ಕೀರ್ತನೆ 122:1-9

  • ಯೆರೂಸಲೇಮಿನ ಶಾಂತಿಗಾಗಿ ಪ್ರಾರ್ಥನೆ

    • ಯೆಹೋವನ ಆಲಯಕ್ಕೆ ಹೋಗೋಕೆ ಖುಷಿಯೋ ಖುಷಿ (1)

    • ಅಚ್ಚುಕಟ್ಟಾಗಿ ಒಟ್ಟು ಸೇರಿಸಿರೋ ಪಟ್ಟಣ (3)

ಯಾತ್ರೆ ಗೀತೆ. ದಾವೀದನ ಕೀರ್ತನೆ. 122  “ಯೆಹೋವನ ಆಲಯಕ್ಕೆ ಹೋಗೋಣ ಬಾ” ಅಂತಜನ್ರು ಹೇಳಿದಾಗ ನನಗೆ ಖುಷಿಯೋ ಖುಷಿ.+   ಯೆರೂಸಲೇಮೇ, ಈಗನಾವು ನಮ್ಮ ಪಾದಗಳನ್ನ ನಿನ್ನ ಬಾಗಿಲಿನ ಒಳಗೆ ಇಟ್ಟಿದ್ದೀವಿ.+   ಅಚ್ಚುಕಟ್ಟಾಗಿ ಒಟ್ಟುಸೇರಿಸಿ ಕಟ್ಟಿರೋ ಪಟ್ಟಣದ ಹಾಗೆಯೆರೂಸಲೇಮನ್ನ ಕಟ್ಟಲಾಗಿದೆ.+   ಎಲ್ಲ ಕುಲಗಳು ಅಲ್ಲಿಗೆ ಹತ್ತಿ ಹೋಗಿವೆ,ಇಸ್ರಾಯೇಲ್ಯರಿಗೆ ಕೊಟ್ಟ ಆಜ್ಞೆ ಪ್ರಕಾರಯೆಹೋವನ ಹೆಸ್ರಿಗೆ ಕೃತಜ್ಞತೆ ಹೇಳೋಕೆ,ಯಾಹುವಿನ* ಕುಲಗಳು ಅಲ್ಲಿಗೆ ಹೋಗಿವೆ.+   ಯಾಕಂದ್ರೆ ಅಲ್ಲಿ ನ್ಯಾಯಪೀಠಗಳನ್ನ,+ದಾವೀದನ ಮನೆತನದ ಸಿಂಹಾಸನಗಳನ್ನ ಇಟ್ಟಿದ್ದಾರೆ.+   ಯೆರೂಸಲೇಮಿನ ಶಾಂತಿಗಾಗಿ ಪ್ರಾರ್ಥಿಸಿ.+ ಪಟ್ಟಣವೇ, ನಿನ್ನನ್ನ ಪ್ರೀತಿಸೋರು ಸುರಕ್ಷಿತವಾಗಿ ಇರ್ತಾರೆ.   ನಿನ್ನ ಭದ್ರ ಗೋಡೆ* ಒಳಗೆ ಶಾಂತಿ ಇರಲಿ,ನಿನ್ನ ಭದ್ರ ಕೋಟೆಗಳ ಒಳಗೆ ಸಂರಕ್ಷಣೆ ನೆಲೆಸಲಿ.   ನನ್ನ ಸಹೋದರರನ್ನ, ನನ್ನ ಜೊತೆಗಾರರನ್ನ ಮನಸ್ಸಲ್ಲಿಟ್ಟು“ನಿನ್ನಲ್ಲಿ ಸಮಾಧಾನ ಇರಲಿ” ಅಂತ ನಾನು ಹೇಳ್ತೀನಿ.   ನಮ್ಮ ದೇವರಾದ ಯೆಹೋವನ ಆಲಯದ ಸಲುವಾಗಿ,+ನಾನು ನಿನಗೆ ಒಳ್ಳೇದಾಗಲಿ ಅಂತ ಬಯಸ್ತೀನಿ.

ಪಾದಟಿಪ್ಪಣಿ

“ಯಾಹು” ಯೆಹೋವ ಹೆಸರಿನ ಸಂಕ್ಷಿಪ್ತ ರೂಪ.
ಅಕ್ಷ. “ರಕ್ಷಣೆಯ ಮಣ್ಣುದಿಬ್ಬದ.”