ಮಾಹಿತಿ ಇರುವಲ್ಲಿ ಹೋಗಲು

ಬಿಡದೆ ಇರೋ ಕಾಯಿಲೆಯೊಂದಿಗೆ ಜೀವನ ಮಾಡೋಕೆ ಬೈಬಲ್‌ ಸಹಾಯ ಮಾಡುತ್ತಾ?

ಬಿಡದೆ ಇರೋ ಕಾಯಿಲೆಯೊಂದಿಗೆ ಜೀವನ ಮಾಡೋಕೆ ಬೈಬಲ್‌ ಸಹಾಯ ಮಾಡುತ್ತಾ?

ಬೈಬಲ್‌ ಕೊಡೋ ಉತ್ತರ

 ಖಂಡಿತ ಸಹಾಯ ಮಾಡುತ್ತೆ. ಕಾಯಿಲೆ ಬಿದ್ದ ತನ್ನ ಸೇವಕರ ಬಗ್ಗೆ ದೇವರಿಗೆ ತುಂಬ ಕಾಳಜಿ ಇದೆ. ಒಬ್ಬ ನಂಬಿಗಸ್ತ ಸೇವಕನ ಬಗ್ಗೆ ಮಾತಾಡ್ತಾ ಬೈಬಲ್‌ ಹೀಗೆ ಹೇಳುತ್ತೆ: “ಅವನಿಗೆ ಹುಷಾರಿಲ್ಲದೆ ಹಾಸಿಗೆ ಹಿಡಿದಾಗ ಯೆಹೋವ ಅವನಿಗೆ ಆಸರೆಯಾಗಿ ಇರ್ತಾನೆ.” (ಕೀರ್ತನೆ 41:3) ನೀವು ಯಾವ್ದಾದ್ರೂ ಬಿಡದೆ ಇರೋ ಕಾಯಿಲೆಯಿಂದ ನರಳ್ತಾ ಇದ್ರೆ ಅದನ್ನ ತಾಳ್ಕೊಳ್ಳೋಕೆ ಈ ಮೂರು ಹೆಜ್ಜೆಗಳು ನಿಮಗೆ ಸಹಾಯ ಮಾಡುತ್ತೆ.

  1.   ತಾಳ್ಕೊಳ್ಳೋಕೆ ಪ್ರಾರ್ಥನೆ ಮಾಡಿ. ಪ್ರಾರ್ಥನೆ ಮಾಡಿದಾಗ “ನಿಮ್ಮ ತಿಳುವಳಿಕೆಗೂ ಮೀರಿದ ಶಾಂತಿಯನ್ನ ದೇವರು ನಿಮಗೆ ಕೊಡ್ತಾನೆ” ಆಗ ಆ ಶಾಂತಿ ನಿಮ್ಮ ಚಿಂತೆಯನ್ನ ಕಡಿಮೆ ಮಾಡಿ ತಾಳ್ಕೊಳ್ಳೋಕೆ ಬಲ ಕೊಡುತ್ತೆ.—ಫಿಲಿಪ್ಪಿ 4:6, 7.

  2.   ನಿರಾಸೆ ಆಗಬೇಡಿ. ಬೈಬಲ್‌ ಹೀಗೆ ಹೇಳುತ್ತೆ: “ಹರ್ಷಹೃದಯ ಒಳ್ಳೇ ಮದ್ದು, ಕುಗ್ಗಿದ ಮನಸ್ಸು ಒಬ್ಬನ ಶಕ್ತಿಯನ್ನೆಲ್ಲಾ ಹೀರಿಹಾಕುತ್ತೆ.” (ಜ್ಞಾನೋಕ್ತಿ 17:22) ಯಾವಾಗ್ಲೂ ಪಾಸಿಟೀವಾಗಿ, ಖುಷಿಖುಷಿಯಾಗಿ ಇರೋಕೆ ಪ್ರಯತ್ನ ಪಟ್ರೆ ನಿಮ್ಮ ನೋವು ಬೆಟ್ಟದಷ್ಟು ಇದ್ರೂ ಕರಗಿ ಹೋಗುತ್ತೆ ಮತ್ತು ನಿಮ್ಮ ಆರೋಗ್ಯನೂ ಚೆನ್ನಾಗಿ ಇರುತ್ತೆ.

  3.   ದೇವರು ಕೊಟ್ಟಿರೋ ನಿರೀಕ್ಷೆ ಮೇಲೆ ನಂಬಿಕೆ ಇಡಿ. ಬಿಡದೆ ಇರೋ ಕಾಯಿಲೆಯಿಂದ ನಾವು ನರಳುತ್ತಿರುವಾಗ ದೇವರು ಕೊಟ್ಟಿರೋ ನಿರೀಕ್ಷೆ ನಮ್ಮಲ್ಲಿ ಧೈರ್ಯ ತುಂಬುತ್ತೆ, ಖುಷಿಯಾಗಿರೋಕೆ ಸಹಾಯ ಮಾಡುತ್ತೆ. (ರೋಮನ್ನರಿಗೆ 12:12) “ದೇಶದಲ್ಲಿ ಒಬ್ಬನೂ “ನನಗೆ ಹುಷಾರಿಲ್ಲ” ಅಂತ ಹೇಳೋ ಕಾಲ ಬರುತ್ತೆ ಅಂತ ಬೈಬಲ್‌ ಹೇಳುತ್ತೆ. (ಯೆಶಾಯ 33:24) ಇವತ್ತು ಯಾರ ಕೈಯಿಂದಾನೂ ಗುಣ ಮಾಡೋಕೆ ಆಗದೆ ಇರೋ ಕಾಯಿಲೆಗಳನ್ನೆಲ್ಲ ‘ನಾನು ಗುಣ ಮಾಡ್ತೀನಿ’ ಅಂತ ದೇವರು ಮಾತು ಕೊಟ್ಟಿದ್ದಾನೆ. ಉದಾಹರಣೆಗೆ ವಯಸ್ಸಾದವರು ಮತ್ತೆ ಯುವಕರಾಗ್ತಾರೆ ಅಂತ ಬೈಬಲ್‌ ಹೇಳುತ್ತೆ. “ಅವನ ದೇಹ ಯೌವನದಲ್ಲಿ ಇದ್ದದ್ದಕ್ಕಿಂತ ಹೆಚ್ಚು ಮೃದು ಆಗ್ಲಿ, ಯೌವನದಲ್ಲಿ ಅವನಿಗಿದ್ದ ಬಲ, ಚೈತನ್ಯ ಮತ್ತೆ ಸಿಗ್ಲಿ.”—ಯೋಬ 33:25.

 ನೆನಪಿಡಿ: ಯೆಹೋವನ ಸಾಕ್ಷಿಗಳಿಗೆ ದೇವರು ಕೊಟ್ಟ ಮಾತಿನ ಮೇಲೆ ನಂಬಿಕೆ ಇದ್ರೂ ಅವ್ರಿಗೆ ಹುಷಾರ್‌ ಇಲ್ಲದಿದ್ದಾಗ ವೈದ್ಯರ ಸಹಾಯ ಪಡಿತಾರೆ. (ಮಾರ್ಕ 2:17) ಅವರು ‘ಈ ಟ್ರೀಟ್ಮೆಂಟ್‌ ತಗೊಳ್ಳಿ ಆ ಮೆಡಿಸನ್‌ ತಗೊಳ್ಳಿ’ ಅಂತ ನಿಮಗೆ ಹೇಳಲ್ಲ. ಅದು ಒಬ್ಬ ವ್ಯಕ್ತಿಯ ಸ್ವಂತ ನಿರ್ಧಾರ.