ಮಾಹಿತಿ ಇರುವಲ್ಲಿ ಹೋಗಲು

ಬದುಕು ಬದಲಾದ ವಿಧ

ಬದುಕು ಬದಲಾದ ವಿಧ

ಬದುಕು ಬದಲಾದ ವಿಧ

“ಭೇದ ಭಾವ ಮಾಡೋದನ್ನ ಬಿಟ್ಟುಬಿಟ್ಟೆ.”—ಹಫೆನಿ ಗಾಮ

ವಯಸ್ಸು: 34

ದೇಶ: ಜಾಂಬಿಯ

ಹಿಂದೆ: ರಸ್ತಾಫರಿ ಧರ್ಮ

ಹಿನ್ನೆಲೆ: ನಾನು ಜಾಂಬಿಯಾದ ನಿರಾಶ್ರಿತರ ಶಿಬಿರದಲ್ಲಿ ಹುಟ್ಟಿದೆ. ನನ್ನ ಅಮ್ಮ ಯುದ್ಧದ ಸಮಯದಲ್ಲಿ ನಮೀಬಿಯಾದಿಂದ ಓಡಿ ಬಂದು ಸೌತ್‌-ವೆಸ್ಟ್‌ ಆಫ್ರಿಕಾ ಪೀಪಲ್ಸ್‌ ಆರ್ಗನೈಸೇಶನ್‌ಗೆ (SWAPO) ಸೇರಿಕೊಂಡರು. ಈ ಸಂಘಟನೆ ನಮೀಬಿಯಾವನ್ನ ಆಳುತ್ತಿದ್ದ ದಕ್ಷಿಣ ಆಫ್ರಿಕಾದ ಸರ್ಕಾರದ ವಿರುದ್ಧ ಹೋರಾಡುತ್ತಿತ್ತು.

ನಂಗೆ 15 ವರ್ಷ ಆಗೋ ತನಕ ಈ ತರ ಬೇರೆಬೇರೆ ನಿರಾಶ್ರಿತರ ಶಿಬಿರದಲ್ಲಿದ್ದೆ. ಈ ಸ್ವಾಪೋ ಸಂಘಟನೆಯನ್ನ ನಮ್ಮಂಥ ಯುವಜನರು ಮುನ್ನಡೆಸಬೇಕು ಅಂತ ಈ ಶಿಬಿರದಲ್ಲಿ ಕಲಿಸುತ್ತಿದ್ದರು. ರಾಜಕೀಯ ವಿಷಯಗಳನ್ನ ನಮ್ಮ ತಲೆಯಲ್ಲಿ ತುಂಬುತ್ತಿದ್ದರು. ಬಿಳಿ ಜನರನ್ನ ದ್ವೇಷಿಸಬೇಕು ಅಂತ ಕಲಿಸುತ್ತಿದ್ದರು.

ನಾನಿದ್ದ ಕ್ಯಾಂಪ್‌ನಲ್ಲಿ ರೋಮನ್‌ ಕ್ಯಾಥೊಲಿಕ್ಸ್‌, ಲುಥೆರನ್ಸ್‌, ಆಂಗ್ಲಿಕನ್ಸ್‌ ಮತ್ತು ಬೇರೆಯವರೆಲ್ಲ ಸೇರಿ ಹೋಗ್ತಿದ್ದ ಚರ್ಚ್‌ ಇತ್ತು. ನಂಗೆ 11 ವರ್ಷ ಆದಾಗ ಆ ಚರ್ಚಿಗೆ ಸೇರಬೇಕು ಅನ್ಕೊಂಡೆ. ಇದ್ರ ಬಗ್ಗೆ ಪಾಸ್ಟರ್‌ ಹತ್ತಿರ ಹೇಳಿದೆ. ಆದ್ರೆ ಅವರು ‘ನೀನು ಚರ್ಚಿಗೆ ಸೇರಬೇಡ’ ಅಂದ್ರು. ಆಗ ನಂಗೆ ತುಂಬ ಬೇಜಾರಾಯ್ತು. ದೇವರ ಮೇಲಿರೋ ನಂಬಿಕೆಯನ್ನೇ ಕಳ್ಕೊಂಡೆ. ನಂಗೆ ರೆಗ್ಗೀ ಮ್ಯೂಸಿಕ್‌ ಅಂದ್ರೆ ತುಂಬ ಇಷ್ಟ. ಅಷ್ಟೇ ಅಲ್ಲ ಕರಿಯರ ಮೇಲೆ ಆಗ್ತಿದ್ದ ಅನ್ಯಾಯವನ್ನ ನಿಲ್ಲಿಸಬೇಕು ಅಂತ ಅನಿಸ್ತಿತ್ತು. ಅದಕ್ಕೆ 15 ವರ್ಷ ಇದ್ದಾಗ ರಸ್ತಾಫರಿ ಧರ್ಮಕ್ಕೆ ಸೇರಿಕೊಂಡೆ. ಉದ್ದ ಕೂದಲು ಬಿಟ್ಟು ಜಡೆ ಹಾಕ್ತಿದ್ದೆ, ಮರಿಜುವಾನಾ ಸೇವಿಸುತ್ತಿದ್ದೆ. ಮಾಂಸ ತಿನ್ನೋದನ್ನ ಬಿಟ್ಟುಬಿಟ್ಟೆ. ಕರಿಯರ ಸ್ವಾತಂತ್ರ್ಯಕ್ಕೋಸ್ಕರ ಹೋರಾಡ್ತಿದ್ದೆ. ಆದ್ರೆ ಅನೈತಿಕ ಜೀವನ ನಡೆಸೋದನ್ನ, ಹಿಂಸಾಚಾರ ತುಂಬಿರೋ ಸಿನಿಮಾಗಳನ್ನ ನೋಡೋದನ್ನ ಮತ್ತು ಕೆಟ್ಟಕೆಟ್ಟ ಮಾತು ಆಡೋದನ್ನ ನಿಲ್ಲಿಸಲಿಲ್ಲ.

