ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಾನು ದೀಕ್ಷಾಸ್ನಾನ ತಗೊಬೇಕಾ?

ನಾನು ದೀಕ್ಷಾಸ್ನಾನ ತಗೊಬೇಕಾ?

ಅಧ್ಯಾಯ 37

ನಾನು ದೀಕ್ಷಾಸ್ನಾನ ತಗೊಬೇಕಾ?

ಈ ಕೆಳಗಿನ ವಾಕ್ಯಗಳಲ್ಲಿ ಯಾವುದು ಸರಿ ಯಾವುದು ತಪ್ಪು ಅಂತ ಗುರುತಿಸಿ:

ಎಲ್ಲಾ ಕ್ರೈಸ್ತರು ದೀಕ್ಷಾಸ್ನಾನ ತಗೊಳ್ಳಲೇಬೇಕು.

□ ಸರಿ

□ ತಪ್ಪು

ದೀಕ್ಷಾಸ್ನಾನದ ಮುಖ್ಯ ಗುರಿ, ಪಾಪ ಮಾಡದೇ ಇರೋ ಹಾಗೆ ನಿಮ್ಮನ್ನ ತಡೆಯೋದೇ ಆಗಿದೆ.

□ ಸರಿ

□ ತಪ್ಪು

ರಕ್ಷಣೆ ಸಿಗಬೇಕಾದ್ರೆ ದೀಕ್ಷಾಸ್ನಾನ ತಗೊಳ್ಳಲೇಬೇಕು.

□ ಸರಿ

□ ತಪ್ಪು

ದೀಕ್ಷಾಸ್ನಾನ ತಗೊಳ್ಳಲಿಲ್ಲ ಅಂದ್ರೆ ದೇವರಿಗೆ ಲೆಕ್ಕ ಕೊಡಬೇಕಾಗಿಲ್ಲ.

□ ಸರಿ

□ ತಪ್ಪು

ನಿಮ್ಮ ಫ್ರೆಂಡ್ಸ್‌ ದೀಕ್ಷಾಸ್ನಾನ ತಗೊಂಡ್ರೆ ನೀವು ತಗೊಬೇಕು.

□ ಸರಿ

□ ತಪ್ಪು

ನೀವು ದೇವರ ಮಾತನ್ನ ಕೇಳ್ತಾ, ಆತನ ಸ್ನೇಹಿತರಾಗೋಕೆ ಪ್ರಯತ್ನಿಸ್ತಾ, ಕಲಿತಿರೋ ವಿಷ್ಯಗಳನ್ನ ಬೇರೆಯವರಿಗೆ ಹೇಳ್ತಾ ಇದ್ದೀರ ಅಂದ್ರೆ ನಿಮಗೆ ದೀಕ್ಷಾಸ್ನಾನ ತಗೊಳ್ಳಲು ಆಸೆ ಇದೆ ಅಂತ ತೋರಿಸುತ್ತೆ. ಆದ್ರೆ ನೀವು ಅದಕ್ಕೆ ರೆಡಿ ಇದ್ದೀರ ಇಲ್ವಾ ಅಂತ ಹೇಗೆ ಗೊತ್ತಾಗುತ್ತೆ? ಅದನ್ನ ತಿಳಿಯೋಕೆ ನೀವು ಮೇಲೆ ಟಿಕ್‌ ಹಾಕಿದ ವಾಕ್ಯಗಳ ಬಗ್ಗೆ ಮತ್ತೆ ನೋಡೋಣ.

ಎಲ್ಲಾ ಕ್ರೈಸ್ತರು ದೀಕ್ಷಾಸ್ನಾನ ತಗೊಳ್ಳಲೇಬೇಕು.

