ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವ ದೇವರು ಸತ್ತವರಿಗಲ್ಲ ಜೀವಿತರಿಗೆ ದೇವರಾಗಿದ್ದಾರೆ

ಯೆಹೋವ ದೇವರು ಸತ್ತವರಿಗಲ್ಲ ಜೀವಿತರಿಗೆ ದೇವರಾಗಿದ್ದಾರೆ

ದೇವರ ಸಮೀಪಕ್ಕೆ ಬನ್ನಿರಿ

ಯೆಹೋವ ದೇವರು ಸತ್ತವರಿಗಲ್ಲ ಜೀವಿತರಿಗೆ ದೇವರಾಗಿದ್ದಾರೆ

ದೇವರಿಗಿಂತ ಮೃತ್ಯು ಶಕ್ತಿಶಾಲಿನಾ? ಇಲ್ಲವೇ ಇಲ್ಲ! ಮರಣವಾಗಲಿ ಅಥವಾ ಬೇರಾವುದೇ “ಶತ್ರು”ವಾಗಲಿ “ಸರ್ವಶಕ್ತ” ದೇವರಿಗಿಂತ ಅದ್ಹೇಗೆ ಶಕ್ತಿಶಾಲಿಯಾಗಿರಕ್ಕೆ ಸಾಧ್ಯ? (1 ಕೊರಿಂಥ 15:26; ವಿಮೋಚನಕಾಂಡ 6:3) ದೇವರಿಗೆ ಎಷ್ಟು ಶಕ್ತಿಯಿದೆ ಅಂದರೆ ಮರಣಕ್ಕೇ ಕೊನೆ ತರುವಷ್ಟು ಶಕ್ತಿ ಇದೆ. ಮೃತರನ್ನು ಪುನಃ ಬದುಕಿಸಿ ಮರಣವನ್ನು ಹೇಳಹೆಸರಿಲ್ಲದಂತೆ ಮಾಡುತ್ತೀನಿ ಅಂತ ದೇವರು ವಚನ ಕೊಟ್ಟಿದ್ದಾರೆ. * ಇದನ್ನು ನಾವು ನಂಬಬಹುದು. ಏನು ಆಧಾರ? ದೇವಪುತ್ರ ಯೇಸುವಿನ ಮಾತುಗಳು. ಆ ಮಾತುಗಳು ನಮ್ಮಲ್ಲಿ ಪ್ರತೀಕ್ಷೆ ತುಂಬುತ್ತೆ.ಮತ್ತಾಯ 22:31, 32 ಓದಿ.

ಕ್ರಿ.ಪೂ. 1514ರಲ್ಲಿ ದೇವರು ಮೋಶೆಗೆ “ನಾನು . . . ಅಬ್ರಹಾಮನ ದೇವರು, ಇಸಾಕನ ದೇವರು, ಯಾಕೋಬನ ದೇವರು” ಅಂತ ಹೇಳಿದ್ದನು. (ವಿಮೋಚನಕಾಂಡ 3:1-6) ದೇವರು ಹೇಳಿದ ಈ ಮಾತನ್ನೇ ನಾವು ಮತ್ತಾಯ 22:31, 32ರಲ್ಲಿ ಓದಿದ್ದು. ಅದನ್ನು ಯೇಸು ಸದ್ದುಕಾಯರ ಹತ್ತಿರ ಹೇಳುತ್ತಿದ್ದರು. ಏಕೆಂದ್ರೆ ಮೃತರನ್ನು ದೇವರು ಪುನಃ ಬದುಕಿಸುತ್ತಾರೆ ಅನ್ನೋ ವಿಷಯವನ್ನು ಅವರು ನಂಬುತ್ತಿರಲಿಲ್ಲ. ಯೆಹೋವ ದೇವರು ಮೋಶೆಗೆ ಹೇಳಿದ ಮಾತು ‘ಸತ್ತವರು ಖಂಡಿತ ಪುನಃ ಬದುಕುತ್ತಾರೆ’ ಅನ್ನೋ ಆಶ್ವಾಸನೆ ನೀಡುತ್ತೆ ಅನ್ನೋದು ಯೇಸು ಕ್ರಿಸ್ತರ ವಾದವಾಗಿತ್ತು.

