ದೇವರ ಹೆಸ್ರು ಯೇಸುನಾ?
ಬೈಬಲ್ ಕೊಡೋ ಉತ್ತರ
ಯೇಸು “ನಾನು ದೇವರ ಮಗ” ಅಂತ ಜನ್ರಿಗೆ ಹೇಳಿದನು. (ಯೋಹಾನ 10:36; 11:4) ಆದ್ರೆ ಆತನು ಯಾವತ್ತೂ ತಾನು ಸರ್ವಶಕ್ತ ದೇವರು ಅಂತ ಹೇಳಿಲ್ಲ.
ಅದೂ ಅಲ್ಲದೇ ಆತನು ದೇವರಿಗೆ ಪ್ರಾರ್ಥನೆ ಮಾಡಿದನು. (ಮತ್ತಾಯ 26:39) ತನ್ನ ಶಿಷ್ಯರಿಗೆ ಪ್ರಾರ್ಥನೆ ಮಾಡೋದು ಹೇಗೆ ಅಂತ ಕಲಿಸುವಾಗ ಹೀಗೆ ಹೇಳಿದನು: “ಸ್ವರ್ಗದಲ್ಲಿರೋ ಅಪ್ಪಾ, ನಿನ್ನ ಹೆಸ್ರು ಪವಿತ್ರವಾಗಲಿ.”—ಮತ್ತಾಯ 6:9.
ಯೇಸು ದೇವರ ವಾಕ್ಯದಲ್ಲಿರೋ ಒಂದು ವಚನವನ್ನ ಹೇಳುವಾಗ ದೇವರ ಹೆಸ್ರನ್ನ ತಿಳಿಸಿದನು. ಆತನು “ಇಸ್ರಾಯೇಲ್ ಜನ್ರೇ ಕೇಳಿ, ನಮ್ಮ ದೇವರಾದ ಯೆಹೋವ ಒಬ್ಬನೇ ಯೆಹೋವ” ಅಂತ ಹೇಳಿದನು.—ಮಾರ್ಕ 12:29; ಧರ್ಮೋಪದೇಶಕಾಂಡ 6:4.