ನನ್ನ ಬದುಕನ್ನು ಬದಲಾಯಿಸಿತು ಬೈಬಲ್‌: 1995ರಲ್ಲಿ ನನ್ನ ಜೀವನದಲ್ಲಿ ಏನು ಮಾಡಬೇಕು ಅನ್ನೋದರ ಬಗ್ಗೆ ಯೋಚನೆ ಮಾಡಿದೆ. ಆಗ ನಂಗೆ 20 ವರ್ಷ. ರಸ್ತಾಫರಿ ಧರ್ಮಕ್ಕೆ ಸಂಬಂಧಪಟ್ಟ ಯಾವುದೇ ಪುಸ್ತಕ ಸಿಕ್ಕಿದ್ರೂ ಅದನ್ನ ಓದ್ತಿದ್ದೆ. ಆ ಪುಸ್ತಕಗಳಲ್ಲಿ ಬೈಬಲಿನಲ್ಲಿರೋ ಕೆಲವು ವಿಷಯಗಳಿತ್ತು. ಆದರೆ ಅದನ್ನು ಓದಿದಾಗ ನಂಗೆ ಅರ್ಥ ಆಗ್ತಿರಲಿಲ್ಲ. ಅದಕ್ಕೆ ನಾನು ಇದಕ್ಕಿಂತ ಬೈಬಲ್‌ ಓದೋದೇ ಒಳ್ಳೇದು ಅಂತ ತೀರ್ಮಾನ ಮಾಡಿದೆ.

ರಸ್ತಾಫರಿ ಧರ್ಮದಲ್ಲಿರುವ ನನ್ನ ಒಬ್ಬ ಫ್ರೆಂಡ್‌ ಯೆಹೋವನ ಸಾಕ್ಷಿಗಳು ಪ್ರಕಾಶಿಸಿದ ಒಂದು ಪುಸ್ತಕ ನಂಗೆ ಕೊಟ್ಟ. ಆ ಪುಸ್ತಕದ ಜೊತೆಗೆ ಬೈಬಲ್‌ ಓದೋಕೂ ಶುರು ಮಾಡಿದೆ. ಆಮೇಲೆ ನನಗೆ ಯೆಹೋವನ ಸಾಕ್ಷಿಗಳ ಭೇಟಿಯಾಯಿತು. ಅವರಿಂದ ಬೈಬಲ್‌ ಕಲಿಯೋಕೆ ಶುರುಮಾಡಿದೆ.

