ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರಿಗೆ ನನ್ನ ಬಗ್ಗೆ ಚಿಂತೆ ಇದೆಯೇ?

ದೇವರಿಗೆ ನನ್ನ ಬಗ್ಗೆ ಚಿಂತೆ ಇದೆಯೇ?

ದೇವರಿಗೆ ನನ್ನ ಬಗ್ಗೆ ಚಿಂತೆ ಇದೆಯೇ?

ಸಾಮಾನ್ಯ ಉತ್ತರಗಳು:

“ಸರ್ವೋತ್ಕೃಷ್ಟನಾಗಿರುವ ದೇವರು ನನ್ನ ಸಮಸ್ಯೆಗಳ ಕುರಿತು ಏಕೆ ಚಿಂತಿಸಾನು?”

▪ “ನನ್ನ ಬಗ್ಗೆ ಆತನು ಚಿಂತಿಸುತ್ತಾನೆಂದು ನನಗನಿಸುವುದಿಲ್ಲ.”

ಯೇಸು ಏನು ಹೇಳಿದನು?

“ಐದು ಗುಬ್ಬಿಗಳನ್ನು ಎರಡು ದುಡ್ಡಿಗೆ ಮಾರುತ್ತಾರಲ್ಲಾ? ಆದಾಗ್ಯೂ ಅವುಗಳಲ್ಲಿ ಒಂದಾದರೂ ದೇವರಿಗೆ ಮರೆತುಹೋಗುವದಿಲ್ಲ. ನಿಮ್ಮ ತಲೇಕೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ. ಹೆದರಬೇಡಿರಿ; ಬಹಳ ಗುಬ್ಬಿಗಳಿಗಿಂತ ನೀವು ಹೆಚ್ಚಿನವರು.” (ಲೂಕ 12:​6, 7) ದೇವರು ನಮ್ಮ ಬಗ್ಗೆ ಚಿಂತಿಸುತ್ತಾನೆಂದು ಯೇಸು ಕಲಿಸಿದನೆಂಬುದರಲ್ಲಿ ಎರಡು ಮಾತಿಲ್ಲ.

▪ “ಏನು ಊಟಮಾಡಬೇಕು, ಏನು ಕುಡಿಯಬೇಕು, ಏನು ಹೊದ್ದುಕೊಳ್ಳಬೇಕು ಎಂದು ಚಿಂತೆಮಾಡಬೇಡಿರಿ. ಇವೆಲ್ಲವುಗಳಿಗಾಗಿ ಅಜ್ಞಾನಿಗಳು ತವಕಪಡುತ್ತಾರೆ. ಇದೆಲ್ಲಾ ನಿಮಗೆ ಬೇಕಾಗಿದೆ ಎಂದು ಪರಲೋಕದಲ್ಲಿರುವ ನಿಮ್ಮ ತಂದೆಗೆ ತಿಳಿದದೆಯಷ್ಟೆ.” (ಮತ್ತಾಯ 6:​31, 32) ದೇವರು ನಮ್ಮ ವೈಯಕ್ತಿಕ ಅಗತ್ಯಗಳನ್ನು ಬಲ್ಲನೆಂದು ಯೇಸು ನಂಬಿದ್ದನು.

ದೇವರು ನಮ್ಮ ಬಗ್ಗೆ ಚಿಂತಿಸುತ್ತಾನೆಂದು ಬೈಬಲ್‌ ನಿಶ್ಚಯವಾಗಿ ತಿಳಿಸುತ್ತದೆ. (ಕೀರ್ತನೆ 55:22; 1 ಪೇತ್ರ 5:⁠7) ಹಾಗಿದ್ದರೆ, ಇಂದು ಇಷ್ಟೊಂದು ಕಷ್ಟಾನುಭವಗಳೇಕೆ? ದೇವರು ಪ್ರೀತಿಸ್ವರೂಪನೂ ಸರ್ವಶಕ್ತನೂ ಆಗಿರುವಲ್ಲಿ ಕಷ್ಟಸಂಕಟಗಳನ್ನು ಏಕೆ ನಿಲ್ಲಿಸುವುದಿಲ್ಲ?

ಅನೇಕರಿಗೆ ಸ್ವಲ್ಪವೂ ತಿಳಿಯದ ಒಂದು ನಿಜತ್ವದಲ್ಲಿ ಇದಕ್ಕೆ ಉತ್ತರವಿದೆ. ಅದೇನೆಂದರೆ, ಈ ದುಷ್ಟಲೋಕದ ಅಧಿಪತಿ ಪಿಶಾಚನಾದ ಸೈತಾನನಾಗಿರುವುದೇ. ಸೈತಾನನು ಯೇಸುವನ್ನು ಶೋಧನೆಗೆ ಒಳಪಡಿಸಿದಾಗ ಈ ಲೋಕದ ಎಲ್ಲಾ ರಾಜ್ಯಗಳನ್ನು ತೋರಿಸುತ್ತಾ ಹೇಳಿದ್ದು: “ಇವೆಲ್ಲವುಗಳ ಅಧಿಕಾರವನ್ನೂ ಇವುಗಳ ವೈಭವವನ್ನೂ ನಿನಗೆ ಕೊಡುವೆನು; ಇದೆಲ್ಲಾ ನನಗೆ ಕೊಟ್ಟದೆ, ಇದನ್ನು ನನ್ನ ಮನಸ್ಸು ಬಂದವನಿಗೆ ಕೊಡುತ್ತೇನೆ.”​—⁠ಲೂಕ 4:​5-7.