ಸರಿ. ತನ್ನ ಶಿಷ್ಯರಾಗುವವರು ದೀಕ್ಷಾಸ್ನಾನ ತಗೊಬೇಕು ಅಂತ ಯೇಸು ಹೇಳಿದನು. (ಮತ್ತಾಯ 28:19, 20) ಸ್ವತಃ ಯೇಸುನೇ ದೀಕ್ಷಾಸ್ನಾನ ತಗೊಂಡನು. ಯೇಸುವಿನ ಶಿಷ್ಯರಾಗಬೇಕಾದ್ರೆ ನೀವೂ ದೀಕ್ಷಾಸ್ನಾನ ತಗೊಬೇಕು. ಈ ನಿರ್ಧಾರ ತಗೊಳ್ಳೋಕೆ ಪ್ರೌಢತೆ ನಿಮ್ಮಲ್ಲಿ ಇರಬೇಕು ಮತ್ತು ಸಾಕಷ್ಟು ಆಸೆನೂ ಇರ್ಬೇಕು.

ದೀಕ್ಷಾಸ್ನಾನದ ಮುಖ್ಯ ಗುರಿ, ಪಾಪ ಮಾಡದೇ ಇರೋ ಹಾಗೆ ನಿಮ್ಮನ್ನ ತಡೆಯೋದೇ ಆಗಿದೆ.

ತಪ್ಪು. ನೀವು ಯೆಹೋವನಿಗೆ ಸಮರ್ಪಣೆ ಮಾಡ್ಕೊಂಡಿದ್ದೀರಾ ಅಂತ ಪ್ರತಿಯೊಬ್ಬರಿಗೆ ತೋರಿಸೋದೇ ದೀಕ್ಷಾಸ್ನಾನ ಆಗಿದೆ. ಹಾಗಂತ ಯಾರಿಗೂ ಗೊತ್ತಿಲ್ಲದ ಹಾಗೆ ನಾವು ಏನು ಬೇಕಾದ್ರೂ ಮಾಡಬಹುದು ಅಂತಲ್ಲ. ಅಂಥ ಕೆಲಸಗಳನ್ನ ಮಾಡಕ್ಕೆ ದೀಕ್ಷಾಸ್ನಾನ ಒಂದು ಕಾಂಟ್ರ್ಯಾಕ್ಟ್‌ ಅಲ್ಲ. ನೀವು ಯೆಹೋವನಿಗೆ ಸಮರ್ಪಿಸಿಕೊಳ್ಳಲು ಇರೋ ಮುಖ್ಯ ಕಾರಣ, ಆತನ ನಿಯಮದ ಪ್ರಕಾರ ಜೀವಿಸೋಕೆ ಮನಸ್ಸಿದೆ ಅಂತ ತೋರಿಸೋದೇ ಆಗಿದೆ.

ರಕ್ಷಣೆ ಸಿಗಬೇಕಾದ್ರೆ ದೀಕ್ಷಾಸ್ನಾನ ತಗೊಳ್ಳಲೇಬೇಕು.

ಸರಿ. ರಕ್ಷಣೆ ಸಿಗಬೇಕಾದ್ರೆ ದೀಕ್ಷಾಸ್ನಾನ ತಗೊಬೇಕು ಅಂತ ಬೈಬಲ್‌ ಹೇಳುತ್ತೆ. (1 ಪೇತ್ರ 3:21) ಆದ್ರೆ ಅಪಾಯ ಬಂದಾಗ ನಿಮ್ಮನ್ನ ಕಾಪಾಡೋಕೆ ದೀಕ್ಷಾಸ್ನಾನ ಒಂದು ಇನ್ಶುರೆನ್ಸ್‌ ಪಾಲಿಸಿ ಅಲ್ಲ. ಯೆಹೋವನ ಮೇಲೆ ಪ್ರೀತಿ ಇರೋದಾದ್ರೆ ಮತ್ತು ಮನಸಾರೆ ಆತನನ್ನು ಆರಾಧಿಸೋ ಬಯಕೆ ಇದ್ರೆ ಮಾತ್ರ ದೀಕ್ಷಾಸ್ನಾನ ತಗೊಳ್ಳಿ.—ಮಾರ್ಕ 12:29, 30.

