ಯೆಹೋವನು ನಿಷ್ಠಾವಂತರ ಕೈಬಿಡುವುದಿಲ್ಲ
ಯೆಹೋವನು ನಿಷ್ಠಾವಂತರ ಕೈಬಿಡುವುದಿಲ್ಲ
“ಯೆಹೋವನು . . . ತನ್ನ ಭಕ್ತರನ್ನು [“ನಿಷ್ಠಾವಂತರನ್ನು,” NW] ಎಂದಿಗೂ ಕೈಬಿಡುವವನಲ್ಲ. ಅವರು ಸದಾಕಾಲವೂ ಸುರಕ್ಷಿತರಾಗಿರುವರು.”—ಕೀರ್ತ. 37:28.
ಸಮಯ ಸಾ.ಶ.ಪೂ. ಹತ್ತನೇ ಶತಮಾನ ಆಗಿತ್ತು. ಅಶಾಂತವಾದ ಉತ್ತರದ ಇಸ್ರಾಯೇಲ್ ಕುಲಗಳಿಗೆ ಕೊಂಚ ಸ್ವಾತಂತ್ರ್ಯ ಕೊಟ್ಟಿದ್ದರಿಂದ ಅಂತರ್ಯುದ್ಧ ಸ್ವಲ್ಪದರಲ್ಲೇ ತಪ್ಪಿದೆ. ಈ ಉತ್ತರದ ಕುಲಗಳ ಹೊಸ ರಾಜ ಯಾರೊಬ್ಬಾಮನು, ತನ್ನ ಸ್ಥಾನವನ್ನು ಭದ್ರಪಡಿಸಲು ಕೂಡಲೇ ಒಂದು ಹೊಸ ರಾಷ್ಟ್ರೀಯ ಧರ್ಮವನ್ನು ಸ್ಥಾಪಿಸುತ್ತಾನೆ ಮತ್ತು ಪ್ರಜೆಗಳು ತನಗೆ ಮಾತ್ರ ಸಂಪೂರ್ಣ ನಿಷ್ಠೆ ತೋರಿಸಬೇಕೆಂದು ಒತ್ತಾಯಿಸುತ್ತಾನೆ. ಇಂಥ ಸನ್ನಿವೇಶದಲ್ಲಿ ಯೆಹೋವನ ನಂಬಿಗಸ್ತ ಸೇವಕರು ಒಂದು ನಿರ್ಣಯ ಮಾಡಬೇಕಿತ್ತು. ಅವರು ಯಾರಿಗೆ ಸಂಪೂರ್ಣ ನಿಷ್ಠೆ ತೋರಿಸುವರು? ರಾಜನಿಗೋ, ತಾವು ಆರಾಧಿಸುವ ದೇವರಿಗೋ? ಸಾವಿರಾರು ಮಂದಿ ಯೆಹೋವನಿಗೆ ನಿಷ್ಠರಾಗಿ ಉಳಿಯುತ್ತಾರೆ ಮತ್ತು ಆತನು ಇದನ್ನು ಗಮನಿಸುತ್ತಾನೆ.—1 ಅರ. 12:1-33; 2 ಪೂರ್ವ. 11:13, 14.
2 ನಮ್ಮೀ ದಿನದಲ್ಲೂ ದೇವರ ಸೇವಕರ ನಿಷ್ಠೆ ಪರೀಕ್ಷೆಗೊಳಗಾಗುತ್ತಿದೆ. ಬೈಬಲ್ ಎಚ್ಚರಿಸುವುದು: “ಸ್ವಸ್ಥಚಿತ್ತರಾಗಿರಿ, ಎಚ್ಚರವಾಗಿರಿ; ನಿಮ್ಮ ವಿರೋಧಿಯಾಗಿರುವ ಸೈತಾನನು ಗರ್ಜಿಸುವ ಸಿಂಹದೋಪಾದಿಯಲ್ಲಿ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗುತ್ತಾನೆ.” ನಾವು ‘ನಂಬಿಕೆಯಲ್ಲಿ ದೃಢವಾಗಿದ್ದು ಅವನನ್ನು ಎದುರಿಸುವುದರಲ್ಲಿ’ ಸಫಲರಾಗುವೆವೋ? (1 ಪೇತ್ರ 5:8, 9) ನಾವೀಗ ಸಾ.ಶ.ಪೂ. 997ರಲ್ಲಿ ಯಾರೊಬ್ಬಾಮನು ರಾಜನಾದ ಸಮಯದ ಆಸುಪಾಸು ನಡೆದ ಕೆಲವೊಂದು ಘಟನೆಗಳನ್ನು ಪರಿಶೀಲಿಸಿ, ಅವುಗಳಿಂದ ಏನು ಕಲಿಯಬಲ್ಲೆವೆಂಬುದನ್ನು ನೋಡೋಣ. ಆ ಕಠಿನ ಸಮಯಗಳಲ್ಲಿ ಯೆಹೋವನ ನಂಬಿಗಸ್ತ ಸೇವಕರು ದಬ್ಬಾಳಿಕೆಗೆ ತುತ್ತಾಗಿದ್ದರು, ಧರ್ಮಭ್ರಷ್ಟರ ಪ್ರಭಾವವನ್ನೂ ಎದುರಿಸುತ್ತಿದ್ದರು ಮತ್ತು ಅದೇ ಸಮಯದಲ್ಲಿ ತಮ್ಮ ಕಷ್ಟಕರ ನೇಮಕಗಳನ್ನು ಪೂರೈಸುತ್ತಿದ್ದರು. ಈ ಎಲ್ಲ ಸನ್ನಿವೇಶಗಳಲ್ಲಿ ಯೆಹೋವನು ತನ್ನ ನಿಷ್ಠಾವಂತರ ಕೈಬಿಡಲಿಲ್ಲ, ಈಗಲೂ ಕೈಬಿಡುವುದಿಲ್ಲ.—ಕೀರ್ತ. 37:28. *
ದಬ್ಬಾಳಿಕೆಗೆ ತುತ್ತಾಗುವಾಗ
3 ಯಾರೊಬ್ಬಾಮನು ರಾಜನಾಗುವ ಮುಂಚೆ ಇದ್ದ ಪರಿಸ್ಥಿತಿಗಳನ್ನು ನಾವು ಮೊದಲು ಪರಿಶೀಲಿಸೋಣ. ಜ್ಞಾನೋಕ್ತಿ 29:2 ಹೇಳುವುದು: “ದುಷ್ಟನ ಆಳಿಕೆ ಜನರಿಗೆ ನರಳಾಟ.” ಪುರಾತನ ಇಸ್ರಾಯೇಲಿನ ರಾಜ ದಾವೀದನ ಆಳ್ವಿಕೆಯಡಿ ಜನರು ಕಷ್ಟದಿಂದ ನರಳಲಿಲ್ಲ. ಅವನು ಅಪರಿಪೂರ್ಣನಾಗಿದ್ದರೂ ಪ್ರಜೆಗಳ ಮೇಲೆ ದಬ್ಬಾಳಿಕೆ ನಡೆಸಲಿಲ್ಲ. ಏಕೆಂದರೆ ಅವನು ದೇವರಿಗೆ ನಿಷ್ಠನಾಗಿದ್ದು ಆತನಲ್ಲಿ ಭರವಸೆಯಿಟ್ಟಿದ್ದನು. “ನಿನ್ನ ಮನೆಯೂ ಅರಸುತನವೂ ಸದಾಕಾಲ ಸ್ಥಿರವಾಗಿರುವವು; ನಿನ್ನ ಸಿಂಹಾಸನವು ಶಾಶ್ವತವಾಗಿರುವದು” ಎನ್ನುತ್ತಾ ಯೆಹೋವನು ದಾವೀದನೊಂದಿಗೆ ಒಂದು ಒಡಂಬಡಿಕೆ ಮಾಡಿದನು.—2 ಸಮು. 7:16.
