ವೈಯಕ್ತಿಕ ನಿರ್ಣಯಗಳನ್ನು ನೀವು ಹೇಗೆ ಮಾಡುತ್ತೀರಿ?
“ಯೆಹೋವನ ಚಿತ್ತವೇನೆಂಬುದನ್ನು ಗ್ರಹಿಸುತ್ತಾ ಇರಿ.”—ಎಫೆ. 5:17.
1. (ಎ) ಬೈಬಲಿನಲ್ಲಿರುವ ಕೆಲವು ಆಜ್ಞೆಗಳು ಯಾವುವು? (ಬಿ) ಅವುಗಳನ್ನು ಪಾಲಿಸುವುದರಿಂದ ನಮಗೇನು ಪ್ರಯೋಜನ?
ಬೈಬಲಿನಲ್ಲಿ ಯೆಹೋವನು ನಮಗೆ ಸ್ಪಷ್ಟ ಆಜ್ಞೆಗಳನ್ನು ಕೊಟ್ಟಿದ್ದಾನೆ. ಉದಾಹರಣೆಗೆ ವಿಗ್ರಹಗಳನ್ನು ಪೂಜಿಸಬಾರದು, ಕದಿಯಬಾರದು, ಕುಡಿದು ಮತ್ತರಾಗಬಾರದು, ಲೈಂಗಿಕ ಅನೈತಿಕತೆ ನಡೆಸಬಾರದು ಮುಂತಾದವು. (1 ಕೊರಿಂ. 6:9, 10) ಯೆಹೋವನ ಮಗನಾದ ಯೇಸು ಸಹ ತನ್ನ ಹಿಂಬಾಲಕರಿಗೆ ಈ ಸ್ಪಷ್ಟ ಆಜ್ಞೆ ಕೊಟ್ಟನು: “ಎಲ್ಲ ಜನಾಂಗಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ ಮತ್ತು ಪವಿತ್ರಾತ್ಮದ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿ, ನಾನು ನಿಮಗೆ ಆಜ್ಞಾಪಿಸಿದ ಎಲ್ಲ ವಿಷಯಗಳನ್ನು ಪಾಲಿಸುವಂತೆ ಅವರಿಗೆ ಬೋಧಿಸಿರಿ. ನೋಡಿರಿ, ನಾನು ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ವರೆಗೂ ಎಲ್ಲ ದಿವಸ ನಿಮ್ಮ ಸಂಗಡ ಇರುತ್ತೇನೆ.” (ಮತ್ತಾ. 28:19, 20) ಯೆಹೋವನು ಮತ್ತು ಯೇಸು ಹೇಳುವುದೆಲ್ಲವೂ ನಮ್ಮ ಒಳಿತಿಗಾಗಿಯೇ. ನಾವು ನಮ್ಮನ್ನು, ನಮ್ಮ ಕುಟುಂಬಗಳನ್ನು, ನಮ್ಮ ಆರೋಗ್ಯವನ್ನು ಹೇಗೆ ನೋಡಿಕೊಳ್ಳಬೇಕೆಂದು, ಸಂತೋಷದಿಂದಿರಲು ಏನು ಮಾಡಬೇಕೆಂದು ಯೆಹೋವನ ಆಜ್ಞೆಗಳು ತೋರಿಸಿಕೊಡುತ್ತವೆ. ಆ ಆಜ್ಞೆಗಳನ್ನು ಮತ್ತು ಸಾರುವ ಆಜ್ಞೆಯನ್ನು ನಾವು ಪಾಲಿಸುವಾಗ ನಮಗೆ ಪ್ರಯೋಜನವಾಗುತ್ತದೆ. ಇದಕ್ಕಿಂತಲೂ ಮುಖ್ಯವಾಗಿ ನಾವು ಯೆಹೋವನನ್ನು ಸಂತೋಷಪಡಿಸುತ್ತೇವೆ ಮತ್ತು ನಮಗೆ ಆತನ ಆಶೀರ್ವಾದ ಕೂಡ ಸಿಗುತ್ತದೆ.
2, 3. (ಎ) ಪ್ರತಿಯೊಂದು ವಿಷಯಕ್ಕೂ ಬೈಬಲಿನಲ್ಲಿ ನಿಯಮಗಳಿಲ್ಲ ಏಕೆ? (ಬಿ) ಈ ಲೇಖನದಲ್ಲಿ ಯಾವ ಪ್ರಶ್ನೆಗಳನ್ನು ಚರ್ಚಿಸಲಾಗುವುದು? (ಲೇಖನದ ಆರಂಭದ ಚಿತ್ರ ನೋಡಿ.)
