ಕೀರ್ತನೆ 58:1-11

  • ಭೂಮಿಗೆ ನ್ಯಾಯತೀರಿಸೋ ದೇವರಿದ್ದಾನೆ

    • ದುಷ್ಟರನ್ನ ಶಿಕ್ಷಿಸುವಂತೆ ಪ್ರಾರ್ಥನೆ (6-8)

ಗಾಯಕರ ನಿರ್ದೇಶಕನಿಗೆ ಸೂಚನೆ, “ನಾಶವಾಗೋಕೆ ಬಿಡಬೇಡ” ಅನ್ನೋ ರಾಗದಲ್ಲಿ ಹಾಡಬೇಕು. ದಾವೀದನ ಕೀರ್ತನೆ. ಮಿಕ್ತಾಮ್‌.* 58  ಜನ್ರೇ, ನೀವು ಮೌನವಾಗಿದ್ರೆ ನೀತಿ ಬಗ್ಗೆ ಮಾತಾಡೋಕೆ ಆಗುತ್ತಾ?+ ಸರಿಯಾಗಿ ತೀರ್ಪು ಕೊಡೋಕೆ ಆಗುತ್ತಾ?+   ನೀವು ಮನಸ್ಸಲ್ಲಿ ಕೆಟ್ಟದ್ದನ್ನೇ ಯೋಜನೆ ಮಾಡ್ತೀರ,+ದೇಶದ ಮೂಲೆ ಮೂಲೆಯಲ್ಲೂ ಹಿಂಸೆ ತುಂಬಿಸ್ತೀರ.+   ಕೆಟ್ಟವರು ಹುಟ್ಟಿದಾಗಿಂದಾನೇ* ಅಡ್ಡದಾರಿ ಹಿಡಿದಿದ್ದಾರೆ,*ಮೊಂಡರಾಗಿದ್ದಾರೆ, ಸುಳ್ಳುಗಾರರಾಗಿ ಇದ್ದಾರೆ.   ಅವ್ರ ಮಾತು ಹಾವಿನ ವಿಷ,+ಕಿವಿಯನ್ನ ಮುಚ್ಕೊಳ್ಳೋ ನಾಗರದ ಹಾಗೆ ಅವರು ಕಿವುಡರಾಗಿದ್ದಾರೆ.   ಹಾವಾಡಿಗರು ಎಷ್ಟೇ ಚೆನ್ನಾಗಿ ಪುಂಗಿ ಊದಿದ್ರೂಅದು ಅವ್ರ ಸ್ವರನ ಕೇಳಲ್ಲ.   ದೇವರೇ, ಅವ್ರ ಹಲ್ಲನ್ನ ಉದುರಿಸು! ಯೆಹೋವನೇ, ಈ ಸಿಂಹಗಳ ದವಡೆಯನ್ನ ಮುರಿದುಬಿಡು!   ಹರಿದು ಹೋಗೋ ನೀರಿನ ತರ ಅವ್ರೂ ಕಾಣದೆ ಹೋಗಲಿ. ದೇವರು ತನ್ನ ಬಿಲ್ಲನ್ನ ಬಾಗಿಸಿ, ಬಾಣಗಳಿಂದ ಅವ್ರನ್ನ ಬೀಳಿಸಲಿ.   ತೆವಳ್ತಾ ತೆವಳ್ತಾ ಕರಗಿಹೋಗೋ ಬಸವನ ಹುಳದ ತರ ಅವ್ರಾಗಲಿ,ಅಮ್ಮನ ಹೊಟ್ಟೆಯಲ್ಲೇ ಸತ್ತು, ಸೂರ್ಯನ ಬೆಳಕನ್ನೇ ನೋಡದಿರೋ ಮಗುವಿನ ತರ ಅವ್ರಾಗಲಿ.   ಮುಳ್ಳಿನ ಪೊದೆ ಸುಟ್ಟು ಅದ್ರ ಬಿಸಿ ನಿಮ್ಮ ಅಡುಗೆ ಪಾತ್ರೆನ ತಾಕೋ ಮುಂಚೆ,ಆ ಹಸಿರಾಗಿರೋ ಉರಿದುಹೋಗ್ತಿರೋ ಕಡ್ಡಿಗಳನ್ನ ಒಂದು ಬಿರುಗಾಳಿ ಎತ್ಕೊಂಡು ಹೋಗೋ ತರ ದೇವರು ಮಾಡ್ತಾನೆ.+ 10  ದೇವರು ಸೇಡು ತೀರಿಸೋದನ್ನ ನೋಡಿ ನೀತಿವಂತ ಖುಷಿಪಡ್ತಾನೆ,+ದುಷ್ಟರ ರಕ್ತದಿಂದ ಅವನ ಕಾಲುಗಳು ನೆನೆದು ಹೋಗುತ್ತೆ.+ 11  ಆಗ ಜನ್ರು “ನೀತಿವಂತನಿಗೆ ನಿಜವಾಗ್ಲೂ ಪ್ರತಿಫಲ ಇದೆ.+ ಭೂಮಿ ಮೇಲೆ ನ್ಯಾಯತೀರಿಸೋ ದೇವರೊಬ್ಬ ನಿಜವಾಗ್ಲೂ ಇದ್ದಾನೆ” ಅಂತಾರೆ.+

ಪಾದಟಿಪ್ಪಣಿ

ಅಕ್ಷ. “ಗರ್ಭದಿಂದಾನೇ.”
ಅಥವಾ “ಭ್ರಷ್ಟರಾಗಿದ್ದಾರೆ.”