ಬೈಬಲ್ ನಮಗೆ ಕಲಿಸುವ ಪಾಠಗಳು
ಈ ಪುಸ್ತಕವು ಬೈಬಲಿನಲ್ಲಿ ತಿಳಿಸಲಾಗಿರುವ ಸೃಷ್ಟಿಯಿಂದ ಆರಂಭಿಸಿ, ಯೇಸುವಿನ ಜನನ ಮತ್ತು ಶುಶ್ರೂಷೆ, ದೇವರ ರಾಜ್ಯದ ಸಮಯಾವಧಿಯ ತನಕ ಆವರಿಸುತ್ತದೆ.
ಆಡಳಿತ ಮಂಡಲಿಯ ಪತ್ರ
ಇದನ್ನು ಹೇಗೆ ಉಪಯೋಗಿಸಬಹುದು?
ಪಾಠ 1
ದೇವರು ಆಕಾಶ-ಭೂಮಿಯನ್ನು ಸೃಷ್ಟಿಮಾಡಿದನು
ದೇವರು ಆಕಾಶ ಮತ್ತು ಭೂಮಿಯನ್ನು ಸೃಷ್ಟಿಮಾಡಿದನು ಎಂದು ಬೈಬಲ್ ಹೇಳುತ್ತದೆ. ಎಲ್ಲರನ್ನು ಮತ್ತು ಎಲ್ಲವನ್ನು ಸೃಷ್ಟಿಸುವ ಮುಂಚೆ ದೇವರು ಏಕೆ ಒಬ್ಬ ದೇವದೂತನನ್ನು ಸೃಷ್ಟಿಸಿದನು?
ಪಾಠ 2
ದೇವರು ಮೊದಲ ಗಂಡು-ಹೆಣ್ಣನ್ನು ಸೃಷ್ಟಿಸಿದನು
ದೇವರು ಮೊದಲ ಗಂಡು ಮತ್ತು ಹೆಣ್ಣನ್ನು ಸೃಷ್ಟಿಸಿ ಅವರನ್ನು ಏದೆನ್ ತೋಟದಲ್ಲಿ ಇರಿಸಿದನು. ಅವರು ಮಕ್ಕಳನ್ನು ಪಡೆದು ಇಡೀ ಭೂಮಿಯನ್ನು ಸುಂದರ ತೋಟವನ್ನಾಗಿ ಮಾಡಬೇಕು ಎನ್ನುವುದು ಆತನ ಇಷ್ಟವಾಗಿತ್ತು.
ಪಾಠ 4
ಕೋಪದಿಂದ ಕೊಲೆಗೆ
ದೇವರು ಹೇಬೆಲ ಕಾಣಿಕೆಯನ್ನು ಮೆಚ್ಚಿದನು ಆದರೆ ಕಾಯಿನನ ಕಾಣಿಕೆಯನ್ನು ಮೆಚ್ಚಲಿಲ್ಲ. ಇದರಿಂದ ಕೋಪಗೊಂಡ ಕಾಯಿನ ಘೋರ ಕೃತ್ಯವನ್ನು ಮಾಡಿಬಿಟ್ಟ.
ಪಾಠ 5
ನೋಹನ ನಾವೆ
ಸ್ವರ್ಗದಿಂದ ಬಂದ ದೇವದೂತರು ಭೂಮಿಯಲ್ಲಿದ್ದ ಸ್ತ್ರೀಯರನ್ನು ಮದುವೆಯಾದರು. ಅವರಿಗೆ ಹುಟ್ಟಿದ ಮಕ್ಕಳು ದೈತ್ಯ ಹಿಂಸಕರಾಗಿದ್ದರು. ಎಲ್ಲಾ ಕಡೆ ಹಿಂಸೆ ತುಂಬಿತುಳುಕುತ್ತಿತ್ತು. ಆದರೆ ನೋಹ ಅವರಂತೆ ಇರಲಿಲ್ಲ. ಅವನು ದೇವರನ್ನು ಪ್ರೀತಿಸಿದನು, ವಿಧೇಯನಾದನು.
ಪಾಠ 6
ಹೊಸ ಲೋಕಕ್ಕೆ ಕಾಲಿಟ್ಟ ಎಂಟು ಜನ
40 ದಿನ ಹಗಲು-ರಾತ್ರಿ ಮಳೆ ಬಂತು. ನೋಹ ಮತ್ತು ಅವನ ಕುಟುಂಬ ಒಂದು ವರ್ಷಕ್ಕಿಂತ ಹೆಚ್ಚು ಸಮಯ ನಾವೆಯಲ್ಲಿದ್ದರು. ಕೊನೆಗೆ ದೇವರು ನಾವೆಯಿಂದ ಹೊರಬರಲು ಹೇಳಿದನು.
