ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ವಾಚಕರಿಂದ

ನಮ್ಮ ವಾಚಕರಿಂದ

ನಮ್ಮ ವಾಚಕರಿಂದ

ಡೇಟಿಂಗ್‌ ಮಾಡಲು ತೀರ ಚಿಕ್ಕವರು? “ಯುವ ಜನರು ಪ್ರಶ್ನಿಸುವುದು . . . ಡೇಟಿಂಗ್‌ ಮಾಡಲು ನಾನು ತೀರ ಚಿಕ್ಕವನೆಂದು ನನ್ನ ಹೆತ್ತವರು ನೆನಸುತ್ತಿರುವಲ್ಲಿ ಆಗೇನು?” (ಜನವರಿ 22, 2001, ಇಂಗ್ಲಿಷ್‌) ಎಂಬ ಲೇಖನವು ನನಗೆ ತುಂಬ ಇಷ್ಟವಾಯಿತು. ನಾನು 17 ವರ್ಷದವನು, ಮತ್ತು ಮದುವೆಯಾಗಲು ಅಥವಾ ಒಂದು ಕುಟುಂಬವನ್ನು ಪೋಷಿಸಲು ಇನ್ನೂ ಸಿದ್ಧನಾಗಿಲ್ಲವೆಂಬ ತೀರ್ಮಾನಕ್ಕೆ ಬಂದಿದ್ದೇನೆ. ನಾನು ಡೇಟಿಂಗ್‌ ಮಾಡುವ ಮುಂಚೆ ಮತ್ತೊಮ್ಮೆ ಆಲೋಚಿಸಿ ನೋಡುವಂತೆ ಮತ್ತು ಮುಂದೊಂದು ದಿನ ನಾನು ಡೇಟಿಂಗ್‌ ಮಾಡಿ, ಮದುವೆಯಾಗುವ ನಿರ್ಣಯಮಾಡುವಾಗ ವಿವೇಚನಾಶಕ್ತಿಯನ್ನು ಉಪಯೋಗಿಸುವಂತೆ ಈ ಲೇಖನವು ನನಗೆ ಸಹಾಯಮಾಡಿತು.

ಎ.ಎಮ್‌.ಏಚ್‌., ಅಮೆರಿಕ (g01 10/8)

ಫೋನಿನಲ್ಲಿ ಮಾತಾಡುತ್ತಿದ್ದ ಆ ಇಬ್ಬರು ಯುವ ವ್ಯಕ್ತಿಗಳ ಸ್ಥಿತಿಯನ್ನು ನಾನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಶಕ್ತಳಾದೆ; ಯಾಕೆಂದರೆ ನಾನು ಕೂಡ ಅದೇ ಸ್ಥಿತಿಯಲ್ಲಿ ಬೀಳುತ್ತಿರುವುದನ್ನು ಕಲ್ಪಿಸಬಹುದಿತ್ತು. ನಾನು ಇನ್ನೂ ಡೇಟಿಂಗ್‌ ಮಾಡಲು ಸಿದ್ಧಳಾಗಿರದ ಕಾರಣ ನಾನು ಒಬ್ಬ ವ್ಯಕ್ತಿಯೊಂದಿಗೆ ಸಹವಾಸಮಾಡುವುದನ್ನು ನಿಲ್ಲಿಸಬೇಕಾಯಿತು. ಇಂಥ ಲೇಖನಗಳು, ಇನ್ನೂ ಸ್ವಲ್ಪ ಸಮಯ ಕಾಯುವಂತೆ ನಾನು ಮಾಡಿರುವ ನಿರ್ಣಯಕ್ಕೆ ಅಂಟಿಕೊಂಡಿರುವಂತೆ ನನಗೆ ಉತ್ತೇಜನವನ್ನು ಕೊಡುತ್ತವೆ.

ಎಮ್‌.ಆರ್‌.ಸಿ., ಅಮೆರಿಕ (g01 10/8)

ನಾನು 14 ವರ್ಷದವಳು. ನಾನು ನಿಜವಾಗಿಯೂ ವಿವಾಹಕ್ಕಾಗಿ ಸಿದ್ಧಳಾಗಿರದ ಕಾರಣ ನನ್ನ ಈ ವಯಸ್ಸಿನಲ್ಲಿ ಡೇಟಿಂಗ್‌ ಮಾಡುವುದು ಎಷ್ಟು ಗಂಡಾಂತರಕಾರಿಯಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳುವಂತೆ ಈ ಲೇಖನವು ನನಗೆ ನಿಜವಾಗಿಯೂ ಸಹಾಯಮಾಡಿತು. ನಾನು ಈಗ, ಪ್ರಣಯಾಚರಣೆಯ ಹಿಂದೆ ಓಡುವ ಬದಲು ಯೆಹೋವನೊಂದಿಗಿನ ನನ್ನ ಸಂಬಂಧವನ್ನು ಹೆಚ್ಚು ಬೆಳೆಸಿಕೊಳ್ಳುವ ಅಗತ್ಯವನ್ನು ಗ್ರಹಿಸುವಂತೆ ಈ ಲೇಖನವು ನನಗೆ ಸಹಾಯಮಾಡಿತು.

