ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ವಾಚಕರಿಂದ

ನಮ್ಮ ವಾಚಕರಿಂದ

ನಮ್ಮ ವಾಚಕರಿಂದ

ಟಾಗ್ವ ಬೀಜ 1954ರಿಂದ ನಾನು ನಿಮ್ಮ ಎಚ್ಚರ! ಪತ್ರಿಕೆಯ ಎಲ್ಲಾ ಸಂಚಿಕೆಗಳನ್ನು ಓದಿದ್ದೇನೆ. ಯೆಹೋವನು ಸೃಷ್ಟಿಮಾಡಿರುವ ವಸ್ತುಗಳ ಹಲವಾರು ಪ್ರಯೋಜನಗಳ ಕುರಿತು ಲೇಖನಗಳು ತಿಳಿಸುವಾಗ ನಾನು ನಿಜವಾಗಿಯೂ ಬೆರಗಾಗುತ್ತೇನೆ. ಅಂಥ ಲೇಖನಗಳಲ್ಲಿ “ಟಾಗ್ವಾ ಬೀಜ—ಆನೆಗಳನ್ನು ಉಳಿಸಬಲ್ಲವೋ?” (ಡಿಸೆಂಬರ್‌ 8, 1999) ಎಂಬುದು ಒಂದಾಗಿತ್ತು. ನಮ್ಮ ದೇವರ ಅದ್ಭುತಕರವಾದ ವಿವೇಕವನ್ನು ಹೆಚ್ಚೆಚ್ಚು ನಾವು ಗಣ್ಯಮಾಡುವಂತೆ ಸಹಾಯಮಾಡಿದ್ದಕ್ಕಾಗಿ ನಿಮಗೆ ಧನ್ಯವಾದಗಳು.

ಡಿ. ಏಚ್‌., ಅಮೆರಿಕ

ಸ್ನೇಹಪರರಾಗಿರುವುದು “ಯುವ ಜನರು ಪ್ರಶ್ನಿಸುವುದು . . . ನಾನು ಜನರೊಂದಿಗೆ ಹೇಗೆ ಸುಲಭವಾಗಿ ಬೆರೆಯಬಲ್ಲೆ?” (ನವೆಂಬರ್‌ 22, 1999) ಎಂಬ ಲೇಖನವು ಮನಮುಟ್ಟುವಂತಿತ್ತು. ನಾನು 16 ವರ್ಷದವಳಾಗಿದ್ದೇನೆ. ಬೇರೆಯವರೊಂದಿಗೆ ಸುಲಭವಾಗಿ ಮಾತಾಡುವುದು ನನಗೆ ತುಂಬ ಕಷ್ಟ, ಅದರಲ್ಲೂ ಕ್ರೈಸ್ತ ಕೂಟಗಳಲ್ಲಿ ಇನ್ನೂ ಕಷ್ಟವೇ. ಈ ರೀತಿಯ ಸಮಸ್ಯೆಯನ್ನು ಹೊಂದಿರುವ ನನ್ನಂಥ ಯುವಜನರನ್ನು ಜ್ಞಾಪಕಮಾಡಿಕೊಂಡದ್ದಕ್ಕಾಗಿ ನಿಮಗೆ ಧನ್ಯವಾದಗಳು. ಈ ಲೇಖನದಲ್ಲಿ ನೀವು ಕೊಟ್ಟಿರುವ ಉತ್ತಮ ಸಲಹೆಗಳನ್ನು ಅನುಸರಿಸಲು ನಾನು ಪ್ರಯತ್ನಿಸುವೆ.

ಐ. ಏ., ಫ್ರಾನ್ಸ್‌

ಹಾಡುವ ಹಕ್ಕಿಗಳು “ಹರ್ಷದಾಯಕ ಯುಗಳ ಗಾಯಕರು” (ಜನವರಿ 8, 2000) ಎಂಬ ಲೇಖನಕ್ಕಾಗಿ ತುಂಬ ಧನ್ಯವಾದಗಳು. ಮರದ ರೆಂಬೆಗಳ ಮೇಲೆ ಕುಳಿತುಕೊಂಡು ಮಧುರವಾದ ಸಂಗೀತವನ್ನು ಹಾಡುವ ಈ ಪಕ್ಷಿಗಳನ್ನು ನಾನು ಕಲ್ಪಿಸಿಕೊಳ್ಳಬಲ್ಲೆ! ನಮ್ಮನ್ನು ಸಂತೋಷಪಡಿಸುವುದಕ್ಕಾಗಿ ಪ್ರಾಣಿ ಪಕ್ಷಿಗಳನ್ನು ಸೃಷ್ಟಿಮಾಡಿರುವುದಕ್ಕಾಗಿ ದಿನವೂ ನಾನು ಯೆಹೋವನಿಗೆ ಉಪಕಾರಸ್ತುತಿಯನ್ನು ಹೇಳುತ್ತೇನೆ.