ಪಾಠ 7
ಬಾಬೆಲಿನ ಬುರುಜು
ಜನರು ಆಕಾಶವನ್ನು ಮುಟ್ಟುವಷ್ಟು ದೊಡ್ಡ ಪಟ್ಟಣ ಹಾಗೂ ಬುರುಜನ್ನು ಕಟ್ಟಲು ಕೈಹಾಕಿದರು. ದೇವರು ಇದ್ದಕ್ಕಿದ್ದಂತೆ ಅವರ ಭಾಷೆಯನ್ನು ಬದಲಾಯಿಸಿದ್ದೇಕೆ?
ಪಾಠ 8
ಅಬ್ರಹಾಮ-ಸಾರ ದೇವರ ಮಾತನ್ನು ಕೇಳಿದರು
ಅಬ್ರಹಾಮ ಮತ್ತು ಸಾರ ತಮ್ಮ ಆರಾಮವಾದ ಜೀವನವನ್ನು ಬಿಟ್ಟು ಅಲೆಮಾರಿಗಳಂತೆ ಜೀವಿಸಲು ಕಾನಾನಿಗೆ ಯಾಕೆ ಹೋದರು?
ಪಾಠ 9
ಕೊನೆಗೂ ಮಗನನ್ನು ಹೆತ್ತಳು!
ದೇವರು ಅಬ್ರಾಹಾಮನಿಗೆ ಕೊಟ್ಟ ಮಾತನ್ನು ಹೇಗೆ ನೆರವೇರಿಸಿದನು? ಈ ವಾಗ್ದಾನದಲ್ಲಿ ಅಬ್ರಹಾಮನ ಮಕ್ಕಳಲ್ಲಿ ಯಾರು ಒಳಗೂಡಿದ್ದಾರೆ? ಇಸಾಕನೋ ಅಥವಾ ಇಷ್ಮಾಯೇಲನೋ?
ಪಾಠ 10
ಲೋಟನ ಹೆಂಡತಿಯಿಂದ ಪಾಠ
ದೇವರು ಸೊದೋಮ್ ಮತ್ತು ಗೊಮೋರ ಪಟ್ಟಣಗಳನ್ನು ಬೆಂಕಿ ಮಳೆಯಿಂದ ನಾಶ ಮಾಡಿದನು. ಯಾಕೆ? ಲೋಟನ ಹೆಂಡತಿಯಿಂದ ನಾವೇನು ಕಲಿಯಬಹುದು?
ಪಾಠ 11
ನಂಬಿಕೆಯ ಪರೀಕ್ಷೆ
ದೇವರು ಅಬ್ರಹಾಮನಿಗೆ ‘ನಿನ್ನ ಒಬ್ಬನೇ ಮಗನನ್ನು ಮೊರೀಯ ಬೆಟ್ಟದಲ್ಲಿ ಯಜ್ಞವಾಗಿ ನನಗೆ ಕೊಡು’ ಅಂದನು. ಈ ನಂಬಿಕೆಯ ಪರೀಕ್ಷೆಯನ್ನು ಅಬ್ರಹಾಮನು ಹೇಗೆ ಜಯಿಸಿದನು?
ಪಾಠ 12
ಯಾಕೋಬನಿಗೆ ಬಾಧ್ಯತೆ ಸಿಕ್ಕಿತು
ಇಸಾಕ ಮತ್ತು ರೆಬೆಕ್ಕರಿಗೆ ಏಸಾವ ಮತ್ತು ಯಾಕೋಬ ಎಂಬ ಇಬ್ಬರು ಗಂಡುಮಕ್ಕಳಿದ್ದರು. ಏಸಾವ ಮೊದಲನೇ ಮಗನಾಗಿದ್ದರಿಂದ ಅವನಿಗೆ ಬಾಧ್ಯತೆ ಸಿಗಲಿತ್ತು. ಆದರೆ ಅವನು ಒಂದು ಹೊತ್ತಿನ ಊಟಕ್ಕಾಗಿ ಯಾಕೆ ಕೊಟ್ಟುಬಿಟ್ಟ?
ಪಾಠ 13
ಯಾಕೋಬ ಮತ್ತು ಏಸಾವ ಒಂದಾದರು
ಯಾಕೋಬ ದೇವದೂತನಿಂದ ಆಶೀರ್ವಾದ ಪಡೆದಿದ್ದು ಯಾಕೆ? ಯಾಕೋಬ ಏಸಾವನೊಂದಿಗೆ ಹೇಗೆ ಸಮಾಧಾನ ಮಾಡಿಕೊಂಡ?
