ಬೈಬಲ್‌ ನಮಗೆ ಏನು ಕಲಿಸುತ್ತದೆ?

ಬೈಬಲ್‌ ಅಧ್ಯಯನ ಮಾಡಲು ಇರುವ ಈ ಸಾಧನ ನಿಮಗೆ ಬೈಬಲನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯಮಾಡುತ್ತದೆ. ಬೈಬಲ್‌ ವಿಷಯಗಳ ಕುರಿತು ಏನು ಕಲಿಸುತ್ತದೆಂದು ತಿಳಿಯಲು ಈ ಸಾಧನ ಸಹಾಯಮಾಡುತ್ತದೆ. ಉದಾಹರಣೆಗೆ, ನಾವೇಕೆ ಕಷ್ಟವನ್ನು ಅನುಭವಿಸುತ್ತೇವೆ? ಸತ್ತ ನಂತರ ಏನಾಗುತ್ತದೆ? ಸುಖ ಸಂಸಾರ ಸಾಧ್ಯ? ಇತ್ಯಾದಿ.

ದೇವರು ಯಾಕೆ ನಮ್ಮನ್ನು ಸೃಷ್ಟಿಸಿದನು?

ಯಾಕಿಷ್ಟು ಕಷ್ಟ ಇದೆ ಅಂತ ನಾವೆಲ್ಲರೂ ಯೋಚಿಸುತ್ತೇವೆ. ಆದರೆ ಕಷ್ಟ, ಕಾಯಿಲೆ, ಸಾವನ್ನು ಬೇಗನೆ ದೇವರು ತೆಗೆದುಹಾಕುತ್ತಾನೆಂದು ಬೈಬಲ್‌ ಹೇಳುತ್ತದೆ.

ಅಧ್ಯಾಯ 1

ದೇವರು ಯಾರು?

ದೇವರು ನಿಮ್ಮ ಬಗ್ಗೆ ಕಾಳಜಿ ವಹಿಸುತ್ತಾನೆ ಅಂತ ನಿಮಗೆ ಅನಿಸುತ್ತದಾ? ದೇವರು ಎಂಥವನು ಮತ್ತು ಅವನ ಸ್ನೇಹಿತರಾಗಲು ನಾವೇನು ಮಾಡಬೇಕು ಎಂದು ತಿಳಿಯಿರಿ.

ಅಧ್ಯಾಯ 2

ಬೈಬಲ್‌—ದೇವರು ನಮಗೆ ಕೊಟ್ಟ ಉಡುಗೊರೆ

ಸಮಸ್ಯೆಗಳನ್ನು ನಿಭಾಯಿಸಲು ಬೈಬಲ್‌ ನಿಮಗೆ ಹೇಗೆ ಸಹಾಯಮಾಡುತ್ತದೆ? ಬೈಬಲಿನಲ್ಲಿರುವ ಪ್ರವಾದನೆಗಳು ನಿಜವೆಂದು ನೀವು ಏಕೆ ನಂಬಬಹುದು?

ಅಧ್ಯಾಯ 3

ದೇವರು ನಮ್ಮನ್ನು ಯಾಕೆ ಸೃಷ್ಟಿ ಮಾಡಿದನು?

ಇಡೀ ಭೂಮಿ ಸುಂದರ ತೋಟವಾದಾಗ ಪರಿಸ್ಥಿತಿ ಹೇಗೆ ಇರುತ್ತದೆ?

ಅಧ್ಯಾಯ 4

ಯೇಸು ಕ್ರಿಸ್ತ ಯಾರು?

ಯೇಸುವೇ ಮೆಸ್ಸೀಯನಾ? ಆತನು ಬಂದದ್ದು ಎಲ್ಲಿಂದ? ಆತನಿಗೆ ಯೆಹೋವ ದೇವರ ‘ಒಬ್ಬನೇ ಮಗ’ ಎಂಬ ಹೆಸರು ಯಾಕಿದೆ? ಎಂದು ಕಲಿಯಿರಿ.

ಅಧ್ಯಾಯ 5

ನಮ್ಮನ್ನು ಪಾಪದಿಂದ ಬಿಡಿಸಲು ದೇವರು ಮಾಡಿದ ಏರ್ಪಾಡು

ಯೇಸು ಪ್ರಾಣ ಕೊಟ್ಟದ್ದು ಯಾಕೆ? ಅದರಿಂದ ನಮಗೇನು ಪ್ರಯೋಜನ?

ಅಧ್ಯಾಯ 6

ಸತ್ತ ಮೇಲೆ ಏನಾಗುತ್ತದೆ?

