ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

JW ಪ್ರಸಾರ

ರೊಕುವಿನಲ್ಲಿ ವಿಡಿಯೋ ಆನ್‌ ಡಿಮ್ಯಾಂಡ್ ಅನ್ನು ನೋಡಿ

ರೊಕುವಿನಲ್ಲಿ ವಿಡಿಯೋ ಆನ್‌ ಡಿಮ್ಯಾಂಡ್ ಅನ್ನು ನೋಡಿ

JW ಪ್ರಸಾರದಲ್ಲಿರುವ ಯಾವುದೇ ವಿಡಿಯೋಗಳನ್ನು ವಿಡಿಯೋ ಆನ್‌ ಡಿಮ್ಯಾಂಡ್ನಲ್ಲಿ ನೋಡಬಹುದು. ಅದರಲ್ಲಿ ಪ್ಲೇ ಆಗುತ್ತಿರುವ ವಿಡಿಯೋವನ್ನು ಅರ್ಧಕ್ಕೆ ನಿಲ್ಲಿಸಿ, ಸ್ವಲ್ಪ ಹಿಂದಕ್ಕೆ ಅಥವಾ ಮುಂದಕ್ಕೆ ಹೋಗಿ ನೋಡಬಹುದು. ನೋಡುತ್ತಿರುವ ವಿಡಿಯೋವನ್ನು ಬಿಟ್ಟು ಮುಂದಿನ ವಿಡಿಯೋವನ್ನು (ಸ್ಕಿಪ್‌ ಮಾಡಿ) ನೋಡಬಹುದು. ಒಂದೇ ವಿಡಿಯೋವನ್ನು ಅಥವಾ ಒಂದು ಗುಂಪಿನಲ್ಲಿರುವ ಎಲ್ಲಾ ವಿಡಿಯೋಗಳನ್ನು ಸಹ ನೋಡಬಹುದು.

(ಗಮನಿಸಿ: ಈ ಪುಟದಲ್ಲಿ ರೊಕು 3 ರಿಮೋಟಿನ ಗುಂಡಿಗಳ ಚಿತ್ರಗಳನ್ನು ಕೊಡಲಾಗಿದೆ. ನಿಮ್ಮ ಬಳಿ ಇರುವ ರಿಮೋಟ್‌ ಸ್ವಲ್ಪ ಬೇರೆ ರೀತಿ ಇರಬಹುದು.)

JW ಪ್ರಸಾರದ ಮುಖಪುಟದಲ್ಲಿರುವ ವಿಡಿಯೋ ಆನ್‌ ಡಿಮ್ಯಾಂಡ್ ವಿಭಾಗವನ್ನು ಆಯ್ಕೆ ಮಾಡಿಕೊಳ್ಳಿ. ಆಗ ವಿಡಿಯೋ ಗುಂಪುಗಳು ಕಾಣಿಸುತ್ತವೆ. ಇದರಲ್ಲಿ ನಿಮಗೆ ಬೇಕಾದ ವಿಡಿಯೋವನ್ನು ಹುಡುಕಿ ನೋಡಲು ಹೀಗೆ ಮಾಡಿ:

 ವಿಡಿಯೋ ಒಂದನ್ನು ಹುಡುಕಲು

ರೊಕು ರಿಮೋಟಿನ ಎಡಗಡೆ ಮತ್ತು ಬಲಗಡೆ ಮುಖ ಮಾಡಿರುವ ಬಾಣದ ಗುರುತನ್ನು ಒತ್ತುತ್ತಾ ಹೋಗಿ. ಹೀಗೆ ಒತ್ತುವಾಗ ಒಂದೊಂದೇ ಗುಂಪು ಎದ್ದುಕಾಣುತ್ತದೆ. ಎದ್ದುಕಾಣುವಂಥ ಗುಂಪಿನ ಚಿತ್ರದ ಜೊತೆಗೆ ಅದರ ಹೆಸರು ಮತ್ತು ಚುಟುಕಾದ ವಿವರಣೆ ಪರದೆಯ ಮಧ್ಯ ಭಾಗದಲ್ಲಿ ಬರುತ್ತದೆ. ಆ ವಿಡಿಯೋ ಗುಂಪನ್ನು ಆಯ್ಕೆಮಾಡಲು ಓಕೆ ಗುಂಡಿಯನ್ನು ಒತ್ತಿ.

ಕೆಲವೊಂದು ವಿಡಿಯೋಗಳು ಒಂದಕ್ಕಿಂತ ಹೆಚ್ಚು ಗುಂಪುಗಳಲ್ಲಿರುತ್ತವೆ. ಉದಾಹರಣೆಗೆ, ದಾರಿ ತಪ್ಪಿದ ಮಗ ಮರಳಿ ಮನೆಗೆ ಎಂಬ ವಿಡಿಯೋ ಚಲನಚಿತ್ರ, ಕುಟುಂಬ ಮತ್ತು ಯುವಜನರು ಎಂಬ ಗುಂಪುಗಳಲ್ಲಿ ನಿಮಗೆ ಸಿಗಬಹುದು.

