ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ವಾಚಕರಿಂದ

ನಮ್ಮ ವಾಚಕರಿಂದ

ನಮ್ಮ ವಾಚಕರಿಂದ

ಬಟ್ಟೆ “ನಾವು ಧರಿಸುವಂತಹ ಬಟ್ಟೆ—ಅದರ ಬಗ್ಗೆ ಚಿಂತಿಸಬೇಕೋ?” (ಮಾರ್ಚ್‌ 8, 1999) ಎಂಬ ಶೀರ್ಷಿಕೆಯುಳ್ಳ ಲೇಖನದ ಕುರಿತು ನಿಮಗೆ ಬರೆಯುತ್ತಿದ್ದೇನೆ. “ಹೊತ್ತುಹೊತ್ತಿಗೆ ಆಹಾರ”ವನ್ನು ಒದಗಿಸಲು ನೀವು ಮಾಡುವ ಪ್ರಯತ್ನಗಳನ್ನು ನಾನು ಗಣ್ಯಮಾಡುತ್ತೇನೆ. (ಮತ್ತಾಯ 24:45) ಆದರೆ ಲೇಖನದಲ್ಲಿರುವ ಕೆಲವು ಹೇಳಿಕೆಗಳು ವೈಯಕ್ತಿಕ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದಂತೆ ತೋರಿದವು. “ನಿಮ್ಮ ಅಚ್ಚುಮೆಚ್ಚಿನ ಚಲನಚಿತ್ರ ನಾಯಕನಟಿಯ ಅಥವಾ ಕ್ರೀಡಾ ಪಟುವಿನ ಚಿತ್ರವುಳ್ಳ ಟಿ-ಶರ್ಟುಗಳು ನಿಮ್ಮನ್ನು ನಾಯಕ ಆರಾಧನೆಗೆ, ಅಂದರೆ ವಿಗ್ರಹಾರಾಧನೆಗೆ ತಳ್ಳಬಹುದು” ಎಂಬ ವಿಚಾರವನ್ನು ಆ ಲೇಖನದಲ್ಲಿ ಪ್ರಕಾಶಿಸಿರುವುದು ಅಧಿಕಾರಯುಕ್ತವಲ್ಲದ ಹೇಳಿಕೆಯಾಗಿದೆ. ಒಬ್ಬನು ಬೈಬಲಿನ ಯಾವ ಆಜ್ಞೆಯನ್ನೂ ಮುರಿಯದೆ ಒಬ್ಬ ಕ್ರೀಡಾ ಪಟುವನ್ನು ಮೆಚ್ಚಲು ಅಥವಾ ಪ್ರಶಂಸಿಸಲು ಸಾಧ್ಯವಿದೆ.

ಎಮ್‌. ಡಿ. ಫ್ರಾನ್ಸ್‌

ಈ ಮುಚ್ಚುಮರೆಯಿಲ್ಲದ ಹೇಳಿಕೆಗಳನ್ನು ನಾವು ಗಣ್ಯಮಾಡುತ್ತೇವೆ, ಆದರೆ ನಿಯಮಗಳನ್ನು ಮಾಡುವ ಅಥವಾ ನಿರ್ದಿಷ್ಟ ಬಟ್ಟೆಗಳನ್ನು ಧರಿಸುವ ವಿಷಯದಲ್ಲಿ ಕಟ್ಟಳೆಗಳನ್ನು ಸ್ಥಾಪಿಸುವುದು ನಮ್ಮ ಉದ್ದೇಶವಲ್ಲ. ನಮ್ಮ ಓದುಗರು ಬಟ್ಟೆಯ ವಿಷಯದಲ್ಲಿ ತಮ್ಮ ಆಯ್ಕೆಗಳನ್ನು ಮಾಡುವಾಗ, “ಸ್ವಸ್ಥ ಮನಸ್ಸನ್ನು” ಉಪಯೋಗಿಸಬೇಕೆಂದು ನಮ್ಮ ಲೇಖನವು ಉತ್ತೇಜಿಸಿತು. (1 ತಿಮೊಥೆಯ 2:9, 10) ಟಿ-ಶರ್ಟುಗಳ ಕುರಿತು ನೀಡಲಾಗಿರುವ ಹೇಳಿಕೆಯನ್ನು ಅಧಿಕಾರಯುತವಾಗಿ ಹೇಳಲಾಗಿರುವುದಿಲ್ಲ, ಬದಲಿಗೆ ನಿರ್ದಿಷ್ಟ ಸ್ಟೈಲುಗಳ ಬಟ್ಟೆಗಳನ್ನು ಧರಿಸುವುದು ಸ್ವತಃ ಧರಿಸುವವನನ್ನೇ ಹಾನಿಗೊಳಿಸಬಹುದು ಎಂಬುದನ್ನು ಒಪ್ಪಿಕೊಂಡಿತು. ಒಬ್ಬ ವ್ಯಕ್ತಿಯಲ್ಲಿರುವ ನಿಪುಣತೆ ಅಥವಾ ಬುದ್ಧಿಶಕ್ತಿಯನ್ನು ಶ್ಲಾಘಿಸುವುದರಲ್ಲಿ ಯಾವುದೇ ತಪ್ಪು ಇರದಿದ್ದರೂ, ಬೈಬಲ್‌ ಮಟ್ಟಗಳಿಗನುಸಾರ ಜೀವಿಸಲು ಬಯಸದಿದ್ದ ವ್ಯಕ್ತಿಯ ಜೀವನ ಶೈಲಿ ಮತ್ತು ನೈತಿಕತೆಗಳನ್ನು ತಾನು ಮೆಚ್ಚುತ್ತಿದ್ದೇನೆಂಬ ಅಭಿಪ್ರಾಯವನ್ನು ಇತರರಲ್ಲಿ ಮೂಡಿಸಬಹುದಾದ ಬಟ್ಟೆಗಳನ್ನು ಧರಿಸುವುದು ಒಬ್ಬ ಕ್ರೈಸ್ತನಿಗೆ ವಿವೇಕಯುತವಾಗಿರುತ್ತದೋ?—ಸಂಪಾ.

