ಕೀರ್ತನೆ 38:1-22
ನೆನಪಿನಲ್ಲಿಡೋಕೆ ದಾವೀದನ ಮಧುರ ಗೀತೆ.
38 ಯೆಹೋವನೇ ಕೋಪದಿಂದ ನನ್ನನ್ನ ತಿದ್ದಬೇಡ,ಸಿಟ್ಟಿಂದ ನನ್ನನ್ನ ಸರಿಪಡಿಸಬೇಡ.+
2 ಯಾಕಂದ್ರೆ ನಿನ್ನ ಬಾಣ ನನ್ನೊಳಗೆ ಆಳವಾಗಿ ಹೋಗಿದೆ,ನಿನ್ನ ಶಿಕ್ಷೆ ನನ್ನ ಮೇಲೆ ಭಾರವಾಗಿದೆ.+
3 ನಿನ್ನ ಕೋಪದಿಂದ ನನ್ನ ಇಡೀ ಶರೀರಕ್ಕೆ ಹುಷಾರಿಲ್ಲ,*ನನ್ನ ಪಾಪದಿಂದಾಗಿ ನನ್ನ ಎಲುಬಲ್ಲಿ ಶಾಂತಿನೇ ಇಲ್ಲ.+
4 ಯಾಕಂದ್ರೆ ನನ್ನ ತಪ್ಪುಗಳು ನನ್ನನ್ನ ಮುಳುಗಿಸಿಬಿಟ್ಟಿದೆ,+ಅದು ಭಾರವಾದ ಹೊರೆ ತರ ಇದೆ, ನನ್ನಿಂದ ಹೊರಕ್ಕಾಗ್ತಿಲ್ಲ.
5 ನನ್ನ ದಡ್ಡತನದಿಂದ,ನನ್ನ ಹುಣ್ಣುಗಳು ಕೀವುಗಟ್ಟಿ ಕೆಟ್ಟ ವಾಸನೆ ಬರ್ತಿದೆ.
6 ನಾನು ತುಂಬ ಸಂಕಟದಲ್ಲಿದ್ದೀನಿ, ತುಂಬ ಕುಗ್ಗಿಹೋಗಿದ್ದೀನಿ,ಇಡೀ ದಿನ ದುಃಖದಲ್ಲಿ ಮುಳುಗಿ ಹೋಗಿರ್ತಿನಿ.
7 ನನ್ನೊಳಗೆ ಬೆಂಕಿ ಉರೀತಾ ಇದೆ,*ನನ್ನ ಇಡೀ ದೇಹಕ್ಕೆ ರೋಗ ಬಂದಿದೆ.+
8 ನಾನು ಮರಗಟ್ಟಿ ಹೋಗಿದ್ದೀನಿ, ಸಂಪೂರ್ಣವಾಗಿ ನಲುಗಿಹೋಗಿದ್ದೀನಿ,ನನ್ನ ಹೃದಯದ ಯಾತನೆ ಕಿರಿಚಾಡಿ ನರಳೋ ತರ ಮಾಡ್ತಿದೆ.
9 ಯೆಹೋವನೇ, ನನ್ನ ಬಯಕೆಗಳೆಲ್ಲ ನಿನ್ನ ಮುಂದಿದೆ,ನನ್ನ ದುಃಖದ ನಿಟ್ಟುಸಿರು ನಿನಗೆ ಕಾಣ್ತಿದೆ.
10 ನನ್ನ ಹೃದಯ ಜೋರಾಗಿ ಬಡ್ಕೊಳ್ತಿದೆ, ನನಗೆ ಶಕ್ತಿನೇ ಇಲ್ಲದಾಗಿದೆ,ನನ್ನ ಕಣ್ಣಿನ ದೃಷ್ಟಿ ಮೊಬ್ಬಾಗಿದೆ.+
11 ನನ್ನ ರೋಗದಿಂದಾಗಿ ನನ್ನ ಸ್ನೇಹಿತರು ನನ್ನ ದೂರ ಮಾಡಿ ಓಡಾಡ್ತಿದ್ದಾರೆ,ನನ್ನ ಆಪ್ತಮಿತ್ರರು ನನ್ನಿಂದ ದೂರವಾಗಿದ್ದಾರೆ.
