗೋ ಹಾಗೆ ನಿನ್ನ ಮುಖದ ಕಾಂತಿಯನ್ನ ನಮ್ಮ ಮೇಲೆ ಪ್ರಕಾಶಿಸು.+   ಒಂದು ದ್ರಾಕ್ಷಿ ಬಳ್ಳಿನ+ ಕಿತ್ಕೊಂಡು ಬರೋ ತರ ನೀನು ನಿನ್ನ ಜನ್ರನ್ನ ಈಜಿಪ್ಟಿಂದ ಕರ್ಕೊಂಡು ಬಂದೆ. ನೀನು ಜನಾಂಗಗಳನ್ನ ಅವುಗಳ ದೇಶದಿಂದ ಓಡಿಸಿ ಆ ದೇಶದಲ್ಲಿ ಅದನ್ನ ನೆಟ್ಟೆ.+   ನೀನು ಅದಕ್ಕಾಗಿ ನೆಲವನ್ನ ಹದ ಮಾಡಿದೆ,ಅದು ಬೇರು ಬಿಟ್ಟು ದೇಶದಲ್ಲೆಲ್ಲ ಹಬ್ಬಿತು.+ 10  ಅದ್ರ ನೆರಳಿಂದ ಬೆಟ್ಟಗಳು ಮುಚ್ಚಿಹೋದ್ವು,ಅದ್ರ ಕೊಂಬೆಗಳಿಂದ ದೇವರು ನೆಟ್ಟ ದೇವದಾರು ಮರಗಳು ಮರೆಯಾದ್ವು. 11  ಅದ್ರ ಕೊಂಬೆಗಳು ಸಮುದ್ರದ ತನಕ ಚಾಚಿಕೊಂಡ್ವು,ಅದ್ರ ಚಿಗುರುಗಳು ನದಿ ತನಕ* ಹರಡಿಕೊಂಡ್ವು.+ 12  ದಾರಿಹೋಕರೆಲ್ಲ ದ್ರಾಕ್ಷಿತೋಟದ ಹಣ್ಣನ್ನ ಕಿತ್ಕೊಂಡು ಹೋಗೋ ಹಾಗೆ,+ನೀನು ಯಾಕೆ ಅದ್ರ ಕಲ್ಲಿನ ಗೋಡೆಗಳನ್ನ ಬೀಳಿಸಿಬಿಟ್ಟೆ?+ 13  ಕಾಡುಹಂದಿಗಳು ಅದನ್ನ ನಾಶಮಾಡುತ್ತೆ,ಬಯಲಿನ ಕಾಡು ಪ್ರಾಣಿಗಳು ಅದನ್ನ ತಿಂದುಹಾಕುತ್ತೆ.+ 14  ಸೈನ್ಯಗಳ ದೇವರೇ, ದಯವಿಟ್ಟು ವಾಪಸ್‌ ಬಾ. ಸ್ವರ್ಗದಿಂದ ಕೆಳಗೆ ನೋಡು! ಈ ದ್ರಾಕ್ಷಿ ಬಳ್ಳಿ ಕಡೆ ಕಾಳಜಿ ತೋರಿಸು.+ 15  ನಿನ್ನ ಬಲಗೈ ನೆಟ್ಟ ಆ ಸಸಿಯನ್ನ,+ನೀನು ನಿನಗಾಗಿ ಬಲಪಡಿಸಿದ ಆ ಮಗನನ್ನ* ನೋಡು.+ 16  ಆ ಕೊಂಬೆಯನ್ನ ಕಡಿದಿದ್ದಾರೆ, ಬೆಂಕಿಯಿಂದ ಸುಟ್ಟು ಹಾಕಿದ್ದಾರೆ.+ ನಿನ್ನ ಗದರಿಕೆಯಿಂದ ಅವರು ನಾಶ ಆಗ್ತಾರೆ. 17  ನಿನ್ನ ಬಲಗೈಯಲ್ಲಿರೋ ವ್ಯಕ್ತಿಗೆ,ನೀನು ನಿನಗಾಗಿ ಬಲಪಡಿಸಿದ ಮನುಷ್ಯಕುಮಾರನಿಗೆ ಸಹಕಾರ* ಕೊಡು.+ 18  ಆಗ ನಾವು ನಿನ್ನನ್ನ ಬಿಟ್ಟು ಬೇರೆ ಕಡೆ ತಿರುಗಿಕೊಳ್ಳಲ್ಲ. ನಾವು ನಿನ್ನ ಹೆಸ್ರನ್ನು ಕರಿಯೋಕೆ ನಮ್ಮ ಜೀವವನ್ನ ಕಾಪಾಡು. 19  ಸೈನ್ಯಗಳ ದೇವರಾದ ಯೆಹೋವನೇ, ಇನ್ನೊಂದು ಸಾರಿ ದಯೆ ತೋರಿಸು,ನಮಗೆ ರಕ್ಷಣೆ ಸಿಗೋ ಹಾಗೆ ನಿನ್ನ ಮುಖದ ಕಾಂತಿಯನ್ನ ನಮ್ಮ ಮೇಲೆ ಪ್ರಕಾಶಿಸು.+

ಪಾದಟಿಪ್ಪಣಿ

ಬಹುಶಃ, “ಮಧ್ಯದಲ್ಲಿ.”
ಅಥವಾ “ನಿನ್ನ ತೇಜಸ್ಸನ್ನ ತೋರಿಸು.”
ಅದು, ಯೂಫ್ರೆಟಿಸ್‌.
ಅಥವಾ “ಈ ರೆಂಬೆಯನ್ನ.”
ಅಕ್ಷ. “ನಿನ್ನ ಕೈ ಬೆಂಬಲಿಸಲಿ.”