ಮಾಹಿತಿ ಇರುವಲ್ಲಿ ಹೋಗಲು

ಬದುಕು ಬದಲಾದ ವಿಧ

ಬದುಕು ಬದಲಾದ ವಿಧ

ಬದುಕು ಬದಲಾದ ವಿಧ

“ನಾನು ಕಂಠಪೂರ್ತಿ ಕುಡಿತಿದ್ದೆ.”—ಲೂಕಾ ಸೂಕ್‌

ಜನನ: 1975

ದೇಶ: ಸ್ಲೊವೇನಿಯ

ಹಿಂದೆ: ಕುಡುಕ

ಹಿನ್ನೆಲೆ: ನಾನು ಸ್ಲೊವೇನಿಯದ ಲುಬ್ಲಿಯಾನಾದಲ್ಲಿ ಹುಟ್ಟಿದೆ. ನನಗೆ ನಾಲ್ಕು ವರ್ಷ ಆಗೋ ತನಕ ಎಲ್ಲಾ ಚೆನ್ನಾಗಿತ್ತು. ಆಮೇಲೆ ನಮ್ಮಪ್ಪ ಆತ್ಮಹತ್ಯೆ ಮಾಡಿಕೊಂಡರು. ಈ ದುರಂತ ಆದ ಮೇಲೆ ನನ್ನನ್ನ, ಅಣ್ಣನನ್ನ ನೋಡ್ಕೊಳ್ಳೋಕೆ ಅಮ್ಮ ತುಂಬ ಕಷ್ಟಪಡಬೇಕಾಯ್ತು.

ನನಗೆ 15 ವರ್ಷ ಇದ್ದಾಗ ಅಜ್ಜಿ ಮನೆಗೆ ಹೋದೆ. ನನ್ನ ಫ್ರೆಂಡ್ಸೆಲ್ಲ ಅಲ್ಲೇ ಇದ್ದಿದ್ದರಿಂದ ಅಲ್ಲಿರೋಕೆ ತುಂಬ ಇಷ್ಟ ಆಗ್ತಿತ್ತು. ಅಷ್ಟೇ ಅಲ್ಲ ಅಜ್ಜಿ ಮನೆಯಲ್ಲಿ ಹೇಗೆ ಬೇಕಾದ್ರೂ ಇರಬಹುದಿತ್ತು. 16 ವರ್ಷ ಆದಾಗ ಕುಡುಕರನ್ನ ಫ್ರೆಂಡ್ಸ್‌ ಮಾಡಿಕೊಂಡೆ. ಕೂದಲು ಬೆಳೆಸಿದೆ, ಬೇಕಾಬಿಟ್ಟಿ ಬಟ್ಟೆ ಹಾಕೊಳ್ತಿದ್ದೆ, ಸಿಗರೇಟ್‌ ಸೇದೋಕೂ ಶುರು ಮಾಡಿದೆ.

ಬೇರೆಬೇರೆ ತರದ ಡ್ರಗ್ಸ್‌ ತಗೊಳ್ತಿದ್ದೆ. ಆದರೆ ಕುಡಿಯೋದ್ರಲ್ಲಿ ಸಿಕ್ತಿದ್ದ ಮಜಾ ಬೇರೆ ಯಾವುದ್ರಲ್ಲೂ ಸಿಗ್ತಿರಲಿಲ್ಲ. ಮುಂಚೆ ಬರೀ ಕೆಲವು ಗ್ಲಾಸ್‌ಗಳಷ್ಟೇ ಕುಡೀತಿದ್ದೆ. ಆದ್ರೆ ಈಗ ಬಾಟಲಿಗಟ್ಟಲೆ ಕುಡಿತೀನಿ. ‘ನಾನು ಕುಡಿದೇ ಇಲ್ಲ’ ಅನ್ನೋ ತರ ನಾಟಕ ಮಾಡ್ತಿದ್ದೆ. ವಾಸನೆಯಿಂದ ಮಾತ್ರ ಕುಡಿದಿದ್ದೀನಿ ಅಂತ ಗೊತ್ತಾಗ್ತಿತ್ತು. ಕಂಠಪೂರ್ತಿ ಕುಡಿದ್ರೂ ತೂರಾಡ್ತಿರಲಿಲ್ಲ. ವೈನ್‌, ಬಿಯರ್‌ ಅಥವಾ ವೊಡ್ಕಾವನ್ನ ಲೀಟರ್‌ಗಟ್ಟಲೆ ಕುಡಿದಿದ್ರೂ ಯಾರೂ ಕಂಡುಹಿಡಿತಿರಲಿಲ್ಲ.

