ಮಾಹಿತಿ ಇರುವಲ್ಲಿ ಹೋಗಲು

ಯುವ ಜನರ ಪ್ರಶ್ನೆಗಳು

ನೀವು ಒಂಟಿ ಅಂತ ನಿಮ್ಗೆ ಅನ್ಸುತ್ತಾ?

ನೀವು ಒಂಟಿ ಅಂತ ನಿಮ್ಗೆ ಅನ್ಸುತ್ತಾ?

ನೀವು ಆನ್‌ಲೈನಲ್ಲಿ, ಇತ್ತೀಚೆಗಿನ ಒಂದು ಪಾರ್ಟಿ ಫೋಟೋಸ್‌ ನೋಡ್ತಿದ್ದೀರ. ನಿಮ್ಮ ಫ್ರೆಂಡ್ಸೆಲ್ಲ ಆ ಪಾರ್ಟಿಲಿ ಇದ್ದಾರೆ. ಅವ್ರೆಲ್ಲ ಸಖತ್‌ ಮಜಾ ಮಾಡ್ತಿದ್ದಾರೆ ಅಂತ ಅನಿಸ್ತಿದೆ. ಆದ್ರೆ ಅಲ್ಲಿ ಏನೋ ಒಂದಿಲ್ಲ. ಸರಿಯಾಗಿ ನೋಡಿದ್ರೆ ಯಾರೋ ಒಬ್ರು ಮಿಸ್‌ ಆಗಿದ್ದಾರೆ. ಯಾರ್ಗೊತ್ತಾ?—ಅದು ನೀವೇ!

‘ನನ್ಯಾಕೆ ಅವ್ರು ಕರ್ದಿಲ್ಲ?’ ಅಂತ ನೀವು ಯೋಚಿಸ್ಬಹುದು.

ಈಗ ನಿಮ್ಗೆ ಬೇಜಾರಾಗ್ತಿದೆ. ನಿಮ್‌ ಫ್ರೆಂಡ್ಸ್‌ ನಿಮ್ಮ ಕೈಬಿಟ್ಟು ದೂರ ಹೋಗ್ತಿದ್ದಾರೆ ಅನ್ಸುತ್ತೆ. ನಿಮ್ಗೆ ಯಾರೂ ಇಲ್ಲ, ನೀವು ಒಬ್ಬಂಟಿ ಅನ್ನೋ ಯೋಚ್ನೆ ಕಾಡ್ಬಹುದು. ಆಗ ನೀವು, ‘ನಂಗ್ಯಾಕೆ ಒಬ್ಬ ಫ್ರೆಂಡೂ ಇಲ್ಲ?’ಅಂತ ಯೋಚಿಸ್ಬಹುದು.

 ಒಂಟಿತನದ ಕ್ವಿಜ್‌

 ಸರಿ ಅಥವಾ ತಪ್ಪು

  1.  1. ನಿಮ್ಗೆ ತುಂಬ ಫ್ರೆಂಡ್ಸ್‌ ಇದ್ರೆ, ನೀವು ಯಾವತ್ತೂ ಒಂಟಿ ಅಲ್ಲ.

  2.  2. ನೀವು ಸೋಷಿಯಲ್‌ ನೆಟ್ವರ್ಕ್‌ನಲ್ಲಿದ್ರೆ, ಯಾವತ್ತೂ ಒಂಟಿಯಾಗಿರಲ್ಲ.

  3.  3. ಜಾಸ್ತಿ ಚಾಟಿಂಗ್‌ ಮಾಡ್ತಿದ್ರೆ ಒಂಟಿ ಅನ್ಸೋದೇ ಇಲ್ಲ.

  4.  4. ಬೇರೆಯವರಿಗೆ ಸಹಾಯ ಮಾಡಿದ್ರೆ ನೀವು ಯಾವತ್ತೂ ಒಂಟಿಯಾಗಿರಲ್ಲ.

 ಮೇಲಿನ ನಾಲ್ಕೂ ಹೇಳಿಕೆಗಳು ತಪ್ಪು.

 ಯಾಕೆ?

 ಫ್ರೆಂಡ್‌ಶಿಪ್‌ ಮತ್ತು ಒಂಟಿತನದ ಕಡುಸತ್ಯ

  •   ನಿಮ್ಗೆ ತುಂಬ ಫ್ರೆಂಡ್ಸ್‌ ಇದ್ರೆ ನೀವು ಯಾವತ್ತೂ ಒಂಟಿ ಆಗಿರಲ್ಲ ಅಂತ ಹೇಳೋಕೆ ಆಗಲ್ಲ.