ಹೆತ್ತವರಿಗೆ ಪತ್ರ “ತಮ್ಮ ಹೆತ್ತವರಿಗೆ ಒಂದು ವಿಶೇಷ ಪತ್ರ” (ಏಪ್ರಿಲ್‌ 8, 1999) ಎಂಬ ಲೇಖನದಿಂದ ನಾನು ಬಹಳ ಉತ್ತೇಜಿತನಾದೆ. ಅದೇ ರೀತಿಯ ಪತ್ರವನ್ನು ನಾನು ನನ್ನ ಹೆತ್ತವರಿಗೆ ಬರೆಯಬೇಕಾಗಿತ್ತು. ಅವರು ಕ್ರೈಸ್ತ ಕೂಟಗಳಿಗೆ ಹಾಜರಾಗುವುದರಲ್ಲಿ, ಶುಶ್ರೂಷೆಯಲ್ಲಿ ಕ್ರಮವಾಗಿರುವುದರಲ್ಲಿ ಮತ್ತು ಅತಿಥಿಸತ್ಕಾರವನ್ನು ತೋರಿಸುವುದರಲ್ಲಿ ಉತ್ತಮ ಮಾದರಿಗಳಾಗಿದ್ದರು. ನನ್ನ ತಂದೆ ಶುಶ್ರೂಷಕ ಸೇವಕರಾಗಿದ್ದರು; ಹಾಗಾಗಿ ಸಭೆಯ ಕರ್ತವ್ಯಗಳಲ್ಲಿ ಅವರು ಬಹಳ ಕಾರ್ಯಮಗ್ನರಾಗಿದ್ದರು. ಹಾಗಿದ್ದರೂ, ಅವರು ಅನೇಕ ವೇಳೆ ನಮಗಾಗಿ ಮನೋರಂಜನೆಯನ್ನು ಮುಂದಾಗಿ ಯೋಜಿಸುತ್ತಿದ್ದರು ಮತ್ತು ಈ ಕಾರಣ ನಾವು ನಮ್ಮ ಶಾಲಾ ಸಹಪಾಠಿಗಳ ಮನೋರಂಜನೆಯ ಕುರಿತು ಎಂದೂ ಅಸೂಯೆಪಡಲಿಲ್ಲ. ಕ್ರೈಸ್ತ ಅಧಿವೇಶನವೊಂದರಿಂದ ಹಿಂದಿರುಗಿ ಮನೆಗೆ ಬರುವಾಗ ಅವರು ದಾರಿಯಲ್ಲಿ ವಾಹನ ಅಪಘಾತಕ್ಕೀಡಾಗಿ ಮೃತಪಟ್ಟಾಗ, ನಮ್ಮ ಜೀವಿತಗಳು ಪೂರ್ತಿಯಾಗಿ ಬದಲಾಗಿಬಿಟ್ಟವು. ಆದರೆ ರಾಜ್ಯವನ್ನು ಪ್ರಥಮ ಸ್ಥಾನದಲ್ಲಿಡಬೇಕೆಂಬ ಅವರ ಜೀವನ ಶೈಲಿಯನ್ನು ಮತ್ತು ನನ್ನ ತಾಯಿಯ ಬಲವಾದ ನಂಬಿಕೆಯನ್ನು ಜ್ಞಾಪಿಸಿಕೊಳ್ಳುವಾಗ, ನಾನು ನಿರಂತರವಾಗಿ ಯೆಹೋವನನ್ನು ಸೇವಿಸುತ್ತಾ ಇರುವಂತೆ ಉತ್ತೇಜಿಸಲ್ಪಡುತ್ತೇನೆ.