ಪಾಠ 14
ಒಬ್ಬ ಆಳು ದೇವರಿಗೆ ವಿಧೇಯನಾದ
ಯೋಸೇಫನು ಸರಿಯಾದದ್ದನ್ನೇ ಮಾಡಿದನಾದರೂ ಅವನು ತುಂಬಾ ಕಷ್ಟಗಳನ್ನು ಅನುಭವಿಸಿದ ಏಕೆ?
ಪಾಠ 15
ಯೆಹೋವನು ಯೋಸೇಫನನ್ನು ಯಾವತ್ತೂ ಮರೆಯಲಿಲ್ಲ
ಯೋಸೇಫ ತನ್ನ ಕುಟುಂಬದಿಂದ ದೂರವಿದ್ದರೂ ದೇವರು ಆತನೊಟ್ಟಿಗೆ ಇದ್ದನೆಂದು ಆತನು ತೋರಿಸಿಕೊಟ್ಟನು.
ಪಾಠ 22
ಕೆಂಪು ಸಮುದ್ರದ ಬಳಿ ನಡೆದ ಅದ್ಭುತ
ಫರೋಹ ಹತ್ತು ಬಾಧೆಗಳನ್ನು ಅನುಭವಿಸಬೇಕಾಯಿತು. ದೇವರು ಮಾಡಿದ ಈ ಅದ್ಭುತಗಳಿಂದ ಅವನು ಬಚಾವಾಗಲೂ ಸಾಧ್ಯವಾಯಿತಾ?
ಪಾಠ 23
ಯೆಹೋವನಿಗೆ ಕೊಟ್ಟ ಮಾತು
ಇಸ್ರಾಯೇಲ್ಯರು ಸೀನಾಯಿ ಬೆಟ್ಟದ ಹತ್ತಿರ ಇದ್ದಾಗ ದೇವರಿಗೆ ಒಂದು ವಿಶೇಷವಾದ ಮಾತು ಕೊಟ್ಟರು.
ಪಾಠ 26
ಹನ್ನೆರಡು ಗೂಢಚಾರರು
ಕಾನಾನ್ ದೇಶವನ್ನು ನೋಡಿ ಬರಲು ಹೋದ ಗೂಢಚಾರರಲ್ಲಿ ಯೆಹೋಶುವ ಕಾಲೇಬರು ಉಳಿದ ಹತ್ತು ಮಂದಿಗಿಂತ ಭಿನ್ನರಾಗಿದ್ದರು.
ಪಾಠ 27
ಅವರು ಯೆಹೋವನ ವಿರುದ್ಧ ತಿರುಗಿಬಿದ್ದರು
ಕೋರಹ, ದಾತಾನ್, ಅಬೀರಾಮ, ಮತ್ತು ಇತರ 250 ಮಂದಿ ಯೆಹೋವನ ಬಗ್ಗೆ ಒಂದು ಮುಖ್ಯ ವಿಷಯವನ್ನು ತಿಳಿದುಕೊಳ್ಳಲು ತಪ್ಪಿಹೋದರು.
ಪಾಠ 30
ರಾಹಾಬ ಗೂಢಚಾರರನ್ನು ಅಡಗಿಸಿಟ್ಟಳು
ಯೆರಿಕೋವಿನ ಗೋಡೆಗಳು ಕುಸಿದು ಬಿದ್ದು ನೆಲ ಸಮವಾದವು. ಆದರೆ ಗೋಡೆಯ ಮೇಲೆ ಇದ್ದ ರಾಹಾಬಳ ಮನೆಗೆ ಮಾತ್ರ ಏನೂ ಆಗಲಿಲ್ಲ.
ಪಾಠ 31
ಯೆಹೋಶುವ ಮತ್ತು ಗಿಬ್ಯೋನ್ಯರು
ಯೆಹೋಶುವನು ದೇವರಿಗೆ, ‘ಸೂರ್ಯನೇ ಸ್ತಬ್ಧನಾಗಿ ನಿಲ್ಲು’ ಎಂದು ಪ್ರಾರ್ಥಿಸುತ್ತಾನೆ. ಆಗ ದೇವರು ಉತ್ತರಿಸಿದನಾ?
ಪಾಠ 32
ಒಬ್ಬ ಹೊಸ ನಾಯಕ ಮತ್ತು ಇಬ್ಬರು ಧೀರ ಮಹಿಳೆಯರು
ಯೆಹೋಶುವ ಸತ್ತ ನಂತರ ಇಸ್ರಾಯೇಲ್ಯರು ವಿಗ್ರಹಗಳನ್ನು ಪೂಜಿಸಲು ಆರಂಭಿಸಿದರು. ಅವರು ಕಷ್ಟಗಳನ್ನು ಅನುಭವಿಸಿದರು. ಆದರೆ ನ್ಯಾಯಸ್ಥಾಪಕ ಬಾರೂಕ ಮತ್ತು ಪ್ರವಾದಿನಿ ದೆಬೋರ ಮತ್ತು ಯಾಯೇಲಳ ಮೂಲಕ ಸಹಾಯ ಸಿಕ್ಕಿತು.
