ಯೇಸು ಅದ್ಭುತಕರವಾಗಿ ವಾಸಿಮಾಡುತ್ತಾನೆ
ನಮ್ಮ ಯುವ ಜನರಿಗಾಗಿ
ಯೇಸು ಅದ್ಭುತಕರವಾಗಿ ವಾಸಿಮಾಡುತ್ತಾನೆ
ಸೂಚನೆಗಳು: ಶಾಂತ ಪರಿಸರದಲ್ಲಿ ಈ ಅಭ್ಯಾಸವನ್ನು ಮಾಡಿರಿ. ಶಾಸ್ತ್ರವಚನಗಳನ್ನು ಓದುತ್ತಿರುವಾಗ ನೀವು ಕೂಡ ಆ ಘಟನೆಯ ಭಾಗವಾಗಿದ್ದೀರೆಂದು ಕಲ್ಪಿಸಿಕೊಳ್ಳಿ. ದೃಶ್ಯವನ್ನು ಮನಸ್ಸಿನಲ್ಲಿ ಚಿತ್ರಿಸಿಕೊಳ್ಳಿ. ಧ್ವನಿಗಳಿಗೆ ಕಿವಿಗೊಡಿರಿ. ವೃತ್ತಾಂತಕ್ಕೆ ಜೀವತುಂಬಿರಿ.
ಈ ದೃಶ್ಯವನ್ನು ಪರಿಶೀಲಿಸಿ.—ಮತ್ತಾಯ 15:21-28 ಓದಿ.
ಆ ತಾಯಿಯ ಮನೋಭಾವ ಹೇಗಿತ್ತೆಂದು ನೀವು ನೆನಸುತ್ತೀರಿ?
_______
ಈ ಕೆಳಗೆ ಕೊಡಲ್ಪಟ್ಟ ವಚನಗಳಲ್ಲಿ ಯೇಸು ಮಾತಾಡಿದ ರೀತಿ ಹೇಗಿತ್ತೆಂದು ನೀವು ನೆನಸುತ್ತೀರಿ?
24 _______ 26 _______ 28 _______
ಆಳವಾಗಿ ಪರಿಶೀಲಿಸಿರಿ.
ಆ ಸ್ತ್ರೀಯ ಮಗಳನ್ನು ತಾನು ವಾಸಿಮಾಡುವುದಿಲ್ಲವೆಂದು ಯೇಸು ಕ್ರಿಯೆಯಿಂದ ಮತ್ತು ಮಾತಿನಿಂದ ಎಷ್ಟು ಬಾರಿ ಸೂಚಿಸಿದನು?
_______
ಯೇಸು ಅವಳನ್ನು ಏಕೆ ಮೊದಲೇ ವಾಸಿಮಾಡಲಿಲ್ಲ?
_______
ಆಮೇಲೆ ಯೇಸು ವಾಸಿಮಾಡಿದ್ದೇಕೆ?
_______
ನೀವು ಕಲಿತದ್ದನ್ನು ಅನ್ವಯಿಸಿಕೊಳ್ಳಿರಿ. ಈ ಕೆಳಗಿನ ವಿಷಯಗಳ ಕುರಿತು ನೀವು ಕಲಿತದ್ದನ್ನು ಬರೆಯಿರಿ.
ಯೇಸುವಿನ ನ್ಯಾಯಸಮ್ಮತತೆ.
_______
ಇತರರೊಂದಿಗೆ ವ್ಯವಹರಿಸುವಾಗ ಈ ಗುಣವನ್ನು ನೀವು ಹೇಗೆ ಅನುಕರಿಸುತ್ತೀರಿ?
_______
ಈ ದೃಶ್ಯವನ್ನು ಪರಿಶೀಲಿಸಿ.—ಮಾರ್ಕ 8:22-25 ಓದಿ.
ಆ ಹಳ್ಳಿಯ ಒಳಗೂ ಹೊರಗೂ ಯಾವ ದೃಶ್ಯಗಳು ಮತ್ತು ಶಬ್ದಗಳು ಕೇಳಿಬಂದಂತೆ ನೀವು ಚಿತ್ರಿಸಿಕೊಂಡಿರಿ?
_______
ಆಳವಾಗಿ ಪರಿಶೀಲಿಸಿರಿ.
ಕುರುಡನನ್ನು ವಾಸಿಮಾಡುವ ಮೊದಲು ಅವನನ್ನು ಹಳ್ಳಿಯ ಹೊರಗೆ ಯೇಸು ಕರೆದೊಯ್ದದ್ದು ಏಕೆಂದು ನೀವು ನೆನಸುತ್ತೀರಿ?
_______
ನೀವು ಕಲಿತದ್ದನ್ನು ಅನ್ವಯಿಸಿಕೊಳ್ಳಿರಿ. ಈ ಕೆಳಗಿನ ವಿಷಯಗಳ ಕುರಿತು ನೀವು ಕಲಿತದ್ದನ್ನು ಬರೆಯಿರಿ.
ಯೇಸು ಎಂದೂ ಯಾವುದೇ ದೌರ್ಬಲ್ಯವನ್ನು ಅನುಭವಿಸದಿದ್ದರೂ, ಅಂಗಹೀನರ ಕಡೆಗೆ ಆತನಿಗಿದ್ದ ಅನುಕಂಪ.
_______
ಈ ಎರಡು ಬೈಬಲ್ ವೃತ್ತಾಂತಗಳ ಯಾವ ಅಂಶಗಳು ನಿಮ್ಮ ಮನಸ್ಸನ್ನು ಸ್ಪರ್ಶಿಸಿದವು ಮತ್ತು ಏಕೆ?
_______
(w08 5/1)