4 ದಾವೀದನ ಮಗನಾದ ಸೊಲೊಮೋನನ ಆಳ್ವಿಕೆಯ ಆರಂಭದಲ್ಲಿ ಎಷ್ಟು ಶಾಂತಿ ಸಮೃದ್ಧಿ ಇತ್ತೆಂದರೆ, ಅವನ ಆಳ್ವಿಕೆ ಭವಿಷ್ಯದಲ್ಲಿ ನಡೆಯುವ ಕ್ರಿಸ್ತ ಯೇಸುವಿನ ಸಾವಿರ ವರ್ಷದಾಳಿಕೆಯನ್ನು ಸೂಕ್ತವಾಗಿಯೇ ಮುನ್‌ಚಿತ್ರಿಸುತ್ತಿತ್ತು. (ಕೀರ್ತ. 72:1, 17) ಆದುದರಿಂದ ಆ ಕಾಲದ ಇಸ್ರಾಯೇಲಿನ 12 ಕುಲಗಳಲ್ಲಿ ಯಾವುದೇ ಕುಲಕ್ಕೂ ದಂಗೆಯೇಳಲು ಕಾರಣವಿರಲಿಲ್ಲ. ಆದರೆ ಸೊಲೊಮೋನನು ಮತ್ತವನ ಪ್ರಜೆಗಳು ಆನಂದಿಸುತ್ತಿದ್ದ ಆಶೀರ್ವಾದಗಳು ಒಂದು ಷರತ್ತಿನ ಮೇಲೆ ಅವಲಂಬಿಸಿದ್ದವು. ಯೆಹೋವನು ಸೊಲೊಮೋನನಿಗೆ ಹೀಗಂದಿದ್ದನು: “ನೀನು ನನ್ನ ನಿಯಮವಿಧಿಗಳನ್ನು ಅನುಸರಿಸಿ ನನ್ನ ಆಜ್ಞೆಗಳನ್ನು ಕೈಕೊಂಡು ನಡೆಯುವದಾದರೆ ನಾನು ನಿನ್ನನ್ನು ಕುರಿತು ನಿನ್ನ ತಂದೆಯಾದ ದಾವೀದನಿಗೆ ಮಾಡಿದ ವಾಗ್ದಾನವನ್ನು ನೆರವೇರಿಸುವೆನು. ನನ್ನ ಪ್ರಜೆಗಳಾದ ಇಸ್ರಾಯೇಲ್ಯರನ್ನು ಕೈಬಿಡದೆ ಅವರ ಮಧ್ಯದಲ್ಲೇ ವಾಸಿಸುವೆನು.”—1 ಅರ. 6:11-13.
1 ಅರ. 11:4-6) ಕ್ರಮೇಣ, ಅವನು ಯೆಹೋವನ ನಿಯಮಗಳಿಗೆ ಅವಿಧೇಯನಾದನು ಮತ್ತು ಹೆಚ್ಚೆಚ್ಚು ದಬ್ಬಾಳಿಕೆ ನಡೆಸಲಾರಂಭಿಸಿದನು. ಅದೆಷ್ಟು ವಿಪರೀತವಾಗಿತ್ತೆಂದರೆ ಅವನ ಮರಣದ ಬಳಿಕ, ಅವನ ಪುತ್ರನೂ ಉತ್ತರಾಧಿಕಾರಿಯೂ ಆದ ರೆಹಬ್ಬಾಮನಿಗೆ ಜನರು ದೂರುಸಲ್ಲಿಸಿ ಉಪಶಮನಕ್ಕಾಗಿ ಬೇಡಿಕೊಂಡರು. (1 ಅರ. 12:4) ಸೊಲೊಮೋನನು ಅಪನಂಬಿಗಸ್ತನಾದ ಸಂದರ್ಭದಲ್ಲಿ ಯೆಹೋವನು ಹೇಗೆ ಪ್ರತಿಕ್ರಿಯಿಸಿದ್ದನು?
5 ಸೊಲೊಮೋನನು ತನ್ನ ಇಳಿವಯಸ್ಸಿನಲ್ಲಿ ಯೆಹೋವನಿಗೆ ಅಪನಂಬಿಗಸ್ತನಾಗಿ ಸುಳ್ಳು ದೇವರುಗಳನ್ನು ಆರಾಧಿಸತೊಡಗಿದನು. (6 ಬೈಬಲ್ ನಮಗನ್ನುವುದು: ‘ಯೆಹೋವನು ಸೊಲೊಮೋನನಿಗೆ ಎರಡು ಸಾರಿ ಕಾಣಿಸಿಕೊಂಡು ಅನ್ಯದೇವತೆಗಳನ್ನು ಸೇವಿಸಲೇ ಬಾರದೆಂದು ಆಜ್ಞಾಪಿಸಿದ್ದರೂ ಅವನು ಆತನ ಆಜ್ಞೆಗಳನ್ನು ಮೀರಿದ್ದರಿಂದ ಆತನು ಅವನ ಮೇಲೆ ಕೋಪಗೊಂಡನು.’ ಯೆಹೋವನು ಸೊಲೊಮೋನನಿಗೆ ಅಂದದ್ದು: “ನನ್ನ ವಿಧಿನಿಬಂಧನೆಗಳನ್ನು ಮೀರಿದ್ದರಿಂದ ನಿನ್ನ ರಾಜ್ಯವನ್ನು ನಿನ್ನಿಂದ ಕಿತ್ತುಕೊಂಡು ನಿನ್ನ ಸೇವಕನಿಗೆ ಕೊಡುವೆನು.”—1 ಅರ. 11:9-11.