ಪಾಠ 33
ರೂತ್ ಮತ್ತು ನೊಮೊಮಿ
ತಮ್ಮ ಗಂಡಂದಿರನ್ನು ಕಳೆದುಕೊಂಡ ಇಬ್ಬರು ಇಸ್ರಾಯೇಲಿಗೆ ಹಿಂತಿರುಗಿದರು. ರೂತಳು ಕೆಲಸಕ್ಕಾಗಿ ಹೋದಾಗ ಬೋವಜನನ್ನು ಕಂಡಳು.
ಪಾಠ 34
ಗಿದ್ಯೋನ ಮಿದ್ಯಾನ್ಯರನ್ನು ಸೋಲಿಸಿದನು
ಮಿದ್ಯಾನ್ಯರು ಇಸ್ರಾಯೇಲ್ಯರ ಜೀವನವನ್ನೇ ಕಷ್ಟಕರವನ್ನಾಗಿ ಮಾಡಿದಾಗ, ಇಸ್ರಾಯೇಲ್ಯರು ಸಹಾಯಕ್ಕಾಗಿ ಯೆಹೋವನಿಗೆ ಬೇಡಿದರು. ಗಿದ್ಯೋನನ ಚಿಕ್ಕ ಸೈನ್ಯ 1,35,000 ವೈರಿ ಸೈನಿಕರನ್ನು ಹೇಗೆ ಸೋಲಿಸಿತು?
ಪಾಠ 35
ಒಬ್ಬ ಮಗನಿಗಾಗಿ ಹನ್ನಳ ಪ್ರಾರ್ಥನೆ
ಎಲ್ಕಾನ ಹನ್ನ, ಪೆನಿನ್ನ ಮತ್ತು ಮಕ್ಕಳನ್ನು ಆರಾಧನೆಗಾಗಿ ಶೀಲೋವಿನಲ್ಲಿದ್ದ ದೇವಗುಡಾರಕ್ಕೆ ಹೋಗುತ್ತಿದ್ದ. ಅಲ್ಲಿ ಒಬ್ಬ ಮಗನಿಗಾಗಿ ಹನ್ನಳು ಪ್ರಾರ್ಥಸಿದಳು. ಒಂದು ವರ್ಷದ ನಂತರ ಸಮುವೇಲ ಜನಿಸಿದನು!
ಪಾಠ 36
ಯೆಪ್ತಾಹ ಕೊಟ್ಟ ಮಾತು
ಯೆಪ್ತಾಹ ಏನೆಂದು ಮಾತು ಕೊಟ್ಟ ಮತ್ತು ಏಕೆ? ಈ ಮಾತಿಗೆ ಯೆಪ್ತಾಹನ ಮಗಳು ಹೇಗೆ ಪ್ರತಿಕ್ರಿಯಿಸಿದಳು?
ಪಾಠ 37
ಯೆಹೋವನು ಸಮುವೇಲನೊಂದಿಗೆ ಮಾತಾಡಿದ
ಮಹಾಯಾಜಕ ಏಲಿಯ ಇಬ್ಬರು ಗಂಡುಮಕ್ಕಳು ದೇವಗುಡಾರದಲ್ಲಿ ಯಾಜಕರಾಗಿ ಸೇವೆ ಮಾಡುತ್ತಿದ್ದರು. ಆದರೆ ದೇವರ ನಿಯಮಗಳನ್ನು ಪಾಲಿಸುತ್ತಿರಲಿಲ್ಲ. ಆದರೆ ಹುಡುಗ ಸಮುವೇಲ ಭಿನ್ನನಾಗಿದ್ದ. ಯೆಹೋವನು ಸಮುವೇಲನೊಂದಿಗೆ ಮಾತಾಡಿದನು.
ಪಾಠ 38
ಯೆಹೋವನಿಂದ ಶಕ್ತಿ ಪಡೆದ ಸಂಸೋನ
ಫಿಲಿಷ್ಟಿಯರ ವಿರುದ್ಧ ಹೋರಾಡಲು ದೇವರು ಸಂಸೋನನಿಗೆ ಶಕ್ತಿ ಕೊಟ್ಟನು ಆದರೆ ಸಂಸೋನ ತಪ್ಪಾದ ನಿರ್ಧಾರ ಮಾಡಿದ್ದರಿಂದ ಫಿಲಿಷ್ಟಿಯರು ಅವನನ್ನು ಸೆರೆಮನೆಗೆ ಹಾಕಿದರು.