2 ಆದರೆ ನಮ್ಮ ಜೀವನದಲ್ಲಿ ಎದುರಾಗುವ ಪ್ರತಿಯೊಂದು ಸನ್ನಿವೇಶದ ಬಗ್ಗೆ ಬೈಬಲಿನಲ್ಲಿ ನಿಯಮಗಳಿಲ್ಲ. ಉದಾಹರಣೆಗೆ, ನಾವು ಇಂಥಿಂಥ ಉಡುಪನ್ನೇ ಧರಿಸಬೇಕೆಂದು ಬೈಬಲಿನಲ್ಲಿ ಯಾವ ನಿಯಮವೂ ಇಲ್ಲ. ಇದು ಯೆಹೋವನ ವಿವೇಕವನ್ನು
ತೋರಿಸಿಕೊಡುತ್ತದೆ. ಹೇಗೆ? ಇಂಥಿಂಥ ಬಟ್ಟೆಗಳನ್ನು ಧರಿಸಬೇಕೆಂಬ ಪಟ್ಟಿಯನ್ನು ಬೈಬಲಿನಲ್ಲಿ ಕೊಟ್ಟಿದ್ದರೆ ನಮ್ಮ ಕಾಲಕ್ಕೆ ಅದು ಅನ್ವಯವಾಗುತ್ತಿರಲಿಲ್ಲ. ಯಾಕೆಂದರೆ ಲೋಕದ ಬೇರೆಬೇರೆ ಸ್ಥಳಗಳಲ್ಲಿ ಜನರು ಬೇರೆಬೇರೆ ಉಡುಪುಗಳನ್ನು ಧರಿಸುತ್ತಾರೆ, ಬಟ್ಟೆಯ ಶೈಲಿ ಆಗಾಗ ಬದಲಾಗುತ್ತಾ ಇರುತ್ತದೆ. ನಾವು ಯಾವ ಉದ್ಯೋಗ ಮಾಡಬೇಕು, ಯಾವ ಮನೋರಂಜನೆಯಲ್ಲಿ ಆನಂದಿಸಬೇಕು, ಆರೋಗ್ಯದಿಂದಿರಲು ಏನೆಲ್ಲ ಮಾಡಬೇಕು ಎಂಬ ವಿಷಯಗಳಲ್ಲೂ ನಿಯಮಗಳ ಉದ್ದ ಪಟ್ಟಿ ಬೈಬಲಿನಲ್ಲಿಲ್ಲ. ಈ ವಿಷಯಗಳ ಬಗ್ಗೆ ಒಬ್ಬೊಬ್ಬನು ಮತ್ತು ಕುಟುಂಬದ ಯಜಮಾನನು ಸ್ವಂತ ನಿರ್ಣಯ ಮಾಡುವಂತೆ ಯೆಹೋವನು ಅವಕಾಶ ಕೊಟ್ಟಿದ್ದಾನೆ.3 ಹಾಗಾದರೆ ನಮ್ಮ ಜೀವನದ ಮೇಲೆ ಪರಿಣಾಮ ಬೀರುವಂಥ ಒಂದು ಪ್ರಾಮುಖ್ಯ ನಿರ್ಣಯ ಮಾಡಲಿಕ್ಕಿರುವಾಗ ಮತ್ತು ಬೈಬಲಿನಲ್ಲಿ ಅದರ ಬಗ್ಗೆ ಯಾವುದೇ ನಿಯಮ ಇಲ್ಲದಿರುವಾಗ ನಮಗೆ ಇಂಥ ಯೋಚನೆ ಬರಬಹುದು: ‘ನಾನು ಮಾಡುವ ನಿರ್ಣಯಗಳಿಗೆ ಯೆಹೋವನು ಗಮನಕೊಡುತ್ತಾನಾ? ನಾನು ನಿರ್ಣಯ ತಕ್ಕೊಳ್ಳುವ ವಿಷಯದ ಬಗ್ಗೆ ಹೇಗೂ ಬೈಬಲಿನಲ್ಲಿ ನಿಯಮವಿಲ್ಲ ಅಂದಮೇಲೆ ನಾನು ನಿಯಮ ಮುರಿಯುತ್ತಿದ್ದೇನೆ ಎಂಬ ಪ್ರಶ್ನೆಯೇ ಬರೋದಿಲ್ಲ. ಹಾಗಾಗಿ ನಾನು ಏನೇ ನಿರ್ಣಯ ತಕ್ಕೊಂಡರೂ ಯೆಹೋವನಿಗೆ ಖುಷಿ ಆಗುತ್ತದಾ? ನಾನು ಮಾಡುವ ಆಯ್ಕೆಗಳನ್ನು ಯೆಹೋವನು ಮೆಚ್ಚುತ್ತಾನೆಂದು ನಾನು ಹೇಗೆ ನಿಶ್ಚಯದಿಂದ ಇರಬಹುದು?’
ನಮ್ಮ ನಿರ್ಣಯಗಳು ನಮ್ಮ ಮೇಲೆ ಮತ್ತು ಇತರರ ಮೇಲೆ ಪರಿಣಾಮ ಬೀರುತ್ತವೆ
4, 5. ನಮ್ಮ ನಿರ್ಣಯಗಳು ನಮ್ಮ ಮೇಲೂ ಇತರರ ಮೇಲೂ ಹೇಗೆ ಪರಿಣಾಮ ಬೀರುತ್ತವೆ?
4 ‘ನನಗೇನು ಇಷ್ಟವೊ ಅದನ್ನೇ ಮಾಡುತ್ತೇನೆ’ ಅಂತ ಕೆಲವು ಜನರು ನೆನಸುತ್ತಾರೆ. ಆದರೆ ನಾವು ಹಾಗಲ್ಲ. ನಾವು ಯೆಹೋವನನ್ನು ಸಂತೋಷಪಡಿಸಲು ಇಷ್ಟಪಡುತ್ತೇವೆ. ಹಾಗಾಗಿ ನಾವು ಒಂದು ನಿರ್ಣಯ ತಕ್ಕೊಳ್ಳುವ ಮುಂಚೆ ಆ ವಿಷಯದ ಬಗ್ಗೆ ಬೈಬಲ್ ಏನನ್ನುತ್ತದೆಂದು ಯೋಚಿಸಿ ಅದಕ್ಕೆ ವಿಧೇಯರಾಗಬೇಕು. ಉದಾಹರಣೆಗೆ, ರಕ್ತದ ಬಗ್ಗೆ ದೇವರ ನೋಟವೇನೆಂದು ಬೈಬಲ್ ಹೇಳುತ್ತದೆ. ಆದ್ದರಿಂದ ನಾವದಕ್ಕೆ ವಿಧೇಯರಾಗಬೇಕು. (ಆದಿ. 9:4; ಅ. ಕಾ. 15:28, 29) ಯೆಹೋವನಿಗೆ ಮೆಚ್ಚಿಕೆಯಾಗುವಂಥ ನಿರ್ಣಯಗಳನ್ನು ತಕ್ಕೊಳ್ಳಲು ಸಹಾಯಮಾಡುವಂತೆ ನಾವಾತನಿಗೆ ಪ್ರಾರ್ಥಿಸಬೇಕು.
5 ನಾವು ತಕ್ಕೊಳ್ಳುವ ನಿರ್ಣಯಗಳು ನಮ್ಮ ಮೇಲೆ ಪರಿಣಾಮ ಬೀರುತ್ತವೆ. ಒಳ್ಳೇ ನಿರ್ಣಯ ಮಾಡಿದರೆ ಯೆಹೋವನಿಗೆ ಹೆಚ್ಚು ಹತ್ತಿರವಾಗುತ್ತೇವೆ. ಕೆಟ್ಟ ನಿರ್ಣಯ ಮಾಡಿದರೆ ಅದು ಆತನೊಂದಿಗೆ ನಮಗಿರುವ ಸ್ನೇಹವನ್ನು ಕೆಡಿಸುತ್ತದೆ. ಅಲ್ಲದೆ ನಮ್ಮ ಕೆಟ್ಟ ನಿರ್ಣಯಗಳು ಬೇರೆಯವರ ಮೇಲೂ ಪರಿಣಾಮ ಬೀರುತ್ತವೆ. ಹೇಗೆ? ಅದು ನಮ್ಮ ಸಹೋದರರ ಮನನೋಯಿಸಬಹುದು ಇಲ್ಲವೆ ಅವರ ನಂಬಿಕೆಯನ್ನು ದುರ್ಬಲಗೊಳಿಸಬಹುದು. ಅಥವಾ ಸಭೆಯಲ್ಲಿ ಸಹೋದರರ ಮಧ್ಯೆ ಸಮಸ್ಯೆಗಳನ್ನು ಹುಟ್ಟಿಸಬಹುದು. ಆದ್ದರಿಂದ ನಾವು ಒಳ್ಳೇ ನಿರ್ಣಯಗಳನ್ನು ಮಾಡಬೇಕು.—ರೋಮನ್ನರಿಗೆ 14:19; ಗಲಾತ್ಯ 6:7 ಓದಿ.