     “ನಾನು ನನ್‌ ಫ್ರೆಂಡ್ಸ್‌ ಬಗ್ಗೆ ಯೋಚಿಸ್ತೀನಿ. ಆದ್ರೆ ನನ್‌ ಫ್ರೆಂಡ್ಸ್‌ ನನ್‌ ಬಗ್ಗೆ ಯೋಚಿಸ್ತಾರಾ ಅಂತ ಡೌಟ್‌ ಇದೆ. ನಿಮ್ಮ ಸುತ್ತ ಫ್ರೆಂಡ್ಸ್‌ ಇದ್ರೂ ಅವ್ರು ನಿಮ್ಮನ್ನ ಪ್ರೀತಿಸ್ತಾರಾ, ನೀವಂದ್ರೆ ಅವ್ರಿಗೆ ಇಷ್ಟಾನಾ ಅನ್ನೋ ಡೌಟ್‌ ಬಂದಾಗ ಒಂಟಿತನ ತುಂಬ ಕಾಡುತ್ತೆ.”—ಆ್ಯನ್‌.

  •   ಸೋಷಿಯಲ್‌ ನೆಟ್ವರ್ಕ್‌ನಲ್ಲಿ ಸೇರ್ಕೊಂಡ್ರೆ ಒಂಟಿತನ ಹೋಗುತ್ತೆ ಅನ್ನೋ ಗ್ಯಾರಂಟಿ ಇಲ್ಲ.

     “ಕೆಲವ್ರು ಫ್ರೆಂಡ್ಸ್‌ನ ಬೀಚಲ್ಲಿ ಸಿಗೋ ನೈಸ್‌ ಕಲ್ಲನ್ನು ಹುಡುಕೋ ಥರ ಹುಡುಕ್ತಾರೆ. ನಿಮ್‌ ರೂಮ್‌ ಪೂರ್ತಿ ಇಂಥ ಕಲ್ಗಳಿಂದ ತುಂಬಿದ್ರೂ ಅವು ನಿಮ್ಮನ್ನ ಪ್ರೀತಿಸುತ್ತೆ ಅಂತ ನಿಮಗೆ ಅನ್ಸೋದೇ ಇಲ್ಲ. ಅದೇ ಥರ, ನಿಜವಾದ ಬಾಂಧವ್ಯ ಇಲ್ಲದೆ ಹೋದ್ರೆ ಆನ್‌ಲೈನ್‌ ಫ್ರೆಂಡ್ಸ್‌ ಜೀವ ಇಲ್ಲದ ನೈಸ್‌ ಕಲ್ಲಂತೆ ಇರ್ತಾರೆ.”—ಇಲೇನ್‌.

  •   ಜಾಸ್ತಿ ಚಾಟಿಂಗ್‌ ಮಾಡ್ತಿದ್ರೆ ನಿಮ್ಗೆ ಒಂಟಿತನ ಹೋಗುತ್ತೆ ಅಂತ ಹೇಳೋಕೆ ಆಗಲ್ಲ.

     “ಒಬ್ರೇ ಇದ್ದಾಗ ನಿಮ್ಮ ಫ್ರೆಂಡ್ಸ್‌ ಯಾರಾದ್ರೂ ಮೆಸೇಜ್‌ ಮಾಡಿದ್ದಾರಾ ಅಂತ ನೋಡೋಕೆ ಮತ್ತೆ-ಮತ್ತೆ ಮೊಬೈಲ್‌ ಚೆಕ್‌ ಮಾಡ್ತಿರ್ತೀರ. ಆದ್ರೆ ಈಗಾಗ್ಲೇ ನೀವು ಒಂಟಿಯಾಗಿರುವಾಗ ಯಾರೂ ನಿಮ್ಗೆ ಮೆಸೇಜ್‌ ಮಾಡಿಲ್ಲ ಅಂದ್ರೆ ಆ ಒಂಟಿತನ ಇನ್ನೂ ಜಾಸ್ತಿ ಆಗುತ್ತೆ!”—ಸೆರೆನಾ.

  •   ಬೇರೆಯವರಿಗೋಸ್ಕರ ಕೆಲ್ಸ ಮಾಡ್ತಿದ್ರೆ ಒಂಟಿತನ ಹೋಗುತ್ತೆ ಅನ್ನೋಕೆ ಆಗಲ್ಲ.

