ಭವಿಷ್ಯವಾಣಿ 6. ಇಡೀ ಲೋಕದಲ್ಲಿ ಸಾರುವ ಕೆಲಸ
ಭವಿಷ್ಯವಾಣಿ 6. ಇಡೀ ಲೋಕದಲ್ಲಿ ಸಾರುವ ಕೆಲಸ
“ದೇವರ ಆಳ್ವಿಕೆಯ ಈ ಸಿಹಿಸುದ್ದಿ ಲೋಕದಲ್ಲಿ ಇರೋ ಎಲ್ಲ ಜನಾಂಗಗಳಿಗೆ ಸಾರಲಾಗುತ್ತೆ.”—ಮತ್ತಾ. 24:14.
● ವಯಾಟಿಯಾ ಇರೋದು ಟುವಾಮೋಟೊ ದ್ವೀಪ ಸಮೂದಾಯದ ಪೆಸಿಫಿಕ್ ದ್ವೀಪದಲ್ಲಿ. ಟುವಾಮೋಟೊ ದ್ವೀಪ ಸಮೂದಾಯದಲ್ಲಿ ಸುಮಾರು 80 ದ್ವೀಪಗಳಿವೆ. ಇದು ಸುಮಾರು 8,02,900 ಚದರ ಕಿಲೋಮೀಟರ್‌ಗಿಂತ ದೊಡ್ಡದಾಗಿದೆ. ಈ ಜಾಗ ಇಷ್ಟು ದೊಡ್ಡದಾಗಿದ್ರೂ, ಅದ್ರಲ್ಲಿ ಬರೀ 16,000 ಜನ ಅಷ್ಟೇ ಇರೋದು. ಇದು ಒಂದು ದೂರದಲ್ಲಿರೋ ಜಾಗವಾಗಿದ್ರೂನೂ, ವಯಾಟಿಯಾ ಮತ್ತು ಅವಳ ಅಕ್ಕಪಕ್ಕದಲ್ಲಿರೊ ಸ್ಥಳಗಳಿಗೆ ಯೆಹೋವನ ಸಾಕ್ಷಿಗಳು ಬಂದ್ರು. ಯಾಕೆ? ಯಾಕಂದ್ರೆ ಜನರು ಎಲ್ಲೇ ಇದ್ರೂ ಅವ್ರಿಗೂ ದೇವರ ಆಳ್ವಿಕೆಯ ಈ ಸಿಹಿಸುದ್ದಿಯನ್ನ ಸಾರಬೇಕು ಅನ್ನೋದೆ ಯೆಹೋವನ ಸಾಕ್ಷಿಗಳ ಆಸೆ.
ನಿಜ ಏನು? ಇಂದು ದೇವರ ಆಳ್ವಿಕೆಯ ಈ ಸಿಹಿಸುದ್ದಿ ಲೋಕದ ಎಲ್ಲಾ ಕಡೆ ಸಾರಲಾಗ್ತಿದೆ. ಉದಾಹರಣೆಗೆ ಇಸವಿ 2010 ರಲ್ಲಿ ಮಾತ್ರ 236 ದೇಶದಲ್ಲಿ ಯೆಹೋವನ ಸಾಕ್ಷಿಗಳು 1.6 ಬಿಲಿಯನ್ ಗಿಂತ ಜಾಸ್ತಿ ತಾಸನ್ನ ಸುವಾರ್ತೆ ಸಾರೋದ್ರಲ್ಲಿ ಕಳೆದಿದ್ದಾರೆ. ಇದರ ಅರ್ಥ ಪ್ರತಿ ದಿನ ಪ್ರತಿ ಒಬ್ಬ ಯೆಹೋವನ ಸಾಕ್ಷಿ 30 ನಿಮಿಷ ಸುವಾರ್ತೆಯನ್ನ ಸಾರಿದ್ದಾನೆ. ಕಳೆದ 10 ವರ್ಷದಲ್ಲಿ 20 ಬಿಲಿಯನ್‌ಗಿಂತ ಜಾಸ್ತಿ ಬೈಬಲ್ ಪ್ರಕಾಶನಗಳನ್ನ ತಯಾರಿಸಿ ಹಂಚ್ಚಿದ್ದಾರೆ.
ತಪ್ಪು ಅಭಿಪ್ರಾಯಗಳು: ಹೇಗಿದ್ರೂ ಸುವಾರ್ತೆನ ಸಾವಿರಾರು ವರ್ಷಗಳಿಂದ ಸಾರ್ತಾನೇ ಇದ್ದಾರೆ.