6. ನಾವು ನಿರ್ಣಯಗಳನ್ನು ಮಾಡುವಾಗ ಏನನ್ನು ಮನಸ್ಸಿನಲ್ಲಿಡಬೇಕು?
6 ನಾವೇನು ಮಾಡಬೇಕೆಂದು ಬೈಬಲ್ ನಿರ್ದಿಷ್ಟವಾಗಿ ಹೇಳದೇ ಇರುವಾಗ ಒಳ್ಳೇ ನಿರ್ಣಯಗಳನ್ನು ಮಾಡುವುದು ಹೇಗೆ? ನಮ್ಮ ಸ್ವಂತ ಸನ್ನಿವೇಶದ ಬಗ್ಗೆ ಜಾಗ್ರತೆಯಿಂದ ಯೋಚನೆಮಾಡಿ, ಯೆಹೋವನಿಗೆ ಮೆಚ್ಚಿಕೆಯಾಗುವಂಥ ನಿರ್ಣಯವನ್ನು ತಕ್ಕೊಳ್ಳಬೇಕು. ಬರೀ ನಮಗೇನು ಇಷ್ಟವೊ ಅದನ್ನು ಮಾಡಬಾರದು. ಆಗ ನಮ್ಮ ನಿರ್ಣಯಕ್ಕೆ ಒಳ್ಳೇ ಫಲಿತಾಂಶಗಳು ಸಿಗುವಂತೆ ಯೆಹೋವನು ಖಂಡಿತ ಸಹಾಯಮಾಡುವನು.—ಜ್ಞಾನೋಕ್ತಿ 16:3 ಓದಿ.
ನಾನೇನು ಮಾಡುವಂತೆ ಯೆಹೋವನು ಇಷ್ಟಪಡುತ್ತಾನೆ?
7. ಒಂದು ವಿಷಯದ ಬಗ್ಗೆ ಬೈಬಲಿನ ನಿಯಮ ಇಲ್ಲವೆಂದ ಮೇಲೆ ಯೆಹೋವನಿಗೆ ಏನು ಇಷ್ಟವೆಂದು ನಾವು ಹೇಗೆ ತಿಳಿದುಕೊಳ್ಳಬಹುದು?
7 ನಾವು ನಿರ್ಣಯ ಮಾಡಬೇಕಾಗಿರುವ ವಿಷಯದ ಬಗ್ಗೆ ಬೈಬಲಿನಲ್ಲಿ ನಿಯಮವೇ ಇಲ್ಲವೆಂದ ಮೇಲೆ ಯೆಹೋವನಿಗೆ ಯಾವುದು ಇಷ್ಟವಾಗುತ್ತದೆಂದು ತಿಳಿಯುವುದಾದರೂ ಹೇಗೆ? “ಯೆಹೋವನ ಚಿತ್ತವೇನೆಂಬುದನ್ನು ಗ್ರಹಿಸುತ್ತಾ ಇರಿ” ಎನ್ನುತ್ತದೆ ಎಫೆಸ 5:17. ಹಾಗಾದರೆ, ನಾವೇನು ಮಾಡುವಂತೆ ಯೆಹೋವನು ಇಷ್ಟಪಡುತ್ತಾನೆಂದು ಗ್ರಹಿಸಬೇಕು ಅಂದರೆ ಅರ್ಥಮಾಡಿಕೊಳ್ಳಬೇಕು. ಇದನ್ನು ಮಾಡುವುದು ಹೇಗೆ? ನಾವು ಪ್ರಾರ್ಥನೆ ಮಾಡಬೇಕು ಮತ್ತು ಪವಿತ್ರಾತ್ಮದ ಮಾರ್ಗದರ್ಶನವನ್ನು ಸ್ವೀಕರಿಸಬೇಕು.
8. ಯೇಸು ತಾನೇನು ಮಾಡುವಂತೆ ಯೆಹೋವನು ಇಷ್ಟಪಡುತ್ತಾನೆಂದು ಗ್ರಹಿಸಿದ್ದು ಹೇಗೆ? ಉದಾಹರಣೆ ಕೊಡಿ.
ಮತ್ತಾ. 14:17-20; 15:34-37) ಆದರೆ ಒಮ್ಮೆ ಅರಣ್ಯದಲ್ಲಿ ಆತನೇ ತುಂಬ ಹಸಿದಿದ್ದನು. ಆಗ ಪಿಶಾಚನು ಬಂದು ಕಲ್ಲನ್ನು ರೊಟ್ಟಿ ಮಾಡಿ ತಿನ್ನುವಂತೆ ಹೇಳಿದಾಗ ಯೇಸು ಅದಕ್ಕೆ ಒಪ್ಪಲಿಲ್ಲ. (ಮತ್ತಾಯ 4:2-4 ಓದಿ.) ಆತನಿಗೆ ತನ್ನ ತಂದೆಯ ಬಗ್ಗೆ ಚೆನ್ನಾಗಿ ಗೊತ್ತಿತ್ತು. ಹಾಗಾಗಿ ತನ್ನ ಸ್ವಂತ ಅಗತ್ಯಗಳನ್ನು ಪೂರೈಸಲು ಪವಿತ್ರಾತ್ಮವನ್ನು ಬಳಸಿದರೆ ಯೆಹೋವನಿಗೆ ಖಂಡಿತ ಇಷ್ಟವಾಗುವುದಿಲ್ಲವೆಂದು ಆತನು ಗ್ರಹಿಸಿದನು. ತನ್ನ ತಂದೆ ತನ್ನನ್ನು ನೋಡಿಕೊಳ್ಳುವನು, ಅಗತ್ಯವಿದ್ದಾಗ ಬೇಕಾದ ಆಹಾರ ಕೊಡುವನೆಂಬ ನಿಶ್ಚಯ ಯೇಸುವಿಗಿತ್ತು.