     “ನಾನ್‌ ಫ್ರೆಂಡ್ಸ್‌ ಜೊತೆ ಕಂಜೂಸಾಗಿ ಇರೋದೇ ಇಲ್ಲ. ಆದ್ರೆ ಅವ್ರು ನನ್ಜೊತೆ ಆ ರೀತಿ ಇರಲ್ಲ. ನಾನ್‌ ಅವ್ರಿಗೊಸ್ಕರ ತುಂಬ ಖರ್ಚ್‌ ಮಾಡಿ ತಪ್ಪು ಮಾಡ್ಬಿಟ್ಟೆ ಅಂತ ಯಾವತ್ತೂ ಅನ್ಸಿಲ್ಲ. ಆದ್ರೆ ಅವ್ರು ನನ್ಗೆ ಸ್ವಲ್ಪನೂ ಪ್ರೀತಿ ತೋರ್ಸಿಲ್ಲ. ತುಂಬ ಬೇಜಾರಾಗುತ್ತೆ.”—ರಿಚರ್ಡ್‌.

 ಸಾರಾಂಶ: ಒಂಟಿತನ ಅನ್ನೋದು ನಮ್ಮ ಭಾವನೆ ಅಷ್ಟೇ. “ಅದು ನಮ್ಮ ಒಳಗಿಂದ ಬರುತ್ತೆ ಹೊರತು, ಹೊರಗಿನ ವ್ಯಕ್ತಿ ಅಥ್ವಾ ಪರಿಸ್ಥಿತಿಯಿಂದ ಅಲ್ಲ,” ಎಂದು ಜೀನೆಟ್‌ ಎಂಬ ಟೀನೇಜ್‌ ಹುಡುಗಿ ಹೇಳ್ತಾಳೆ.

 ನಿಮ್ಗೆ ಫ್ರೆಂಡ್ಸ್‌ ಇಲ್ಲ, ಒಂಟಿಯಾಗಿದ್ದೀರ ಅಂತ ಅನಿಸಿದ್ರೆ ಏನು ಮಾಡಬಹುದು?

 ಇದನ್ನ ಗೆಲ್ಲೋ ದಾರಿ!

ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಿ.

 “ನಂಗ್ಯಾರೂ ಇಲ್ಲ ಅಂತ ಅನಿಸಿದಾಗ ಒಂಟಿತನ ಕಾಡುತ್ತೆ. ನಿಮ್ಮನ್ನ ಯಾರೂ ಇಷ್ಟಪಡೋಕೆ ಸಾಧ್ಯಾನೇ ಇಲ್ಲ ಅಂತ ನಿಮ್ಗೇ ಅನಿಸ್ತಿದ್ರೆ, ನೀವ್‌ ಹೇಗ್‌ ತಾನೇ ಧೈರ್ಯದಿಂದ ಫ್ರೆಂಡ್ಸ್‌ ಮಾಡ್ಕೊಳ್ಳೋಕೆ ಸಾಧ್ಯ ಹೇಳಿ?”—ಜೀನಟ್‌.

 ಬೈಬಲ್‌ ಹೇಳೋ ಮಾತು:ನಿನ್ನಂತೆಯೇ ನಿನ್ನ ನೆರೆಯವನನ್ನು ಪ್ರೀತಿಸು. (ಗಲಾತ್ಯ 5:14) ಒಳ್ಳೇ ಫ್ರೆಂಡ್ಸ್‌ ನಿಮ್ಗೆ ಸಿಗ್ಬೇಕಂದ್ರೆ ಮೊದ್ಲು ನಮ್ಗೆ ನಮ್ಮ ಬಗ್ಗೆ ನಂಬ್ಕೆ ಇರ್ಬೇಕು. ಆದ್ರೆ ಜಂಭ ಇರಬಾರದು.—ಗಲಾತ್ಯ 6:3, 4.

ನಿಮ್ಮನ್ನ ನೋಡಿ ನೀವೆ ಅಯ್ಯೋ ಅನ್ಕೋಬೇಡಿ.

 “ಒಂಟಿತನ ಅನ್ನೋದು ಹೂತ್ಹೋಗೋ ಕೆಸರಿನ ಗುಂಡಿ ಇದ್ದಂಗೆ. ಮೇಲ್ಬರೋಕೆ ಪ್ರಯತ್ನ ಮಾಡಿದಷ್ಟು ನಾವು ಹೂತೋಗೋ ಚಾನ್ಸ್‌ ಜಾಸ್ತಿ. ಅದೇ ಥರ ‘ಅಯ್ಯೋ ನಾನ್‌ ಹೀಗಾಗೋದ್ನಲ್ಲ ಅಂತ’ಯೋಚಿಸ್ತಿದ್ರೆ, ಅಳೋರ ಸಂತೆ ಥರ ಆಗ್ಬಿಡುತ್ತೆ. ನಮ್‌ ಜೊತೆ ಸೇರೋಕೆ ಯಾರಿಗೂ ಇಷ್ಟ ಆಗಲ್ಲ.”—ಎರಿನ್‌.