7 ತದನಂತರ ಯೆಹೋವನು ಒಬ್ಬ ವಿಮೋಚಕನನ್ನು ಅಭಿಷೇಕಿಸಲು ಪ್ರವಾದಿ ಅಹೀಯನನ್ನು ಕಳುಹಿಸಿದನು. ಆ ವಿಮೋಚಕನು ಯಾರೊಬ್ಬಾಮನಾಗಿದ್ದನು. ಇವನು ಸೊಲೊಮೋನನ ಸರಕಾರದಲ್ಲಿ ಕೆಲಸಮಾಡುತ್ತಿದ್ದ ಒಬ್ಬ ಸಮರ್ಥ ಪುರುಷನಾಗಿದ್ದನು. ದಾವೀದನೊಂದಿಗೆ ಮಾಡಿದ ರಾಜ್ಯ ಒಡಂಬಡಿಕೆಗೆ ಯೆಹೋವನು ನಿಷ್ಠನಾಗಿ ಉಳಿದನಾದರೂ, ಇಸ್ರಾಯೇಲಿನ 12 ಕುಲಗಳ ಆಡಳಿತ ವಿಭಾಗಗೊಂಡು, ಯಾರೊಬ್ಬಾಮನಿಗೆ ಹತ್ತು ಕುಲಗಳು ಮತ್ತು ದಾವೀದನ ವಂಶವನ್ನು ಪ್ರತಿನಿಧಿಸುತ್ತಿದ್ದ ರಾಜ ರೆಹಬ್ಬಾಮನಿಗೆ ಎರಡು ಕುಲಗಳು ಉಳಿಯುವಂತೆ ಅನುಮತಿಸಿದನು. (1 ಅರ. 11:29-37; 12:16, 17, 21) ಯೆಹೋವನು ಯಾರೊಬ್ಬಾಮನಿಗೆ ಹೀಗಂದನು: “ನನ್ನ ಸೇವಕನಾದ ದಾವೀದನು ನನ್ನ ಆಜ್ಞಾವಿಧಿಗಳನ್ನು ಕೈಕೊಂಡಂತೆ ನೀನೂ ನನ್ನ ಆಜ್ಞೆಗಳನ್ನು ಕೈಕೊಂಡು ನನ್ನ ಮಾರ್ಗದಲ್ಲಿ ನಡೆದು ನನ್ನನ್ನು ಮೆಚ್ಚಿಸುವದಾದರೆ ನಾನು ನಿನ್ನ ಸಂಗಡ ಇದ್ದು ದಾವೀದನ ಸಂತಾನದಂತೆ ನಿನ್ನ ಸಂತಾನವನ್ನೂ ಸ್ಥಿರಪಡಿಸುವೆನು; ಇಸ್ರಾಯೇಲ್‌ರಾಜ್ಯವು ನಿನ್ನ ಪಾಲಾಗುವದು.” (1 ಅರ. 11:38) ಹೀಗೆ ಯೆಹೋವನು ತನ್ನ ಜನರ ಪರವಾಗಿ ಕ್ರಮಗೈದನು ಮತ್ತು ಅವರನ್ನು ದಬ್ಬಾಳಿಕೆಯಿಂದ ಬಿಡಿಸುವ ಮಾರ್ಗವನ್ನು ತೆರೆದನು.
8 ದಬ್ಬಾಳಿಕೆ ಹಾಗೂ ಅನ್ಯಾಯ ಇಂದು ಎಲ್ಲೆಡೆಯೂ ತುಂಬಿತುಳುಕುತ್ತಿದೆ. ಪ್ರಸಂಗಿ 8:9 ಹೇಳುವಂತೆ, ‘ಒಬ್ಬನು ಮತ್ತೊಬ್ಬನ ಮೇಲೆ ಅಧಿಕಾರನಡಿಸಿ ಹಾನಿಯನ್ನುಂಟುಮಾಡಿದ್ದಾನೆ.’ ವಾಣಿಜ್ಯ ವ್ಯವಸ್ಥೆಯ ದುರಾಸೆ ಹಾಗೂ ಭ್ರಷ್ಟ ಆಳ್ವಿಕೆಯಿಂದಾಗಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಸರಕಾರಿ, ವ್ಯಾಪಾರಿ ಮತ್ತು ಧಾರ್ಮಿಕ ಮುಖಂಡರ ನೈತಿಕ ಮಾದರಿ ಅನೇಕವೇಳೆ ತುಂಬ ಕೀಳ್ಮಟ್ಟದ್ದಾಗಿರುತ್ತದೆ. ಆದುದರಿಂದ ಇಂದು ದೇವರ ನಿಷ್ಠಾವಂತ ಸೇವಕರು, ನೀತಿವಂತ ಲೋಟನಂತೆ ‘ಅಧರ್ಮಿಗಳ ನಾಚಿಕೆಗೆಟ್ಟ ನಡತೆಯಿಂದ ವೇದನೆಗೊಂಡಿದ್ದಾರೆ.’ (2 ಪೇತ್ರ 2:7) ಅಷ್ಟುಮಾತ್ರವಲ್ಲದೆ, ನಾವು ಶಾಂತರಾಗಿ ದೈವಿಕ ಮಟ್ಟಗಳಿಗನುಸಾರ ಜೀವಿಸಲು ಪ್ರಯತ್ನಿಸುತ್ತಿರುವುದಾದರೂ ಅನೇಕವೇಳೆ ಗರ್ವಿಷ್ಠ ಅಧಿಪತಿಗಳ ಹಿಂಸೆಗೆ ಗುರಿಯಾಗುತ್ತೇವೆ.—2 ತಿಮೊ. 3:1-5, 12.
9 ಯೆಹೋವನು ತನ್ನ ನಿಷ್ಠಾವಂತರ ಕೈಬಿಡುವುದಿಲ್ಲ ಎಂಬ ಮೂಲಭೂತ ಸತ್ಯದ ವಿಷಯದಲ್ಲಂತೂ ನಮಗೆ ಪೂರ್ಣ ಖಾತ್ರಿ ಇರಬಲ್ಲದು! ಈ ಲೋಕದ ಭ್ರಷ್ಟ ಅಧಿಪತಿಗಳನ್ನು ಸ್ಥಾನಪಲ್ಲಟ ಮಾಡಲು ಆತನು ಈಗಾಗಲೇ ತೆಗೆದುಕೊಂಡಿರುವ ಕ್ರಮಗಳ ಕುರಿತು ಯೋಚಿಸಿ. ಕ್ರಿಸ್ತ ಯೇಸುವಿನ ಕೈಕೆಳಗೆ ದೇವರ ಮೆಸ್ಸೀಯ ರಾಜ್ಯವು ಈಗಾಗಲೇ ಸ್ಥಾಪನೆಗೊಂಡಿದೆ ಮತ್ತು ಅವನು ಈಗ ಸರಿಸುಮಾರು ನೂರು ವರ್ಷಗಳಿಂದ ಸ್ವರ್ಗದಲ್ಲಿ ಆಳುತ್ತಿದ್ದಾನೆ. ದೇವರ ನಾಮಕ್ಕೆ ಭಯಪಡುವವರಿಗೆ ಆತನು ಬಲುಬೇಗನೆ ಸಂಪೂರ್ಣ ಉಪಶಮನ ತರುವನು. (ಪ್ರಕಟನೆ 11:15-18 ಓದಿ.) ಯೇಸು ಈಗಾಗಲೇ ಮರಣಪರ್ಯಂತದ ನಿಷ್ಠೆಯನ್ನು ದೇವರಿಗೆ ತೋರಿಸಿದ್ದಾನೆ. ಸೊಲೊಮೋನನು ತನ್ನ ಪ್ರಜೆಗಳನ್ನು ನಿರಾಶೆಗೊಳಿಸಿದಂತೆ ಯೇಸು ಎಂದಿಗೂ ಮಾಡನು.—ಇಬ್ರಿ. 7:26; 1 ಪೇತ್ರ 2:6.