8 ಯೇಸು ತಾನೇನು ಮಾಡುವಂತೆ ಯೆಹೋವನು ಇಷ್ಟಪಡುತ್ತಾನೆಂದು ಯಾವಾಗಲೂ ಗ್ರಹಿಸಿದನು. ಒಂದು ಉದಾಹರಣೆ ಗಮನಿಸಿ. ಎರಡು ಸಂದರ್ಭಗಳಲ್ಲಿ ಜನರ ಗುಂಪು ಹಸಿದಿದ್ದಾಗ ಯೇಸು ಪ್ರಾರ್ಥಿಸಿ, ಅದ್ಭುತ ಮಾಡಿ ಅವರಿಗೆಲ್ಲ ಊಟ ಕೊಟ್ಟನು. (9, 10. ನಾವು ವಿವೇಕದ ನಿರ್ಣಯಗಳನ್ನು ಮಾಡಲು ಯಾವುದು ಸಹಾಯಕರ? ಉದಾಹರಣೆ ಕೊಡಿ.
9 ಯೇಸುವಿನ ಹಾಗೆಯೇ ನಾವು ಒಳ್ಳೇ ನಿರ್ಣಯಗಳನ್ನು ಮಾಡಬೇಕಾದರೆ ನಮ್ಮನ್ನು ಮಾರ್ಗದರ್ಶಿಸಲು ಯೆಹೋವನನ್ನು ಆಶ್ರಯಿಸಬೇಕು. “ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು. ನಿನ್ನ ಎಲ್ಲಾ ನಡವಳಿಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು. ನೀನೇ ಬುದ್ಧಿವಂತನು ಎಂದೆಣಿಸದೆ ಯೆಹೋವನಿಗೆ ಭಯಪಟ್ಟು ಕೆಟ್ಟದ್ದನ್ನು ತೊರೆದುಬಿಡು” ಎನ್ನುತ್ತದೆ ಬೈಬಲ್. (ಜ್ಞಾನೋ. 3:5-7) ಒಂದು ನಿರ್ದಿಷ್ಟ ಸನ್ನಿವೇಶದಲ್ಲಿ ನಾವೇನು ಮಾಡುವಂತೆ ಯೆಹೋವನು ಇಷ್ಟಪಡುತ್ತಾನೆಂದು ನಾವು ಗ್ರಹಿಸಬೇಕಾದರೆ ಬೈಬಲನ್ನು ಅಧ್ಯಯನ ಮಾಡಿ ಆತನ ಯೋಚನಾರೀತಿಯ ಬಗ್ಗೆ ಕಲಿಯಬೇಕು. ಇದನ್ನು ನಾವು ಎಷ್ಟು ಹೆಚ್ಚು ಕಲಿಯುತ್ತೇವೊ, ಆತನಿಗೆ ಮೆಚ್ಚಿಕೆಯಾಗುವ ನಿರ್ಣಯಗಳನ್ನು ಮಾಡುವುದು ನಮಗೆ ಅಷ್ಟೇ ಹೆಚ್ಚು ಸುಲಭ. ಆಗ ನಾವು ದೇವರ ಮಾರ್ಗದರ್ಶನಕ್ಕೆ ಪ್ರತಿಕ್ರಿಯಿಸುವ ವ್ಯಕ್ತಿಗಳಾಗಿರುತ್ತೇವೆ.
10 ಒಬ್ಬ ವಿವಾಹಿತ ಸ್ತ್ರೀ ಶಾಪಿಂಗ್ ಮಾಡುತ್ತಿದ್ದಾಳೆ ಎಂದು ನೆನಸಿ. ಒಂದು ಅಂದವಾದ ಸೀರೆ ಅವಳ ಕಣ್ಣಿಗೆ ಬೀಳುತ್ತದೆ. ಆದರೆ ಅದಕ್ಕೆ ತುಂಬ ಬೆಲೆ. ಗಂಡ ಜೊತೆಗಿಲ್ಲ. ಆದರೂ ತಾನು ಅಷ್ಟು ಹಣ ಖರ್ಚು ಮಾಡಿದರೆ ಅವನೇನು ನೆನಸಬಹುದೆಂದು ಆಕೆಗೆ ಗೊತ್ತು. ಹೇಗೆ ಗೊತ್ತು? ಮದುವೆಯಾಗಿ ಸಾಕಷ್ಟು ಸಮಯದಿಂದ ಒಟ್ಟಿಗಿದ್ದಾರೆ. ಹಾಗಾಗಿ ಹಣವನ್ನು ಹೇಗೆ ಖರ್ಚುಮಾಡಿದರೆ ಅವನಿಗೆ ಇಷ್ಟ, ಇಷ್ಟವಿಲ್ಲ ಎಂದು ಆಕೆಗೆ ಗೊತ್ತಿದೆ. ಹಾಗೆಯೇ ಬೇರೆಬೇರೆ ಸನ್ನಿವೇಶಗಳಲ್ಲಿ ನಾವೇನು ಮಾಡುವಂತೆ ಯೆಹೋವನು ಇಷ್ಟಪಡುತ್ತಾನೆಂದು ನಾವು ಗ್ರಹಿಸಬೇಕಾದರೆ ಆತನ ಯೋಚನಾರೀತಿಯ ಬಗ್ಗೆ ಮತ್ತು ಆತನು ಹಿಂದೆ ನಡೆಸಿದ ಕಾರ್ಯಗಳ ಬಗ್ಗೆ ಕಲಿಯಬೇಕು.
ಯೆಹೋವನ ಯೋಚನಾರೀತಿಯ ಬಗ್ಗೆ ತಿಳಿಯುವುದು ಹೇಗೆ?
11. ಬೈಬಲನ್ನು ಓದುವಾಗ ಅಥವಾ ಅಧ್ಯಯನ ಮಾಡುತ್ತಿರುವಾಗ ನಾವು ಯಾವ ಪ್ರಶ್ನೆಗಳನ್ನು ಕೇಳಿಕೊಳ್ಳಬಹುದು? (“ ಬೈಬಲಿನ ಅಧ್ಯಯನ ಮಾಡುವಾಗ ಹೀಗೆ ಕೇಳಿಕೊಳ್ಳಿ” ಚೌಕ ನೋಡಿ.)
