ಯೇಸು ಕ್ರಿಸ್ತ
ಯೆಹೋವನ ಉದ್ದೇಶದಲ್ಲಿ ಯೇಸುವಿನ ಪಾತ್ರ ಹೇಗೆ ಪ್ರಾಮುಖ್ಯವಾಗಿದೆ?
ಅಕಾ 4:12; 10:43; 2ಕೊರಿಂ 1:20; ಫಿಲಿ 2:9, 10
ಇದನ್ನೂ ನೋಡಿ: ಜ್ಞಾನೋ 8:22, 23, 30, 31; ಯೋಹಾ 1:10; ಪ್ರಕ 3:14
-
ಬೈಬಲ್ ಉದಾಹರಣೆಗಳು:
-
ಮತ್ತಾ 16:13-17—ಅಪೊಸ್ತಲ ಪೇತ್ರ ಯೇಸುವನ್ನ ಕ್ರಿಸ್ತ ಮತ್ತು ದೇವರ ಮಗ ಅಂತ ಕಂಡುಹಿಡಿದ
-
ಮತ್ತಾ 17:1-9—ಯೇಸುವಿನ ಮೂವರು ಅಪೊಸ್ತಲರು ಯೇಸು ಮುಂದೆ ಏನಾಗ್ತಾನೆ ಅನ್ನೋದ್ರ ದರ್ಶನವನ್ನ ನೋಡಿದ್ರು ಮತ್ತು ಯೇಸುವನ್ನ ತನ್ನ ಮಗ ಅಂತ ಹೇಳೋದನ್ನ ಕೇಳಿಸ್ಕೊಂಡ್ರು
-
ಯೇಸುಗೂ ಬೇರೆ ಮನುಷ್ಯರಿಗೂ ತುಂಬಾ ವ್ಯತ್ಯಾಸ ಇತ್ತು ಯಾಕೆ?
ಯೋಹಾ 8:58; 14:9, 10; ಕೊಲೊ 1:15-17; 1ಪೇತ್ರ 2:22
-
ಬೈಬಲ್ ಉದಾಹರಣೆಗಳು:
-
ಮತ್ತಾ 21:1-9—ಯೇಸು ಕತ್ತೆ ಮೇಲೆ ಯೆರೂಸಲೇಮಿಗೆ ಬಂದಾಗ ಯೆಹೋವ ಆರಿಸ್ಕೊಂಡ ಮೆಸ್ಸೀಯನ ಬಗ್ಗೆ ಇದ್ದ ಭವಿಷ್ಯವಾಣಿ ನಿಜ ಆಯ್ತು
-
ಇಬ್ರಿ 7:26-28—ಬೇರೆ ಮಹಾ ಪುರೋಹಿತರಿಗಿಂತ ಯೇಸು ಹೇಗೆ ಶ್ರೇಷ್ಠ ಅಂತ ಪೌಲ ವಿವರಿಸಿದ್ದಾನೆ
-
ಯೇಸು ಮಾಡಿದ ಅದ್ಭುತಗಳಿಂದ ಆತನ ಬಗ್ಗೆ ಮತ್ತು ಯೆಹೋವನ ಬಗ್ಗೆ ಏನು ಗೊತ್ತಾಗುತ್ತೆ?
-
ಬೈಬಲ್ ಉದಾಹರಣೆಗಳು:
-
ಮತ್ತಾ 4:23, 24—ಕೆಟ್ಟ ದೇವದೂತರಿಗಿಂತ ಯೇಸುಗೆ ಜಾಸ್ತಿ ಶಕ್ತಿ ಇದೆ, ಕಾಯಿಲೆಗಳನ್ನ ವಾಸಿ ಮಾಡೋ ಶಕ್ತಿ ಇದೆ ಅಂತ ತೋರಿಸಿದನು
-
ಮತ್ತಾ 14:15-21—ಯೇಸು 5 ರೊಟ್ಟಿ 2 ಮೀನಿಂದ ಸಾವಿರಾರು ಜನ್ರಿಗೆ ಅದ್ಭುತ ಮಾಡಿ ಊಟ ಕೊಟ್ಟನು
-
ಮತ್ತಾ 17:24-27—ಯೇಸು ಅದ್ಭುತ ಮಾಡಿ ದೇವಾಲಯದ ತೆರಿಗೆ ಕಟ್ಟೋಕೆ ಪೇತ್ರನಿಗೆ ಹಣ ಕೊಟ್ಟನು, ಬೇರೆಯವರು ಎಡವಬಾರದು ಅಂತ ಹೀಗೆ ಮಾಡಿದನು
-