ವೈ. ಎಸ್‌., ಜಪಾನ್‌

ಮೂಢನಂಬಿಕೆಗಳು ಒಬ್ಬ ಭಾಷಾಪಂಡಿತನಾದ ನಾನು ಡಿಸೆಂಬರ್‌ 8, 1999ರ ಎಚ್ಚರ! ಪತ್ರಿಕೆಯಲ್ಲಿ ಬಂದಿದ್ದ “ಮೂಢನಂಬಿಕೆಗಳು—ತೀರ ಅಪಾಯಕರವೇಕೆ?” ಎಂಬ ಲೇಖನಮಾಲೆಯಲ್ಲಿದ್ದ ಒಂದು ತಪ್ಪನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ. ಅದರಲ್ಲಿ ಜರ್ಮನ್‌ ಶಬ್ದವಾಗಿದ್ದ ಗೇಸುಂಟ್‌ಹೈಟ್‌ ಅನ್ನು, ಒಬ್ಬ ವ್ಯಕ್ತಿಯು ಸೀನುವಾಗ “ದೇವರು ನಿನಗೆ ಒಳ್ಳೆಯದನ್ನು ಮಾಡಲಿ” ಎಂಬುದಾಗಿ ಸೂಚಿಸಿದ್ದೀರಿ. ಆ ಪದದ ಇಂಗ್ಲಿಷ್‌ ಅನುವಾದವು “ಆರೋಗ್ಯ” ಎಂದಾಗಿದೆ.

ಸಿ. ಸಿ., ಅಮೆರಿಕ

“ಗೆಸುಂಟ್‌ಹೈಟ್‌” ಎಂಬ ಪದದ ಸರಿಯಾದ ಇಂಗ್ಲಿಷ್‌ ಅನುವಾದವು ಇದೇ ಎಂದು ಹೇಳುವುದು ನಮ್ಮ ಉದ್ದೇಶವಾಗಿರಲಿಲ್ಲ. ಅದನ್ನು ಇನ್ನೆರಡು ವಿದೇಶಿ ಭಾಷೆಯ ಅಭಿವ್ಯಕ್ತಿಗಳೊಂದಿಗೆ ನೀಡಲಾಗಿತ್ತು. ಬಳಕೆಯಲ್ಲಿ ಅದು ಇಂಗ್ಲಿಷ್‌ ಅಭಿವ್ಯಕ್ತಿಯಾದ “ದೇವರು ನಿನಗೆ ಒಳ್ಳೆಯದನ್ನು ಮಾಡಲಿ” ಎಂಬುದಕ್ಕೆ “ಸಮಾನ” ಪದವಾಗಿದೆ ಎಂದು ಹೇಳಿದ್ದೇವಷ್ಟೇ.—ಸಂಪಾದಕರು.

ನಾಚಿಕೆ ಸ್ವಭಾವ “ಯುವ ಜನರು ಪ್ರಶ್ನಿಸುವುದು . . . ಇತರರೊಂದಿಗೆ ನಾನು ಸುಲಭವಾಗಿ ಏಕೆ ಬೆರೆಯಲಾರೆ?” (ನವೆಂಬರ್‌ 8, 1999) ಎಂಬ ಲೇಖನಕ್ಕಾಗಿ ನಿಮಗೆ ತುಂಬಾ ಧನ್ಯವಾದಗಳು. ಈ ಲೇಖನವು ತಕ್ಕ ಸಮಯಕ್ಕೆ ಸಿಕ್ಕಿದ ಭೋಜನದಂತಿತ್ತು. ನಾನು ನಾಚಿಕೆ ಸ್ವಭಾವದಿಂದ ಜೀವನಪರ್ಯಂತ ಕಷ್ಟಪಟ್ಟಿದ್ದೇನೆ. ನಾನು 17 ವರ್ಷ ವಯಸ್ಸಿನವನಾಗಿದ್ದೇನೆ. ಹೊಸಬರನ್ನು ಭೇಟಿಮಾಡಲು ನನಗೆ ತುಂಬ ಕಷ್ಟವಾಗುತ್ತದೆ ಹಾಗೂ ಕ್ರೈಸ್ತ ಕೂಟಗಳಲ್ಲಿ ಹೊಸಬರೊಂದಿಗೆ ಬೆರೆಯಲು ಕೂಡ ಕಷ್ಟವಾಗುತ್ತದೆ. ಈ ಕಾರಣದಿಂದಾಗಿ, ಬೇರೆಯವರೊಂದಿಗೆ ಬೆರೆಯುವ ಹಾಗೂ ಸಹೋದರ ಸಹೋದರಿಯರೊಂದಿಗೆ ಸಹವಾಸ ಮಾಡಬಹುದಾದ ಅನೇಕ ಸಂದರ್ಭಗಳನ್ನು ಕಳೆದುಕೊಂಡಿದ್ದೇನೆ. ನಾಚಿಕೆ ಸ್ವಭಾವವು ಸಾಮಾನ್ಯವಾದುದು ಮತ್ತು ಅದನ್ನು ಸುಲಭವಾಗಿ ಜಯಿಸಬಹುದು ಎಂಬುದನ್ನು ಗ್ರಹಿಸಲು ನಿಮ್ಮ ಲೇಖನವು ನನಗೆ ಸಹಾಯಮಾಡಿದೆ.

ಬಿ. ಏಚ್‌., ಅಮೆರಿಕ