ಸಿಗರೇಟ್‌ ಸೇದುವುದನ್ನು ಬಿಡೋಕೆ ತುಂಬ ಪ್ರಯತ್ನಪಟ್ಟೆ. (2 ಕೊರಿಂಥ 7:1) ಕೂದಲು ಕಟ್‌ ಮಾಡಿದೆ. ಅಶ್ಲೀಲ ಚಿತ್ರಗಳನ್ನ, ಹಿಂಸೆ ತುಂಬಿರೋ ಚಿತ್ರಗಳನ್ನ ನೋಡೋದನ್ನ ಮತ್ತು ಕೆಟ್ಟ ಮಾತು ಆಡೋದನ್ನ ಬಿಟ್ಟುಬಿಟ್ಟೆ. (ಎಫೆಸ 5:3, 4) ಹೋಗ್ತಾಹೋಗ್ತಾ ಕರಿಯರು-ಬಿಳಿಯರು ಅಂತ ಭೇದ ಭಾವ ಮಾಡೋದನ್ನ ಬಿಟ್ಟುಬಿಟ್ಟೆ. (ಅಪೊಸ್ತಲರ ಕಾರ್ಯ 10:34, 35) ಈ ಬದಲಾವಣೆಗಳನ್ನೆಲ್ಲ ಮಾಡೋಕೆ ಬಿಳಿ ಜನರ ಕಡೆಗೆ ದ್ವೇಷವನ್ನ ಹೆಚ್ಚಿಸ್ತಿದ್ದ ಮ್ಯೂಸಿಕ್‌ ಕೇಳಿಸಿಕೊಳ್ಳೋದನ್ನ ನಿಲ್ಲಿಸಬೇಕಿತ್ತು. ಜೊತೆಗೆ ನನ್ನ ಹಳೆಯ ಫ್ರೆಂಡ್ಸನ್ನು ಬಿಡಬೇಕಿತ್ತು.

ಇದನ್ನೆಲ್ಲ ಮಾಡಿದ ಮೇಲೆ ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹವನ್ನ ಹುಡುಕಿದೆ. ಆಮೇಲೆ ನಾನೊಬ್ಬ ಯೆಹೋವನ ಸಾಕ್ಷಿ ಆಗಬೇಕು ಅಂತ ಹೇಳಿದೆ. ಆಗ ನಂಗೆ ಬೈಬಲ್‌ ಸ್ಟಡಿ ಶುರುಮಾಡಿದ್ರು. ಸ್ವಲ್ಪ ಸಮಯ ಆದಮೇಲೆ ದೀಕ್ಷಾಸ್ನಾನ ಪಡ್ಕೊಂಡು ಯೆಹೋವನ ಸಾಕ್ಷಿ ಆಗಬೇಕು ಅಂತ ತೀರ್ಮಾನ ಮಾಡ್ದೆ. ಈ ತೀರ್ಮಾನ ನಮ್ಮ ಕುಟುಂಬದವರಿಗೆ ಸ್ವಲ್ಪನೂ ಇಷ್ಟ ಆಗಲಿಲ್ಲ. ಅಮ್ಮ ನನ್ನತ್ರ ಬಂದು ‘ಬೇರೆ ಯಾವುದೇ ಕ್ರೈಸ್ತ ಧರ್ಮವನ್ನಾದ್ರೂ ಆರಿಸ್ಕೋ. ಆದ್ರೆ ಯೆಹೋವನ ಸಾಕ್ಷಿ ಮಾತ್ರ ಆಗ್ಬೇಡ’ ಅಂತ ಮುಖಕ್ಕೆ ಹೊಡೆದ ಹಾಗೆ ಹೇಳಿಬಿಟ್ರು. ಆಮೇಲೆ ಸರ್ಕಾರದ ಜೊತೆ ಒಳ್ಳೆ ಸಂಬಂಧ ಇಟ್ಟುಕೊಂಡಿದ್ದ ನನ್ನ ಅಂಕಲ್‌ ಕೂಡ ನನ್ನನ್ನ ಹಿಯಾಳಿಸಿದ್ರು. ಈ ತೀರ್ಮಾನ ಅವರಿಗೂ ಇಷ್ಟ ಆಗ್ಲಿಲ್ಲ.

