ಕೀರ್ತನೆ 75:1-10
-
ದೇವರು ಸರಿಯಾಗಿ ತೀರ್ಪು ಮಾಡ್ತಾನೆ
-
ಕೆಟ್ಟವರು ಯೆಹೋವನ ಪಾತ್ರೆಯಿಂದ ಕುಡಿತಾರೆ (8)
-
ಗಾಯಕರ ನಿರ್ದೇಶಕನಿಗೆ ಸೂಚನೆ, “ನಾಶವಾಗೋಕೆ ಬಿಡಬೇಡ” ಅನ್ನೋ ರಾಗದಲ್ಲಿ ಹಾಡಬೇಕು. ಆಸಾಫನ+ ಕೀರ್ತನೆ. ಒಂದು ಗೀತೆ.
75 ದೇವರೇ, ನಾವು ನಿನಗೆ ಕೃತಜ್ಞತೆ ಹೇಳ್ತೀವಿ, ಹೌದು ನಿನಗೆ ಧನ್ಯವಾದ ಹೇಳ್ತೀವಿ,ನಿನ್ನ ಹೆಸ್ರು ನಮ್ಮ ಜೊತೆ ಇದೆ,+ಜನ್ರು ನಿನ್ನ ಅದ್ಭುತಗಳನ್ನ ಹೇಳ್ತಾರೆ.
2 ನೀನು ಹೀಗೆ ಹೇಳ್ತಿದ್ದೆ “ನಾನು ಇಂಥ ಸಮಯ ಅಂದಮೇಲೆ,ಆ ಸಮಯಕ್ಕೆ ಸರಿಯಾಗಿ ನ್ಯಾಯವಾಗಿ ತೀರ್ಪು ಮಾಡ್ತೀನಿ.
3 ಭೂಮಿ ಮತ್ತು ಅದ್ರ ನಿವಾಸಿಗಳೆಲ್ಲ ಭಯದಿಂದ ನಡುಗಿದಾಗ,ಅದ್ರ ಕಂಬಗಳನ್ನ ಸ್ಥಿರವಾಗಿ ಇಟ್ಟವನು ನಾನೇ.” (ಸೆಲಾ)
4 ಬಡಾಯಿ ಕೊಚ್ಕೊಳ್ಳೋರಿಗೆ ನಾನು, “ಕೊಚ್ಕೊಬೇಡಿ” ಅಂತ ಹೇಳ್ತೀನಿ.
ಕೆಟ್ಟವರಿಗೆ ನಾನು ಹೀಗೆ ಹೇಳ್ತೀನಿ “ನೀವು ನಿಮ್ಮ ಕೊಂಬನ್ನ* ಮೇಲಕ್ಕೆ ಎತ್ತಬೇಡಿ.
5 ನಿಮ್ಮ ಕೊಂಬನ್ನ* ತುಂಬ ಮೇಲಕ್ಕೆ ಎತ್ತಬೇಡಿ,ಜಂಬದಿಂದ ಮಾತಾಡಬೇಡಿ.
6 ಯಾಕಂದ್ರೆ ಘನತೆ ಪೂರ್ವದಿಂದಾಗಲಿಪಶ್ಚಿಮದಿಂದಾಗಲಿ ದಕ್ಷಿಣದಿಂದಾಗಲಿ ಬರಲ್ಲ.
7 ದೇವರೇ ನ್ಯಾಯಾಧೀಶ.+
ಆತನು ಒಬ್ಬನನ್ನ ತಗ್ಗಿಸಿ ಇನ್ನೊಬ್ಬನನ್ನ ಮೇಲಕ್ಕೆ ಎತ್ತುತ್ತಾನೆ.+
8 ಯೆಹೋವನ ಕೈಯಲ್ಲಿ ಒಂದು ಪಾನಪಾತ್ರೆ ಇದೆ,+ಅದು ನೊರೆ ಬಿಡ್ತಾ ಇದೆ. ಅದ್ರಲ್ಲಿ ಮಸಾಲೆ ಮಿಶ್ರಣ ತುಂಬಿದೆ,
ಆತನು ಅದನ್ನ ಸುರಿದೇ ಸುರಿತಾನೆ,ಆಗ ಭೂಮಿ ಮೇಲಿರೋ ಕೆಟ್ಟವರೆಲ್ಲ ಅದ್ರ ತಳದಲ್ಲಿ ಇರೋದನ್ನೂ ಕುಡಿತಾರೆ.”+
9 ಆದ್ರೆ ನಾನು, ಅದ್ರ ಬಗ್ಗೆ ಯಾವಾಗ್ಲೂ ಹೇಳ್ತಾನೇ ಇರ್ತಿನಿ,ಯಾಕೋಬನ ದೇವರನ್ನ ಹೊಗಳ್ತಾ ಹಾಡು ಹಾಡ್ತೀನಿ.*
10 ಯಾಕಂದ್ರೆ ಆತನು ಹೀಗೆ ಹೇಳ್ತಾನೆ “ನಾನು ಕೆಟ್ಟವರ ಕೊಂಬುಗಳನ್ನ* ಮುರೀತೀನಿ,ನೀತಿವಂತರ ಕೊಂಬುಗಳನ್ನ* ಮೇಲಕ್ಕೆ ಎತ್ತುತ್ತೀನಿ.”
ಪಾದಟಿಪ್ಪಣಿ
^ ಅಕ್ಷ. “ಬಲವನ್ನ.”
^ ಅಕ್ಷ. “ಬಲವನ್ನ.”
^ ಅಥವಾ “ಸಂಗೀತ ನುಡಿಸ್ತೀನಿ.”
^ ಅಕ್ಷ. “ಬಲವನ್ನ.”
^ ಅಕ್ಷ. “ಬಲವನ್ನ.”