12 ನನ್ನ ಪ್ರಾಣ ತೆಗೀಬೇಕು ಅಂತಿರೋರು ಬಲೆ ಬೀಸಿದ್ದಾರೆ,ನನಗೆ ಕೆಟ್ಟದ್ದನ್ನ ಮಾಡಬೇಕು ಅಂತಿರೋರು ನನ್ನ ವಿರುದ್ಧ ಮಾತಾಡಿದ್ದಾರೆ,+ಅವರು ನನಗೆ ಮೋಸ ಮಾಡೋಕೆ ಇಡೀ ದಿನ ಕುತಂತ್ರ ಮಾಡ್ತಾರೆ.
13 ಆದ್ರೆ ನಾನು ಅವ್ರ ಮಾತಿಗೆ ಗಮನಕೊಡದೆ ಕಿವುಡನ ತರ ಇದ್ದುಬಿಡ್ತೀನಿ,+ಏನೂ ಮಾತಾಡದೆ ಮೂಕನ ಹಾಗೆ ಇದ್ದುಬಿಡ್ತೀನಿ.+
14 ಏನೂ ಕೇಳದ ಕಿವುಡನ ತರ ಆಗಿದ್ದೀನಿ,ನನ್ನ ಪರವಾಗಿ ಮಾತಾಡೋಕೆ ಆಗದ ಮೂಕನ ತರ ಆಗಿದ್ದೀನಿ.
15 ಯಾಕಂದ್ರೆ ಯೆಹೋವನೇ, ನಾನು ನಿನಗಾಗಿ ಕಾದೆ,+ನನ್ನ ದೇವರಾದ ಯೆಹೋವನೇ, ನೀನು ನನಗೆ ಉತ್ರ ಕೊಟ್ಟೆ.+
16 ನಾನು ಹೀಗೆ ಹೇಳಿದ್ದೆ “ನನ್ನ ಕಾಲು ಜಾರಿದ್ರೆ,ಅವರು ನನ್ನನ್ನ ನೋಡಿ ಖುಷಿಪಡಬಾರದು ಅಥವಾ ಕೊಚ್ಕೊಬಾರದು.”
17 ಯಾಕಂದ್ರೆ ನಾನು ಇನ್ನೇನು ಕುಸಿದು ಬೀಳ್ತಿದ್ದೆ,ಯಾವಾಗ್ಲೂ ನೋವಿಂದ ನರಳ್ತಿದ್ದೆ.+
18 ನಾನು ನನ್ನ ತಪ್ಪನ್ನ ಒಪ್ಕೊಂಡೆ,+ನನ್ನ ಪಾಪಗಳಿಂದಾಗಿ ಕಷ್ಟದಲ್ಲಿ ಬಿದ್ದೆ.+
19 ಆದ್ರೆ ನನ್ನ ಶತ್ರುಗಳು ಚುರುಕಾಗಿದ್ದಾರೆ,* ಬಲಿಷ್ಠರಾಗಿದ್ದಾರೆ,ಯಾವ ಕಾರಣನೂ ಇಲ್ಲದೆ ನನ್ನನ್ನ ದ್ವೇಷಿಸೋ ಜನ ಜಾಸ್ತಿ ಆಗಿದ್ದಾರೆ.
20 ಅವರು ಉಪಕಾರಕ್ಕೆ ಅಪಕಾರ ಮಾಡಿದ್ದಾರೆ,ಒಳ್ಳೇದನ್ನ ಮಾಡದ ಹಾಗೆ ನನ್ನನ್ನ ತಡೆದಿದ್ದಾರೆ.
21 ಯೆಹೋವನೇ, ನನ್ನನ್ನ ಬಿಟ್ಟುಬಿಡಬೇಡ.
ದೇವರೇ, ನನ್ನಿಂದ ದೂರ ಉಳೀಬೇಡ.+
22 ಯೆಹೋವನೇ, ನನ್ನ ರಕ್ಷಕನೇ,+ಬೇಗ ಬಂದು ನನಗೆ ಸಹಾಯಮಾಡು.
ಪಾದಟಿಪ್ಪಣಿ
^ ಅಕ್ಷ. “ಯಾವ ಅಂಗನೂ ಆರೋಗ್ಯವಾಗಿಲ್ಲ.”
^ ಅಕ್ಷ. “ಸೊಂಟದಲ್ಲಿ ಬೆಂಕಿ ತುಂಬ್ಕೊಂಡಿದೆ.”
^ ಅಕ್ಷ. “ಜೀವಂತವಾಗಿದ್ದಾರೆ.”