11 ಯೆಹೋವನ ಯೋಚನಾರೀತಿಯ ಬಗ್ಗೆ ತಿಳಿದುಕೊಳ್ಳಲು ನಾವು ಮುಖ್ಯವಾಗಿ ಏನು ಮಾಡಬೇಕು? ಬೈಬಲನ್ನು ತಪ್ಪದೇ ಓದಬೇಕು ಮತ್ತು ಅಧ್ಯಯನ ಮಾಡಬೇಕು. ಇದನ್ನು ಮಾಡುತ್ತಿರುವಾಗ, ‘ಈ ಭಾಗದಿಂದ ನಾನು ಯೆಹೋವನ ಬಗ್ಗೆ ಏನು ಕಲಿತೆ? ಆತನು ಏಕೆ ಹೀಗೆ ನಡೆದುಕೊಂಡನು?’ ಎಂದು ಕೇಳಿಕೊಳ್ಳಬೇಕು. ಯೆಹೋವನನ್ನು ಹೆಚ್ಚು ಚೆನ್ನಾಗಿ ತಿಳಿದುಕೊಳ್ಳುವಂತೆ ಆತನ ಸಹಾಯವನ್ನೂ ಬೇಡಿಕೊಳ್ಳಬೇಕು. ದಾವೀದನು ಇದನ್ನೇ ಮಾಡಿದನು. ಅವನು ಪ್ರಾರ್ಥಿಸಿದ್ದು: “ಯೆಹೋವನೇ, ನಿನ್ನ ಮಾರ್ಗವನ್ನು ನನಗೆ ತಿಳಿಸು; ನೀನು ಒಪ್ಪುವ ದಾರಿಯನ್ನು ತೋರಿಸು. ನಿನ್ನ ಸತ್ಯಾನುಸಾರವಾಗಿ ನನ್ನನ್ನು ನಡಿಸುತ್ತಾ ಉಪದೇಶಿಸು; ನೀನೇ ನನ್ನನ್ನು ರಕ್ಷಿಸುವ ದೇವರು; ಹಗಲೆಲ್ಲಾ ನಿನ್ನನ್ನೇ ನಿರೀಕ್ಷಿಸುವವನಾಗಿದ್ದೇನೆ.” (ಕೀರ್ತ. 25:4, 5) ಯೆಹೋವನ ಬಗ್ಗೆ ನಾವು ಏನಾದರೂ ಕಲಿತಾಗ, ಆ ಮಾಹಿತಿಯನ್ನು ನಮ್ಮ ಜೀವನದಲ್ಲಿ ಎಲ್ಲಿ ಅನ್ವಯಿಸಬೇಕೆಂದು ಅಂದರೆ ಕುಟುಂಬದಲ್ಲಾ, ಕೆಲಸದ ಸ್ಥಳದಲ್ಲಾ, ಶಾಲೆಯಲ್ಲಾ, ಸೇವೆಯಲ್ಲಾ ಎಂದು ಯೋಚಿಸಬೇಕು. ಆಗ ಆ ಮಾಹಿತಿಯನ್ನು ನಾವು ಹೇಗೆ ಅನ್ವಯಿಸುವಂತೆ ಯೆಹೋವನು ಇಷ್ಟಪಡುತ್ತಾನೆಂದು ತಿಳಿಯಲು ಹೆಚ್ಚು ಸುಲಭ.
12. ಬೇರೆಬೇರೆ ವಿಷಯಗಳ ಕುರಿತು ಯೆಹೋವನ ಯೋಚನಾರೀತಿಯ ಏನೆಂದು ತಿಳಿಯಲು ನಮ್ಮ ಪ್ರಕಾಶನಗಳು ಮತ್ತು ಕೂಟಗಳು ಹೇಗೆ ಸಹಾಯಮಾಡುತ್ತವೆ?
12 ಯೆಹೋವನ ಯೋಚನಾರೀತಿಯ ಬಗ್ಗೆ ತಿಳಿಯಲು, ಆತನ ಸಂಘಟನೆಯು ಬೈಬಲಿನಿಂದ ಕಲಿಸುವ ವಿಷಯಗಳಿಗೆ ಕೂಡ ನಾವು ನಿಕಟ ಗಮನಕೊಡಬೇಕು. ಉದಾಹರಣೆಗೆ ನಾವು ನಿರ್ಣಯ ಮಾಡಲಿರುವ
ವಿಷಯದ ಬಗ್ಗೆ ಯೆಹೋವನ ಯೋಚನಾರೀತಿ ಏನೆಂದು ತಿಳಿಯಲು ವಾಚ್ಟವರ್ ಪಬ್ಲಿಕೇಷನ್ಸ್ ಇಂಡೆಕ್ಸ್ ಮತ್ತು ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ ಸಹಾಯ ಮಾಡುತ್ತದೆ. ನಮ್ಮ ಕ್ರೈಸ್ತ ಕೂಟಗಳಿಂದಲೂ ನಮಗೆ ಸಹಾಯವಾಗುತ್ತದೆ. ಆದರೆ ಅದಕ್ಕಾಗಿ ನಾವಲ್ಲಿ ಜಾಗ್ರತೆಯಿಂದ ಕಿವಿಗೊಡಬೇಕು, ಉತ್ತರಗಳನ್ನು ಕೊಡಬೇಕು ಮತ್ತು ಕಲಿತದ್ದನ್ನು ಧ್ಯಾನಿಸಬೇಕು. ಫಲಿತಾಂಶ? ನಾವು ಯೆಹೋವನು ಮೆಚ್ಚುವಂಥ ನಿರ್ಣಯಗಳನ್ನು ಮಾಡುತ್ತೇವೆ. ಈ ನಿರ್ಣಯಗಳ ಮೇಲೆ ಆತನ ಆಶೀರ್ವಾದವೂ ಇರುತ್ತದೆ.ನಿರ್ಣಯ ತಕ್ಕೊಳ್ಳುವ ಮುಂಚೆ ಯೆಹೋವನ ಯೋಚನಾರೀತಿಯ ಬಗ್ಗೆ ಧ್ಯಾನಿಸಿ
13. ಯೆಹೋವನ ಯೋಚನಾರೀತಿಯನ್ನು ತಿಳಿದುಕೊಂಡರೆ ಹೇಗೆ ವಿವೇಕದ ನಿರ್ಣಯವನ್ನು ಮಾಡಬಹುದು ಎಂಬದಕ್ಕೆ ಉದಾಹರಣೆ ಕೊಡಿ.