ದೀಕ್ಷಾಸ್ನಾನ ತಗೊಳ್ಳಲಿಲ್ಲ ಅಂದ್ರೆ ದೇವರಿಗೆ ಲೆಕ್ಕ ಕೊಡಬೇಕಾಗಿಲ್ಲ.

ತಪ್ಪು. ಒಬ್ಬ ವ್ಯಕ್ತಿಗೆ ದೀಕ್ಷಾಸ್ನಾನ ಆಗಿರಲಿ, ಆಗದೇ ಇರಲಿ ಯಾಕೋಬ 4:17 ಹೇಳೋ ಹಾಗೆ: “ಯಾರಾದ್ರೂ ಒಳ್ಳೇ ಕೆಲಸ ಮಾಡೋದು ಗೊತ್ತಿದ್ರೂ ಅದನ್ನ ಮಾಡ್ದೇ ಇದ್ರೆ ಪಾಪ ಮಾಡಿದ ಹಾಗೆ.” ದೀಕ್ಷಾಸ್ನಾನ ತಗೊಳ್ಳಬೇಕು ಅನ್ನೋ ಆಸೆ ನಿಮಗೆ ಇದ್ರೆ ಅಥವಾ ಇದು ಸರಿ ಅಂತ ನಿಮಗೆ ಅನಿಸಿದ್ರೆ ನಿಮ್ಮ ಅಪ್ಪ ಅಮ್ಮ ಅಥವಾ ಪ್ರೌಢ ಸಹೋದರರ ಹತ್ತಿರ ಮಾತಾಡಿ. ದೀಕ್ಷಾಸ್ನಾನ ತಗೊಳ್ಳೋಕೆ ನೀವು ಏನೆಲ್ಲಾ ಮಾಡಬೇಕು ಅಂತ ಅವರು ನಿಮಗೆ ಹೇಳ್ತಾರೆ.

ನಿಮ್ಮ ಫ್ರೆಂಡ್ಸ್‌ ದೀಕ್ಷಾಸ್ನಾನ ತಗೊಂಡ್ರೆ ನೀವು ತಗೊಬೇಕು.

ತಪ್ಪು. ದೀಕ್ಷಾಸ್ನಾನದ ನಿರ್ಣಯ, ನೀವೇ ಮನಸಾರೆ ತಗೊಬೇಕೇ ಹೊರತು ಬೇರೆಯವರು ತಗೊಳ್ತಿದ್ದಾರೆ ಅಂತಲ್ಲ. (ಕೀರ್ತನೆ 110:3) ನೀವು ದೀಕ್ಷಾಸ್ನಾನ ತಗೊಂಡಾಗ ಯೆಹೋವನ ಸಾಕ್ಷಿಗಳಲ್ಲಿ ಒಬ್ಬರಾಗಿ ಇರ್ತೀರಾ. ಈ ಜವಾಬ್ದಾರಿಗಳನ್ನ ತಗೊಳ್ಳೋಕೆ ನೀವು ರೆಡಿ ಇದ್ದೀರಾ ಅಂತ ನಿಮಗೆ ಅನಿಸಿದಾಗ ದೀಕ್ಷಾಸ್ನಾನ ತಗೊಳ್ಳಿ.—ಪ್ರಸಂಗಿ 5:4, 5.

ದೀಕ್ಷಾಸ್ನಾನ ನಿಮ್ಮ ಜೀವನವನ್ನ ಬದಲಾಯಿಸುತ್ತೆ

ದೀಕ್ಷಾಸ್ನಾನವು ನಮ್ಮ ಜೀವನವನ್ನ ಬದಲಾಯಿಸುತ್ತೆ. ಅಷ್ಟೇ ಅಲ್ಲ, ಅನೇಕ ಆಶೀರ್ವಾದಗಳೂ ಸಿಗುತ್ತೆ. ಅದೇ ಸಮಯದಲ್ಲಿ, ನೀವು ಯೆಹೋವನಿಗೆ ಕೊಟ್ಟ ಮಾತಿನ ಪ್ರಕಾರ ನಡಿಯೋ ಜವಾಬ್ದಾರಿ ನಿಮಗಿದೆ.