10 ದೇವರ ರಾಜ್ಯವು ಒಂದು ನೈಜ ಸರಕಾರವಾಗಿದ್ದು, ಎಲ್ಲ ದಬ್ಬಾಳಿಕೆಯನ್ನು ಅಂತ್ಯಗೊಳಿಸುವುದು. ನಮ್ಮ ನಿಷ್ಠೆ ಯೆಹೋವ ದೇವರಿಗೆ ಮತ್ತು ಆತನ ಏರ್ಪಾಡಿಗೆ ಮೀಸಲು. ನಾವು ಆ ರಾಜ್ಯದಲ್ಲಿ ಪೂರ್ಣ ಭರವಸೆಯನ್ನಿಟ್ಟು ಲೋಕದ ಭಕ್ತಿಹೀನತೆಯನ್ನು ತ್ಯಜಿಸುತ್ತೇವೆ ಮತ್ತು ಹುರುಪಿನಿಂದ ಸತ್ಕ್ರಿಯೆಗಳನ್ನು ಬೆನ್ನಟ್ಟುತ್ತೇವೆ. (ತೀತ 2:12-14) ಈ ಲೋಕದ ಕಳಂಕ ನಮಗೆ ಹತ್ತದೆ ನಿರ್ಮಲರಾಗಿ ಉಳಿಯಲು ಪ್ರಯತ್ನಿಸುತ್ತೇವೆ. (2 ಪೇತ್ರ 3:14) ನಾವು ಸದ್ಯಕ್ಕೆ ಯಾವುದೇ ಪರೀಕ್ಷೆಗಳನ್ನು ಎದುರಿಸುತ್ತಿರಲಿ, ಯೆಹೋವನು ನಮ್ಮನ್ನು ಆಧ್ಯಾತ್ಮಿಕ ಹಾನಿಯಿಂದ ಸಂರಕ್ಷಿಸುವನೆಂಬ ಭರವಸೆ ನಮಗಿರಬಲ್ಲದು. (ಕೀರ್ತನೆ 97:10 ಓದಿ. *) ಅಲ್ಲದೆ ಕೀರ್ತನೆ 116:15 ನಮಗೆ ಆಶ್ವಾಸನೆ ಕೊಡುವುದು: “ಯೆಹೋವನು ತನ್ನ ಭಕ್ತರ [“ನಿಷ್ಠಾವಂತರ,” NW] ಮರಣವನ್ನು ಅಲ್ಪವೆಂದು ಎಣಿಸುವದಿಲ್ಲ.” ಯೆಹೋವನಿಗೆ ತನ್ನ ಸೇವಕರು ಎಷ್ಟು ಅಮೂಲ್ಯರಾಗಿದ್ದಾರೆಂದರೆ ಅವರು ಒಂದು ಗುಂಪಾಗಿ ಅಳಿದುಹೋಗಲು ಆತನೆಂದಿಗೂ ಬಿಡನು.
ಧರ್ಮಭ್ರಷ್ಟರ ಪ್ರಭಾವವನ್ನು ಎದುರಿಸುವಾಗ
11 ರಾಜ ಯಾರೊಬ್ಬಾಮನ ಆಳ್ವಿಕೆಯಿಂದ ದೇವಜನರಿಗೆ ಸ್ವಲ್ಪವಾದರೂ ಉಪಶಮನ ಸಿಗಬೇಕಿತ್ತು. ಆದರೆ ಅದಕ್ಕೆ ಬದಲು ಅವನ ಕೃತ್ಯಗಳು, ದೇವರ ಕಡೆಗಿನ ಅವರ ನಿಷ್ಠೆಯನ್ನು ಇನ್ನಷ್ಟು ಪರೀಕ್ಷೆಗೊಳಪಡಿಸಿದವು. ತನಗೆ ಈಗಾಗಲೇ ಕೊಡಲಾಗಿದ್ದ ಮರ್ಯಾದೆ ಹಾಗೂ ಸುಯೋಗದಿಂದ ತೃಪ್ತನಾಗದೆ, ಯಾರೊಬ್ಬಾಮನು ತನ್ನ ಸ್ಥಾನವನ್ನು ಭದ್ರಪಡಿಸಲು ಮಾರ್ಗಗಳನ್ನು ಹುಡುಕಲಾರಂಭಿಸಿದನು. “ಜನರು ಯೆರೂಸಲೇಮಿನಲ್ಲಿರುವ ಯೆಹೋವನ ಆಲಯಕ್ಕೆ ಯಜ್ಞಾರ್ಪಣೆಗಾಗಿ ಹೋಗುವದಾದರೆ ಅವರ ಮನಸ್ಸು ಅವರ ಒಡೆಯನೂ ಯೆಹೂದದ ಅರಸನೂ ಆದ ರೆಹಬ್ಬಾಮನ ಕಡೆಗೆ ತಿರುಗೀತು; ಅವರು ನನ್ನನ್ನು ಕೊಂದು ಅವನ ಬಳಿಗೆ ಹೋದಾರು” ಎಂದವನು ಅಂದುಕೊಂಡನು. ಆದುದರಿಂದ ಅವನು ಒಂದು ಹೊಸ ಧರ್ಮವನ್ನು ಸ್ಥಾಪಿಸಿದನು. ಇದಕ್ಕಾಗಿ ಅವನು ಎರಡು ಚಿನ್ನದ ಬಸವಗಳನ್ನು ಮಾಡಿ, “ಒಂದನ್ನು ಬೇತೇಲಿನಲ್ಲಿರಿಸಿ ಇನ್ನೊಂದನ್ನು ದಾನಿಗೆ ಕಳುಹಿಸಿದನು. (ಇದು ಪಾಪಕ್ಕೆ ಕಾರಣವಾಯಿತು.) ಜನರು ಈ ಎರಡನೆಯ ವಿಗ್ರಹವನ್ನು ಮೆರವಣಿಗೆಯಿಂದ ದಾನಿಗೆ ಒಯ್ದರು. ಇದಲ್ಲದೆ ಅವನು ಪೂಜಾಗಿರಿಗಳ ಮೇಲೆ ಗುಡಿಗಳನ್ನು ಕಟ್ಟಿಸಿ ಲೇವಿಯರಲ್ಲದ ಕನಿಷ್ಠಜನರನ್ನೂ ಯಾಜಕರನ್ನಾಗಿ ನೇಮಿಸಿದನು.” ‘ಇಸ್ರಾಯೇಲ್ಯರು ಹಬ್ಬವನ್ನಾಚರಿಸಲು’ ಅವನು ತನ್ನದೇ ಆದ ದಿನವನ್ನೂ ನೇಮಿಸಿದನು ಮತ್ತು ‘ವೇದಿಯ ಮೇಲೆ ಯಜ್ಞಮಾಡಿದನು.’—1 ಅರ. 12:26-33.