ಸತ್ತ ಮೇಲೆ ಏನಾಗುತ್ತದೆ ಮತ್ತು ಸತ್ತವರು ಎಲ್ಲಿದ್ದಾರೆ ಎನ್ನುವುದರ ಕುರಿತು ಬೈಬಲಿನಲ್ಲಿ ಏನಿದೆ ಎನ್ನುವುದನ್ನು ನೋಡಿ.

ಅಧ್ಯಾಯ 7

ಸತ್ತವರನ್ನು ಮತ್ತೆ ನೋಡಬಹುದಾ?

ನಿಮ್ಮ ಪ್ರಿಯ ಜನರಲ್ಲಿ ಯಾರಾದರೂ ತೀರಿಹೋಗಿದ್ದಾರಾ? ಅವರನ್ನು ಪುನಃ ನೋಡಲು ನೀವು ಬಯಸುತ್ತೀರಾ? ಪುನರುತ್ಥಾನದ ಬಗ್ಗೆ ಬೈಬಲ್‌ ಏನು ಹೇಳುತ್ತದೆ ಎಂದು ಕಲಿಯಿರಿ.

ಅಧ್ಯಾಯ 8

ದೇವರ ರಾಜ್ಯ ಎಂದರೇನು?

ಕರ್ತನ ಪ್ರಾರ್ಥನೆ ಹಲವಾರು ಜನರಿಗೆ ಗೊತ್ತಿದೆ. “ನಿನ್ನ ರಾಜ್ಯ ಬರಲಿ” ಎನ್ನುವುದರ ಅರ್ಥವೇನು?

ಅಧ್ಯಾಯ 9

ಲೋಕದ ಅಂತ್ಯ ಹತ್ತಿರವಿದೆಯಾ?

ನಮ್ಮ ಸುತ್ತಮುತ್ತ ನಡೆಯುತ್ತಿರುವ ಘಟನೆಗಳನ್ನು, ಜನರಲ್ಲಿ ಆಗುತ್ತಿರುವ ಬದಲಾವಣೆಗಳನ್ನು ನೋಡುವಾಗ ಬೈಬಲಿನಲ್ಲಿ ಹೇಳಿದಂತೆ ನಾವು ಲೋಕದ ಅಂತ್ಯಕ್ಕೆ ತುಂಬ ಹತ್ತಿರ ಇದ್ದೇವೆ ಎಂದು ಗೊತ್ತಾಗುತ್ತದೆ. ಅದು ಹೇಗೆಂದು ಈ ಲೇಖನದಲ್ಲಿ ಗಮನಿಸಿ.

ಅಧ್ಯಾಯ 10

ದೇವದೂತರು ಯಾರು?

ದೇವದೂತರು ಮತ್ತು ದೆವ್ವಗಳು ಯಾರೆಂದು ಬೈಬಲಿನಲ್ಲಿ ಹೇಳಿದೆ. ಇವರು ನಿಜವಾಗಿಯೂ ಇದ್ದಾರಾ? ಅವರು ನಮಗೆ ಸಹಾಯ ಮಾಡಲು ಆಗುತ್ತದಾ? ತೊಂದರೆ ಕೊಡಲು ಆಗುತ್ತದಾ?

ಅಧ್ಯಾಯ 11

ಯಾಕಿಷ್ಟು ಕಷ್ಟ?

ಪ್ರಪಂಚದಲ್ಲಾಗುತ್ತಿರುವ ಕಷ್ಟಗಳಿಗೆ ದೇವರೇ ಕಾರಣನೆಂದು ತುಂಬ ಜನರು ಯೋಚಿಸುತ್ತಾರೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು? ಯಾಕಿಷ್ಟು ಕಷ್ಟ ಎನ್ನುವುದರ ಬಗ್ಗೆ ದೇವರು ಏನು ಹೇಳುತ್ತಾನೆಂದು ತಿಳಿದುಕೊಳ್ಳಿ.

ಅಧ್ಯಾಯ 12

ನಾವು ದೇವರ ಸ್ನೇಹಿತರಾಗುವುದು ಹೇಗೆ?

ಯೆಹೋವನು ಮೆಚ್ಚುವಂಥ ಜೀವನವನ್ನು ನಡೆಸಲು ನಮ್ಮಿಂದ ಸಾಧ್ಯ. ಅಷ್ಟೇ ಯಾಕೆ ಅವನ ಸ್ನೇಹಿತರು ಸಹ ನೀವಾಗಬಹುದು.