ಈ ನಿರ್ಧಾರದ ಬಗ್ಗೆ ನೀವು ಯೋಚನೆ ಮಾಡ್ತಿದ್ದೀರಾ? ಹಾಗಾದ್ರೆ, ಖುಷಿಪಡಿ. ಯೆಹೋವನನ್ನ ಮನಸಾರೆ ಆರಾಧಿಸ್ತಾ ಮತ್ತು ಆತನ ಇಷ್ಟದ ಪ್ರಕಾರ ನಡಿದ್ರೆ ಆಶೀರ್ವಾದದ ಸುರಿಮಳೆನೇ ಆತನು ಸುರಿಸ್ತಾನೆ.—ಮತ್ತಾಯ 22:36, 37.

ಮುಂದಿನ ಅಧ್ಯಾಯದಲ್ಲಿ

ಜೀವನದಲ್ಲಿ ಸರಿಯಾದ ನಿರ್ಣಯಗಳನ್ನ ಮಾಡೋಕೆ ಯಾವ ಗುರಿಗಳು ಸಹಾಯ ಮಾಡುತ್ತೆ ಅಂತ ಕಲಿಯಿರಿ.

ಮುಖ್ಯ ವಚನ

ನಿಮ್ಮ ದೇಹಗಳನ್ನ ಜೀವಂತವಾದ, ಪವಿತ್ರವಾದ ಮತ್ತು ದೇವರು ಮೆಚ್ಚೋ ಬಲಿಯಾಗಿ ಕೊಡಿ. ನಿಮ್ಮ ಯೋಚನಾ ಸಾಮರ್ಥ್ಯವನ್ನ ಬಳಸಿ ಪವಿತ್ರ ಸೇವೆ ಸಲ್ಲಿಸಿ.ರೋಮನ್ನರಿಗೆ 12:1.

ಟಿಪ್‌

ಯೆಹೋವನಿಗೆ ಹತ್ತಿರ ಆಗೋಕೆ ನೀವು ಸಭೆಯಲ್ಲಿ ಬೇರೆ ಯಾರ ಸಹಾಯ ಪಡಿಬಹುದು ಅಂತ ನಿಮ್ಮ ಅಪ್ಪ-ಅಮ್ಮ ಹತ್ರ ಕೇಳಿ.—ಅಪೊಸ್ತಲರ ಕಾರ್ಯ 16:1-3.

ನಿಮಗೆ ಗೊತ್ತಿತ್ತಾ . . .

ರಕ್ಷಣೆ ಪಡೆಯೋರಿಗೆ ಹಾಕೋ ‘ಗುರುತಲ್ಲಿ’ ದೀಕ್ಷಾಸ್ನಾನ ತಗೊಳ್ಳೋದು ಒಂದು ಪ್ರಾಮುಖ್ಯ ಭಾಗ.—ಯೆಹೆಜ್ಕೇಲ 9:4-6.

ನಿಮ್ಮ ತೀರ್ಮಾನ!

ದೀಕ್ಷಾಸ್ನಾನಕ್ಕೆ ರೆಡಿ ಆಗಲು, ನಾನು ಈ ಬೈಬಲ್‌ ವಿಷಯಗಳ ಬಗ್ಗೆ ಇನ್ನೂ ಹೆಚ್ಚು ತಿಳಿದುಕೊಳ್ತೀನಿ: ............

ಈ ವಿಷಯಗಳ ಬಗ್ಗೆ ನಾನು ನನ್ನ ಅಪ್ಪ ಅಮ್ಮ ಹತ್ತಿರ ಏನು ಕೇಳೋಕೆ ಬಯಸ್ತೀನಿ ಅಂದ್ರೆ ............