12 ಉತ್ತರದ ರಾಜ್ಯದಲ್ಲಿದ್ದ ದೇವರ ನಿಷ್ಠಾವಂತ ಸೇವಕರು ಈಗ ಏನು ಮಾಡಬಹುದಿತ್ತು? ಉತ್ತರದ ರಾಜ್ಯದಲ್ಲಿ ತಮಗೆ ಕೊಡಲಾಗಿದ್ದ ಪಟ್ಟಣಗಳಲ್ಲಿ ವಾಸಿಸುತ್ತಿದ್ದ ಲೇವ್ಯರು ತಮ್ಮ ನಂಬಿಗಸ್ತ ಪೂರ್ವಜರಂತೆ ತತ್‌ಕ್ಷಣ ಪ್ರತಿಕ್ರಿಯಿಸಿದರು. (ವಿಮೋ. 32:26-28; ಅರಣ್ಯ. 35:6-8; ಧರ್ಮೋ. 33:8, 9) ತಮ್ಮ ಪಿತ್ರಾರ್ಜಿತ ಆಸ್ತಿಯನ್ನು ಬಿಟ್ಟು ಅವರು ದಕ್ಷಿಣದಲ್ಲಿದ್ದ ಯೆಹೂದಕ್ಕೆ ತಮ್ಮ ಕುಟುಂಬಗಳೊಂದಿಗೆ ಸ್ಥಳಾಂತರಿಸಿದರು. ಅಲ್ಲಿ ಅವರು ಯೆಹೋವನನ್ನು ಯಾವುದೇ ಅಡ್ಡಿಯಿಲ್ಲದೆ ಸೇವಿಸಬಹುದಿತ್ತು. (2 ಪೂರ್ವ. 11:13-15) ಯೆಹೂದದಲ್ಲಿ ತಾತ್ಕಾಲಿಕವಾಗಿ ವಾಸಿಸುತ್ತಿದ್ದ ಇತರ ಇಸ್ರಾಯೇಲ್ಯರು ತಮ್ಮ ತಾಯ್ನಾಡಿಗೆ ಹಿಂದಿರುಗುವ ಬದಲು ಅಲ್ಲೇ ಕಾಯಂ ನೆಲೆಸುವ ಆಯ್ಕೆ ಮಾಡಿದರು. (2 ಪೂರ್ವ. 10:17) ಸತ್ಯಾರಾಧನೆಗೆ ಹಿಂದಿರುಗುವ ಅವಕಾಶ ಸದಾ ತೆರೆದಿರುವಂತೆ ಯೆಹೋವನು ನೋಡಿಕೊಂಡನು. ಹೀಗೆ ಉತ್ತರ ರಾಜ್ಯದ ಮುಂದಿನ ತಲೆಮಾರುಗಳವರು ಬಸವಾರಾಧನೆಯನ್ನು ಬಿಟ್ಟು ಯೆಹೂದಕ್ಕೆ ಹಿಂದಿರುಗಬಹುದಿತ್ತು.—2 ಪೂರ್ವ. 15:9-15.
13 ಧರ್ಮಭ್ರಷ್ಟರು ಮತ್ತು ಅವರ ಪ್ರಭಾವ ಇಂದು ಸಹ ದೇವರ ಜನರಿಗೆ ಅಪಾಯವನ್ನೊಡ್ಡುತ್ತಿದೆ. ಕೆಲವು ಅಧಿಪತಿಗಳು ತಮ್ಮ ಸ್ವಂತ ರಾಷ್ಟ್ರೀಯ ಧರ್ಮವನ್ನು ಸ್ಥಾಪಿಸಿ, ತಮ್ಮ ಪ್ರಜೆಗಳು ಅದನ್ನು ಅಂಗೀಕರಿಸಲು ಒತ್ತಡಹಾಕಿದ್ದಾರೆ. ಕ್ರೈಸ್ತಪ್ರಪಂಚದ ಪಾದ್ರಿವರ್ಗ ಮತ್ತು ಇತರ ಅಹಂಕಾರಿ ವ್ಯಕ್ತಿಗಳು, ಆಧ್ಯಾತ್ಮಿಕ ಯಾಜಕತ್ವದ ಹಕ್ಕು ತಮಗಿದೆಯೆಂದು ಹೇಳಿಕೊಂಡಿದ್ದಾರೆ. ಆದರೆ ಕೇವಲ ಸತ್ಯ ಕ್ರೈಸ್ತರ ಮಧ್ಯೆ 1 ಪೇತ್ರ 2:9; ಪ್ರಕ. 14:1-5.
‘ರಾಜವಂಶಸ್ಥ ಯಾಜಕರಾದ’ ನಿಜವಾದ ಅಭಿಷಿಕ್ತರನ್ನು ನಾವು ನೋಡಬಹುದು.—14 ಸಾ.ಶ.ಪೂ. ಹತ್ತನೇ ಶತಮಾನದಲ್ಲಿದ್ದ ನಂಬಿಗಸ್ತ ಲೇವ್ಯರಂತೆ, ಇಂದು ದೇವರ ನಿಷ್ಠಾವಂತ ಸೇವಕರು ಧರ್ಮಭ್ರಷ್ಟ ವಿಚಾರಗಳಿಂದ ಮೋಸಹೋಗುವುದಿಲ್ಲ. ಅಭಿಷಿಕ್ತರೂ ಅವರ ಕ್ರೈಸ್ತ ಒಡನಾಡಿಗಳೂ ಧರ್ಮಭ್ರಷ್ಟ ವಿಚಾರಗಳನ್ನು ದೂರವಿಡಲು ಮತ್ತು ತಿರಸ್ಕರಿಸಲು ಹಿಂದೆಮುಂದೆ ನೋಡುವುದಿಲ್ಲ. (ರೋಮಾಪುರ 16:17 ಓದಿ.) ನಾವು ಐಹಿಕ ವಿಷಯಗಳಲ್ಲಿ ಸರಕಾರಿ ಅಧಿಕಾರಿಗಳಿಗೆ ಸಿದ್ಧಮನಸ್ಸಿನಿಂದ ಅಧೀನರಾಗುತ್ತೇವಾದರೂ, ಲೌಕಿಕ ಸಂಘರ್ಷಗಳ ವಿಷಯದಲ್ಲಿ ತಟಸ್ಥರಾಗಿ ಉಳಿಯುತ್ತೇವೆ ಮತ್ತು ದೇವರ ರಾಜ್ಯಕ್ಕೆ ನಿಷ್ಠರಾಗಿರುತ್ತೇವೆ. (ಯೋಹಾ. 18:36; ರೋಮಾ. 13:1-8) ದೇವರನ್ನು ಸೇವಿಸುತ್ತೇವೆಂದು ಹೇಳಿ ಅದೇ ಸಮಯದಲ್ಲಿ ತಮ್ಮ ನಡತೆಯ ಮೂಲಕ ಆತನನ್ನು ಅಗೌರವಿಸುವವರ ಸುಳ್ಳು ಮಾತುಗಳನ್ನು ನಾವು ತಳ್ಳಿಹಾಕುತ್ತೇವೆ.—ತೀತ 1:16.