ಎಸ್‌. ಕೆ., ಜಪಾನ್‌

ಬಿಕ್ಕಟ್ಟಿನಲ್ಲಿರುವ ಮಕ್ಕಳು “ಬಿಕ್ಕಟ್ಟಿನಲ್ಲಿರುವ ಮಕ್ಕಳು—ಅವರನ್ನು ಯಾರು ಕಾಪಾಡುವರು?” ಎಂಬ ಮೇ 8, 1999ರ ಸಂಚಿಕೆಯಲ್ಲಿ ಬಂದಿರುವ ಲೇಖನಗಳ ಸರಣಿಗಳಿಗಾಗಿ ನಾನು ಗಣ್ಯತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ. ಮಕ್ಕಳ ದುರುಪಯೋಗ ಎಂಬ ಮನಮುಟ್ಟುವ ವಿಷಯವು ಸಾರ್ವಜನಿಕ ಅಭಿಪ್ರಾಯವನ್ನು ಸತತವಾಗಿ ಕೆರಳಿಸುವ ಪ್ರಚೋದಕವಾಗಿರಬೇಕು ಎಂದು ನಾನು ನೆನಸುತ್ತೇನೆ. ನಮ್ಮ ಮಕ್ಕಳ ಪ್ರಪಂಚವನ್ನು ಸಂರಕ್ಷಿಸುವುದು ನಮ್ಮ ಕರ್ತವ್ಯವಾಗಿದೆ. ನಿಮ್ಮ ಉತ್ತಮ ಕೆಲಸವನ್ನು ನೀವು ಮುಂದುವರಿಸುತ್ತಾ ಇರುವಂತಾಗಲಿ.

ಪಿ. ಪಿ., ಮಕ್ಕಳಿಗಾಗಿರುವ ಕೌನ್ಸಿಲರರ ಆಫೀಸು, ರೋಮ್‌ ನಗರ, ಇಟಲಿ

ಇಪ್ಪತ್ತೊಂದನೆಯ ಶತಮಾನವು ಸಮೀಪವಾಗಿರುವ ಈ ಸಮಯದಲ್ಲೂ, ಅನೇಕ ಮಕ್ಕಳು ಇನ್ನೂ ಗುಲಾಮರಾಗಿ ಕೆಲಸಮಾಡುತ್ತಿದ್ದಾರೆಂಬುದನ್ನು ಮತ್ತು ಇತರರನ್ನು ಕೊಲ್ಲಲು ಉಪಯೋಗಿಸಲ್ಪಡುತ್ತಿದ್ದಾರೆ ಎಂಬುದನ್ನು ಆಲೋಚಿಸುವುದು ಆಘಾತಕಾರಿ ಸಂಗತಿಯಾಗಿದೆ. ಅವರಲ್ಲಿ ಅನೇಕರಿಗೆ ಒಂದು ಉತ್ತಮ ಜೀವಿತದ ಪ್ರತೀಕ್ಷೆಯೇ ಇಲ್ಲ ಎಂಬ ನಿಜತ್ವವನ್ನು ಸ್ವೀಕರಿಸುವುದು ಮತ್ತಷ್ಟು ಕಷ್ಟಕರವಾಗಿದೆ. ಪುನಃ ಒಮ್ಮೆ, ಎಚ್ಚರ! ಪತ್ರಿಕೆಯು ಲೋಕದ ಮಕ್ಕಳ ಅವಸ್ಥೆಯನ್ನು ಸುಸ್ಪಷ್ಟವಾಗಿ ಚಿತ್ರಿಸಿದೆ.

ಎಸ್‌.ಆರ್‌.ಬಿ., ಬ್ರೆಸಿಲ್‌

ವಿವಾಹದ 36 ವರ್ಷಗಳ ಬಳಿಕ ಈಗ ನಾನು ವಿಚ್ಛೇದಿತಳಾಗಿದ್ದೇನೆ. ನನ್ನ ಗಂಡನು ವರುಷಗಳಿಂದ ನನ್ನ ಸ್ವಂತ ಪ್ರಿಯ ಹೆಣ್ಣುಮಕ್ಕಳನ್ನು ಲೈಂಗಿಕವಾಗಿ ಪೀಡಿಸಿದ್ದನು ಎಂಬುದು ನನಗೆ ತಿಳಿದುಬಂತು. (ಅವನು ಕ್ರೈಸ್ತನಾಗಿರಲಿಲ್ಲ.) ನಾನು ಇದನ್ನು ತಿಳಿದುಕೊಂಡಾಗ ನನ್ನ ಮಾನಸಿಕ ಸಮತೂಕವನ್ನು ಸಂಪೂರ್ಣವಾಗಿ ಕಳೆದುಕೊಂಡೆ. ಲೈಂಗಿಕ ದುರುಪಯೋಗದ ಗಂಭೀರತೆಯನ್ನು ಅಥವಾ ಮುಗ್ಧ ಮಕ್ಕಳು ಅನುಭವಿಸುವ ಹೇಳಲಾಗದ ವೇದನೆಯನ್ನು ಯಾರೂ ಅರ್ಥಮಾಡಿಕೊಂಡಿರುವಂತೆ ತೋರುವುದಿಲ್ಲ. ಆದುದರಿಂದ ಈ ಪೀಡೆಯ ಬಗ್ಗೆ ಬರೆದದ್ದಕ್ಕಾಗಿ ನಾನು ಯೆಹೋವನಿಗೆ ಉಪಕಾರ ಹೇಳುತ್ತೇನೆ.

ಎನ್‌.ಎಮ್‌., ಅಮೆರಿಕ.