ನಿಮಗೇನು ಅನಿಸುತ್ತೆ?

● ದೀಕ್ಷಾಸ್ನಾನ ಯಾಕಷ್ಟು ಪ್ರಾಮುಖ್ಯ?

● ಕೆಲವು ಯುವಜನರು ಯಾಕೆ ಬೇಗನೆ ದೀಕ್ಷಾಸ್ನಾನ ತಗೊಳ್ತಾರೆ?

● ಕೆಲವು ಯುವಜನರು ಸಮರ್ಪಣೆ ಮತ್ತು ದೀಕ್ಷಾಸ್ನಾನ ತಗೊಳ್ಳೋಕೆ ಯಾಕೆ ಹಿಂಜರಿಯುತ್ತಾರೆ?

[ಬ್ಲರ್ಬ್‌]

ನಾನು ದೀಕ್ಷಾಸ್ನಾನ ತಗೊಂಡಿದ್ರಿಂದ ಜೀವನದಲ್ಲಿ ಸರಿಯಾದ ನಿರ್ಣಯಗಳನ್ನ ಮಾಡೋಕೆ ಮತ್ತು ತಪ್ಪು ದಾರಿಯಲ್ಲಿ ಹೋಗದೆ ಇರೋಕೆ ಸಹಾಯ ಆಗಿದೆ.—ಹೋಲಿ

[ಚೌಕ]

ದೀಕ್ಷಾಸ್ನಾನದ ಬಗ್ಗೆ ಕೇಳಲಾಗುವ ಪ್ರಶ್ನೆಗಳು

ದೀಕ್ಷಾಸ್ನಾನದ ಅರ್ಥ ಏನು? ನೀರಿನಲ್ಲಿ ಮುಳುಗಿಸಿ ಎದ್ದೇಳಿಸೋದು ಅಂದ್ರೆ ಇನ್ನು ಮುಂದೆ ನಮ್ಮ ಇಷ್ಟದ ಪ್ರಕಾರ ಅಲ್ಲ ಬದಲಿಗೆ ಯೆಹೋವನ ಇಷ್ಟದ ಪ್ರಕಾರ ಜೀವಿಸ್ತೀವಿ ಅಂತ ತೋರಿಸಿಕೊಡೋದು.

ನಿಮ್ಮ ಜೀವನವನ್ನ ಯೆಹೋವನಿಗೆ ಸಮರ್ಪಿಸಿಕೊಳ್ಳೋದು ಅಂದರೇನು? ಇನ್ನು ಮುಂದೆ ನಮ್ಮ ಜೀವನ ನಮ್ಮದಲ್ಲ, ಬದಲಿಗೆ ಯೆಹೋವನದು. ಇನ್ನು ಮುಂದೆ ನಮಗೋಸ್ಕರ ಅಲ್ಲ, ದೇವರ ಇಷ್ಟವನ್ನ ಮಾಡೋದಕೋಸ್ಕರ ಜೀವಿಸ್ತೀನಿ ಅಂತ ಮಾತು ಕೊಡೋದೇ ಇದ್ರ ಅರ್ಥ ಆಗಿದೆ. (ಮತ್ತಾಯ 16:24) ಹಾಗಾಗಿ ದೀಕ್ಷಾಸ್ನಾನ ತಗೊಳ್ಳೋದಕ್ಕಿಂತ ಮುಂಚೆ ಪ್ರಾರ್ಥನೆಯಲ್ಲಿ ನೀವು ಯೆಹೋವನಿಗೆ ಸಮರ್ಪಿಸಿಕೊಳ್ಳಬೇಕು.