15 ಈ ವಾಸ್ತವಾಂಶದ ಕುರಿತೂ ಯೋಚಿಸಿರಿ: ಪ್ರಾಮಾಣಿಕ ಹೃದಯದ ಜನರು ಈ ದುಷ್ಟ ಲೋಕದಿಂದ ಸಾಂಕೇತಿಕವಾಗಿ ಹೊರಬಂದು, ತಾನು ರಚಿಸಿರುವ ಆಧ್ಯಾತ್ಮಿಕ ಪರದೈಸನ್ನು ಪ್ರವೇಶಿಸುವ ಅವಕಾಶವನ್ನು ಯೆಹೋವನು ತೆರೆದಿಟ್ಟಿದ್ದಾನೆ. (2 ಕೊರಿಂ. 12:1-4) ಕೃತಜ್ಞತೆ ತುಂಬಿದ ಹೃದಯಗಳಿಂದ ನಾವು ‘ಯಜಮಾನನು ತನ್ನ ಮನೆಯವರಿಗೆ ಹೊತ್ತು ಹೊತ್ತಿಗೆ ಆಹಾರ ಕೊಡಲಿಕ್ಕೆ ಅವರ ಮೇಲಿಟ್ಟ ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿಗೆ’ ನಿಕಟವಾಗಿ ಉಳಿಯುತ್ತೇವೆ. ಕ್ರಿಸ್ತನು ಈ ಆಳನ್ನು ‘ತನ್ನ ಎಲ್ಲಾ ಆಸ್ತಿಯ ಮೇಲೆ ನೇಮಿಸಿದ್ದಾನೆ.’ (ಮತ್ತಾ. 24:45-47) ಆದುದರಿಂದ ಈ ಆಳು ವರ್ಗವು ತೆಗೆದುಕೊಂಡಿರುವ ಒಂದು ನಿರ್ದಿಷ್ಟ ನಿಲುವು ವೈಯಕ್ತಿಕವಾಗಿ ನಮಗೆ ಸರಿಯಾಗಿ ಅರ್ಥವಾಗದ ಕಾರಣಮಾತ್ರಕ್ಕೆ, ನಾವದನ್ನು ತಿರಸ್ಕರಿಸಬಾರದು ಇಲ್ಲವೇ ಪುನಃ ಸೈತಾನನ ಲೋಕಕ್ಕೆ ಹಿಂದಿರುಗಬಾರದು. ಅದಕ್ಕೆ ಬದಲು, ನಮ್ರತೆಯಿಂದ ನಡೆಯಲು ಮತ್ತು ಯೆಹೋವನು ವಿಷಯಗಳನ್ನು ಸ್ಪಷ್ಟೀಕರಿಸುವನೆಂದು ಕಾಯಲು ನಿಷ್ಠೆಯು ನಮ್ಮನ್ನು ಪ್ರಚೋದಿಸುವುದು.
ದೇವದತ್ತ ನೇಮಕಗಳನ್ನು ಪೂರೈಸುವಾಗ
16 ಯೆಹೋವನು ಯಾರೊಬ್ಬಾಮನನ್ನು ಅವನ ಧರ್ಮಭ್ರಷ್ಟ ಮಾರ್ಗಗಳಿಗಾಗಿ ಖಂಡಿಸಿದನು. ಯೆಹೂದ ದೇಶದ ಒಬ್ಬ ಪ್ರವಾದಿಯು ಉತ್ತರದಿಕ್ಕಿನಲ್ಲಿರುವ ಬೇತೇಲಿಗೆ ಹೋಗಿ ಯಾರೊಬ್ಬಾಮನು ತನ್ನ ವೇದಿಯ ಬಳಿ ನಿಂತು ಯಜ್ಞಾರ್ಪಿಸುತ್ತಿರುವಾಗ ಅವನನ್ನು ಕಾಣುವಂತೆ ಯೆಹೋವನು ನೇಮಿಸಿದನು. ಆ ಪ್ರವಾದಿಯು ಯಾರೊಬ್ಬಾಮನಿಗೆ ಒಂದು ಭೀಕರ ತೀರ್ಪಿನ ಸಂದೇಶವನ್ನು ತಿಳಿಸಬೇಕಿತ್ತು. ನಿಸ್ಸಂದೇಹವಾಗಿಯೂ ಇದೊಂದು ಕಷ್ಟಕರ ನೇಮಕವಾಗಿತ್ತು.—1 ಅರ. 13:1-3.
17 ಯೆಹೋವನ ಖಂಡನೆಯ ಮಾತುಗಳನ್ನು ಕೇಳಿ ಯಾರೊಬ್ಬಾಮನು ಕೋಪದಿಂದ ಕೆಂಡಾಮಂಡಲವಾದನು. ಅವನು ದೇವರ ಪ್ರತಿನಿಧಿಯ ಕಡೆಗೆ ಕೈಚಾಚಿ, ಹತ್ತಿರದಲ್ಲಿದ್ದ ಪುರುಷರಿಗೆ, “ಅವನನ್ನು ಹಿಡಿಯಿರಿ” ಎಂದು ಕಿರುಚಿದನು. ಆದರೆ ಯಾರೂ ಅಲುಗಾಡುವ ಮೊದಲೇ ರಾಜನ “ಕೈ ಒಣಗಿಹೋಯಿತು. ಅವನು ಅದನ್ನು ಹಿಂದೆಗೆಯಲಾರದವನಾದನು. ಯಜ್ಞವೇದಿಯು ಸೀಳಿ ಅದರ ಮೇಲಣ ಬೂದಿಯು ಬಿದ್ದುಹೋಯಿತು.” ಯೆಹೋವನು ಪ್ರಸನ್ನನಾಗುವಂತೆ ಬೇಡಿಕೊಂಡು ತನ್ನ ಕೈ ವಾಸಿಯಾಗುವಂತೆ ಪ್ರಾರ್ಥಿಸಲು ಯಾರೊಬ್ಬಾಮನು ಆ ಪ್ರವಾದಿಗೆ ಕೇಳಬೇಕಾಯಿತು. ಪ್ರವಾದಿಯು ಹಾಗೆ ಮಾಡಿದನು, ಮತ್ತು ಯಾರೊಬ್ಬಾಮನ ಕೈ ವಾಸಿಯಾಯಿತು. ಹೀಗೆ ಯೆಹೋವನು ತನ್ನ ಸಂದೇಶವಾಹಕನಿಗೆ ಯಾವುದೇ ಹಾನಿಯಾಗದಂತೆ ನೋಡಿಕೊಂಡನು.—1 ಅರ. 13:4-6.