ನಾನು ಬೈಬಲಿನಿಂದ ಯೇಸು ಬಗ್ಗೆ ಕಲಿಯುತ್ತಾ ಹೋದ ಹಾಗೆ ಆತನ ಬೋಧನೆಗಳು ಮತ್ತು ಜನರ ಜೊತೆ ನಡ್ಕೊಳ್ತಿದ್ದ ರೀತಿ ನನ್ನ ಮನಸ್ಸಿಗೆ ಮುಟ್ಟಿತು. ಅವರ ತರ ನಾನು ಇರಬೇಕು ಅನ್ಕೊಂಡೆ. ಆತನು ಹೇಳಿದ ವಿಷಯಗಳನ್ನ ನನ್ನ ಜೀವನದಲ್ಲಿ ಪಾಲಿಸಿದಾಗ ಕಷ್ಟಗಳಿಂದ ಹೊರಗೆ ಬರೋಕೆ ಸುಲಭ ಆಯ್ತು. ಸಾಕ್ಷಿಗಳು ಕಲಿಸೋ ವಿಷಯ ಬೈಬಲಿನಲ್ಲಿ ಇದ್ಯಾ ಅಂತ ಹೋಲಿಸಿ ನೋಡಿದಾಗ ಇದೇ ಸತ್ಯ ಧರ್ಮ ಮತ್ತು ಯೆಹೋವನ ಸಾಕ್ಷಿಗಳು ಮಾತ್ರ ಬೈಬಲ್‌ ಹೇಳೋ ತರ ಜೀವನ ಮಾಡ್ತಿದ್ದಾರೆ ಅಂತ ಗೊತ್ತಾಯ್ತು. ಉದಾಹರಣೆಗೆ ಬೈಬಲಿನಲ್ಲಿ ಸಿಹಿಸುದ್ದಿಯನ್ನ ಎಲ್ಲರಿಗೂ ಸಾರಬೇಕು ಅನ್ನೋ ನಿಯಮ ಇದೆ. ಇದನ್ನ ಯೆಹೋವನ ಸಾಕ್ಷಿಗಳು ಮಾತ್ರ ಪಾಲಿಸ್ತಾರೆ. (ಮತ್ತಾಯ 28:19, 20; ಅಪೊಸ್ತಲರ ಕಾರ್ಯ 15:14) ರಾಜಕೀಯ ವಿಷಯದಲ್ಲೂ ಇವರು ಪಾಲು ತೆಗೆದುಕೊಳ್ಳಲ್ಲ.—ಕೀರ್ತನೆ 146:3, 4; ಯೋಹಾನ 15:17, 18.

ಸಿಕ್ಕಿದ ಪ್ರಯೋಜನಗಳು: ಬೈಬಲ್‌ ತತ್ವಗಳನ್ನ ಪಾಲಿಸೋಕೆ ಶುರುಮಾಡಿದಾಗ ನಂಗೆ ತುಂಬ ಪ್ರಯೋಜನ ಆಯ್ತು. ಉದಾಹರಣೆಗೆ ಮರಿಜುವಾನ ತಗೊಳ್ಳೋಕೆ ಪ್ರತಿ ತಿಂಗಳು ತುಂಬ ದುಡ್ಡು ಸುರೀತಿದ್ದೆ. ಆದ್ರೆ ಈಗ ಅದನ್ನ ನಿಲ್ಲಿಸಿದ್ದೀನಿ ಮತ್ತು ಅದರ ಅಮಲಿನಿಂದ ಹೊರಗೆ ಬಂದಿದ್ದೀನಿ. ಅಷ್ಟೇ ಅಲ್ಲ ಮುಂಚೆಗಿಂತ ಈಗ ನಂಗೆ ಮಾನಸಿಕವಾಗಿ ಮತ್ತು ಶಾರೀರಿಕವಾಗಿ ಒಳ್ಳೆ ಆರೋಗ್ಯ ಇದೆ.

ಚಿಕ್ಕ ವಯಸ್ಸಿಂದ ಹುಡುಕುತ್ತಿದ್ದ ಖುಷಿ ಮತ್ತು ನೆಮ್ಮದಿ ಈಗ ನಂಗೆ ಸಿಕ್ಕಿದೆ. ನನ್ನ ಜೀವನಕ್ಕೆ ಈಗ ಒಂದು ಅರ್ಥ ಇದೆ. ಇದೆಲ್ಲಕ್ಕಿಂತ ಮುಖ್ಯವಾಗಿ ಯೆಹೋವ ದೇವರ ಜೊತೆ ಆಪ್ತ ಸಂಬಂಧ ಇದೆ.—ಯಾಕೋಬ 4:8.

[ಬ್ಲರ್ಬ್‌]

ಈ ಬದಲಾವಣೆಗಳನ್ನೆಲ್ಲ ಮಾಡೋಕೆ ಬಿಳಿ ಜನರ ಕಡೆಗೆ ದ್ವೇಷವನ್ನ ಹೆಚ್ಚಿಸುತ್ತಿದ್ದ ಮ್ಯೂಸಿಕ್‌ ಕೇಳಿಸಿಕೊಳ್ಳೋದನ್ನ ನಿಲ್ಲಿಸಬೇಕಿತ್ತು.