ಎಷ್ಟೋ ಸಲ ನಾನು, ನನ್ನ ಫ್ರೆಂಡ್ಸು ಇಡೀ ರಾತ್ರಿ ಪಾರ್ಟಿ ಮಾಡಿ ಕುಡಿತ್ತಿದ್ವಿ. ಆದರೆ ಅವರಿಗಿಂತ ಜಾಸ್ತಿ ಕುಡಿದ್ರೂ ಅವರನ್ನೆಲ್ಲ ಮನೆಗೆ ಕರಕೊಂಡು ಬಿಡೋ ತಾಕತ್ತು ನನಗಿರುತಿತ್ತು. ಒಂದಿನ ನನ್ನ ಫ್ರೆಂಡ್‌ ನನ್ನ ಬಗ್ಗೆ ‘ಅವನು ಬಕೆಟ್‌ಗಟ್ಟಲೆ ಕುಡೀತಾನೆ’ ಅಂತ ಹೇಳೋದನ್ನ ಕೇಳಿಸಿಕೊಂಡೆ. ಇದನ್ನ ಕೇಳಿದಾಗ ತುಂಬ ಬೇಜಾರಾಯ್ತು. ಯಾಕಂದ್ರೆ ನಮ್ಮೂರಲ್ಲಿ ಮೂರು ಹೊತ್ತೂ ಕುಡಿಯೋರಿಗೆ ಈ ತರ ಹೇಳ್ತಿದ್ದರು.

‘ನನ್ನ ಜೀವನ ಹೀಗಾಯ್ತಲ್ಲ’ ಅಂತ ಯೋಚನೆ ಮಾಡೋಕೆ ಶುರು ಮಾಡಿದೆ. ‘ನಾನೊಬ್ಬ ನಾಲಾಯಕ್‌, ನನ್ನ ಜೀವನಕ್ಕೆ ಅರ್ಥನೇ ಇಲ್ಲ’ ಅಂತ ಅನಿಸ್ತಿತ್ತು.

ಬದುಕನ್ನೇ ಬದಲಾಯಿಸಿತು ಬೈಬಲ್‌: ಹೀಗೆ ಯೋಚನೆ ಮಾಡ್ತಿರುವಾಗಲೇ ನನ್ನ ಕ್ಲಾಸ್‌ಮೇಟನ್ನ ಭೇಟಿಯಾದೆ. ಅವನು ತುಂಬ ಬದಲಾಗಿಬಿಟ್ಟಿದ್ದ. ‘ಹೇಗೆ ಇವನು ಇಷ್ಟೊಂದು ಒಳ್ಳೆಯವನಾದ’ ಅನ್ನೋ ಯೋಚನೆ ಆಯ್ತು. ಅದಕ್ಕೆ ಅವನನ್ನ ಕರಕೊಂಡು ಒಂದು ಕೆಫೆಗೆ ಹೋದೆ. ಹಾಗೆ ಮಾತಾಡ್ತಾ ಮಾತಾಡ್ತಾ ಅವನು ‘ಯೆಹೋವನ ಸಾಕ್ಷಿಗಳ ಜೊತೆ ಬೈಬಲ್‌ ಕಲಿತಿದ್ದೀನಿ’ ಅಂತ ಹೇಳಿದ. ಅವನು ಕಲಿತ ತುಂಬ ವಿಷಯಗಳ ಬಗ್ಗೆ ಹೇಳಿದ. ಆದ್ರೆ ನಾನು ಯಾವತ್ತೂ ಚರ್ಚಿಗೆ ಹೋಗಿಲ್ಲ, ಬೈಬಲ್‌ ಓದಿಲ್ಲ. ಅದಕ್ಕೆ ಅವನು ಹೇಳಿದ ಯಾವ ವಿಷಯನೂ ನನಗೆ ಅರ್ಥವಾಗಿಲ್ಲ. ಸ್ವಲ್ಪ ಸಮಯ ಆದ ಮೇಲೆ ನಾನು ಕೂಟಗಳಿಗೆ ಹೋಗೋಕೆ, ಬೈಬಲ್‌ ಕಲಿಯೋಕೆ ಶುರುಮಾಡಿದೆ.