ವಿಡಿಯೋಗಳ ಪ್ರತಿಯೊಂದು ಅಡ್ಡಸಾಲು ಒಂದೊಂದು ವಿಡಿಯೋ ಗುಂಪನ್ನು ಸೂಚಿಸುತ್ತದೆ. ಈ ಪುಟವನ್ನು ನೋಡಲು ರೊಕು ರಿಮೋಟಿನ ಬಾಣದ ಗುರುತನ್ನು ಒತ್ತುತ್ತಾ ಹೋದ ಹಾಗೇ ಒಂದೊಂದೇ ವಿಡಿಯೋ ಎದ್ದುಕಾಣುತ್ತದೆ. ಜೊತೆಗೆ ಆ ವಿಡಿಯೋದ ಹೆಸರು ಮತ್ತು ಅದು ಎಷ್ಟು ಸಮಯದ್ದು ಎಂದು ಡೀಟೇಲ್ಸ್ ಬಬಲ್‌ನಲ್ಲಿ ಕಾಣಿಸುತ್ತದೆ.

  • ಮೇಲೆ ಮತ್ತು ಕೆಳಗೆ ಮುಖ ಮಾಡಿರುವ ಬಾಣದ ಗುರುತು: ಬೇರೆ ಬೇರೆ ವಿಡಿಯೋ ಗುಂಪುಗಳಿಗೆ ಹೋಗಲು ಇದು ಸಹಾಯ ಮಾಡುತ್ತದೆ. ಅಡ್ಡಸಾಲಿನಲ್ಲಿರುವ ವಿಡಿಯೋಗಳ ಮೇಲುಗಡೆ ಆ ವಿಡಿಯೋ ಗುಂಪಿನ ಹೆಸರು ಬರುತ್ತದೆ.

  • ಎಡಗಡೆ ಮತ್ತು ಬಲಗಡೆ ಮುಖ ಮಾಡಿರುವ ಬಾಣದ ಗುರುತು: ವಿಡಿಯೋ ಗುಂಪಿನಲ್ಲಿರುವ ಬೇರೆ ಬೇರೆ ವಿಡಿಯೋಗಳಿಗೆ ಹೋಗಲು ಇದು ಸಹಾಯ ಮಾಡುತ್ತದೆ.

    ಕಿವಿಮಾತು: ಪರದೆಯ ಮೇಲೆ ಬಲಗಡೆಯಲ್ಲಿ ವಿಡಿಯೋ ಗುಂಪಲ್ಲಿ ಎಷ್ಟು ವಿಡಿಯೋಗಳಿವೆ ಮತ್ತು ಎದ್ದುಕಾಣುವಂಥ ವಿಡಿಯೋ ಯಾವುದು ಎಂದು ಕೊಡಲಾಗಿರುತ್ತದೆ.

ವಿಡಿಯೋವನ್ನು ಆಯ್ಕೆ ಮಾಡಲು ಮತ್ತು ವಿಡಿಯೋದ ವಿವರಣೆಯನ್ನು ನೋಡಲು ಓಕೆ ಒತ್ತಿ. ಈ ಪುಟದಲ್ಲಿ ಕಾಣಿಸುವ ಆಯ್ಕೆಗಳಲ್ಲಿ ನಿಮಗೆ ಬೇಕಾದದ್ದನ್ನು ಆಯ್ದುಕೊಳ್ಳಿ:

  • ಪ್ಲೇ: ಇದು ವಿಡಿಯೋವನ್ನು ಮೊದಲಿನಿಂದ ಪ್ಲೇ ಮಾಡುತ್ತದೆ.

  • ಪ್ಲೇ ವಿತ್‌ ಸಬ್ಟೈಟಲ್ಸ್: ಈ ಆಯ್ಕೆ ನೀವು ಆರಿಸಿಕೊಂಡಿರುವ ವಿಡಿಯೋಗೆ ಅಡಿಬರಹ ಇದ್ದರೆ ಮಾತ್ರ ಕೆಲಸಮಾಡುತ್ತದೆ. ನೀವು ಈ ಆಯ್ಕೆಯನ್ನು ಒತ್ತಿದಾಗ ನೀವು ಆರಿಸಿಕೊಂಡಿರುವ ವಿಡಿಯೋಗೆ ಅಡಿಬರಹ ಬರುತ್ತದೆ. ಜೊತೆಗೆ ಸ್ಟ್ರೀಮಿಂಗ್‌ ಮತ್ತು ವಿಡಿಯೋ ಆನ್‌ ಡಿಮ್ಯಾಂಡ್ ವಿಭಾಗದಲ್ಲಿ ಅಡಿಬರಹ ಇರುವ ಎಲ್ಲಾ ವಿಡಿಯೋಗಳಿಗೂ ಅಡಿಬರಹ ಬರುತ್ತದೆ. ಅಡಿಬರಹ ಬೇಡವೆಂದರೆ ಪ್ಲೇ ವಿದೌಟ್‌ ಸಬ್ಟೈಟಲ್ಸ್ ಎಂಬ ಆಯ್ಕೆಯನ್ನು ಒತ್ತಿ.