ಅಧ್ಯಾಯ 13

ಜೀವವನ್ನು ಅಮೂಲ್ಯವಾಗಿ ಕಾಣಿರಿ

ಭ್ರೂಣಹತ್ಯೆ, ರಕ್ತಪೂರಣ ಮತ್ತು ಪ್ರಾಣಿಗಳ ಜೀವದ ಬಗ್ಗೆ ದೇವರಿಗೆ ಹೇಗನಿಸುತ್ತದೆ?

ಅಧ್ಯಾಯ 14

ಸುಖ ಸಂಸಾರ ಸಾಧ್ಯ!

ಯೇಸು ತೋರಿಸಿದ ಪ್ರೀತಿ ಗಂಡನಿಗೆ, ಹೆಂಡತಿಗೆ, ಹೆತ್ತವರಿಗೆ ಮತ್ತು ಮಕ್ಕಳಿಗೆ ಒಂದು ಉತ್ತಮ ಮಾದರಿಯಾಗಿದೆ. ಯೇಸುವಿನಿಂದ ನಾವೇನು ಕಲಿಯಬಹುದು?

ಅಧ್ಯಾಯ 15

ದೇವರನ್ನು ಆರಾಧಿಸುವ ಸರಿಯಾದ ರೀತಿ

ದೇವರನ್ನು ಸರಿಯಾದ ರೀತಿಯಲ್ಲಿ ಆರಾಧಿಸುವವರನ್ನು ಗುರುತಿಸಲು ಸಹಾಯಮಾಡುವ ಆರು ಅಂಶಗಳನ್ನು ತಿಳಿದುಕೊಳ್ಳಿ.

ಅಧ್ಯಾಯ 16

ನಿಜವಾದ ದೇವರನ್ನು ಆರಾಧಿಸಿ

ನಿಮ್ಮ ನಂಬಿಕೆಗಳ ಬಗ್ಗೆ ಬೇರೆಯವರಿಗೆ ತಿಳಿಸುವಾಗ ಯಾವ ಸಮಸ್ಯೆಗಳು ನಿಮಗೆ ಬರಬಹುದು? ಅವರ ಮನನೋಯಿಸದೆ ನೀವು ಹೇಗೆ ಅವರಿಗೆ ವಿವರಿಸಬಹುದು?

ಅಧ್ಯಾಯ 17

ದೇವರು ಕೊಟ್ಟಿರುವ ಪ್ರಾರ್ಥನೆ ಎಂಬ ವರ

ನಾವು ಪ್ರಾರ್ಥಿಸುವಾಗ ದೇವರು ಕೇಳುತ್ತಾನಾ? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ನಾವು ಬೈಬಲ್‌ ಪ್ರಾರ್ಥನೆ ಬಗ್ಗೆ ಏನು ಕಲಿಸುತ್ತದೆ ಎಂದು ತಿಳಿದುಕೊಳ್ಳಬೇಕು.

ಅಧ್ಯಾಯ 18

ನಾನು ನನ್ನ ಜೀವನವನ್ನು ದೇವರಿಗೆ ಸಮರ್ಪಿಸಿಕೊಳ್ಳಬೇಕಾ?

ದೀಕ್ಷಾಸ್ನಾನ ಪಡೆಯಲು ಅರ್ಹರಾಗಬೇಕಾದರೆ ಏನೆಲ್ಲ ಮಾಡಬೇಕು? ದೀಕ್ಷಾಸ್ನಾನದ ಅರ್ಥವೇನು, ದೀಕ್ಷಾಸ್ನಾನ ಕೊಡುವ ಸರಿಯಾದ ರೀತಿ ಯಾವುದು ಎಂದು ತಿಳಿದುಕೊಳ್ಳಿ.

ಅಧ್ಯಾಯ 19

ಯೆಹೋವನಿಗೆ ಆಪ್ತರಾಗಿಯೇ ಇರಿ

ದೇವರು ನಮಗಾಗಿ ಮಾಡಿರುವ ಪ್ರತಿಯೊಂದು ವಿಷಯಕ್ಕಾಗಿ ನಾವು ಆತನಿಗೆ ಪ್ರೀತಿಯನ್ನು ಹೇಗೆ ತೋರಿಸಬೇಕು ಮತ್ತು ಹೇಗೆ ಋಣಿಗಳಾಗಿರಬೇಕು?

ಟಿಪ್ಪಣಿಗಳು

ಬೈಬಲ್‌ ನಮಗೆ ಏನು ಕಲಿಸುತ್ತದೆ? ಎಂಬ ಪುಸ್ತಕದಲ್ಲಿ ಬಳಸಿರುವ ಪದಗಳ ಮತ್ತು ಪದಗುಚ್ಛಗಳ ಅರ್ಥ.