ಎ. ಪಿ., ಕೆನಡ (g01 10/8)

ಈ ಲೇಖನವು ನನಗೋಸ್ಕರವೇ ಬರೆಯಲ್ಪಟ್ಟಿರುವಂತೆ ತೋರುತ್ತದೆ. ನನ್ನ ಹೆತ್ತವರು ನನ್ನ ವಿಷಯದಲ್ಲಿ ವಿಪರೀತ ಕಟ್ಟುನಿಟ್ಟಿನವರಾಗಿದ್ದಾರೆ ಮತ್ತು ನನ್ನ ಭಾವನೆಗಳನ್ನು ಅರ್ಥಮಾಡಿಕೊಳ್ಳಲಾರರೆಂದು ನಾನು ನೆನಸಿದೆ. ಆದರೆ ಅವರು ನನಗೆ ಸಹಾಯಮಾಡಲು ಮತ್ತು ನನ್ನನ್ನು ಸಂರಕ್ಷಿಸಲು ತಮ್ಮಿಂದಾದುದೆಲ್ಲವನ್ನೂ ಮಾಡುತ್ತಿದ್ದಾರೆಂಬುದು ನನಗೀಗ ಅರ್ಥವಾಗುತ್ತಿದೆ. ಮುಂದಿನ “ಯುವ ಜನರು ಪ್ರಶ್ನಿಸುವುದು” ಲೇಖನಗಳನ್ನು ಓದಲು ನಾನು ತುದಿಗಾಲಲ್ಲಿ ನಿಂತಿದ್ದೇನೆ!

ಏಚ್‌. ಇ., ರೊಮೇನಿಯ (g01 10/8)

ಲೇಖನವು ಜೀವವನ್ನುಳಿಸುತ್ತದೆ ನಾವು ಲೆನಿ ಎಂಬ ಪುರುಷನನ್ನು ಭೇಟಿಯಾದಾಗ, “ಡೆಂಗಿ ಜ್ವರ​—⁠ಸೊಳ್ಳೆ ಕಡಿತದಿಂದ ಬರುವ ಒಂದು ಜ್ವರ” ಎಂಬ ಲೇಖನವು (ಆಗಸ್ಟ್‌ 8, 1998) ತನ್ನ ಒಬ್ಬ ಹಿರಿಯಣ್ಣನ ಮಗಳ ಜೀವವನ್ನು ಉಳಿಸಿತೆಂದು ಅವನು ಹೇಳಿದನು. ಅವಳಿಗೆ ಅನೇಕ ದಿನಗಳಿಂದ ಜ್ವರ ಇತ್ತು, ಮತ್ತು ಮೈಮೇಲೆ ಕೆಂಪು ಗುಳ್ಳೆಗಳು ಬಂದಿದ್ದವು; ಆದರೆ ಅದು ಸಿಡುಬುರೋಗ ಎಂದೆಣಿಸಿ ಅವಳ ಹೆತ್ತವರು ಸುಮ್ಮನಿದ್ದರು. ಆ ಲೇಖನವು ನೆನಪಿಗೆ ಬಂದು, ಲೆನಿ ಆ ಪತ್ರಿಕೆಯನ್ನು ಹುಡುಕಿ, ಡೆಂಗಿ ಜ್ವರದ ರೋಗಲಕ್ಷಣಗಳನ್ನು ವರ್ಣಿಸುವ ವಿಭಾಗವನ್ನು ಪುನಃ ಓದಿದನು. ಅನಂತರ, ತನ್ನ ಅಣ್ಣ ಮತ್ತು ಅತ್ತಿಗೆ ತಮ್ಮ ಮಗಳನ್ನು ಆಸ್ಪತ್ರೆಗೆ ಕರೆದೊಯ್ಯುವಂತೆ ಮನವೊಪ್ಪಿಸಿದನು. ಅವಳಿಗೆ ರಕ್ತಸ್ರಾವಕ ಡೆಂಗಿ ಜ್ವರವಿದೆಯೆಂದು ಡಾಕ್ಟರರು ಅಲ್ಲಿ ದೃಢೀಕರಿಸಿದರು. ತನ್ನ ಸೋದರಮಗಳ ಜೀವವನ್ನು ಉಳಿಸಲು ತನಗೆ ಸಹಾಯಮಾಡಿದ್ದಕ್ಕಾಗಿ ಲೆನಿ ಎಚ್ಚರ! ಪತ್ರಿಕೆಯನ್ನು ಶ್ಲಾಘಿಸಿದನು ಮತ್ತು ತದನಂತರ ಅವನೊಂದು ಬೈಬಲ್‌ ಅಧ್ಯಯನಕ್ಕೂ ಒಪ್ಪಿಕೊಂಡನು.