 ಬೈಬಲ್‌ ಹೇಳೋ ಮಾತು: “ಪ್ರೀತಿ . . . ಸ್ವಹಿತವನ್ನು ಹುಡುಕುವುದಿಲ್ಲ.” (1 ಕೊರಿಂಥ 13:4, 5) ನಿಜ ಏನು ಗೊತ್ತಾ? ನಮ್‌ ಬಗ್ಗೆನೇ ಜಾಸ್ತಿ ಯೋಚಿಸ್ತಿದ್ರೆ, ನಾವು ಬೇರೆಯವರ ಬಗ್ಗೆ ಯೋಚಿಸಲ್ಲ. ಇದ್ರಿಂದ ಜನ ನಮ್‌ ಜೊತೆ ಸೇರೋಕೆ ಇಷ್ಟಪಡಲ್ಲ. (2 ಕೊರಿಂಥ 12:15) ನೆನಪಿಡಿ: ಬೇರೆಯವ್ರು ನಿಮ್‌ ಜೊತೆ ಚೆನ್ನಾಗಿದ್ರೆನೇ ನೀವು ಗೆದ್ದಂಗೆ ಅಂತ ನೀವ್‌ ಅದ್ಕೊಂಡ್ರೆ, ಸೋಲೋದು ಗ್ಯಾರಂಟಿ! ಯಾಕೆ ಗೊತ್ತಾ? “ನಂಗೆ ಯಾರೂ ಫೋನ್‌ ಮಾಡಲ್ಲ,” “ನನ್ನ ಯಾರೂ ಎಲ್ಲಿಗೂ ಕರೆಯೋದೇ ಇಲ್ಲ” ಅಂತ ನೀವು ಇಪ್ಪತ್ನಾಲ್ಕು ಗಂಟೆ ಗೊಣಗ್ತಾ ಇದ್ರೆ, ನಿಮ್‌ ಖುಷಿನ ಇನ್ನೊಬ್ರ ಕೈಯಲ್ಲಿಟ್ಟಿದ್ದೀರ ಅಂತ ಅನ್ಸಲ್ವಾ? ನಿಮ್‌ ಜುಟ್ಟು ಬೇರೆಯವರ ಕೈಯಲ್ಲಿಟ್ಟು ನೀವು ಖುಷಿಯಾಗಿರೋಕೆ ಆಗುತ್ತಾ?

ಸಿಕ್‌-ಸಿಕ್ದವರನ್ನ ಫ್ರೆಂಡ್ಸ್‌ ಮಾಡ್ಕೋಬೇಡಿ.

 “ಒಂಟಿತನ ಇರೋವ್ರಿಗೆ ಜನ ಅಟೆನ್ಶನ್‌ ಕೊಡ್ಬೇಕು ಅಂತ ಆಸೆ ಇರುತ್ತೆ. ಈ ಆಸೆ ಎಷ್ಟಿರುತ್ತೆ ಅಂದ್ರೆ ಅವ್ರಿಗೆ ಅಟೆನ್ಶನ್‌ ಕೊಡ್ತಿರೋವ್ರು ಎಂಥ ಜನ ಅಂತ ಕೂಡ ಯೋಚಿಸೋಕೆ ಹೋಗಲ್ಲ. ಜನ ಅವ್ರನ್ನ ಇಷ್ಟಪಟ್ರೆ ಅಷ್ಟೇ ಸಾಕು ಅಂದ್ಕೊಳ್ತಾರೆ. ಆದ್ರೆ ಸ್ವಲ್ಪ ಜನ ನಿಮ್ಮಿಂದ ಏನೋ ಪಡ್ಕೊಳೋಕೆ ನೀವಂದ್ರೆ ಇಷ್ಟ ಅನ್ನೋ ಥರ ನಾಟ್ಕ ಆಡ್ತಾರೆ. ಕೊನೆಗೆ, ನೀವು ಮೊದ್ಲಿಗಿಂತ ಜಾಸ್ತಿ ಒಂಟಿಯಾಗ್ತೀರ.”—ಬ್ರೈಯನ್‌.