13 ಯೆಹೋವನ ಯೋಚನಾರೀತಿಯನ್ನು ತಿಳಿದುಕೊಂಡರೆ ನಾವು ಹೇಗೆ ವಿವೇಕದ ನಿರ್ಣಯ ಮಾಡಬಹುದು ಎಂಬುದಕ್ಕೆ ಒಂದು ಉದಾಹರಣೆ ನೋಡೋಣ. ಪಯನೀಯರ್ ಸೇವೆ ಮಾಡಲು ನಿಮಗೆ ಮನಸ್ಸಿದೆಯೆಂದು ನೆನಸಿ. ಅದಕ್ಕಾಗಿ ನಿಮ್ಮ ಬದುಕಲ್ಲಿ ಕೆಲವು ಬದಲಾವಣೆಗಳನ್ನೂ ಮಾಡಿದ್ದೀರಿ. ಆದರೆ ಸ್ವಲ್ಪ ಹಣ, ಕೆಲವೇ ವಸ್ತುಗಳು ಇರುವಾಗ ನಿಜವಾಗಿ ಸಂತೋಷದಿಂದಿರಲು ಆಗುತ್ತದಾ ಇಲ್ಲವಾ ಎಂಬ ಭಯ ನಿಮ್ಮನ್ನು ಕಾಡುತ್ತಿದೆ. ಯೆಹೋವನ ಸೇವೆಮಾಡಲು ಪಯನೀಯರ್ ಆಗಲೇಬೇಕೆಂದು ಬೈಬಲ್ ಎಲ್ಲೂ ಹೇಳುವುದಿಲ್ಲ ನಿಜ. ಬೇಕಿದ್ದರೆ ಪ್ರಚಾರಕರಾಗಿ ಇದ್ದುಕೊಂಡೇ ಆತನ ಸೇವೆಯನ್ನು ನಂಬಿಗಸ್ತಿಕೆಯಿಂದ ಮಾಡಬಹುದು. ಅದರಲ್ಲಿ ತಪ್ಪಿಲ್ಲ. ಆದರೆ ನೆನಪಿಡಿ, ರಾಜ್ಯಕ್ಕಾಗಿ ತ್ಯಾಗಗಳನ್ನು ಮಾಡುವವರನ್ನು ಯೆಹೋವನು ಆಶೀರ್ವದಿಸುತ್ತಾನೆಂದು ಯೇಸು ಹೇಳಿದ್ದಾನೆ. (ಲೂಕ 18:29, 30 ಓದಿ.) ಯೆಹೋವನನ್ನು ಸ್ತುತಿಸಲು ನಮ್ಮಿಂದ ಆಗುವುದೆಲ್ಲವನ್ನು ಮಾಡಿದರೆ ಆತನಿಗೆ ಖುಷಿಯಾಗುತ್ತದೆ ಮತ್ತು ನಾವು ಸೇವೆಯನ್ನು ಸಂತೋಷದಿಂದ ಮಾಡುವುದನ್ನು ಆತನು ಬಯಸುತ್ತಾನೆ ಎಂದೂ ಬೈಬಲ್ ಹೇಳುತ್ತದೆ. (ಕೀರ್ತ. 119:108; 2 ಕೊರಿಂ. 9:7) ಈ ವಿಷಯಗಳ ಕುರಿತು ಧ್ಯಾನಿಸುವ ಮೂಲಕ, ಪ್ರಾರ್ಥಿಸುವ ಮೂಲಕ ನಮ್ಮ ಸನ್ನಿವೇಶಕ್ಕೆ ಸೂಕ್ತವಾದ ನಿರ್ಣಯವನ್ನು ಮಾಡಬಲ್ಲೆವು ಮತ್ತು ಯೆಹೋವನು ಅದನ್ನು ಆಶೀರ್ವದಿಸುವನು.
14. ನಿರ್ದಿಷ್ಟ ಸ್ಟೈಲಿನ ಬಟ್ಟೆ ಯೆಹೋವನಿಗೆ ಮೆಚ್ಚಿಕೆಯಾಗುತ್ತದಾ ಎಂದು ನೀವು ಹೇಗೆ ತಿಳಿದುಕೊಳ್ಳಬಹುದು?
14 ಇನ್ನೊಂದು ಉದಾಹರಣೆ ನೋಡೋಣ: ನಿಮಗೆ ಒಂದು ನಿರ್ದಿಷ್ಟ ಸ್ಟೈಲಿನ ಬಟ್ಟೆ ತುಂಬ ಇಷ್ಟ. ಆದರೆ ನೀವದನ್ನು ಧರಿಸಿದರೆ ಸಭೆಯಲ್ಲಿರುವ ಕೆಲವರು ಮುಖ ಸಿಂಡರಿಸಿಕೊಳ್ಳಬಹುದೆಂದು ನಿಮಗೆ ಗೊತ್ತು. ಬೈಬಲಿನಲ್ಲಿ ಆ ಸ್ಟೈಲ್ ಬಟ್ಟೆ ಬಗ್ಗೆ ಏನೂ ತಿಳಿಸಲಾಗಿಲ್ಲ. ಈ ವಿಷಯದಲ್ಲಿ ಯೆಹೋವನ ಯೋಚನಾರೀತಿ ಏನೆಂದು ಹೇಗೆ ತಿಳಿದುಕೊಳ್ಳುವಿರಿ? ಬೈಬಲ್ ಹೀಗನ್ನುತ್ತದೆ: ‘ಸ್ತ್ರೀಯರು ಸಭ್ಯತೆ ಮತ್ತು ಸ್ವಸ್ಥಬುದ್ಧಿಯುಳ್ಳವರಾಗಿದ್ದು ಮರ್ಯಾದೆಗೆ ತಕ್ಕ ಉಡುಪಿನಿಂದ ತಮ್ಮನ್ನು ಅಲಂಕರಿಸಿಕೊಳ್ಳಬೇಕು. ಅವರು ಕೇಶಾಲಂಕಾರ ಮಾಡಿಕೊಳ್ಳುವುದು, ಚಿನ್ನ ಅಥವಾ ಮುತ್ತುಗಳು ಅಥವಾ ತುಂಬ ಬೆಲೆಬಾಳುವ ವಸ್ತ್ರ ಮುಂತಾದವುಗಳಿಂದ ಅಲಂಕರಿಸಿಕೊಳ್ಳದೆ ದೇವಭಕ್ತೆಯರೆನಿಸಿಕೊಳ್ಳುವ ಸ್ತ್ರೀಯರಿಗೆ ಯುಕ್ತವಾಗಿರುವ ಪ್ರಕಾರ ಅಂದರೆ ಸತ್ಕ್ರಿಯೆಗಳಿಂದ ಅಲಂಕರಿಸಿಕೊಳ್ಳಬೇಕು.’ (1 ತಿಮೊ. 