18 ನಾವು ರಾಜ್ಯ ಸಾರುವ ಹಾಗೂ ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ನಿಷ್ಠೆಯಿಂದ ಪಾಲ್ಗೊಳ್ಳುವಾಗಲೂ ಜನರು ಒರಟಾಗಿ ಪ್ರತಿಕ್ರಿಯಿಸಬಹುದು. (ಮತ್ತಾ. 24:14; 28:19, 20) ಆದರೆ ಜನರು ನಮ್ಮನ್ನು ತಿರಸ್ಕರಿಸುವರೆಂಬ ಭಯವು, ಶುಶ್ರೂಷೆಗಾಗಿ ನಮ್ಮ ಹುರುಪನ್ನು ತಣ್ಣಗಾಗಿಸುವಂತೆ ಎಂದಿಗೂ ಬಿಡಬಾರದು. ಯಾರೊಬ್ಬಾಮನ ದಿನದ ಆ ಅನಾಮಧೇಯ ಪ್ರವಾದಿಯಂತೆ, ನಾವೂ ‘ಭಯವಿಲ್ಲದವರಾಗಿದ್ದು ನಮ್ಮ ಜೀವಮಾನದಲ್ಲೆಲ್ಲಾ ನಿರ್ಮಲಚಿತ್ತದಿಂದಲೂ ನೀತಿ [“ನಿಷ್ಠೆ,” NW]ಯಿಂದಲೂ ತನ್ನ ಸನ್ನಿಧಿಯಲ್ಲಿ ಸೇವೆಮಾಡುವಂತೆ ದೇವರು ನಮಗೆ ಅನುಕೂಲಮಾಡಿದ್ದಾನೆ.’ * (ಲೂಕ 1:74, 75) ಇಂದು ಯೆಹೋವನು ಚಮತ್ಕಾರದಿಂದ ನಮಗೆ ಸಹಾಯಮಾಡುವನೆಂದು ನಾವು ನಿರೀಕ್ಷಿಸುವುದಿಲ್ಲವಾದರೂ, ಆತನ ಸಾಕ್ಷಿಗಳಾಗಿರುವ ನಮ್ಮನ್ನು ಆತನು ತನ್ನ ಪವಿತ್ರಾತ್ಮ ಹಾಗೂ ದೇವದೂತರ ಮೂಲಕ ಈಗಲೂ ರಕ್ಷಿಸುತ್ತಿದ್ದಾನೆ ಮತ್ತು ಬೆಂಬಲಿಸುತ್ತಿದ್ದಾನೆ. (ಯೋಹಾನ 14:15-17; ಪ್ರಕಟನೆ 14:6 ಓದಿ.) ತನ್ನ ವಾಕ್ಯದ ಕುರಿತು ನಿರ್ಭಯದಿಂದ ಮಾತಾಡುತ್ತಾ ಇರುವವರನ್ನು ಯೆಹೋವನು ಎಂದಿಗೂ ಕೈಬಿಡುವುದಿಲ್ಲ.—ಫಿಲಿ. 1:14, 28.
ಯೆಹೋವನು ತನ್ನ ನಿಷ್ಠಾವಂತರನ್ನು ಕಾಯುವನು
19 ನಮ್ಮ ದೇವರಾದ ಯೆಹೋವನು ಪರಿಶುದ್ಧನು ಇಲ್ಲವೇ ನಿಷ್ಠಾವಂತನು. (ಪ್ರಕ. 15:4; 16:5) ಆತನು ತನ್ನ “ಎಲ್ಲ ಕೆಲಸಗಳಲ್ಲೂ ನಿಷ್ಠ”ನಾಗಿದ್ದಾನೆ. (ಕೀರ್ತ. 145:17, NW) ಬೈಬಲ್ ಆತನ ಬಗ್ಗೆ ನಮಗೆ ಈ ಆಶ್ವಾಸನೆ ಕೊಡುತ್ತದೆ: “ನ್ಯಾಯಮಾರ್ಗವನ್ನು ರಕ್ಷಿಸುತ್ತಾ ತನ್ನ ಭಕ್ತರ [“ನಿಷ್ಠಾವಂತರ,” NW] ದಾರಿಯನ್ನು ನೋಡಿಕೊಳ್ಳುವನು.” (ಜ್ಞಾನೋ. 2:8) ದೇವರ ನಿಷ್ಠಾವಂತ ಸೇವಕರು ಪರೀಕ್ಷೆಗಳನ್ನಾಗಲಿ ಧರ್ಮಭ್ರಷ್ಟ ವಿಚಾರಗಳನ್ನಾಗಲಿ ಎದುರಿಸುತ್ತಿರುವಾಗ ಇಲ್ಲವೇ ಒಂದು ಕಷ್ಟಕರ ನೇಮಕವನ್ನು ಪೂರೈಸುತ್ತಿರುವಾಗ, ಯೆಹೋವನ ಮಾರ್ಗದರ್ಶನ ಹಾಗೂ ಬೆಂಬಲ ತಮಗಿದೆ ಎಂಬ ಖಾತ್ರಿ ಅವರಿಗಿರಬಲ್ಲದು.
20 ನಾವೀಗ ಒಬ್ಬೊಬ್ಬರೂ ಚಿಂತಿಸಬೇಕಾದ ವಿಷಯವು ಇದಾಗಿದೆ: ನನಗೆ ಯಾವುದೇ ಪರೀಕ್ಷೆ ಇಲ್ಲವೇ ಪ್ರಲೋಭನೆಗಳು ಬರಲಿ, ಯೆಹೋವನೆಡೆಗೆ ನನ್ನ ನಿಷ್ಠೆಯನ್ನು ಕಾಪಾಡಿಕೊಳ್ಳಲು ಯಾವುದು ನನಗೆ ಸಹಾಯಮಾಡುವುದು? ಬೇರೆ ಮಾತುಗಳಲ್ಲಿ ಹೇಳುವುದಾದರೆ, ದೇವರೆಡೆಗಿನ ನನ್ನ ನಿಷ್ಠೆಯನ್ನು ಹೇಗೆ ಬಲಪಡಿಸಬಲ್ಲೆ?
[ಪಾದಟಿಪ್ಪಣಿಗಳು]
^ ಪ್ಯಾರ. 4 ಕನ್ನಡ ಬೈಬಲಿನಲ್ಲಿ “ಭಕ್ತರು” ಎಂದು ಭಾಷಾಂತರಿಸಲಾಗಿರುವ ಪದವು ಮೂಲಭಾಷೆಯಲ್ಲಿ “ನಿಷ್ಠಾವಂತರು” ಎಂದಾಗಿದೆ.
^ ಪ್ಯಾರ. 13 ಕೀರ್ತನೆ 97:10 (NW): “ಯೆಹೋವನನ್ನು ಪ್ರೀತಿಸುವವರೇ ಕೆಟ್ಟತನವನ್ನು ಹಗೆಮಾಡಿರಿ. ಆತನು ತನ್ನ ನಿಷ್ಠಾವಂತರ ಪ್ರಾಣಗಳನ್ನು ಕಾಯುತ್ತಾನೆ. ದುಷ್ಟರ ಕೈಯಿಂದ ಅವರನ್ನು ಬಿಡಿಸುತ್ತಾನೆ.”
^ ಪ್ಯಾರ. 23 ಆ ಪ್ರವಾದಿಯು ಯೆಹೋವನಿಗೆ ವಿಧೇಯನಾಗುತ್ತಾ ಮುಂದುವರಿಯುತ್ತಾನೋ ಇಲ್ಲವೋ ಮತ್ತು ತದನಂತರ ಅವನಿಗೇನಾಗುತ್ತದೆ ಎಂಬುದನ್ನು ಮುಂದಿನ ಲೇಖನದಲ್ಲಿ ಚರ್ಚಿಸಲಾಗುವುದು.
ನಿಮ್ಮ ಉತ್ತರವೇನು?
• ದಬ್ಬಾಳಿಕೆಗೆ ಒಳಗಾಗಿರುವ ತನ್ನ ನಿಷ್ಠಾವಂತ ಸೇವಕರ ಕೈಬಿಡುವುದಿಲ್ಲವೆಂದು ಯೆಹೋವನು ಹೇಗೆ ತೋರಿಸಿದ್ದಾನೆ?
• ಧರ್ಮಭ್ರಷ್ಟರು ಹಾಗೂ ಅವರ ವಿಚಾರಗಳಿಗೆ ನಾವು ಹೇಗೆ ಪ್ರತಿಕ್ರಿಯಿಸಬೇಕು?