ಪಾಠ 39
ಇಸ್ರಾಯೇಲ್ಯರ ಮೊದಲ ರಾಜ
ದೇವರು ಇಸ್ರಾಯೇಲ್ಯರನ್ನು ಮಾರ್ಗದರ್ಶಿಸಲು ನ್ಯಾಯಸ್ಥಾಪಕರನ್ನು ನೀಡಿದನು, ಆದರೆ ಅವರು ತಮಗೊಬ್ಬ ರಾಜ ಬೇಕು ಎಂದು ಕೇಳಿದರು. ಸಮುವೇಲನು ಸೌಲನನ್ನು ರಾಜನಾಗಿ ಅಭಿಷೇಕಿಸಿದ ಆದರೆ ಸಮಯ ಕಳೆದಂತೆ ಸೌಲನನ್ನು ದೇವರು ತಿರಸ್ಕರಿಸಿದನು. ಯಾಕೆ?
ಪಾಠ 40
ದಾವೀದ ಮತ್ತು ಗೊಲ್ಯಾತ
ಯೆಹೋವನು ದಾವೀದನನ್ನು ಇಸ್ರಾಯೇಲಿನ ರಾಜನಾಗುವಂತೆ ಆರಿಸುತ್ತಾನೆ ಮತ್ತು ಆ ಆಯ್ಕೆ ಉತ್ತಮವಾಗಿತ್ತೆಂದು ದಾವೀದನು ತೋರಿಸಿಕೊಡುತ್ತಾನೆ.
ಪಾಠ 41
ದಾವೀದ ಮತ್ತು ಸೌಲ
ಇವರಲ್ಲಿ ಒಬ್ಬನು ಇನ್ನೊಬ್ಬನನ್ನು ದ್ವೇಷಿಸಿದ್ದು ಯಾಕೆ ಮತ್ತು ದ್ವೇಷಕ್ಕೆ ಗುರಿಯಾದವನು ಹೇಗೆ ಪ್ರತಿಕ್ರಿಯಿಸಿದನು?
ಪಾಠ 49
ಕೆಟ್ಟ ರಾಣಿಗೆ ಶಿಕ್ಷೆ ಸಿಕ್ಕಿತು
ಇಸ್ರಾಯೇಲ್ಯನಾದ ನಾಬೋತನ ದ್ರಾಕ್ಷಿ ತೋಟವನ್ನು ಕಿತ್ತುಕೊಳ್ಳಲಿಕ್ಕಾಗಿ ಈಜೆಬೆಲಳು ಅವನನ್ನು ಕೊಲ್ಲುವ ಯೋಜನೆ ಮಾಡುತ್ತಾಳೆ. ಅವಳ ಈ ಕೆಟ್ಟ ಕೆಲಸ ಮತ್ತು ಅನ್ಯಾಯವನ್ನು ಯೆಹೋವನು ನೋಡದೆ ಇರಲಿಲ್ಲ.
ಪಾಠ 50
ಯೆಹೋವನು ಯೆಹೋಷಾಫಾಟನನ್ನು ಕಾಪಾಡಿದನು
ಯೆಹೂದಕ್ಕೆ ಶತ್ರು ರಾಜ್ಯಗಳಿಂದ ಬೆದರಿಕೆ ಬಂದಾಗ ಒಳ್ಳೆಯ ರಾಜನಾದ ಯೆಹೋಷಾಫಾಟನು ಸಹಾಯಕ್ಕಾಗಿ ದೇವರಿಗೆ ಪ್ರಾರ್ಥಿಸಿದನು.
ಪಾಠ 51
ಒಬ್ಬ ಯುದ್ಧವೀರ ಮತ್ತು ಪುಟ್ಟ ಹುಡುಗಿ
ಇಸ್ರಾಯೇಲಿನ ಒಬ್ಬ ಪುಟ್ಟ ಹುಡುಗಿ ತನ್ನ ಯಜಮಾನಿಗೆ ಯೆಹೋವನ ಅಪಾರ ಶಕ್ತಿ ಮತ್ತು ಅದರ ಅದ್ಭುತ ಫಲಿತಾಂಶಗಳ ಬಗ್ಗೆ ಹೇಳಿದಳು.
ಪಾಠ 52
ಯೆಹೋವನ ಅಗ್ನಿಮಯ ಸೈನ್ಯ
ಎಲೀಷನ ಸೇವಕನಿಗೆ ‘ಅವರ ಕಡೆಯವರಿಗಿಂತ ನಮ್ಮ ಕಡೆಯವರು ಹೆಚ್ಚಿದ್ದಾರೆ’ ಎಂದು ಹೇಗೆ ಗೊತ್ತಾಯಿತು?