ಈ ಅಭಿಪ್ರಾಯ ಸರಿನಾ? ತುಂಬಾ ಜನ ಬೈಬಲ್ ಬಗ್ಗೆ ಏನೋ ಒಂದು ಸಾರಿದ್ದಾರೆ ನಿಜ. ಆದ್ರೆ ಹೆಚ್ಚಿನವರು ಅದನ್ನ ಸ್ವಲ್ಪ ಸಮಯದ ಮಟ್ಟಿಗೆ ಮಾತ್ರ ಮಾಡಿದ್ದಾರೆ. ಆದ್ರೆ ಯೆಹೋವನ ಸಾಕ್ಷಿಗಳು ಇವತ್ತಿನವರೆಗೂ ಸಾರುವ ಕೆಲಸವನ್ನ ನಿಲ್ಸಿಲ್ಲ. ಇಡೀ ಲೋಕದಲ್ಲಿರೋ ಲಕ್ಷಾಂತರ ಜನರಿಗೆ ಇಂದಿನವರೆಗೂ ಅವ್ರು ಸುವಾರ್ತೆನ ಸಾರ್ತಾನೇ ಇದ್ದಾರೆ. ಅವ್ರಿಗೆ ಎಷ್ಟೇ ಕಷ್ಟವಾದ ವಿರೋಧ ಬಂದ್ರು, ಅವ್ರು ಈ ಸಾರುವ ಕೆಲಸನ ನಿಲ್ಸಿಲ್ಲ. a (ಮಾರ್ಕ 13:13) ಈ ಸಾರುವ ಕೆಲಸನ ಅವ್ರು ಹಣದಾಸೆಗೋಸ್ಕರ ಮಾಡ್ತಿಲ್ಲ. ಅವರು ತಮ್ಮ ಸ್ವಂತ ಇಷ್ಟದ ಪ್ರಕಾರ ಈ ಕೆಲಸಕ್ಕೋಸ್ಕರ ಸಮಯನ ಕಳಿತಾರೆ. ಎಲ್ಲಾ ಪ್ರಕಾಶನಗಳನ್ನ ಅವ್ರು ಜನರಿಗೆ ಫ್ರೀಯಾಗಿ ಕೊಡ್ತಾರೆ. ಇಲ್ಲಿ ಎಲ್ರೂ ಸ್ವಯಂ ಸೇವಕರಾಗಿ ಕೆಲಸ ಮಾಡ್ತಾರೆ. ಅವ್ರು ಕೊಡೋ ಕಾಣಿಕೆಯಿಂದಾನೇ ಈ ಕೆಲಸ ನಡಿತಿರೋದು.
ನಿಮ್ಮ ಅಭಿಪ್ರಾಯ ಏನು? “ದೇವರ ಆಳ್ವಿಕೆಯ ಬಗ್ಗೆ ಇರೋ ಈ ಸಿಹಿಸುದ್ದಿ” ಇಡೀ ಲೋಕದಲ್ಲಿ ಸಾರಲಾಗ್ತಿದ್ಯಾ? ಈ ಭವಿಷ್ಯವಾಣಿ ನೆರವೇರಿದ್ರೆ, ತುಂಬ ಜಲ್ದಿ ಒಳ್ಳೇದಾಗುತ್ತಾ?
[ಪಾದಟಿಪ್ಪಣಿ]
a ಹೆಚ್ಚಿನ ಮಾಹಿತಿಗಾಗಿ, ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತವಾದ ಈ ಮೂರು ವಿಡಿಯೋಗಳನ್ನ ನೋಡಿ. “ಪರೀಕ್ಷೆಗಳ ಕೆಳಗೆ ನಂಬಿಗಸ್ತರು” (ಇಂಗ್ಲಿಷ್), ”ಕೆನ್ನೀಲಿ ತ್ರಿಕೋಣಗಳು” (ಇಂಗ್ಲಿಷ್), ”ಯೆಹೋವನ ಸಾಕ್ಷಿಗಳು ನಾಜಿ಼ ಆಕ್ರಮಣದ ವಿರುಧ ದೃಡವಾಗಿ ನಿಲ್ಲುತ್ತಾರೆ”.
[ಪುಟ 9ರಲ್ಲಿರುವ ಸಂಕ್ಷಿಪ್ತ ವಿವರ]
“ಯೆಹೋವನು ಅನುಮತಿಸೋವರೆಗೂ ನಮ್ಮಿಂದ ಆದಷ್ಟು ಪ್ರಯತ್ನನ ಹಾಕಿ, ದೇವರ ಆಳ್ವಿಕೆಯ ಈ ಸಿಹಿಸುದ್ದಿಯನ್ನ ಹುರುಪಿನಿಂದ ನಾವು ಸಾರುತ್ತಾನೇ ಇರ್ತೀವಿ.”—2010 ಯೆಹೋವನ ಸಾಕ್ಷಿಗಳ ವರ್ಷ ಪುಸ್ತಕ.