ಸೈತಾನನನ್ನು ಈ ಲೋಕದ ಅರಸನನ್ನಾಗಿ ಮಾಡಿದ್ದು ಯಾರು? ನಮ್ಮ ಮೊದಲ ಹೆತ್ತವರಾದ ಆದಾಮ ಹವ್ವರು ಸೈತಾನನಿಗೆ ವಿಧೇಯರಾಗಿ ದೇವರಿಗೆ ತಮ್ಮ ಬೆನ್ನು ತಿರುಗಿಸಿದಾಗ ಸೈತಾನನನ್ನು ತಮ್ಮ ಅಧಿಪತಿಯಾಗಿ ಆರಿಸಿಕೊಂಡರು. ಆ ದಂಗೆಯಿಂದ ಆರಂಭಿಸಿ, ಸೈತಾನನ ಆಳ್ವಿಕೆಯು ಶೋಚನೀಯವಾಗಿ ಸೋಲುವುದು ಎಂದು ತೋರಿಸಲು ದೇವರು ತಾಳ್ಮೆಯಿಂದ ಸಮಯವನ್ನು ಬಿಟ್ಟುಕೊಟ್ಟನು. ಯೆಹೋವನು ತನ್ನನ್ನು ಆರಾಧಿಸುವಂತೆ ಯಾರನ್ನೂ ಬಲವಂತಪಡಿಸಲಿಲ್ಲ. ಆದರೆ ಅವರು ತನ್ನ ಕಡೆಗೆ ಹಿಂದಿರುಗುವಂತೆ ದಾರಿ ತೆರೆದಿದ್ದಾನೆ.​—⁠ರೋಮಾಪುರ 5:⁠10.

ದೇವರಿಗೆ ನಮ್ಮ ಮೇಲೆ ಚಿಂತೆ ಇರುವುದರಿಂದಲೇ ಸೈತಾನನ ದಬ್ಬಾಳಿಕೆಯಿಂದ ನಮ್ಮನ್ನು ಬಿಡಿಸಲು ಯೇಸುವಿನ ಮೂಲಕ ಆತನು ಏರ್ಪಾಡುಗಳನ್ನು ಮಾಡಿದ್ದಾನೆ. ಭವಿಷ್ಯದಲ್ಲಿ ಯೇಸು ‘ಮರಣಾಧಿಕಾರಿಯನ್ನು ಅಂದರೆ ಸೈತಾನನನ್ನು ಅಡಗಿಸಿಬಿಡುವನು.’ (ಇಬ್ರಿಯ 2:14) ಹೀಗೆ ಯೇಸು ‘ಸೈತಾನನ ಕೆಲಸಗಳನ್ನು ಲಯಮಾಡುವನು.’​—⁠1 ಯೋಹಾನ 3:⁠8.

ಆರಂಭದಲ್ಲಿ ದೇವರು ಸೃಷ್ಟಿಸಿದಾಗ ಈ ಭೂಮಿ ಹೇಗಿತ್ತೋ ಹಾಗೆ ಪುನಃ ಪರದೈಸ್‌ ಆಗಿ ಮಾರ್ಪಡುವುದು. ಆಗ ದೇವರು “[ಜನರ] ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ” ಹೋಗುವುದು.​—⁠ಪ್ರಕಟನೆ 21:​4, 5. * (w09 2/1)

[ಪಾದಟಿಪ್ಪಣಿ]

^ ಪ್ಯಾರ. 12 ದೇವರು ಕಷ್ಟಸಂಕಟವನ್ನು ಏಕೆ ಅನುಮತಿಸುತ್ತಾನೆ ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ಯೆಹೋವನ ಸಾಕ್ಷಿಗಳಿಂದ ಪ್ರಕಟಿತವಾದ, ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ 11ನೇ ಅಧ್ಯಾಯ ನೋಡಿ.

[ಪುಟ 8ರಲ್ಲಿರುವ ಸಂಕ್ಷಿಪ್ತ ವಿವರಣೆ]

ಈ ಭೂಮಿಯ ಮೇಲೆ ಪರದೈಸ್‌ ಪುನಃಸ್ಥಾಪಿಸಲ್ಪಡುವುದು