ಲೋಕದಲ್ಲಿದೆ ಕಷ್ಟ-ನೋವು
2 | ಜೀವನರೀತಿಯನ್ನು ಕಾಪಾಡಿಕೊಳ್ಳಿ
ಇದು ಯಾಕೆ ಮುಖ್ಯ
ಅನೇಕ ಜನ್ರಿಗೆ ಪ್ರತಿದಿನ ಜೀವನ ನಡೆಸೋದು ತುಂಬ ಕಷ್ಟ ಆಗಿದೆ. ಲೋಕದ ಸಮಸ್ಯೆಗಳು ದಿನದಿಂದ ದಿನ ಜಾಸ್ತಿ ಆಗ್ತಾ ಇರೋದರಿಂದ ಈ ಕಷ್ಟ ಇನ್ನೂ ಹೆಚ್ಚಾಗುತ್ತಾ ಇದೆ. ಯಾಕೆ?
-
ವಿಪತ್ತುಗಳು ಬಂದಾಗ ಎಲ್ಲಾ ವಸ್ತುಗಳ ಬೆಲೆ ಆಕಾಶಕ್ಕೇರುತ್ತೆ. ಇದರಲ್ಲಿ ಊಟ, ಮನೆ ಬಾಡಿಗೆನೂ ಸೇರಿದೆ.
-
ತುಂಬ ಜನ ಕೆಲಸ ಕಳಕೊಳ್ತಾರೆ ಮತ್ತು ಇನ್ನು ಕೆಲವರು ಕಡಿಮೆ ಸಂಬಳಕ್ಕೆ ದುಡಿತಾರೆ.
-
ಪ್ರವಾಹ ಮತ್ತು ಭೂಕಂಪಗಳಿಂದ ಜನರ ಕೆಲಸ, ಮನೆ, ಆಸ್ತಿ-ಪಾಸ್ತಿಗಳೆಲ್ಲಾ ನಾಶ ಆಗುತ್ತೆ. ಹೀಗೆ ಜನರು ಬೀದಿಗೆ ಬರೋ ಪರಿಸ್ಥಿತಿ ಬರುತ್ತೆ.
ಈ ಮುಂದಿನ ವಿಷಯವನ್ನ ನೆನಪಿಡಿ
-
ನೀವು ಯೋಚನೆ ಮಾಡಿ ಖರ್ಚು ಮಾಡಿದ್ರೆ, ಹಣ ಉಳಿತಾಯ ಮಾಡಿದ್ರೆ, ಮುಂದೆ ಕಷ್ಟ ಬಂದಾಗ ಸ್ವಲ್ಪವಾದರೂ ಹಣ ಇರುತ್ತೆ.
-
ಇವತ್ತು ನಿಮ್ಮ ಹತ್ರ ಹಣ, ವಸ್ತುಗಳು ಇರಬಹುದು. ಆದರೆ ನಾಳೆ ಇಲ್ಲದೆನೂ ಹೋಗಬಹುದು.
-
ಕುಟುಂಬದಲ್ಲಿನ ಪ್ರೀತಿ-ಸಂತೋಷ, ಐಕ್ಯತೆಯನ್ನು ಹಣದಿಂದ ಖರೀದಿಸೋಕೆ ಆಗಲ್ಲ.
ಈಗ ನೀವೇನು ಮಾಡಬಹುದು
ಬೈಬಲಲ್ಲಿ ಹೀಗಿದೆ: “ಹಾಗಾಗಿ ನಮಗೆ ಊಟ ಬಟ್ಟೆ ಇದ್ರೆ ಸಾಕು. ಅದ್ರಲ್ಲೇ ತೃಪ್ತಿ ಪಡಬೇಕು.”—1 ತಿಮೊತಿ 6:8.
ಇರೋದರಲ್ಲೇ ತೃಪ್ತಿಯಿಂದಿರಿ. ಅಗತ್ಯ ಇಲ್ಲದ ವಸ್ತುಗಳ ಮೇಲೆ ಆಸೆ ಪಡಬೇಡಿ. ಅದರಲ್ಲೂ ನಮ್ಮ ಹತ್ರ ಕಡಿಮೆ ಹಣ ಇದ್ದಾಗ ಇದನ್ನ ಮನಸ್ಸಲ್ಲಿ ಇಡೋದು ತುಂಬ ಮುಖ್ಯ.
ಅಗತ್ಯ ಇಲ್ಲದ ವಸ್ತುಗಳನ್ನು ಖರೀದಿಸಬೇಡಿ. ಹಾಸಿಗೆ ಇದ್ದಷ್ಟು ಕಾಲು ಚಾಚಿ.