ಮಾರ್ಕ 1:40, 41—ಯೇಸು ಕುಷ್ಠ ರೋಗಿನ ನೋಡಿದಾಗ ಕನಿಕರದಿಂದ ವಾಸಿ ಮಾಡಿದನು, ಇದ್ರಿಂದ ಕಾಯಿಲೆ ಇರೋರನ್ನ ವಾಸಿಮಾಡೋದಕ್ಕೆ ಆತ ಕಾಯ್ತಿದ್ದ ಅಂತ ಗೊತ್ತಾಗುತ್ತೆ
-
ಮಾರ್ಕ 4:36-41—ಯೇಸು ಬಿರುಗಾಳಿಯನ್ನ ಶಾಂತ ಮಾಡಿದಾಗ ಹವಾಮಾನದ ಮೇಲೆ ಕೂಡ ಯೆಹೋವ ಯೇಸುಗೆ ಅಧಿಕಾರ ಕೊಟ್ಟಿದ್ದನು ಅಂತ ಗೊತ್ತಾಗುತ್ತೆ
-
ಯೋಹಾ 11:11-15, 31-45—ತನ್ನ ಸ್ನೇಹಿತ ಲಾಜರ ಸತ್ತಾಗ ಯೇಸು ಅತ್ತನು; ಆಮೇಲೆ ಅವನನ್ನ ಜೀವಂತವಾಗಿ ಎಬ್ಬಿಸೋ ಮೂಲಕ ಸಾವನ್ನ ಮತ್ತು ಸಾವಿಂದಾಗೋ ನೋವನ್ನ ದ್ವೇಷಿಸ್ತೀನಿ ಅಂತ ತೋರಿಸಿದನು
-
ಯೇಸು ಯಾವ ಮುಖ್ಯ ವಿಷ್ಯನಾ ಸಾರಿದನು?
ಯೇಸು ಭೂಮಿಯಲ್ಲಿದ್ದಾಗ ಆತನಲ್ಲಿ ಯಾವ ಒಳ್ಳೇ ಗುಣಗಳಿತ್ತು? ಅದನ್ನ ಹೇಗೆ ತೋರಿಸಿದನು?
ಕನಿಕರ; ಕರುಣೆ—ಮಾರ್ಕ 5:25-34; ಲೂಕ 7:11-15
ದೀನತೆ—ಮತ್ತಾ 11:29; 20:28; ಯೋಹಾ 13:1-5; ಫಿಲಿ 2:7, 8
ಧೈರ್ಯ—ಮತ್ತಾ 4:2-11; ಯೋಹಾ 2:13-17; 18:1-6
ಪ್ರೀತಿ—ಯೋಹಾ 13:1; 14:31; 15:13; 1ಯೋಹಾ 3:16
ವಿಧೇಯತೆ—ಲೂಕ 2:40, 51, 52; ಇಬ್ರಿ 5:8
ವಿವೇಕ—ಮತ್ತಾ 12:42; 13:54; ಕೊಲೊ 2:3
ಸ್ನೇಹ—ಮತ್ತಾ 13:2; ಮಾರ್ಕ 10:13-16; ಲೂಕ 7:36-50
ಯೇಸು ಯಾಕೆ ಜೀವ ಕೊಟ್ಟನು? ಅದ್ರಿಂದ ನಮಗೇನು ಪ್ರಯೋಜನ?
ಯೇಸು ಸ್ವರ್ಗದಲ್ಲಿ ರಾಜನಾಗಿ ಆಳ್ತಾ ಇರೋದ್ರಿಂದ ನಾವು ಯಾಕೆ ಖುಷಿ ಪಡ್ತೀವಿ?
ಕೀರ್ತ 72:12-14; ದಾನಿ 2:44; 7:13, 14; ಪ್ರಕ 12:9, 10
-
ಬೈಬಲ್ ಉದಾಹರಣೆಗಳು:
-
ಕೀರ್ತ 45:2-7, 16, 17—ದೇವರು ಆರಿಸಿರೋ ರಾಜ ತನ್ನ ಎಲ್ಲಾ ಶತ್ರುಗಳನ್ನ ನಾಶ ಮಾಡ್ತಾನೆ ಮತ್ತು ಸತ್ಯ, ನೀತಿ, ದೀನತೆಯಿಂದ ಆಳ್ತಾನೆ ಅಂತ ಈ ಕೀರ್ತನೆಯಿಂದ ಗೊತ್ತಾಗುತ್ತೆ
-
ಯೆಶಾ 11:1-10—ಯೇಸು ಭೂಮಿನಾ ಆಳೋವಾಗ ಇಡೀ ಭೂಮಿ ಪರದೈಸ್ ಆಗುತ್ತೆ
-
ಯೇಸು ಮುಂದೆ ಏನು ಮಾಡ್ತಾನೆ?