‘ಸಂಕ್ಷಿಪ್ತವಾಗಿರುವುದಾದರೂ ಮಾಹಿತಿಭರಿತವಾದದ್ದಾಗಿದೆ’
‘ಸಂಕ್ಷಿಪ್ತವಾಗಿರುವುದಾದರೂ ಮಾಹಿತಿಭರಿತವಾದದ್ದಾಗಿದೆ’
ಒಬ್ಬ ಸ್ತ್ರೀಯು ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಎಂಬ ಬ್ರೋಷರನ್ನು ವರ್ಣಿಸಲು ಈ ಮಾತುಗಳನ್ನು ಉಪಯೋಗಿಸಿದಳು. ತದನಂತರ ಅವಳು ಈ ಹೇಳಿಕೆಯನ್ನು ನುಡಿಯುವಂತೆ ಯಾವುದು ತನ್ನನ್ನು ಪ್ರೇರಿಸಿತ್ತು ಎಂಬುದನ್ನು ವಿವರಿಸಿದಳು. ಅವಳು ಹೇಳಿದ್ದು: “ಈ ಬ್ರೋಷರನ್ನು ಉಪಯೋಗಿಸುವ ಮೂಲಕ, ಒಬ್ಬ ವೃದ್ಧ ಸ್ತ್ರೀಯಾಗಿರುವ ಗ್ಲೋರೀಅ ಬೈಬಲನ್ನು ಓದುವ ತನ್ನ ಬಯಕೆಯನ್ನು ಪುನಶ್ಚೈತನ್ಯಗೊಳಿಸಿದಳು. ಆಕೆ ಮೌನವಾಗಿ ಕುಳಿತು ಓದಿನಲ್ಲಿ ಮನಸ್ಸನ್ನು ಕೇಂದ್ರೀಕರಿಸಲು ಅಸಮರ್ಥಳಾಗಿದ್ದ ಹಂತದಿಂದ ಎರಡು ತಾಸುಗಳ ವರೆಗೆ ಕುಳಿತು ಅಧ್ಯಯನಮಾಡುವ ಹಂತದ ವರೆಗೆ ಪ್ರಗತಿಯನ್ನು ಮಾಡಿದ್ದಾಳೆ. ಆಕೆ ಸಮಯಕ್ಕೆ ಮುಂಚೆಯೇ ಎಲ್ಲಾ ಪಾಠಗಳನ್ನೂ ತಯಾರಿಸುತ್ತಾಳೆ ಮತ್ತು ಎಲ್ಲಾ ಶಾಸ್ತ್ರವಚನಗಳನ್ನೂ ತೆರೆದು ನೋಡುತ್ತಾಳೆ.”
ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಎಂಬುದು 32 ಪುಟದ ಪ್ರಕಾಶನವಾಗಿದ್ದು, ಈ ಪತ್ರಿಕೆಯ ಗಾತ್ರದ್ದೇ ಆಗಿದೆ. ಮಾನವಕುಲಕ್ಕಾಗಿರುವ ದೇವರ ಉದ್ದೇಶವೇನು ಎಂಬುದನ್ನು ಇದು ಸ್ಪಷ್ಟವಾಗಿ ತೋರಿಸುತ್ತದೆ ಮತ್ತು ಆತನ ಸಮ್ಮತಿಯನ್ನು ಪಡೆಯಲು ನಾವೇನು ಮಾಡುವ ಅಗತ್ಯವಿದೆ ಎಂಬುದನ್ನು ತಿಳಿಸುತ್ತದೆ. ಇದು “ದೇವರು ಯಾರು?,” “ಯೇಸು ಕ್ರಿಸ್ತನು ಯಾರು?,” “ಭೂಮಿಗಾಗಿ ದೇವರ ಉದ್ದೇಶವು ಏನು?,” ಮತ್ತು “ದೇವರ ರಾಜ್ಯವು ಏನು?” ಎಂಬ ಚಿತ್ತಾಕರ್ಷಕ ಪಾಠಗಳನ್ನು ಒಳಗೂಡಿದೆ.
ನಿಮಗೆ ಈ ಬ್ರೋಷರಿನ ಕುರಿತು ಇನ್ನೂ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಲು ಆಸಕ್ತಿಯಿರುವುದಾದರೆ, ಇದರ ಜೊತೆಯಲ್ಲಿರುವ ಕೂಪನ್ ಅನ್ನು ಭರ್ತಿಮಾಡಿ, ಈ ಪತ್ರಿಕೆಯ 5ನೆಯ ಪುಟದಲ್ಲಿ ಪಟ್ಟಿಮಾಡಲ್ಪಟ್ಟಿರುವ ಸೂಕ್ತವಾದ ವಿಳಾಸಕ್ಕೆ ಕಳುಹಿಸಿರಿ. (g04 1/8)
□ ಯಾವುದೇ ನಿರ್ಬಂಧಕ್ಕೆ ಒಳಪಡದೆ, ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಎಂಬ ಬ್ರೋಷರಿನ ಕುರಿತಾದ ಹೆಚ್ಚಿನ ಮಾಹಿತಿಗಾಗಿ ನಾನು ವಿನಂತಿಸಬಹುದೊ?
□ ಮನೆಯಲ್ಲಿಯೇ ಬೈಬಲನ್ನು ಉಚಿತವಾಗಿ ಅಧ್ಯಯನ ಮಾಡುವುದಕ್ಕಾಗಿ ದಯವಿಟ್ಟು ನನ್ನನ್ನು ಸಂಪರ್ಕಿಸಿ.