2:9, 10) ನಿಶ್ಚಯವಾಗಿ ಈ ಮಾತುಗಳು ಯೆಹೋವನ ಎಲ್ಲ ಸೇವಕರಿಗೆ, ಗಂಡಸರಿಗೂ ಅನ್ವಯ. ನಾವು ದೇವಭಕ್ತರಾಗಿ ಇರುವುದರಿಂದ ನಾವು ಆರಿಸುವ ಬಟ್ಟೆಯು ಬೇರೆಯವರ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬದಕ್ಕೆ ಗಮನಕೊಡುತ್ತೇವೆ. ಬರೀ ನಮಗಿಷ್ಟ ಎಂಬ ಕಾರಣಕ್ಕೆ ಅದನ್ನು ಧರಿಸುವುದಿಲ್ಲ. ಸಭ್ಯತೆ, ಪ್ರೀತಿ ನಮ್ಮಲ್ಲಿರುವುದರಿಂದ ನಮ್ಮ ಸಹೋದರರ ಮನನೋಯಿಸಲು ಅಥವಾ ಅವರ ಸಿಟ್ಟೆಬ್ಬಿಸಲು ಇಷ್ಟಪಡುವುದಿಲ್ಲ. (1 ಕೊರಿಂ. 10:23, 24; ಫಿಲಿ. 3:17) ಈ ರೀತಿ ಬೈಬಲ್ ಹೇಳುವ ವಿಷಯಕ್ಕೆ ಗಮನಕೊಡುವ ಮೂಲಕ ಯೆಹೋವನ ಯೋಚನಾರೀತಿಯನ್ನು ಗ್ರಹಿಸುವಾಗ ನಾವು ಆತನಿಗೆ ಮೆಚ್ಚಿಕೆಯಾಗುವಂಥ ನಿರ್ಣಯಗಳನ್ನು ಮಾಡಲು ಆಗುತ್ತದೆ.
15, 16. (ಎ) ಲೈಂಗಿಕ ಅನೈತಿಕ ವಿಷಯಗಳ ಬಗ್ಗೆ ನಾವು ಯೋಚಿಸುತ್ತಾ ಇದ್ದರೆ ಯೆಹೋವನಿಗೆ ಹೇಗನಿಸುತ್ತದೆ? (ಬಿ) ನಾವು ಆಯ್ಕೆಮಾಡುವ ಮನರಂಜನೆ ಯೆಹೋವನಿಗೆ ಮೆಚ್ಚಿಕೆಯಾಗುತ್ತದಾ ಎಂದು ಹೇಗೆ ತಿಳಿದುಕೊಳ್ಳಬಹುದು? (ಸಿ) ಅತಿ ಪ್ರಾಮುಖ್ಯ ನಿರ್ಣಯಗಳನ್ನು ತಕ್ಕೊಳ್ಳುವಾಗ ಏನು ಮಾಡಬೇಕು?
15 ನಮ್ಮ ಯೋಚನೆ ಮತ್ತು ಮನರಂಜನೆಯ ಆಯ್ಕೆಯ ಬಗ್ಗೆ ಗಮನಿಸಿ. ಜನರು ದುಷ್ಟತನ ನಡೆಸುವಾಗ, ಕೆಟ್ಟದ್ದನ್ನು ಯೋಚಿಸುವಾಗ ಯೆಹೋವನಿಗೆ ತುಂಬ ನೋವಾಗುತ್ತದೆ, ದುಃಖವಾಗುತ್ತದೆ ಎಂದು ಬೈಬಲ್ ತಿಳಿಸುತ್ತದೆ. (ಆದಿಕಾಂಡ 6:5, 6 ಓದಿ.) ಇದರಿಂದ ಲೈಂಗಿಕ ಅನೈತಿಕ ವಿಷಯಗಳ ಕುರಿತು ನಾವು ಹಗಲುಗನಸು ಕಾಣುವುದನ್ನು ಯೆಹೋವನು ದ್ವೇಷಿಸುತ್ತಾನೆ ಎಂಬುದು ಸ್ಪಷ್ಟ. ನಾವು ಅಂಥ ವಿಷಯಗಳ ಬಗ್ಗೆ ಯೋಚಿಸುತ್ತಾ ಇದ್ದರೆ ಒಂದು ದಿನ ಅದನ್ನು ಮಾಡಿಯೇ ಬಿಡಬಹುದು. ಆದ್ದರಿಂದ ಶುದ್ಧವಾದ, ಒಳ್ಳೇ ವಿಷಯಗಳನ್ನು ನಾವು ಯೋಚಿಸಬೇಕೆಂದು ಯೆಹೋವನು ಬಯಸುತ್ತಾನೆ. ಯೆಹೋವನ ವಿವೇಕವು, “ಮೊದಲು ಶುದ್ಧವಾದದ್ದು, ತರುವಾಯ ಶಾಂತಿಶೀಲವಾದದ್ದು, ನ್ಯಾಯಸಮ್ಮತವಾದದ್ದು, ವಿಧೇಯತೆ ತೋರಿಸಲು ಸಿದ್ಧವಾದದ್ದು, ಕರುಣೆ ಮತ್ತು ಒಳ್ಳೇ ಫಲಗಳಿಂದ ತುಂಬಿರುವಂಥದ್ದು ಆಗಿದೆ; ಅದು ಪಕ್ಷಭೇದಗಳನ್ನು ಮಾಡುವುದಿಲ್ಲ, ಅದರಲ್ಲಿ ಕಪಟವೂ ಇಲ್ಲ” ಎಂದು ಶಿಷ್ಯ ಯಾಕೋಬನು ಬರೆದನು. (ಯಾಕೋ. 3:17) ಹಾಗಾಗಿ, ಅಶುದ್ಧ ಹಾಗೂ ಕೆಟ್ಟ ಸಂಗತಿಗಳನ್ನು ಕಲ್ಪಿಸಿಕೊಳ್ಳುವಂತೆ ಇಲ್ಲವೆ ಆಶಿಸುವಂತೆ ಮಾಡುವ ಯಾವುದೇ ಮನರಂಜನೆಯನ್ನು ನಾವು ತೊರೆದುಬಿಡಬೇಕು. ಯೆಹೋವನು ಏನನ್ನು ಪ್ರೀತಿಸುತ್ತಾನೆ, ಏನನ್ನು ದ್ವೇಷಿಸುತ್ತಾನೆ ಎನ್ನುವುದನ್ನು ನಾವು ಸ್ಪಷ್ಟವಾಗಿ ಅರ್ಥಮಾಡಿಕೊಂಡರೆ ಎಂಥ ಪುಸ್ತಕ, ಸಿನೆಮಾ, ಆಟವನ್ನು ಆರಿಸಿಕೊಳ್ಳಬೇಕೆಂದು ತಿಳಿಯಲು ಸುಲಭ. ಆಗ ನಾವೇನು ಮಾಡಬೇಕೆಂದು ಇತರರನ್ನು ಕೇಳಬೇಕಾಗಿಲ್ಲ.