• ಯೆಹೋವನ ನಿಷ್ಠಾವಂತ ಸೇವಕರು ಕ್ರೈಸ್ತ ಶುಶ್ರೂಷೆಯಲ್ಲಿ ತೊಡಗಿರುವಾಗ ಆತನು ಅವರನ್ನು ಹೇಗೆ ಕಾಯುತ್ತಾನೆ?
[ಅಧ್ಯಯನ ಪ್ರಶ್ನೆಗಳು]
1, 2. (ಎ) ಸಾ.ಶ.ಪೂ. ಹತ್ತನೇ ಶತಮಾನದಲ್ಲಾದ ಯಾವ ಘಟನೆಗಳು ದೇವರ ಸೇವಕರ ನಿಷ್ಠೆಯನ್ನು ಪರೀಕ್ಷಿಸಿದವು? (ಬಿ) ಯೆಹೋವನು ಯಾವ ಮೂರು ಸನ್ನಿವೇಶಗಳಲ್ಲಿ ನಿಷ್ಠಾವಂತರನ್ನು ರಕ್ಷಿಸಿದನು?
3. ರಾಜ ದಾವೀದನು ದಬ್ಬಾಳಿಕೆ ನಡೆಸದೆ ಇರಲು ಕಾರಣವೇನು?
4. ಸೊಲೊಮೋನನು ಆಳುತ್ತಿದ್ದಾಗ ಇದ್ದ ಆಶೀರ್ವಾದಗಳು ಯಾವ ಷರತ್ತಿನ ಮೇಲೆ ಅವಲಂಬಿಸಿದ್ದವು?
5, 6. ಸೊಲೊಮೋನನು ದೇವರಿಗೆ ನಿಷ್ಠಾದ್ರೋಹಿಯಾದದ್ದರ ಪರಿಣಾಮವೇನಾಯಿತು?
7. ಯೆಹೋವನು ಸೊಲೊಮೋನನನ್ನು ತಿರಸ್ಕರಿಸಿದರೂ ತನ್ನ ನಿಷ್ಠಾವಂತರನ್ನು ಪರಾಮರಿಸಿದ್ದು ಹೇಗೆ?
8. ಇಂದು ದೇವಜನರು ಯಾವ ದಬ್ಬಾಳಿಕೆಗೊಳಗಾಗುತ್ತಾರೆ?
9. (ಎ) ಯೆಹೋವನು ತನ್ನ ಜನರನ್ನು ಬಿಡಿಸಲು ಈಗಾಗಲೇ ಏನು ಮಾಡಿದ್ದಾನೆ? (ಬಿ) ಯೇಸು ಯಾವಾಗಲೂ ದೇವರಿಗೆ ನಿಷ್ಠನಾಗಿರುವನೆಂದು ನಮಗೇಕೆ ಖಾತ್ರಿ ಇರಬಲ್ಲದು?
10. (ಎ) ನಾವು ದೇವರ ರಾಜ್ಯವನ್ನು ಗಣ್ಯಮಾಡುತ್ತೇವೆಂದು ಹೇಗೆ ತೋರಿಸಬಲ್ಲೆವು? (ಬಿ) ಕಷ್ಟಪರೀಕ್ಷೆಗಳನ್ನು ಎದುರಿಸುತ್ತಿರುವಾಗ ನಮಗೆ ಯಾವ ಭರವಸೆಯಿರಬಲ್ಲದು?
11. ಯಾರೊಬ್ಬಾಮನು ನಿಷ್ಠಾದ್ರೋಹಿಯಾದದ್ದು ಹೇಗೆ?
12. ಯಾರೊಬ್ಬಾಮನು ಇಸ್ರಾಯೇಲಿನಲ್ಲಿ ಬಸವಾರಾಧನೆಯನ್ನು ಸ್ಥಾಪಿಸಿದಾಗ ಆ ಉತ್ತರ ರಾಜ್ಯದಲ್ಲಿದ್ದ ದೇವರ ನಿಷ್ಠಾವಂತ ಸೇವಕರು ಏನು ಮಾಡಿದರು?
13. ಆಧುನಿಕ ಸಮಯಗಳಲ್ಲಿ, ಧರ್ಮಭ್ರಷ್ಟರ ಪ್ರಭಾವವು ದೇವಜನರನ್ನು ಹೇಗೆ ಪರೀಕ್ಷೆಗೊಳಪಡಿಸಿದೆ?
14. ಧರ್ಮಭ್ರಷ್ಟ ವಿಚಾರಗಳಿಗೆ ನಾವು ಹೇಗೆ ಪ್ರತಿಕ್ರಿಯಿಸಬೇಕು?
15. ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿಗೆ’ ನಾವೇಕೆ ನಿಷ್ಠರಾಗಿರಬೇಕು?
16. ಯೆಹೂದದ ಒಬ್ಬ ಪ್ರವಾದಿಗೆ ಯಾವ ನೇಮಕ ಸಿಕ್ಕಿತು?
17. ಯೆಹೋವನು ತನ್ನ ಸಂದೇಶವಾಹಕನನ್ನು ಹೇಗೆ ಸಂರಕ್ಷಿಸಿದನು?
18. ನಾವು ನಿರ್ಭಯವಾಗಿ ಯೆಹೋವನಿಗೆ ಪವಿತ್ರ ಸೇವೆಸಲ್ಲಿಸುತ್ತಿರುವಾಗ ಆತನು ನಮ್ಮನ್ನು ಹೇಗೆ ರಕ್ಷಿಸುತ್ತಾನೆ?
19, 20. (ಎ) ಯೆಹೋವನು ಎಂದಿಗೂ ನಮ್ಮ ಕೈಬಿಡನೆಂದು ನಾವೇಕೆ ಖಾತ್ರಿಯಿಂದಿರಬಲ್ಲೆವು? (ಬಿ) ಮುಂದಿನ ಲೇಖನದಲ್ಲಿ ಏನನ್ನು ಚರ್ಚಿಸಲಾಗುವುದು?
[ಪುಟ 5ರಲ್ಲಿರುವ ಭೂಪಟ/ಚಿತ್ರ]
(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)
ಉತ್ತರ ರಾಜ್ಯ (ಯಾರೊಬ್ಬಾಮ)
ದಾನ್
ಶೆಕೆಮ್
ಬೇತೇಲ್
ದಕ್ಷಿಣ ರಾಜ್ಯ (ರೆಹಬ್ಬಾಮ)
ಯೆರೂಸಲೇಮ್
[ಚಿತ್ರ]
ಯಾರೊಬ್ಬಾಮನು ಬಸವಾರಾಧನೆ ಆರಂಭಿಸಿದಾಗ ಯೆಹೋವನು ತನ್ನ ನಿಷ್ಠಾವಂತ ಸೇವಕರ ಕೈಬಿಡಲಿಲ್ಲ
[ಪುಟ 3ರಲ್ಲಿರುವ ಚಿತ್ರ]
ಸೊಲೊಮೋನನೂ ಅವನ ಪ್ರಜೆಗಳೂ ಆನಂದಿಸುತ್ತಿದ್ದ ಆಶೀರ್ವಾದಗಳು ಒಂದು ಷರತ್ತಿನ ಮೇಲೆ ಅವಲಂಬಿಸಿದ್ದವು