 ಬೈಬಲ್‌ ಹೇಳೋ ಮಾತು: “ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು, ಜ್ಞಾನಹೀನರ ಒಡನಾಡಿ ಸಂಕಟ ಪಡುವನು.” (ಜ್ಞಾನೋಕ್ತಿ 13:20) ಹಸಿವೆಯಿಂದ ಒದ್ದಾಡ್ತಿರೋನು ಏನು ಸಿಕ್ಕಿದ್ರು ತಿಂದುಬಿಡ್ತಾನೆ. ಅದೇ ಥರ ಫ್ರೆಂಡ್ಸ್‌ ಬೇಕೇಬೇಕು ಅಂತ ತುದಿಗಾಲಲ್ಲಿ ನಿಂತಿರೋರು, ತಪ್ಪಾದ ಜಾಗದಲ್ಲೆಲ್ಲ ಫ್ರೆಂಡ್ಸ್‌ಗೋಸ್ಕರ ಹುಡುಕ್ತಾರೆ. ಆಗ ಮೋಸ ಮಾಡೋವ್ರ ಕೈಗೆ ಸಿಕ್ಕಿ ಹಾಕೊಳ್ತಾರೆ. ಈಗ ಸಿಗೋವ್ರು ಇಂಥವ್ರೇ, ಇವರಿಗಿಂತ ಒಳ್ಳೇ ಫ್ರೆಂಡ್ಸ್‌ ಎಲ್ಲಿ ಸಿಕ್ತಾರೆ ಅಂತ ತಪ್ಪಾಗಿ ಅನ್ಕೊಳ್ತಾರೆ.

 ಒಟ್ಟಿನಲ್ಲಿ ಹೇಳೋದಾದ್ರೆ: ಎಲ್ರಿಗೂ ಒಂದಲ್ಲ ಒಂದು ಟೈಮಲ್ಲಿ ಒಂಟಿ ಅಂತ ಅನಿಸುತ್ತೆ; ಒಬ್ರಿಗೆ ಜಾಸ್ತಿ ಅನಿಸುತ್ತೆ, ಇನ್ನೊಬ್ರಿಗೆ ಕಡಿಮೆ ಅನಿಸುತ್ತೆ ಅಷ್ಟೇ. ಒಂಟಿ ಭಾವನೆ ನಮ್ಮನ್ನ ಕುಗ್ಗಿಸೋದೇನೋ ನಿಜ. ಆದ್ರೂ ಅದು ಒಂದು ಭಾವನೆ ಅಷ್ಟೇ ಅನ್ನೋದನ್ನ ನೆನ್ಪಿಡಬೇಕು. ನಮ್ಮ ಭಾವನೆಗಳನ್ನ ಯೋಚನೆಗಳು ನಿಯಂತ್ರಿಸ್ತವೆ ಅನ್ನೋದು ನಿಜ. ಆದ್ರೆ ಆ ಯೋಚನೆಗಳನ್ನ ನಮ್ಮಿಂದ ನಿಯಂತ್ರಿಸಕ್ಕಾಗುತ್ತೆ ಅನ್ನೋದನ್ನ ಮರೆಯಬಾರ್ದು.

 ನಿಮ್ಮ ಫ್ರೆಂಡ್ಸ್‌ ಹೀಗಿರಬೇಕು-ಹಾಗಿರಬೇಕು ಅಂತ ಅತಿಯಾಗಿ ಆಸೆಪಡಬೇಡಿ. “ಎಲ್ರೂ ನಿಮ್‌ ಬೆಸ್ಟ್‌ ಫ್ರೆಂಡ್ಸ್‌ ಆಗೋಕೆ ಸಾಧ್ಯವಿಲ್ಲ. ಆದ್ರೆ ನಿಮ್ಮ ಬಗ್ಗೆ ಕೇರ್‌ ತೋರ್ಸೋ ಫ್ರೆಂಡ್ಸ್‌ ಗ್ಯಾರಂಟಿ ಸಿಗ್ತಾರೆ. ಇಂಥ ಕೇರ್‌ ನಿಮ್ಗೆ ಸಿಕ್ಕಾಗ ಒಂಟಿತನ ಓಡೋಗುತ್ತೆ” ಅಂತ ಜೀನಟ್‌ ಹೇಳ್ತಾರೆ.

 ಇನ್ನೂ ಹೆಚ್ಚು ಸಹಾಯ ಬೇಕಾ? ಫ್ರೆಂಡ್‌ಶಿಪ್‌ ಬಗ್ಗೆ ಇರೋ ಭಯ ಓಡಿಸಿ” ಅನ್ನೋ ವಿಷಯದ ಬಗ್ಗೆ ಓದಿ. ಜೊತೆಗೆ “ಒಂಟಿತನದ ಜೊತೆ ಹೋರಾಟ” (ಇಂಗ್ಲಿಷಲ್ಲಿ ಲಭ್ಯ) ಅನ್ನೋ PDF ಡೌನ್‌ಲೋಡ್‌ ಮಾಡಿಕೊಳ್ಳಿ.