16 ಚಿಕ್ಕಪುಟ್ಟ ನಿರ್ಣಯಗಳನ್ನು ಮಾಡುವಾಗ ಯೆಹೋವನು ಮೆಚ್ಚುವಂಥ ತುಂಬ ಆಯ್ಕೆಗಳು ಹೆಚ್ಚಾಗಿ ನಮ್ಮ ಮುಂದಿರುತ್ತವೆ. ಆದರೆ ಒಂದು ಅತಿ ಪ್ರಾಮುಖ್ಯ ನಿರ್ಣಯ ಮಾಡಬೇಕಾದಾಗ ಒಬ್ಬ ಸಭಾ ಹಿರಿಯ ಅಥವಾ ಅನುಭವಸ್ಥ ಸಹೋದರ ಸಹೋದರಿಯ ಹತ್ತಿರ ಸಲಹೆ ಕೇಳುವುದು ಒಳ್ಳೇದು. (ತೀತ 2:3-5; ಯಾಕೋ. 5:13-15) ಹಾಗಿದ್ದರೂ ಆ ವ್ಯಕ್ತಿ ನಮಗಾಗಿ ನಿರ್ಣಯ ಮಾಡುವಂತೆ ನಾವು ಕೇಳಿಕೊಳ್ಳಬಾರದು. ಬೈಬಲಿನಿಂದ ನಮಗೆ ತಿಳಿದಿರುವ ವಿಷಯಗಳನ್ನು ಜಾಗ್ರತೆಯಿಂದ ಯೋಚಿಸಿ ಅನಂತರ ನಾವೇ ನಿರ್ಣಯ ಮಾಡಬೇಕು. (ಇಬ್ರಿ. 5:14) ಅಪೊಸ್ತಲ ಪೌಲನು ಹೇಳಿದಂತೆ, ‘ಪ್ರತಿಯೊಬ್ಬನು ತನ್ನ ಸ್ವಂತ ಹೊರೆಯನ್ನು [ಅಂದರೆ ಜವಾಬ್ದಾರಿಯನ್ನು] ಹೊತ್ತುಕೊಳ್ಳಬೇಕು.’—ಗಲಾ. 6:5.
17. ಯೆಹೋವನಿಗೆ ಮೆಚ್ಚಿಕೆಯಾಗುವ ನಿರ್ಣಯಗಳನ್ನು ಮಾಡುವುದರಿಂದ ನಮಗೆ ಯಾವ ಪ್ರಯೋಜನಗಳಿವೆ?
17 ಯೆಹೋವನಿಗೆ ಮೆಚ್ಚಿಕೆಯಾಗುವ ನಿರ್ಣಯಗಳನ್ನು ನಾವು ಮಾಡುವಾಗ ಆತನಿಗೆ ಹತ್ತಿರವಾಗುತ್ತೇವೆ. ಆತನ ಮೆಚ್ಚುಗೆ ಮತ್ತು ಆಶೀರ್ವಾದವನ್ನೂ ಪಡೆಯುತ್ತೇವೆ. (ಯಾಕೋ. 4:8) ಆಗ ಯೆಹೋವನಲ್ಲಿ ನಮ್ಮ ನಂಬಿಕೆ ಇನ್ನಷ್ಟು ಬಲವಾಗುತ್ತದೆ. ಆದ್ದರಿಂದ ಬೈಬಲಿನಲ್ಲಿ ನಾವು ಓದುವ ವಿಷಯಗಳ ಕುರಿತು ಧ್ಯಾನಿಸುತ್ತಾ ಯೆಹೋವನ ಯೋಚನಾರೀತಿಯನ್ನು ಅರಿತುಕೊಳ್ಳೋಣ. ಆತನ ಕುರಿತು ಕಲಿತುಕೊಳ್ಳಲು ಭವಿಷ್ಯತ್ತಿನಲ್ಲಿ ನಮಗೆ ಯಾವಾಗಲೂ ಹೊಸಹೊಸ ವಿಷಯಗಳು ಇದ್ದೇ ಇರುತ್ತವೆ. (ಯೋಬ 26:14) ಆದರೆ ಈಗಲೇ ಆತನ ಕುರಿತು ಕಲಿಯಲು ನಾವು ಪ್ರಯಾಸಪಟ್ಟರೆ ವಿವೇಕಿಗಳಾಗುವೆವು ಮತ್ತು ಒಳ್ಳೇ ನಿರ್ಣಯಗಳನ್ನು ಮಾಡುವೆವು. (ಜ್ಞಾನೋ. 2:1-5) ಮಾನವ ವಿಚಾರಗಳು, ಯೋಜನೆಗಳು ಬದಲಾಗುತ್ತವೆ. ಆದರೆ ಯೆಹೋವನು ಎಂದಿಗೂ ಬದಲಾಗುವುದಿಲ್ಲ. ಕೀರ್ತನೆಗಾರನು ಅಂದದ್ದು: “ಯೆಹೋವನ ಆಲೋಚನೆಯೋ ಶಾಶ್ವತವಾಗಿಯೇ ನಿಲ್ಲುವದು; ಆತನ ಸಂಕಲ್ಪವು ಎಂದಿಗೂ ಕದಲುವದಿಲ್ಲ.” (ಕೀರ್ತ. 33:11) ಹೀಗೆ ನಾವು ಯೆಹೋವನು ಯೋಚಿಸುವ ರೀತಿಯಲ್ಲಿ ಯೋಚಿಸಲು ಕಲಿಯುವಾಗ ಅತ್ಯುತ್ತಮ ನಿರ್ಣಯಗಳನ್ನು ಮಾಡುವೆವು. ಆಗ ಆತನು ಮೆಚ್ಚುವ ವಿಷಯಗಳನ್ನು ಮಾಡುವೆವು.