ಕೀರ್ತನೆ 150:1-6
150 ಯಾಹುವನ್ನ ಸ್ತುತಿಸಿ!*+
ದೇವ್ರನ್ನ ಆತನ ಪವಿತ್ರ ಸ್ಥಳದಲ್ಲಿ ಕೊಂಡಾಡಿ.+
ಆತನ ಶಕ್ತಿಗೆ ಸಾಕ್ಷಿಯಾಗಿರೋ ಆಕಾಶದ ಕೆಳಗೆ ಆತನನ್ನ ಹೊಗಳಿ.+
2 ಆತನ ಮಹಾ ಕೆಲಸಗಳಿಗಾಗಿ ಆತನನ್ನ ಸ್ತುತಿಸಿ.+
ಆತನ ದೊಡ್ಡತನಕ್ಕಾಗಿ ಆತನನ್ನ ಸ್ತುತಿಸಿ.+
3 ಕೊಂಬನ್ನ ಊದುತ್ತಾ ಆತನನ್ನ ಹೊಗಳಿ.+
ತಂತಿವಾದ್ಯವನ್ನ, ಸಂಗೀತ ವಾದ್ಯಗಳನ್ನ ನುಡಿಸ್ತಾ ಆತನಿಗೆ ಹಾಡಿ ಹೊಗಳಿ.+
4 ದಮ್ಮಡಿ ಬಡೀತಾ,+ ಕುಣಿಯುತ್ತಾ ಆತನನ್ನ ಕೊಂಡಾಡಿ.
ತಂತಿವಾದ್ಯ ನುಡಿಸ್ತಾ,+ ಕೊಳಲನ್ನ ಊದುತ್ತಾ ಆತನನ್ನ ಸ್ತುತಿಸಿ.+
5 ಝಲ್ಲರಿಗಳನ್ನ ಬಾರಿಸ್ತಾ ಆತನನ್ನ ಹೊಗಳಿ,ಝಲ್ಲರಿಗಳ ತಾಳಮೇಳದಿಂದ ಆತನನ್ನ ಕೊಂಡಾಡಿ.+
6 ಉಸಿರಾಡೋ ಎಲ್ಲ ಜೀವಿಗಳು ಯಾಹುವನ್ನ ಸ್ತುತಿಸಲಿ.
ಯಾಹುವನ್ನ ಸ್ತುತಿಸಿ!*+
ಪಾದಟಿಪ್ಪಣಿ
^ ಅಥವಾ “ಹಲ್ಲೆಲೂಯಾ.” “ಯಾಹು” ಯೆಹೋವ ಹೆಸರಿನ ಸಂಕ್ಷಿಪ್ತ ರೂಪ.
^ ಅಥವಾ “ಹಲ್ಲೆಲೂಯಾ.” “ಯಾಹು” ಯೆಹೋವ ಹೆಸರಿನ ಸಂಕ್ಷಿಪ್ತ ರೂಪ.