ಬೈಬಲ್‌ ಕಲಿಯೋಕೆ ಶುರು ಮಾಡಿದಾಗ ತುಂಬ ವಿಷಯಗಳನ್ನ ಕಲಿತೆ. ಬದಲಾವಣೆಗಳನ್ನ ಮಾಡಿಕೊಳ್ಳಬೇಕು ಅಂತ ಅರ್ಥಮಾಡಿಕೊಂಡೆ. ಉದಾಹರಣೆಗೆ ನಾವೀಗ “ಕೊನೇ ದಿನಗಳಲ್ಲಿ” ಇದ್ದೀವಿ ಅಂತ ಬೈಬಲಿನಿಂದ ಕಲಿತುಕೊಂಡೆ. (2 ತಿಮೊತಿ 3:1-5) ಬೇಗನೇ ದೇವರು ಕೆಟ್ಟ ಜನರನ್ನೆಲ್ಲ ನಾಶಮಾಡಿ ಒಳ್ಳೇ ಜನರಿಗೆ ಸದಾಕಾಲ ಈ ಭೂಮಿಯಲ್ಲಿ ಜೀವನ ಮಾಡೋಕೆ ಅವಕಾಶ ಮಾಡಿಕೊಡ್ತಾನೆ ಅಂತ ಅರ್ಥಮಾಡಿಕೊಂಡೆ. (ಕೀರ್ತನೆ 37:29) ಅದಕ್ಕೆ ಬದಲಾವಣೆ ಮಾಡಿಕೊಂಡು ಆ ಒಳ್ಳೇ ಜನರಲ್ಲಿ ನಾನೂ ಒಬ್ಬನಾಗಿರಬೇಕು ಅಂತ ತೀರ್ಮಾನ ಮಾಡಿದೆ.

ಬೈಬಲಿನಿಂದ ಕಲಿತ ವಿಷಯಗಳನ್ನೆಲ್ಲ ನನ್ನ ಫ್ರೆಂಡ್ಸ್‌ ಹತ್ರ ಹೇಳಿದೆ. ಆದ್ರೆ ಅವರೆಲ್ಲ ನನ್ನನ್ನ ಗೇಲಿ ಮಾಡೋಕೆ ಶುರು ಮಾಡಿಬಿಟ್ಟರು. ಅದ್ರಿಂದ ಒಳ್ಳೇದೇ ಆಯ್ತು. ಹೇಗಂತೀರಾ? ಅವರ್ಯಾರೂ ಒಳ್ಳೇ ಫೆಂಡ್ಸ್‌ ಅಲ್ಲ ಅಂತ ಆಗಲೇ ಗೊತ್ತಾಗಿದ್ದು. ನಾನು ಕುಡುಕನಾಗೋಕೆ ಇವರೇ ಕಾರಣ ಅಂತ ಅವತ್ತೇ ಗೊತ್ತಾಗಿದ್ದು. ಇಡೀ ವಾರ ಯಾವಾಗ ವೀಕಂಡ್‌ ಬರುತ್ತೆ ಅಂತ ಯೋಚಿಸ್ತಿರ್ತಾರೆ. ಯಾಕಂದ್ರೆ ಆಗ ತಾನೆ ಕುಡಿದು ತೂರಾಡೋಕೆ ಆಗೋದು!