ಪಾಠ 54
ಯೆಹೋವನು ಯೋನನ ಜೊತೆ ತಾಳ್ಮೆಯಿಂದ ನಡಕೊಂಡ
ದೇವರ ಪ್ರವಾದಿಯೊಬ್ಬನನ್ನು ಮೀನು ಏಕೆ ನುಂಗಿತು? ಅದರಿಂದ ಅವನು ಹೇಗೆ ಹೊರಗೆ ಬಂದನು? ಯೆಹೋವನು ಅವನಿಗೆ ಯಾವ ಪಾಠಗಳನ್ನು ಕಲಿಸಿದನು?
ಪಾಠ 55
ಯೆಹೋವನ ದೂತನು ಹಿಜ್ಕೀಯನನ್ನು ಕಾಪಾಡಿದ
ಯೆಹೋವನು ತನ್ನ ವೈರಿಗಳನ್ನು ಕಾಪಾಡುವುದಿಲ್ಲ ಎಂದು ಯೆಹೂದದ ವೈರಿಗಳು ಹೇಳಿದ್ದರು, ಆದರೆ ಅವರ ಅನಿಸಿಕೆ ತಪ್ಪು!
ಪಾಠ 56
ಯೋಷೀಯ ಧರ್ಮಶಾಸ್ತ್ರವನ್ನು ಪ್ರೀತಿಸಿದ
ಯೋಷೀಯ ರಾಜನಾದಾಗ ಅವನಿಗೆ ಎಂಟು ವರ್ಷ ವಯಸ್ಸಾಗಿತ್ತು ಮತ್ತು ಅವನು ಜನರು ಯೆಹೋವನನ್ನು ಆರಾಧಿಸಲು ಸಹಾಯ ಮಾಡಿದನು.
ಪಾಠ 58
ಯೆರೂಸಲೇಮ್‌ನಾಶವಾಯಿತು
ಯೆಹೂದದ ಜನರು ಬಿಡದೆ ಸುಳ್ಳುದೇವರುಗಳನ್ನು ಆರಾಧಿಸಿದರು. ಆದ್ದರಿಂದ ಯೆಹೋವನು ಅವರ ಕೈಬಿಟ್ಟನು.
ಪಾಠ 59
ಯೆಹೋವನಿಗೆ ವಿಧೇಯರಾದ ನಾಲ್ಕು ಹುಡುಗರು
ಯುವ ಯೆಹೂದ್ಯರು ಬಾಬೆಲಿನ ನೆಬೂಕದ್ನೆಚ್ಚರನ ಆಸ್ಥಾನದಲ್ಲಿದ್ದರೂ ಯೆಹೋವನಿಗೆ ನಿಷ್ಠರಾಗಿ ಉಳಿಯಬೇಕೆಂದು ದೃಢತೀರ್ಮಾನ ಮಾಡಿದ್ದರು.
ಪಾಠ 61
ಅವರು ಅಡ್ಡಬೀಳಲಿಲ್ಲ
ಶದ್ರಕ್, ಮೇಶಕ್, ಅಬೇದ್‌ನೆಗೋ ನೆಬೂಕದ್ನೆಚ್ಚರನು ನಿಲ್ಲಿಸಿದ ದೊಡ್ಡ ಬಂಗಾರದ ಮೂರ್ತಿಗೆ ಅಡ್ಡಬೀಳಲಿಲ್ಲ.
ಪಾಠ 66
ಎಜ್ರನು ಧರ್ಮಶಾಸ್ತ್ರವನ್ನು ಕಲಿಸಿದ
ಏಜ್ರನ ಮಾತನ್ನು ಕೇಳಿದ ನಂತರ ಇಸ್ರಾಯೇಲ್ಯರು ದೇವರಿಗೆ ಒಂದು ಮಾತನ್ನು ಕೊಟ್ಟರು.
ಪಾಠ 67
ಯೆರೂಸಲೇಮಿನ ಗೋಡೆಗಳು
ವೈರಿಗಳು ದಾಳಿ ಮಾಡಬೇಕೆಂದು ಯೋಜಿಸಿದ್ದಾರೆಂದು ನೆಹೆಮೀಯನಿಗೆ ಗೊತ್ತಾಯಿತು. ಆಗ ಅವನೇಕೆ ಭಯಪಡಲಿಲ್ಲ?
ಪಾಠ 68
ಎಲಿಸಬೇತಳಿಗೆ ಮಗುವಾಯಿತು
ಮಗು ಹುಟ್ಟುವ ತನಕ ಎಲಿಸಬೇತಳ ಗಂಡನಿಗೆ ಮಾತಾಡಲು ಆಗುವುದಿಲ್ಲ ಎಂದು ಏಕೆ ಹೇಳಲಾಯಿತು?
