ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ನೀವು ಎಲ್ಲರಿಗೂ ಪ್ರೀತಿಯನ್ನು ತೋರಿಸುತ್ತಿದ್ದೀರಿ’

‘ನೀವು ಎಲ್ಲರಿಗೂ ಪ್ರೀತಿಯನ್ನು ತೋರಿಸುತ್ತಿದ್ದೀರಿ’

‘ನೀವು ಎಲ್ಲರಿಗೂ ಪ್ರೀತಿಯನ್ನು ತೋರಿಸುತ್ತಿದ್ದೀರಿ’

ಯುಗೋಸ್ಲಾವಿಯದ ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸಿಗೆ ಬಂದ ಒಂದು ಪತ್ರದಲ್ಲಿ ಈ ಶ್ಲಾಘನೆಯ ನುಡಿಗಳಿದ್ದವು. ಈ ದೇಶದಲ್ಲಿ ಶತಮಾನಗಳಿಂದ ಬೇರೆ ಬೇರೆ ಕುಲದ ಜನರು ಹೊಡೆದಾಡುತ್ತಿದ್ದಾರೆ. ಆ ಪತ್ರವು ಹೇಳಿದ್ದು:

“ಮಾನ್ಯರೇ,

“ನಾನು ನನ್ನ ತಾಯ್ನೆಲವಾದ ಸಾರಾಯೆವೋದಲ್ಲಿ ನಿಮ್ಮ ಬಗ್ಗೆ ಅಂದರೆ, ಯೆಹೋವನ ಸಾಕ್ಷಿಗಳ ಬಗ್ಗೆ ತುಂಬ ವಿಷಯಗಳನ್ನು ಕೇಳಿಸಿಕೊಂಡಿದ್ದೆ. ಆದರೆ ಕಳೆದ ವರ್ಷದ ಬೇಸಿಗೆಯಲ್ಲಿ, ಜರ್ಮನಿಯಲ್ಲಿ ನಡೆದ ಅಧಿವೇಶನವೊಂದಕ್ಕೆ ಹಾಜರಾಗುವ ತನಕ ನನಗೆ ನಿಮ್ಮ ನಂಬಿಕೆಯ ಬಗ್ಗೆ ಸ್ವಲ್ಪವೂ ಆಸಕ್ತಿಯಿರಲಿಲ್ಲ. ಕ್ರೋಏಷಿಯ, ಯುಗೋಸ್ಲಾವಿಯ ಮತ್ತು ಬಾಸ್ನಿಯದ ಜನರು ಶಾಂತಿಯಿಂದ ಒಟ್ಟಾಗಿ ಕುಳಿತುಕೊಂಡಿದ್ದನ್ನು ನೋಡಿ ನನಗೆ ಕಣ್ತುಂಬಿ ಬಂತು. ಅಷ್ಟುಮಾತ್ರವಲ್ಲ, ಅವರೆಲ್ಲರೂ ಒಬ್ಬರನ್ನೊಬ್ಬರು ಸಹೋದರ ಹಾಗೂ ಸಹೋದರಿ ಎಂದು ಕರೆಯುತ್ತಿದ್ದರು. ನಿಜವಾಗಿಯೂ ಇಂತಹ ಒಂದು ದೃಶ್ಯವನ್ನು ನಾನು ನನ್ನ ಜೀವಮಾನದಲ್ಲಿ ನೋಡಿರಲಿಲ್ಲ. ಯಾವ ರಾಜಕೀಯ ಶಕ್ತಿಗಳು ನಿಮ್ಮನ್ನು ಕದಲಿಸಲಾರವು ಎಂಬುದು ನಿಮ್ಮ ಮಧ್ಯೆಯಿರುವ ಪ್ರೀತಿಯಿಂದ ಗೊತ್ತಾಗುತ್ತದೆ. ನೀವು ಎಲ್ಲರಿಗೂ ಪ್ರೀತಿಯನ್ನು ತೋರಿಸುತ್ತಿರುವುದಕ್ಕಾಗಿ ದೇವರು ನಿಮ್ಮನ್ನು ಆಶೀರ್ವದಿಸಲಿ!”

ಬಹಳ ಕಾಲದಿಂದಲೂ ಮನದಲ್ಲಿ ದಳ್ಳುರಿಯನ್ನು ಇಟ್ಟುಕೊಂಡು ಒಬ್ಬರನ್ನೊಬ್ಬರು ದ್ವೇಷಿಸುವ ಜನರಿರುವ ಸ್ಥಳಗಳಿಂದ ಬರುವ ಈ ರೀತಿಯ ವರದಿಗಳು, ಯುದ್ಧವಿಲ್ಲದ ಒಂದು ಲೋಕವು ಎಂದಾದರೂ ಇರುವುದೊ? ಎಂಬ ಪ್ರಶ್ನೆಯನ್ನು ಎಬ್ಬಿಸುತ್ತದೆ. 32 ಪುಟಗಳುಳ್ಳ ಈ (ಇಂಗ್ಲಿಷ್‌) ಬ್ರೋಷರ್‌, ಇಂತಹ ಒಂದು ಲೋಕವು ಖಂಡಿತವಾಗಿಯೂ ಬರುವುದು ಎಂಬುದರ ಕುರಿತಾಗಿ ಶಕ್ತಿಶಾಲಿಯಾದ ಪುರಾವೆಯನ್ನು ನೀಡುತ್ತದೆ. ಆದರೆ ಅದು ಹೇಗೆ ಬರುವುದು? ಮತ್ತು ಯಾವಾಗ?

ಈ 32 ಪುಟಗಳುಳ್ಳ ಬ್ರೋಷರಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ನೀವು ಇಷ್ಟಪಡುವಲ್ಲಿ, ಈ ಪತ್ರಿಕೆಯಲ್ಲಿ ಕೊಟ್ಟಿರುವ ಕೂಪನನ್ನು ಭರ್ತಿಮಾಡಿ, ಈ ಪತ್ರಿಕೆಯ 5ನೇ ಪುಟದಲ್ಲಿ ಪಟ್ಟಿಮಾಡಲ್ಪಟ್ಟಿರುವ ಸೂಕ್ತ ವಿಳಾಸಕ್ಕೆ ಅಂಚೆಯ ಮೂಲಕ ಕಳುಹಿಸಿರಿ. (g00 11/8)

ಯುದ್ಧವಿಲ್ಲದ ಒಂದು ಲೋಕವು ಎಂದಾದರೂ ಇರುವುದೊ? (ಇಂಗ್ಲಿಷ್‌) ಎಂಬ ಬ್ರೋಷರಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನನಗೆ ಕಳುಹಿಸಿರಿ.

□ಮನೆಯಲ್ಲಿಯೇ ಬೈಬಲನ್ನು ಉಚಿತವಾಗಿ ಅಭ್ಯಾಸಮಾಡುವುದಕ್ಕಾಗಿ ದಯವಿಟ್ಟು ನನ್ನನ್ನು ಸಂಪರ್ಕಿಸಿರಿ.