ದುಡ್ಡಿನ ಸಮಸ್ಯೆ ಮತ್ತು ಸಾಲಬಾಧೆಗೆ ಪರಿಹಾರ
ಬೈಬಲ್ ಕೊಡೋ ಉತ್ತರ
ಬೈಬಲ್ನಲ್ಲಿರೋ ಈ ನಾಲ್ಕು ಸಲಹೆಗಳು ಹಣದ ಸಮಸ್ಯೆ ಮತ್ತು ಸಾಲ ಭಾದೆಯಿಂದ ಹೊರಗೆ ಬರಲು ಸಹಾಯ ಮಾಡುತ್ತೆ.
ಖರ್ಚು ಮಾಡೋ ಮುಂಚೆ ಯೋಚಿಸಿ. “ಕಷ್ಟಪಟ್ಟು ಕೆಲಸ ಮಾಡುವವನ ಯೋಜನೆಗಳು ಯಶಸ್ಸು ಪಡಿಯುತ್ತೆ, ಆದ್ರೆ ಆತುರಪಡುವವರು ಬಡತನಕ್ಕೆ ಬೀಳ್ತಾರೆ.” (ಜ್ಞಾನೋಕ್ತಿ 21:5) ಆಫರ್ ಇದೆ ಅಂದ ತಕ್ಷಣ ಹೋಗಿ ತಗೊಬೇಡಿ. ಬದಲಿಗೆ ಒಂದು ಬಜೆಟ್ ಮಾಡಿ, ಅಗತ್ಯ ಇದ್ದರೆ ಮಾತ್ರ ತಗೊಳ್ಳಿ.
ಸುಮ್ಸುಮ್ಮನೆ ಸಾಲ ಮಾಡಬೇಡಿ. “ಸಾಲ ಮಾಡಿರುವವನು ಸಾಲಕೊಟ್ಟವನ ಸೇವಕ ಆಗ್ತಾನೆ.” (ಜ್ಞಾನೋಕ್ತಿ 22:7) ಈಗಾಗಲೇ ಸಾಲ ಮಾಡಿಕೊಂಡು ಅದನ್ನ ತೀರಿಸೋಕೆ ಕಷ್ಟ ಆಗ್ತಿದ್ರೆ ನಿಮಗೆ ಸಾಲ ಕೊಟ್ಟವರ ಹತ್ತಿರ ಹೋಗಿ ರಿಯಾಯಿತಿ ಕೇಳಿ. ಪ್ರಯತ್ನಿಸ್ತಾ ಇರಿ. ಒಂದುವೇಳೆ ಅವಿವೇಕದಿಂದ ಜಾಮೀನು ನಿಂತು ಸಾಲ ತೀರಿಸೋ ಜವಾಬ್ದಾರಿ ನಿಮ್ಮ ತಲೆ ಮೇಲೆ ಬಂದಿದ್ರೆ ಜ್ಞಾನೋಕ್ತಿಯಲ್ಲಿರೋ ಈ ಸಲಹೆಯನ್ನ ಪಾಲಿಸಿ. ಅಲ್ಲಿ ಹೀಗಿದೆ, “ಅವನ ಬಳಿಗೆ ಹೋಗಿ ನಿನ್ನನ್ನು ಸಾಲದಿಂದ ಬಿಡುಗಡೆ ಮಾಡುವಂತೆ ಬೇಡಿಕೋ. ವಿಶ್ರಮಿಸಿಕೊಳ್ಳಬೇಕೆಂದಾಗಲೀ ನಿದ್ರಿಸಬೇಕೆಂದಾಗಲೀ ತಡಮಾಡದಿರು.” (ಜ್ಞಾನೋಕ್ತಿ 6:1-5, ಪರಿಶುದ್ದ ಬೈಬಲ್ a) ಅವರು ಒಪ್ಪಲಿಲ್ಲ ಅಂದ್ರೆ ಒಂದ್ಸಲ ಕೇಳಿ ಸುಮ್ಮನಾಗದೆ ಪದೇಪದೇ ಕೇಳಿ.
ಹಣನೇ ಸರ್ವಸ್ವ ಅಲ್ಲ. “ಹೊಟ್ಟೆಕಿಚ್ಚುಪಡೋ ಮನುಷ್ಯ ಹಣ ಆಸ್ತಿಗಾಗಿ ಆಸೆಪಡ್ತಾನೆ. ಆದ್ರೆ ತನಗೆ ಬಡತನ ಬರುತ್ತೆ ಅಂತ ಅವನಿಗೆ ಗೊತ್ತಿರಲ್ಲ.” (ಜ್ಞಾನೋಕ್ತಿ 28:22) ಹೊಟ್ಟೆಕಿಚ್ಚು ಮತ್ತು ಅತಿಯಾಸೆಯಿಂದ ನಮಗೆ ಲಾಭಕ್ಕಿಂತ ನಷ್ಟಾನೇ ಹೆಚ್ಚು.
ತೃಪ್ತರಾಗಿರಿ. “ನಮಗೆ ಊಟ ಬಟ್ಟೆ ಇದ್ರೆ ಸಾಕು. ಅದ್ರಲ್ಲೇ ತೃಪ್ತಿ ಪಡಬೇಕು.” (1 ತಿಮೊತಿ 6:8) ಎಷ್ಟೇ ದುಡ್ಡು ಕೊಟ್ರು ಖುಷಿ ಮತ್ತೆ ತೃಪ್ತಿ ಸಿಗಲ್ಲ. ದುಡ್ಡು ಇಲ್ಲ ಅಂದ್ರೂ ಇವತ್ತು ಎಷ್ಟೊಂದು ಜನ ಖುಷಿಯಾಗಿದ್ದಾರೆ. ಅಂಥವರ ಹತ್ತಿರ ದುಡ್ಡಿಲ್ಲದೆ ಇರಬಹುದು ಆದ್ರೆ ಕಷ್ಟದಲ್ಲಿ ಕೈ ಹಿಡಿಯೋ ಒಳ್ಳೆ ಸ್ನೇಹಿತರು ಮತ್ತು ಕುಟುಂಬದವರಿದ್ದಾರೆ. ಅಷ್ಟೇ ಅಲ್ಲ ಅವರು ದೇವರನ್ನೂ ಫ್ರೆಂಡ್ ಮಾಡ್ಕೊಂಡಿದ್ದಾರೆ.—ಜ್ಞಾನೋಕ್ತಿ 15:17; 1 ಪೇತ್ರ 5:6, 7.
a Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.