ದೀಕ್ಷಾಸ್ನಾನ ತಗೊಳೊಕ್ಕಿಂತ ಮುಂಚೆ ನೀವೇನು ಮಾಡ್ತಾ ಇರಬೇಕು? ದೇವರ ವಾಕ್ಯದಲ್ಲಿ ಹೇಳಿರೋ ಪ್ರಕಾರ ಜೀವಿಸ್ತಾ, ನಿಮ್ಮ ನಂಬಿಕೆ ಬಗ್ಗೆ ಬೇರೆಯವರ ಹತ್ತಿರ ಹಂಚಿಕೊಳ್ತಾ ಇರಬೇಕು. ಬೈಬಲ್‌ ಓದೋದ್ರ ಮೂಲಕ ಮತ್ತು ಪ್ರಾರ್ಥನೆ ಮೂಲಕ ದೇವರ ಜೊತೆ ಒಳ್ಳೇ ಸ್ನೇಹ ಬೆಳೆಸಿಕೊಳ್ತಾ ಇರಬೇಕು. ಯೆಹೋವನ ಆರಾಧನೆಯನ್ನ ಬೇರೆಯವರು ಹೇಳಿದರು ಅಂತಲ್ಲ, ನೀವೇ ಮನಸಾರೆ ಮಾಡ್ತಿರಬೇಕು.

ದೀಕ್ಷಾಸ್ನಾನ ತಗೊಳ್ಳಲು ನಿರ್ದಿಷ್ಟ ವಯಸ್ಸು ಇದೆಯಾ? ವಯಸ್ಸು ಪ್ರಾಮುಖ್ಯ ವಿಷಯ ಅಲ್ಲ. ಹಾಗಿದ್ರೂ ಸಮರ್ಪಣೆ ಅಂದರೇನು ಅಂತ ಸರಿಯಾಗಿ ಅರ್ಥಮಾಡಿಕೊಳ್ಳೋ ಪ್ರೌಢತೆ ನಿಮ್ಮಲ್ಲಿ ಇರಬೇಕು.

ನಿಮಗೆ ದೀಕ್ಷಾಸ್ನಾನ ತಗೊಳ್ಳೋ ಆಸೆ ಇದ್ರೂ ಅಪ್ಪ ಅಮ್ಮ ಇನ್ನೂ ಸ್ವಲ್ಪ ಕಾಯಿ ಅಂತ ಹೇಳಿದ್ರೆ ಏನು ಮಾಡ್ತೀರಾ? ಕ್ರೈಸ್ತರಾಗಿ ಹೇಗೆ ಬದುಕೋದು ಅಂತ ಇನ್ನು ಚೆನ್ನಾಗಿ ತಿಳ್ಕೋಬೇಕಂತ ನಿಮ್ಮ ಅಪ್ಪ ಅಮ್ಮ ಬಯಸಬಹುದು. ಹಾಗಾಗಿ ಅವರ ಮಾತನ್ನ ಕೇಳಿ. ನಿಮ್ಮ ಹತ್ತಿರ ಇರೋ ಸಮಯವನ್ನ ಯೆಹೋವನ ಜೊತೆ ಒಳ್ಳೇ ಸ್ನೇಹ ಬೆಳೆಸಿಕೊಳ್ಳೋಕೆ ಉಪಯೋಗಿಸಿಕೊಳ್ಳಿ.—1 ಸಮುವೇಲ 2:26.

[ಚೌಕ/​ಚಿತ್ರ]

ವರ್ಕ್‌ಶಿಟ್‌

ದೀಕ್ಷಾಸ್ನಾನ ತಗೊಳ್ಳೋದ್ರ ಬಗ್ಗೆ ಯೋಚಿಸ್ತಾ ಇದ್ದೀರಾ?

ಹಾಗಿದ್ರೆ ಇಲ್ಲಿರೋ ಪ್ರಶ್ನೆಗಳು ಮತ್ತು ಹೇಳಿಕೆಗಳ ಬಗ್ಗೆ ಗಮನಕೊಡಿ. ಉತ್ತರವನ್ನ ಟಿಕ್‌ ಮಾಡೋ ಮುಂಚೆ ಕೊಡಲಾಗಿರೋ ವಚನಗಳನ್ನ ಕೂಡ ಓದಿ.

