ಮನಸಾಕ್ಷಿ
ಯೆಹೋವ ಎಲ್ಲಾ ಮನುಷ್ಯರಿಗೆ ಮನಸಾಕ್ಷಿ ಕೊಟ್ಟಿದ್ದಾನೆ ಅಂತ ನಮಗೆ ಹೇಗೆ ಗೊತ್ತು?
ಇದನ್ನೂ ನೋಡಿ: 2ಕೊರಿಂ 4:2
ಒಬ್ಬ ವ್ಯಕ್ತಿ ತಪ್ಪು ಮಾಡ್ತಾನೇ ಇದ್ರೆ ಅವನ ಮನಸಾಕ್ಷಿ ಏನಾಗುತ್ತೆ?
ಇದನ್ನೂ ನೋಡಿ: ಇಬ್ರಿ 10:22
ಮನಸಾಕ್ಷಿ ಒಂದು ವಿಷ್ಯನಾ ಸರಿ ಅಂತ ಹೇಳಿದ ತಕ್ಷಣ ಅದು ಸರಿಯಾಗಿರುತ್ತಾ?
-
ಬೈಬಲ್ ಉದಾಹರಣೆಗಳು:
-
2ಪೂರ್ವ 18:1-3; 19:1, 2—ರಾಜ ಯೆಹೋಷಾಫಾಟ ಕೆಟ್ಟ ರಾಜ ಅಹಾಬನಿಗೆ ಸಹಾಯ ಮಾಡಿದ್ರಿಂದ ಯೆಹೋವನಿಗೆ ಕೋಪ ಬಂತು
-
ಅಕಾ 22:19, 20; 26:9-11—ಅಪೊಸ್ತಲ ಪೌಲ ಕ್ರಿಸ್ತನ ಹಿಂಬಾಲಕರಿಗೆ ಹಿಂಸೆ ಕೊಟ್ಟು ಸಾಯಿಸೋದ್ರಲ್ಲಿ ತಪ್ಪಿಲ್ಲ ಅಂತ ಒಂದು ಕಾಲದಲ್ಲಿ ಅಂದ್ಕೊಂಡಿದ್ದ
-
ನಾವು ನಮ್ಮ ಮನಸಾಕ್ಷಿಯನ್ನ ಹೇಗೆ ತರಬೇತಿ ಮಾಡಬಹುದು?
-
ಬೈಬಲ್ ಉದಾಹರಣೆ:
-
1ಸಮು 24:2-7—ಯೆಹೋವ ಸೌಲನನ್ನ ರಾಜನಾಗಿ ಆರಿಸ್ಕೊಂಡಿದ್ದಾನೆ, ಅದಕ್ಕೆ ನಾನು ಅವನಿಗೆ ಗೌರವ ಕೊಡಬೇಕು ಅಂತ ದಾವೀದನ ಮನಸಾಕ್ಷಿ ಹೇಳ್ತು
-
ಮನುಷ್ಯರು ಪಾಪಿಗಳಾಗಿದ್ರೂ ದೇವರ ಮುಂದೆ ಶುದ್ಧ ಮನಸಾಕ್ಷಿ ಇಟ್ಕೊಳ್ಳೋಕೆ ಹೇಗೆ ಸಾಧ್ಯ?
ಎಫೆ 1:7; ಇಬ್ರಿ 9:14; 1ಪೇತ್ರ 3:21; 1ಯೋಹಾ 1:7, 9; 2:1, 2
ಇದನ್ನೂ ನೋಡಿ: ಪ್ರಕ 1:5
-
ಬೈಬಲ್ ಉದಾಹರಣೆಗಳು:
-
ಯೆಶಾ 6:1-8—ಪ್ರವಾದಿ ಯೆಶಾಯನಿಗೆ ನಿನ್ನ ಪಾಪಗಳನ್ನ ಕ್ಷಮಿಸ್ತೀನಿ ಅಂತ ಯೆಹೋವ ಮಾತು ಕೊಟ್ಟನು
-
ಪ್ರಕ 7:9-14—ಬಿಡುಗಡೆ ಬೆಲೆಗೆ ಎಷ್ಟು ಶಕ್ತಿ ಇದೆ ಅಂದ್ರೆ ಇದ್ರಿಂದ ದೊಡ್ಡ ಗುಂಪಿನವರು ಯೆಹೋವ ದೇವರ ಮುಂದೆ ಶುದ್ಧ ಮನಸಾಕ್ಷಿ ಕಾಪಾಡ್ಕೊಳ್ಳೋಕೆ ಆಗುತ್ತೆ
-
ಬೈಬಲಿಗೆ ತಕ್ಕ ಹಾಗೆ ತರಬೇತಿಯಾಗಿರೋ ಮನಸಾಕ್ಷಿ ಕೊಡೋ ಎಚ್ಚರಿಕೆ ಗಂಟೆನ ನಾವು ಯಾಕೆ ಕಡೆಗಣಿಸಬಾರದು?
ಅಕಾ 24:15, 16; 1ತಿಮೊ 1:5, 6, 19; 1ಪೇತ್ರ 3:16
ಇದನ್ನೂ ನೋಡಿ: ರೋಮ 13:5
-
ಬೈಬಲ್ ಉದಾಹರಣೆಗಳು:
-
ಆದಿ 2:25; 3:6-13—ಆದಾಮ ಹವ್ವ ಮನಸಾಕ್ಷಿ ಮಾತನ್ನ ಕೇಳಲಿಲ್ಲ, ಆಮೇಲೆ ದೇವರ ಮಾತನ್ನ ಮೀರಿಬಿಟ್ವಲ್ವಾ ಅಂತ ಪರಿತಪಿಸಿದ್ರು
-
ನೆಹೆ 5:1-13—ದೇವರ ನಿಯಮಗಳನ್ನ ಮೀರುತ್ತಾ ಬೇಕಾಬಿಟ್ಟಿ ಬಡ್ಡಿ ವಸೂಲಿ ಮಾಡ್ತಿದ್ದ ಯೆಹೂದಿಗಳ ಮನಸಾಕ್ಷಿಯನ್ನ ಸರಿ ಮಾಡ್ಕೊಳ್ಳೋಕೆ ರಾಜ್ಯಪಾಲ ನೆಹೆಮೀಯ ಅವ್ರಿಗೆ ಸಹಾಯ ಮಾಡಿದ
-
ತಮ್ಮ ಮನಸಾಕ್ಷಿನ ಚೆನ್ನಾಗಿ ತರಬೇತಿ ಮಾಡ್ಕೊಳ್ಳದೇ ಇರೋ ಸಹೋದರ ಸಹೋದರಿಯರು ಎಡವದೇ ಇರೋ ತರ ನಾವು ಯಾಕೆ ಎಚ್ಚರ ವಹಿಸಬೇಕು?
ನಾವು ನಮ್ಮ ಮನಸಾಕ್ಷಿನ ಹೇಗೆ ಇಟ್ಕೊಳ್ಳೋಕೆ ಪ್ರಯತ್ನ ಪಡಬೇಕು?
2ಕೊರಿಂ 1:12; 2ತಿಮೊ 1:3; ಇಬ್ರಿ 13:18
ಇದನ್ನೂ ನೋಡಿ: ಅಕಾ 23:1; ರೋಮ 9:1; 1ತಿಮೊ 3:8, 9