ಪಾಠ 70
ಯೇಸು ಹುಟ್ಟಿದನೆಂದು ದೇವದೂತರು ತಿಳಿಸುತ್ತಾರೆ
ದೇವದೂತರು ಹೇಳಿದ್ದನ್ನು ಕೇಳಿದ ಕುರುಬರು ತಕ್ಷಣ ಕ್ರಿಯೆಗೈದರು.
ಪಾಠ 73
ಯೋಹಾನನು ಮೆಸ್ಸೀಯನ ಬಗ್ಗೆ ಸಾರಿದನು
ಯೋಹಾನ ದೊಡ್ಡವನಾದಾಗ ಒಬ್ಬ ಪ್ರವಾದಿಯಾಗುತ್ತಾನೆ. ಮೆಸ್ಸೀಯನು ಬರುತ್ತಾನೆ ಎಂದು ಅವನು ಜನರಿಗೆ ಕಲಿಸಿದನು. ಅವನು ಹೇಳಿದ ಸಂದೇಶಕ್ಕೆ ಜನರು ಹೇಗೆ ಪ್ರತಿಕ್ರಿಯಿಸಿದರು?
ಪಾಠ 75
ಯೇಸುವನ್ನು ಪಿಶಾಚನು ಪರೀಕ್ಷಿಸಿದನು
ಪಿಶಾಚನು ಮೂರು ಬಾರಿ ಯೇಸುವನ್ನು ಪರೀಕ್ಷಿಸಿದನು. ಯೇಸುವಿಗೆ ಯಾವ ಮೂರು ಪರೀಕ್ಷೆಗಳು ಬಂದವು? ಯೇಸು ಪಿಶಾಚನಿಗೆ ಹೇಗೆ ಉತ್ತರ ಕೊಟ್ಟನು?
ಪಾಠ 76
ಯೇಸು ದೇವಾಲಯವನ್ನು ಶುದ್ಧ ಮಾಡುತ್ತಾನೆ
ಯೇಸು ಹಗ್ಗಗಳಿಂದ ಕೊರಡೆ ಮಾಡಿ ಪ್ರಾಣಿಗಳನ್ನು ದೇವಾಲಯದಿಂದ ಹೊರಗೆ ಓಡಿಸಿ ಹಣ ವಿನಿಮಯಗಾರರ ಮೇಜುಗಳನ್ನು ಕೆಡವಿದ್ದು ಯಾಕೆ?
ಪಾಠ 77
ಬಾವಿಗೆ ಬಂದ ಸ್ತ್ರೀ
ಯೇಸು ಸಮಾರ್ಯ ಸ್ತ್ರೀಯ ಜೊತೆ ಮಾತಾಡಿದಾಗ ಅವಳಿಗೆ ಆಶ್ಚರ್ಯ ಆಯಿತು. ಏಕೆ? ಯಾರಿಗೂ ಹೇಳದ ಯಾವ ವಿಷಯವನ್ನು ಯೇಸು ಅವಳಿಗೆ ಹೇಳಿದನು?
ಪಾಠ 78
ಯೇಸು ದೇವರ ರಾಜ್ಯದ ಸುವಾರ್ತೆ ಸಾರಿದ
ಯೇಸು ಕೆಲವರನ್ನು ‘ಮನುಷ್ಯರನ್ನು ಹಿಡಿಯುವ ಮೀನುಗಾರರಾಗಲು’ ಆಮಂತ್ರಿಸಿದನು. ನಂತರ ಸುವಾರ್ತೆ ಸಾರಲು 70 ಮಂದಿಗೆ ತರಬೇತಿ ನೀಡಿದನು.
ಪಾಠ 79
ಯೇಸು ಅನೇಕ ಅದ್ಭುತಗಳನ್ನು ಮಾಡುತ್ತಾನೆ
ಕಾಯಿಲೆಬಿದ್ದ ಜನರು ಯೇಸು ಹೋದಲ್ಲೆಲ್ಲಾ ಬರುತ್ತಿದ್ದರು ಮತ್ತು ಯೇಸು ಅವರನ್ನು ಗುಣಮಾಡುತ್ತಿದ್ದನು. ಅವನು ತೀರಿಕೊಂಡ ಒಬ್ಬ ಹುಡುಗಿಯನ್ನೂ ಬದುಕಿಸಿದನು.
ಪಾಠ 80
ಯೇಸು ಹನ್ನೆರಡು ಅಪೊಸ್ತಲರನ್ನು ಆರಿಸಿದನು
ಅವನು ಅವರನ್ನು ಯಾಕೆ ಆರಿಸಿಕೊಂಡನು? ನಿನಗೆ ಅವರ ಹೆಸರುಗಳು ನೆನಪಿದೆಯಾ?
