ಕೀರ್ತನೆ 20:1-9
-
ದೇವರ ಅಭಿಷಿಕ್ತ ರಾಜನಿಗೆ ರಕ್ಷಣೆ
-
ಕೆಲವರು ರಥ, ಕುದುರೆಗಳನ್ನ ನಂಬ್ಕೊಂಡಿದ್ದಾರೆ, ‘ಆದ್ರೆ ನಾವು ಯೆಹೋವನ ಹೆಸ್ರನ್ನ ನಂಬ್ಕೊಂಡಿದ್ದೀವಿ’ (7)
-
ಗಾಯಕರ ನಿರ್ದೇಶಕನಿಗೆ ಸೂಚನೆ: ದಾವೀದನ ಮಧುರ ಗೀತೆ.
20 ಕಷ್ಟದ ದಿನಗಳಲ್ಲಿ ಯೆಹೋವ ನಿನ್ನ ಪ್ರಾರ್ಥನೆಗೆ ಉತ್ತರ ಕೊಡಲಿ.
ಯಾಕೋಬನ ದೇವರ ಹೆಸ್ರು ನಿನ್ನನ್ನ ಕಾಪಾಡಲಿ.+
2 ಸ್ವರ್ಗದಿಂದ ಆತನು ನಿನಗೆ ಸಹಾಯಮಾಡಲಿ,+ಚೀಯೋನಿಂದ ಆತನು ನಿನಗೆ ಆಸರೆ ನೀಡಲಿ.+
3 ನೀನು ಕೊಟ್ಟ ಎಲ್ಲ ಉಡುಗೊರೆ ಅರ್ಪಣೆಗಳನ್ನ ಆತನು ನೆನಪಲ್ಲಿ ಇಟ್ಕೊಳ್ಳಲಿ,ಆತನು ನಿನ್ನ ಸರ್ವಾಂಗಹೋಮ ಬಲಿನ ಸಂತೋಷದಿಂದ ಸ್ವೀಕರಿಸಲಿ. (ಸೆಲಾ)
4 ನಿನ್ನ ಹೃದಯದ ಆಸೆಗಳನ್ನ ಆತನು ನಿಜಮಾಡ್ಲಿ.+
ನಿನ್ನ ಎಲ್ಲಾ ಯೋಜನೆಗಳನ್ನ* ಆತನು ಸಫಲಮಾಡ್ಲಿ.
5 ನೀನು ನಮ್ಮನ್ನ ಬಿಡಿಸೋದನ್ನ ನೋಡಿ ನಾವು ಸಂತೋಷದಿಂದ ಜೈಕಾರ ಹಾಕ್ತೀವಿ,+ನಾವು ನಮ್ಮ ದೇವರ ಹೆಸ್ರಲ್ಲಿ ಧ್ವಜಗಳನ್ನ ಎತ್ತಿ ಹಿಡಿತೀವಿ.+
ಯೆಹೋವ ನಿನ್ನೆಲ್ಲ ಕೋರಿಕೆಗಳನ್ನ ಈಡೇರಿಸಲಿ.
6 ಯೆಹೋವ ತಾನು ಅಭಿಷೇಕ ಮಾಡಿದವ್ರನ್ನ ಕಾಪಾಡ್ತಾನೆ ಅಂತ ಈಗ ನನಗೆ ಗೊತ್ತಾಯ್ತು.+
ತನ್ನ ಪವಿತ್ರ ಸ್ವರ್ಗದಿಂದ ಅವನ ಪ್ರಾರ್ಥನೆಗೆ ಉತ್ತರ ಕೊಡ್ತಾನೆ.
ತನ್ನ ಬಲಗೈಯಿಂದ ಭಾರೀ ಜಯವನ್ನ* ಕೊಡ್ತಾನೆ.+
7 ಸ್ವಲ್ಪ ಜನ ರಥಗಳನ್ನ, ಇನ್ನೂ ಸ್ವಲ್ಪ ಜನ ಕುದುರೆಗಳನ್ನ ನಂಬ್ಕೊಂಡಿದ್ದಾರೆ.+
ಆದ್ರೆ ನಾವು ನಮ್ಮ ದೇವರಾದ ಯೆಹೋವನ ಹೆಸ್ರನ್ನ ನಂಬ್ಕೊಂಡಿದ್ದೀವಿ.+
8 ಅವರು ಸೋತು ಹೋಗ್ತಾರೆ, ಬಿದ್ದು ಹೋಗ್ತಾರೆ.
ಆದ್ರೆ ನಾವು ಎದ್ದು ನೆಟ್ಟಗೆ ನಿಂತಿದ್ದೀವಿ.+
9 ಯೆಹೋವನೇ, ರಾಜನನ್ನ ಕಾಪಾಡು!+
ನಾವು ಕರೆಯೋ ದಿನ ನಮಗೆ ಉತ್ತರ ಕೊಡು.+