ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮುನ್ನುಡಿ

ಮುನ್ನುಡಿ

ದೇವರು ನಮ್ಮ ಪ್ರೀತಿಯ ತಂದೆ. 1 ಪೇತ್ರ 5:6, 7

ದೇವರು ನಮ್ಮ ಸೃಷ್ಟಿಕರ್ತ. ಆತನು ನಮ್ಮ ಮೇಲೆ ಅಪಾರ ಪ್ರೀತಿ ಮಮತೆ ಇಟ್ಟಿದ್ದಾನೆ. ಒಬ್ಬ ಒಳ್ಳೇ ತಂದೆ ಪ್ರೀತಿಯಿಂದ ತನ್ನ ಮಕ್ಕಳಿಗೆ ಮಾರ್ಗದರ್ಶನ ನೀಡುವಂತೆ, ದೇವರು ಮಾನವರೆಲ್ಲರಿಗೂ ಜೀವನದ ಅತ್ಯುತ್ತಮ ದಾರಿಯಲ್ಲಿ ನಡೆಯಲು ಕಲಿಸಿಕೊಡುತ್ತಾನೆ.

ಆತನು ನಮ್ಮ ಮುಂದೆ ಅಮೂಲ್ಯ ಸತ್ಯಗಳನ್ನು ತೆರೆದಿಡುತ್ತಾನೆ. ಅವು ನಮ್ಮ ಜೀವನದಲ್ಲಿ ಆನಂದ ನಿರೀಕ್ಷೆಯನ್ನು ತುಂಬಿಸುತ್ತವೆ.

ನೀವು ದೇವರ ಮಾತನ್ನು ಆಲಿಸಿದರೆ, ಆತನು ನಿಮ್ಮೊಂದಿಗಿದ್ದು ಮಾರ್ಗದರ್ಶನ ನೀಡಿ ಕಾಪಾಡುವನು. ಮಾತ್ರವಲ್ಲ ಜೀವನದ ಸಮಸ್ಯೆಗಳನ್ನು ಎದುರಿಸಲು ಸಹಾಯ ಮಾಡುವನು.

ಆಶೀರ್ವಾದಗಳ ಪಟ್ಟಿ ಇಲ್ಲಿಗೆ ನಿಲ್ಲುವುದಿಲ್ಲ. ಸದಾಕಾಲ ಜೀವಿಸುವ ನಿರೀಕ್ಷೆಯನ್ನೂ ನಿಮ್ಮ ಮುಂದಿಟ್ಟಿದ್ದಾನೆ!

“ಬನ್ನಿರಿ; ಆಲಿಸಿದರೆ ಬದುಕಿ ಬಾಳುವಿರಿ” ಎಂದು ದೇವರು ಕರೆಯುತ್ತಿದ್ದಾನೆ. ಯೆಶಾಯ 55:3