ಸ್ವಲ್ಪ ಯೋಚಿಸಿ. ಯೆಹೋವ ದೇವರು ಮೋಶೆಗೆ ಆ ಮಾತುಗಳನ್ನು ಹೇಳುವ ಎಷ್ಟೋ ವರ್ಷಗಳ ಹಿಂದೆಯೇ ಅಬ್ರಹಾಮ ಇಸಾಕ ಯಾಕೋಬ ತೀರಿಹೋಗಿದ್ದರು. ಅಂದರೆ ಅಬ್ರಹಾಮ ತೀರಿಹೋಗಿ 329 ವರ್ಷಗಳಾಗಿದ್ದವು, ಇಸಾಕ ತೀರಿಹೋಗಿ 224 ವರ್ಷ ಹಾಗೂ ಯಾಕೋಬ ತೀರಿಹೋಗಿ 197 ವರ್ಷಗಳಾಗಿದ್ದವು. ಆದರೆ ಯೆಹೋವ ದೇವರು ‘ನಾನು ಅವರ ದೇವರು’ ಅಂತ ಹೇಳಿದ್ದರೆ ಹೊರತು ಅವರ “ದೇವರಾಗಿದ್ದೆ” ಅಂತ ಹೇಳಲಿಲ್ಲ. ಆ ಮೂವರು ದೇವಭಕ್ತರು ಇನ್ನೂ ಬದುಕಿದ್ದಾರೆ ಅನ್ನೋ ರೀತಿ ಯೆಹೋವ ದೇವರು ಮಾತಾಡಿದ್ದರು. ಅದ್ಯಾಕೆ?

ಮತ್ತಾಯ 22:32ರಲ್ಲಿ ಯೇಸು ವಿವರಣೆ ನೀಡುತ್ತಾರೆ: “[ಯೆಹೋವ] ಸತ್ತವರಿಗಲ್ಲ, ಜೀವಿತರಿಗೆ ದೇವರಾಗಿದ್ದಾ”ರೆ. ಯೇಸು ಹೇಳಿದ ಈ ಮಾತುಗಳ ಬಗ್ಗೆ ಸ್ವಲ್ಪ ಯೋಚಿಸೋಣ. ಒಂದುವೇಳೆ ಸತ್ತವರು ಪುನಃ ಬದುಕುವುದೇ ಇಲ್ಲ ಅಂತಾದರೆ ಅಬ್ರಹಾಮ, ಇಸಾಕ ಮತ್ತು ಯಾಕೋಬ ನಿತ್ಯನಿರಂತರಕ್ಕೂ ಮರಣದ ಕಪಿಮುಷ್ಠಿಯಲ್ಲೇ ಇರುತ್ತಾರೆ. ಹಾಗೇನಾದರೂ ಆದ್ರೆ ದೇವರು ಹೆಣಗಳ ದೇವರು ಅಂತ ಆಗಿಬಿಡುತ್ತೆ. ಯೆಹೋವ ದೇವರಿಗಿಂತ ಮೃತ್ಯುವೇ ಶಕ್ತಿಶಾಲಿ, ತನ್ನ ಭಕ್ತರನ್ನು ಮರಣದ ಬಿಗಿಮುಷ್ಠಿಯಿಂದ ಬಿಡಿಸುವ ಶಕ್ತಿ ದೇವರಿಗಿಲ್ಲ ಅಂತಾಗುತ್ತೆ.