ಹಳೇ ಫ್ರೆಂಡ್ಸ್‌ ಜೊತೆ ಇದ್ದ ಫ್ರೆಂಡ್‌ಶಿಪ್ಪನ್ನ ಕಟ್‌ ಮಾಡಿಬಿಟ್ಟೆ. ಅದರ ಬದಲಿಗೆ ಯೆಹೋವನ ಸಾಕ್ಷಿಗಳಲ್ಲಿ ನನಗೆ ಹೊಸ ಫ್ರೆಂಡ್ಸು ಸಿಕ್ಕಿದರು. ಅವರ ಜೊತೆ ಸಮಯ ಕಳೆಯೋಕೆ ಶುರುಮಾಡಿದೆ. ಅವರು ನನಗೆ ಪ್ರೋತ್ಸಾಹ ಕೊಡ್ತಿದ್ರು. ದೇವರನ್ನ ತುಂಬ ಪ್ರೀತಿಸ್ತಿದ್ದರು. ದೇವರು ಇಷ್ಟಪಡೋ ತರ ಜೀವನ ಮಾಡ್ತಿದ್ದರು. ಹೀಗೆ ಅವರ ಜೊತೆ ಫೆಂಡ್‌ಶಿಪ್‌ ಮಾಡಿಕೊಂಡ ಮೇಲೆ ನಿಧಾನವಾಗಿ ಕಂಠಪೂರ್ತಿ ಕುಡಿಯೋ ಈ ಕೆಟ್ಟ ಚಟದಿಂದ ಹೊರ ಬಂದೆ.

ಸಿಕ್ಕಿದ ಪ್ರಯೋಜನಗಳು: ಖುಷಿಯಾಗಿರೋಕೆ ನನಗೀಗ ಮದ್ಯ ಬೇಕಾಗಿಲ್ಲ. ಅದಕ್ಕೆ ನಾನು ಯೆಹೋವನಿಗೆ ಥಾಂಕ್ಸ್‌ ಹೇಳಬೇಕು. ಕುಡಿಯೋದನ್ನ ಬಿಟ್ಟಿರಲಿಲ್ಲ ಅಂದ್ರೆ ‘ಏನಾಗಿ ಬಿಡುತ್ತಿದ್ದೆನೋ’ ಅಂತ ಯೋಚನೆ ಮಾಡೋಕೂ ಆಗ್ತಿಲ್ಲ. ಸತ್ಯ ಕಲಿತಿದ್ದು ಎಷ್ಟು ಒಳ್ಳೇದಾಯ್ತು ಅಂತ ಈಗ ಅನಿಸ್ತಿದೆ. ಸತ್ಯ ಕಲಿತಿದ್ರಿಂದ ನನ್ನ ಜೀವನ ತುಂಬ ಚೆನ್ನಾಗಿದೆ. ಅದನ್ನ ನೆನಸಿದಾಗ ಮನಸ್ಸಿಗೆ ನೆಮ್ಮದಿ ಆಗುತ್ತೆ.

ಕಳೆದ ಏಳು ವರ್ಷದಿಂದ ಸ್ಲೊವೇನಿಯದ ಬ್ರಾಂಚ್‌ನಲ್ಲಿ ಸೇವೆ ಮಾಡ್ತಿದ್ದೀನಿ. ಇದು ನನಗೆ ಸಿಕ್ಕಿರೋ ಒಂದು ದೊಡ್ಡ ಸುಯೋಗ. ಯೆಹೋವನ ಬಗ್ಗೆ ತಿಳ್ಕೊಂಡು ಆತನ ಸೇವೆ ಮಾಡ್ತಿರೋದ್ರಿಂದ ನನ್ನ ಜೀವನಕ್ಕೊಂದು ಅರ್ಥ ಸಿಕ್ಕಿದೆ.