ಪಾಠ 82
ಯೇಸು ತನ್ನ ಶಿಷ್ಯರಿಗೆ ಪ್ರಾರ್ಥಿಸಲು ಕಲಿಸುತ್ತಾನೆ
ಯಾವೆಲ್ಲಾ ವಿಷಯಗಳಿಗಾಗಿ ಬೇಡಿಕೊಳ್ಳುತ್ತಾ ಇರಬೇಕೆಂದು ಯೇಸು ತನ್ನ ಶಿಷ್ಯರಿಗೆ ಹೇಳಿದನು?
ಪಾಠ 86
ಲಾಜರನ ಪುನರುತ್ಥಾನ
ಮರಿಯಳು ಅಳುವುದನ್ನು ನೋಡಿ ಯೇಸು ಸಹ ಅತ್ತನು. ಆದರೆ ಸ್ವಲ್ಪದರಲ್ಲೇ ಅವರು ಅಳುವುದನ್ನು ನಿಲ್ಲಿಸಿ ಸಂತೋಷಪಟ್ಟರು.
ಪಾಠ 87
ಯೇಸು ಆಚರಿಸಿದ ಕೊನೆಯ ಪಸ್ಕಹಬ್ಬ
ಯೇಸು ಆಚರಿಸಿದ ಕೊನೆಯ ಪಸ್ಕಹಬ್ಬದಂದು ತನ್ನ ಅಪೊಸ್ತಲರಿಗೆ ತುಂಬಾ ಪ್ರಾಮುಖ್ಯವಾದ ಮಾರ್ಗದರ್ಶನೆಯನ್ನು ಕೊಟ್ಟನು.
ಪಾಠ 88
ಯೇಸುವನ್ನು ಬಂಧಿಸಲಾಯಿತು
ಯೇಸುವನ್ನು ಬಂಧಿಸಲು ಇಸ್ಕರಿಯೋತ ಯೂದನು ಕತ್ತಿ ದೊಣ್ಣೆಗಳನ್ನು ಹಿಡಿದುಕೊಂಡ ಒಂದು ದೊಡ್ಡ ಗುಂಪಿನೊಂದಿಗೆ ಬಂದನು.
ಪಾಠ 95
ಯಾವುದೂ ಅವರನ್ನು ತಡೆಯಲಿಲ್ಲ
ಯೇಸುವನ್ನು ಕೊಂದ ಧಾರ್ಮಿಕ ಮುಖಂಡರು ಆತನ ಶಿಷ್ಯರ ಬಾಯಿ ಮುಚ್ಚಿಸಲು ಪ್ರಯತ್ನಿಸಿದರು. ಆದರೆ ಅವರಿಂದ ಆಗಲಿಲ್ಲ.
ಪಾಠ 97
ಕೊರ್ನೇಲ್ಯನು ಪವಿತ್ರಾತ್ಮವನ್ನು ಪಡೆದನು
ಕೊರ್ನೇಲ್ಯನು ಯೆಹೂದ್ಯನಲ್ಲದಿದ್ದರೂ, ಅವನ ಮನೆಗೆ ಹೋಗುವಂತೆ ದೇವರು ಪೇತ್ರನನ್ನು ಏಕೆ ಕಳುಹಿಸಿದನು?
ಪಾಠ 98
ಕ್ರೈಸ್ತ ಧರ್ಮ ಅನೇಕ ದೇಶಗಳಿಗೆ ಹಬ್ಬಿತು
ಅಪೊಸ್ತಲ ಪೌಲನು ಮತ್ತು ಅವನ ಮಿಷೆನರಿ ಜೊತೆಗಾರರು ದೂರದೂರುಗಳಿಗೆ ಸಾರುವ ಕೆಲಸವನ್ನು ಆರಂಭಿಸಿದರು.
ಪಾಠ 101
ಪೌಲನನ್ನು ರೋಮಿಗೆ ಕಳುಹಿಸಲಾಯಿತು
ಪ್ರಯಾಣದುದ್ದಕ್ಕೂ ಅಪಾಯಗಳು ಎದುರಾದವು. ಆದರೆ ಅವು ಯಾವುವೂ ಈ ಅಪೊಸ್ತಲನನ್ನು ತಡೆಯಲಿಲ್ಲ.
ಪಾಠ 103
“ನಿನ್ನ ರಾಜ್ಯ ಬರಲಿ”
ಯೋಹಾನನು ಬರೆದ ಪ್ರಕಟನೆ ದೇವರ ರಾಜ್ಯ ಬಂದಾಗ ಭೂಮಿಯ ಮೇಲೆ ಜೀವನ ಹೇಗಿರುತ್ತೆ ಅಂತ ತಿಳಿಸುತ್ತೆ.