ನಾನು ಪ್ರಾರ್ಥನೆ ಮಾಡಿದ್ರೆ ದೇವರು ಸಹಾಯ ಮಾಡ್ತಾನಾ?
ಬೈಬಲ್ ಕೊಡೋ ಉತ್ತರ
ಹೌದು, ಒಬ್ಬ ವ್ಯಕ್ತಿ ದೇವರ ಇಷ್ಟದ ಪ್ರಕಾರ ಪ್ರಾರ್ಥನೆ ಮಾಡಿದ್ರೆ ಖಂಡಿತ ಆತನು ಸಹಾಯ ಮಾಡ್ತಾನೆ. ನೀವು ಈ ಮುಂಚೆ ಪ್ರಾರ್ಥನೆ ಮಾಡಿಲ್ಲಾಂದ್ರೂ ಬೈಬಲಲ್ಲಿರೋ ದೇವರ ಸೇವಕರು ಮಾಡಿರೋ ಪ್ರಾರ್ಥನೆಗಳು ನಿಮಗೆ ಸಹಾಯ ಮಾಡುತ್ತೆ. ಅವರು “ದೇವರೇ, ಸಹಾಯಮಾಡು” ಅಂತ ಬೇಡಿಕೊಂಡ್ರು. ಉದಾಹರಣೆಗೆ:
“ಯೆಹೋವನೇ, ನನ್ನ ದೇವರೇ, ಸಹಾಯಮಾಡು; ನಿನ್ನ ಕೃಪೆಗೆ ತಕ್ಕಂತೆ ರಕ್ಷಿಸು.”—ಕೀರ್ತನೆ 109:26, BSI ಬೈಬಲ್.
“ನಾನು ನಿರ್ಗತಿಕ ಮತ್ತು ಬಡವ; ಓ ದೇವರೇ, ಸಹಾಯಮಾಡು.”—ಕೀರ್ತನೆ 69:6, ಡುವೇ ವರ್ಷನ್.
ಈ ಮಾತುಗಳನ್ನ ಹೇಳಿದವ್ರಿಗೆ ದೇವರ ಮೇಲೆ ತುಂಬ ನಂಬಿಕೆಯಿತ್ತು. ‘ಹೃದಯ ಒಡೆದು ಹೋಗಿರುವವರು, ಮನಸ್ಸು ಚೂರುಚೂರಾಗಿ ಹೋಗಿರುವವರು’ ಕೂಡ ತನ್ನ ಇಷ್ಟದ ಪ್ರಕಾರ ಪ್ರಾರ್ಥನೆ ಮಾಡಿದ್ರೆ ಯೆಹೋವ ಖಂಡಿತ ಕೇಳ್ತಾನೆ.—ಕೀರ್ತನೆ 34:18.
‘ದೇವರು ನನ್ನಿಂದ ತುಂಬ ದೂರ ಇದ್ದಾನೆ. ನನ್ನ ಕಷ್ಟಗಳ ಬಗ್ಗೆ ಆತನು ತಲೆಕೆಡಿಸ್ಕೊಳ್ಳಲ್ಲ’ ಅಂತ ಯೋಚಿಸಬೇಡಿ. ಯಾಕಂದ್ರೆ “ಯೆಹೋವ ಮಹೋನ್ನತನಾಗಿದ್ರೂ ಆತನ ಗಮನವೆಲ್ಲ ದೀನರ ಮೇಲೆನೇ ಇರುತ್ತೆ, ಆದ್ರೆ ಆತನು ಅಹಂಕಾರಿಗಳನ್ನ ದೂರದಲ್ಲೇ ಇಡ್ತಾನೆ” ಅಂತ ಬೈಬಲ್ ಹೇಳುತ್ತೆ. (ಕೀರ್ತನೆ 138:6) ಅಷ್ಟೇ ಅಲ್ಲ ಯೇಸು ಒಂದು ಸಲ ತನ್ನ ಶಿಷ್ಯರಿಗೆ “ನಿಮ್ಮ ತಲೆಯಲ್ಲಿ ಎಷ್ಟು ಕೂದಲಿದೆ ಅಂತಾನೂ ದೇವರಿಗೆ ಗೊತ್ತು” ಅಂತ ಹೇಳಿದನು. (ಮತ್ತಾಯ 10:30) ನಿಮ್ಮ ಬಗ್ಗೆ ನಿಮಗೆ ಗೊತ್ತಿಲ್ಲದಿರೋ ಎಷ್ಟೋ ವಿಷಯಗಳು ದೇವರಿಗೆ ಗೊತ್ತು. ನಿಮ್ಮ ಬಗ್ಗೆ ಇಷ್ಟೆಲ್ಲಾ ತಿಳ್ಕೊಂಡಿರೋ ದೇವರು ನೀವು ಚಿಂತೆಯಲ್ಲಿ ಮುಳುಗಿರುವಾಗ ಸಹಾಯ ಮಾಡದೇ ಇರ್ತಾನಾ!—1 ಪೇತ್ರ 5:7.