ನೀವು ಯೆಹೋವನ ಮೇಲೆ ಭರವಸೆ ಇಟ್ಟಿದ್ದೀರಾ ಅಂತ ಯಾವೆಲ್ಲ ವಿಧಗಳಲ್ಲಿ ತೋರಿಸ್ತಾ ಇದ್ದೀರಾ?ಕೀರ್ತನೆ 71:5. ............

ಒಂದು ವಿಷಯದ ಬಗ್ಗೆ ತುಂಬ ಯೋಚಿಸ್ತಾ, ಸರಿ ಯಾವುದು ತಪ್ಪು ಯಾವುದು ಅನ್ನೋ ವ್ಯತ್ಯಾಸವನ್ನ ತಿಳ್ಕೊಂಡಿದ್ದೀನಿ ಅಂತ ನೀವು ಹೇಗೆ ತೋರಿಸಿಕೊಟ್ಟಿದ್ದೀರಾ?ಇಬ್ರಿಯ 5:14. ............

ನೀವು ಎಷ್ಟು ಸಲ ಪ್ರಾರ್ಥನೆ ಮಾಡ್ತೀರಾ?

ನಿರ್ದಿಷ್ಟವಾದ ವಿಷಯಗಳಿಗೋಸ್ಕರ ಪ್ರಾರ್ಥಿಸ್ತಿರಾ? ನಿಮ್ಮ ಪ್ರಾರ್ಥನೆಗಳಲ್ಲಿ ಯೆಹೋವನ ಮೇಲೆ ಪ್ರೀತಿ ಇದೆ ಅಂತ ಗೊತ್ತಾಗುತ್ತಾ?ಕೀರ್ತನೆ 17:6. ............

ಪ್ರಾರ್ಥನೆ ಬಗ್ಗೆ ಯಾವೆಲ್ಲ ಗುರಿಗಳನ್ನ ಇಡೋಕೆ ನೀವು ಇಷ್ಟಪಡ್ತೀರಾ ಅನ್ನೋದನ್ನ ಪಟ್ಟಿ ಮಾಡಿ.

ಬೈಬಲನ್ನ ದಿನಾಲೂ ಓದ್ತೀರಾ?ಯೆಹೋಶುವ 1:8. ............

ವೈಯಕ್ತಿಕ ಅಧ್ಯಯನದಲ್ಲಿ ಯಾವೆಲ್ಲ ವಿಷಯಗಳನ್ನ ಮಾಡ್ತೀರಾ?

ವೈಯಕ್ತಿಕ ಅಧ್ಯಯನದ ಬಗ್ಗೆ ಯಾವೆಲ್ಲ ಗುರಿಗಳನ್ನ ಇಡೋಕೆ ನೀವು ಇಷ್ಟಪಡ್ತೀರಾ ಅನ್ನೋದನ್ನ ಪಟ್ಟಿ ಮಾಡಿ.

ಒಳ್ಳೇ ರೀತಿಯಲ್ಲಿ ಸಿಹಿಸುದ್ದಿಯನ್ನ ಸಾರುತ್ತಾ ಇದ್ದೀರಾ? (ಉದಾಹರಣೆಗೆ: ಸರಳವಾದ ಬೈಬಲ್‌ ಸತ್ಯಗಳನ್ನ ಬೇರೆಯವರಿಗೆ ವಿವರಿಸೋಕೆ ನಿಮ್ಮಿಂದ ಆಗ್ತಾ ಇದ್ದೀಯಾ? ಪುನರ್ಭೇಟಿಗಳನ್ನ ಮಾಡ್ತಾ ಇದ್ದೀರಾ? ಒಂದು ಬೈಬಲ್‌ ಅಧ್ಯಯನ ಶುರು ಮಾಡೋಕೆ ಪ್ರಯತ್ನ ಹಾಕ್ತಾ ಇದ್ದೀರಾ?