ಆದರೆ ಅಬ್ರಹಾಮ, ಇಸಾಕ, ಯಾಕೋಬ ಮತ್ತು ಇನ್ನು ಎಷ್ಟೋ ದೇವಭಕ್ತರು ಈಗ ಬದುಕಿಲ್ಲ ಸತ್ತು ಹೋಗಿದ್ದಾರಲ್ಲ ಅಂತ ಯೋಚಿಸುತ್ತೀರಾ? “ಅವರೆಲ್ಲರೂ [ದೇವರಿಗೆ] ಜೀವಿಸುವವರೇ” ಅಂತ ಯೇಸು ಹೇಳಿದರು. (ಲೂಕ 20:38) ಹೌದು ದೇವರ ದೃಷ್ಟಿಯಲ್ಲಿ ಅವರೆಲ್ಲ ಈಗಾಗಲೇ ಜೀವಿಸುತ್ತಿದ್ದಾರೆ. ಭವಿಷ್ಯದಲ್ಲಿ ದೇವರು ಮೃತರನ್ನು ಖಂಡಿತ ಪುನಃ ಬದುಕಿಸುತ್ತಾರೆ ಅನ್ನೋ ಆಶ್ವಾಸನೆಯನ್ನು ಇದು ಕೊಡುತ್ತೆ. (ರೋಮನ್ನರಿಗೆ 4:16, 17) ಆದರೆ ಅಲ್ಲಿ ವರೆಗೂ ದೇವರು ಅವರನ್ನು ತನ್ನ ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ದೇವರ ಅಪಾರ ನೆನಪಿನಶಕ್ತಿಯಲ್ಲಿ ಅವರೆಲ್ಲ ಭದ್ರವಾಗಿರುತ್ತಾರೆ.

ಸತ್ತುಹೋಗಿರುವವರು ಪುನಃ ಬದುಕಬೇಕು ನಿಮ್ಮ ಜೊತೆ ಇರಬೇಕು ಅಂತ ಆಸೆ ಪಡುತ್ತಿದ್ದೀರಾ? ಹಾಗಾದರೆ ಯೆಹೋವ ದೇವರು ಮೃತ್ಯುಗಿಂತ ಶಕ್ತಿಶಾಲಿ, ಅವರು ಮೃತರನ್ನು ಪುನಃ ಬದುಕಿಸುತ್ತಾರೆ, ದೇವರನ್ನು ಯಾರೂ ಯಾವುದೂ ತಡೆಯಸಾಧ್ಯವಿಲ್ಲ ಅನ್ನೋದನ್ನು ಮರಿಬೇಡಿ. ಅಂಥ ಶಕ್ತಿಶಾಲಿ ದೇವರ ಬಗ್ಗೆ, ಪುನರುತ್ಥಾನದ ಬಗ್ಗೆ ಜ್ಞಾನ ಪಡೆದುಕೊಳ್ಳಿ. ಹೀಗೆ ತಿಳಿದುಕೊಂಡರೆ “ಜೀವಿತರಿಗೆ ದೇವರಾಗಿ”ರುವ ಯೆಹೋವ ದೇವರಿಗೆ ಆಪ್ತರಾಗುವಿರಿ. ▪ (w13-E 02/01)

ಶಿಫಾರಸು ಮಾಡಲಾಗಿರುವ ಬೈಬಲ್‌ ವಾಚನ ಭಾಗ

ಲೂಕ 7ಅಪೊಸ್ತಲರ ಕಾರ್ಯಗಳು 10

[ಪಾದಟಿಪ್ಪಣಿ]

^ ಪ್ಯಾರ. 3 ಇದರ ಬಗ್ಗೆ ಹೆಚ್ಚಿನ ವಿಷಯ ತಿಳಿದುಕೊಳ್ಳಲು ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ 7ನೇ ಅಧ್ಯಾಯ ಓದಿ. ಈ ಪುಸ್ತಕ ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.

[ಪುಟ 7ರಲ್ಲಿರುವ ಸಂಕ್ಷಿಪ್ತ ವಿವರಣೆ]

ಯೆಹೋವ ದೇವರು ಮೃತ್ಯುಗಿಂತ ತುಂಬ ಶಕ್ತಿಶಾಲಿ