ಜೆ.ಎಮ್‌.ಎಲ್‌., ಫಿಲಿಪ್ಪೀನ್ಸ್‌ (g01 11/8)

ಸೂರ್ಯ ನಾನು ಹೆಚ್ಚಾಗಿ ಯೆಹೋವನಿಗೆ, ಸೂರ್ಯ, ಚಂದ್ರ ಮತ್ತು ನಮ್ಮ ಸುಂದರ ಭೂಮಿಗಾಗಿ ಉಪಕಾರ ಹೇಳುತ್ತೇನೆ. ಆದರೆ ಅನೇಕ ವೇಳೆ ನಾನು ಇವುಗಳಿಗೆ ಹೆಚ್ಚು ಗಮನ ಕೊಡುವುದಿಲ್ಲ. “ನಮ್ಮ ಸೂರ್ಯನ ವಿಶಿಷ್ಟ ಗುಣ” ಎಂಬ ಲೇಖನವನ್ನು (ಮಾರ್ಚ್‌ 22, 2001, ಇಂಗ್ಲಿಷ್‌) ಓದಿದ ನಂತರ, ನಾನು ದೇವರಿಗೆ ಆತನ ಉದಾರವಾದ ಮತ್ತು ಬೆಲೆಕಟ್ಟಲಾಗದಂಥ ಕೊಡುಗೆಗಳಿಗಾಗಿ ಉಪಕಾರಹೇಳುತ್ತಾ ಪ್ರಾರ್ಥನೆಮಾಡುವಂತೆ ಪ್ರೇರಿಸಲ್ಪಟ್ಟೆ.

ಬಿ. ಪಿ., ಅಮೆರಿಕ (g01 12/8)

ಕೂದಲು ನಾನೊಬ್ಬ ಹೇರ್‌ಡ್ರೆಸ್ಸರ್‌ ಆಗಿದ್ದೇನೆ. ಮತ್ತು “ಕೂದಲನ್ನು ಹೆಚ್ಚು ನಿಕಟವಾಗಿ ಪರೀಕ್ಷಿಸುವುದು” (ಏಪ್ರಿಲ್‌-ಜೂನ್‌, 2001) ಎಂಬ ಲೇಖನವನ್ನು ಓದಿದಾಗ ನನಗೆ ತುಂಬ ಸಂತೋಷವಾಯಿತು. ನಾನು ಅದರ ಒಂದು ಪ್ರತಿಯನ್ನು ನನ್ನ ಯಜಮಾನಿಗೆ ಕೊಟ್ಟೆ. ಅವಳು ಅದನ್ನು ಓದಿ ಪ್ರಭಾವಿತಳಾದಳು ಮತ್ತು ಕೆಲಸದ ಸ್ಥಳದಲ್ಲಿದ್ದ ಇತರ ಕಾರ್ಮಿಕ ಹುಡುಗಿಯರಿಗೆ ಅದನ್ನು ಕೊಟ್ಟಳು. ಆ ವ್ಯಾವಹಾರಿಕ ಮಾಹಿತಿಗಾಗಿ ನಿಮಗೆ ಉಪಕಾರ.

ಡಿ. ಎಲ್‌., ರೊಮೇನಿಯ (g01 12/8)

“ಆ್ಯಲಪೀಶಿಯ​—⁠ಕೂದಲು ನಷ್ಟದೊಂದಿಗೆ ಮೌನವಾಗಿ ಜೀವಿಸುವುದು” ಎಂಬ ಒಂದು ಹಿಂದಿನ ಲೇಖನಕ್ಕೆ (ಏಪ್ರಿಲ್‌ 22, 1991, ಇಂಗ್ಲಿಷ್‌) ಸೂಚಿತವಾಗಿರುವ ಪಾದಟಿಪ್ಪಣಿಗಾಗಿ ನಿಮಗೆ ಉಪಕಾರ. ಕಳೆದ 17 ವರ್ಷಗಳಿಂದ ನಾನು ಈ ಸಮಸ್ಯೆಯೊಂದಿಗೆ ಜೀವಿಸುತ್ತಿದ್ದೇನೆ. ಬಾಹ್ಯರೂಪವೇ ಸರ್ವಸ್ವ ಆಗಿರುವ ಮತ್ತು ಯಾರಾದರೂ ಭಿನ್ನರಾಗಿರುವಲ್ಲಿ ಅವರನ್ನು ತಿರಸ್ಕರಿಸುವ ಈ ಲೋಕದಲ್ಲಿ, ನನಗೆ ಯೆಹೋವನ ಮತ್ತು ಆತನ ಸಂಸ್ಥೆಯ ಬೆಂಬಲ ಇದೆಯೆಂಬುದನ್ನು ತಿಳಿದುಕೊಳ್ಳುವುದು ತುಂಬ ಉತ್ತೇಜನವನ್ನು ಕೊಟ್ಟಿತು.

ಎಮ್‌. ಜಿ., ಇಟಲಿ (g01 12/8)