□ ಹೌದು □ ಇಲ್ಲ

ಅಪ್ಪ ಅಮ್ಮ ಬಂದಿಲ್ಲ ಅಂದ್ರೂ ನೀವು ಸೇವೆಗೆ ಹೋಗ್ತಿರಾ?ಅಪೊಸ್ತಲರ ಕಾರ್ಯ 5:42.

□ ಹೌದು □ ಇಲ್ಲ

ಸಿಹಿಸುದ್ದಿ ಸಾರೋದರ ಬಗ್ಗೆ ಯಾವೆಲ್ಲ ಗುರಿಗಳನ್ನ ಇಡೋಕೆ ನೀವು ಇಷ್ಟಪಡ್ತೀರಾ ಅನ್ನೋದನ್ನ ಪಟ್ಟಿ ಮಾಡಿ.2 ತಿಮೊತಿ 2:15. ............

ತಪ್ಪದೇ ಕೂಟಗಳಿಗೆ ಹೋಗ್ತೀರಾ ಅಥವಾ ಆಗಾಗ ಹೋಗ್ತೀರಾ?ಇಬ್ರಿಯ 10:25. ............

ಯಾವೆಲ್ಲ ರೀತಿಯಲ್ಲಿ ನೀವು ಕೂಟಗಳಲ್ಲಿ ಭಾಗವಹಿಸ್ತಿರಾ?

ನಿಮ್ಮ ಅಪ್ಪ ಅಮ್ಮ ಬಂದಿಲ್ಲ ಅಂದ್ರೂ ನೀವು ಕೂಟಗಳಿಗೆ ಹೋಗ್ತೀರಾ? (ಅವರ ಅನುಮತಿ ಇರೋದಾದ್ರೆ)

□ ಹೌದು □ ಇಲ್ಲ

ದೇವರ ಇಷ್ಟ ಮಾಡೋದೇ ನನ್ನ ಆಸೆ ಅಂತ ನೀವು ನಿಜವಾಗ್ಲೂ ತೋರಿಸಿಕೊಡ್ತೀರಾ?ಕೀರ್ತನೆ 40:8.

□ ಹೌದು □ ಇಲ್ಲ

ನೀವು ಬೇರೆಯವರ ಒತ್ತಡಕ್ಕೆ ಮಣಿಯದೆ ಇದ್ದ ಕೆಲವು ಉದಾಹರಣೆಗಳ ಬಗ್ಗೆ ಪಟ್ಟಿ ಮಾಡ್ತೀರಾ?ರೋಮನ್ನರಿಗೆ 12:2.

ದೇವರ ಮೇಲಿರೋ ಪ್ರೀತಿಯನ್ನ ಇನ್ನೂ ಜಾಸ್ತಿ ಮಾಡಿಕೊಳ್ಳೋಕೆ ಏನೆಲ್ಲ ಮಾಡಬೇಕು ಅಂತ ನೀವು ಯೋಚನೆ ಮಾಡಿದ್ದೀರಾ?ಯೂದ 20, 21. ............

ಅಪ್ಪ ಅಮ್ಮ ಮತ್ತು ಸ್ನೇಹಿತರು ಯೆಹೋವನನ್ನ ಆರಾಧಿಸೋದನ್ನ ನಿಲ್ಲಿಸಿದ್ರೂ, ನೀವು ಮುಂದುವರಿಸ್ತೀರಾ?ಮತ್ತಾಯ 10:36, 37.

□ ಹೌದು □ ಇಲ್ಲ

[ಚಿತ್ರ]

ಮದುವೆ ನಿರ್ಣಯ ತರ ದೀಕ್ಷಾಸ್ನಾನ ಕೂಡ ನಮ್ಮ ಜೀವನವನ್ನ ಬದಲಾಯಿಸುತ್ತೆ. ಹಾಗಾಗಿ ಈ ನಿರ್ಣಯವನ್ನ ಹಗುರವಾಗಿ ತಗೊಳ್ಳಬೇಡಿ