  • ಪ್ಲೇ ಆಲ್‌ ಇನ್‌ ದಿಸ್‌ ಕಲೆಕ್ಷನ್‌: ಈಗಾಗಲೇ ಪ್ಲೇ ಆಗುತ್ತಿರುವ ವಿಡಿಯೋದ ಜೊತೆ ಆ ಗುಂಪಿನಲ್ಲಿರುವ ಎಲ್ಲಾ ವಿಡಿಯೋಗಳು ಒಂದಾದಮೇಲೆ ಒಂದರಂತೆ ಪ್ಲೇ ಆಗುತ್ತದೆ.

    ಗಮನಿಸಿ: ಗುಂಪಿನಲ್ಲಿರುವ ಎಲ್ಲಾ ವಿಡಿಯೋಗಳು ಪ್ಲೇ ಆದಮೇಲೆ ತನ್ನಷ್ಟಕ್ಕೇ ನಿಂತುಹೋಗುತ್ತದೆ.

 ವಿಡಿಯೋ ಪ್ಲೇ ಆಗುತ್ತಿರುವಾಗ ಇರುವ ಆಯ್ಕೆಗಳು

ವಿಡಿಯೋ ಆನ್‌ ಡಿಮ್ಯಾಂಡ್ನಲ್ಲಿ ವಿಡಿಯೋ ಪ್ಲೇ ಆಗುತ್ತಿರುವಾಗ ಕೆಳಗೆ ಕೊಡಲಾದ ಎಲ್ಲ ಆಯ್ಕೆಗಳನ್ನು ನಿಮ್ಮ ರೊಕು ರಿಮೋಟಿನ ಮೂಲಕ ಬಳಸಬಹುದು:

  • ಪಾಝ್‌ (Pause): ಈ ಗುಂಡಿಯನ್ನು ಒತ್ತಿದರೆ ಪ್ಲೇ ಆಗುತ್ತಿರುವ ವಿಡಿಯೋ ನಿಂತುಹೋಗುತ್ತದೆ. ಪಾಝ್‌ ಗುಂಡಿಯನ್ನು ಮತ್ತೆ ಒತ್ತಿದರೆ ವಿಡಿಯೋ ಪ್ಲೇ ಆಗುತ್ತದೆ.

  • ಫಾಸ್ಟ್‌ ಫಾರ್‌ವರ್ಡ್‌: ಈ ಗುಂಡಿ ಒತ್ತಿದರೆ ವಿಡಿಯೋ ಬೇಗಬೇಗ ಮುಂದೆ ಹೋಗುತ್ತಾ ಇರುತ್ತದೆ. ನಿಮಗೆ ಎಲ್ಲಿಂದ ವಿಡಿಯೋ ನೋಡಬೇಕೋ ಅಲ್ಲಿ ಬಂದಾಗ ಪ್ಲೇ ಗುಂಡಿಯನ್ನು ಒತ್ತಿ. ಆಗ ಅಲ್ಲಿಂದ ವಿಡಿಯೋ ಶುರುವಾಗುತ್ತದೆ.

    ಕಿವಿಮಾತು: ವಿಡಿಯೋ ಇನ್ನೂ ಬೇಗಬೇಗ ಮುಂದೆ ಹೋಗಬೇಕೆಂದರೆ ಫಾಸ್ಟ್‌ ಫಾರ್‌ವರ್ಡ್‌ ಗುಂಡಿಯನ್ನು ಪುನಃ ಪುನಃ ಒತ್ತಿ.

  • ರಿವೈಂಡ್: ಈ ಗುಂಡಿ ಒತ್ತಿದರೆ ವಿಡಿಯೋ ಹಿಂದೆ ಹೋಗುತ್ತಾ ಇರುತ್ತದೆ. ನಿಮಗೆ ಎಲ್ಲಿಂದ ವಿಡಿಯೋ ನೋಡಬೇಕೋ ಅಲ್ಲಿ ಬಂದಾಗ ಪ್ಲೇ ಗುಂಡಿಯನ್ನು ಒತ್ತಿ. ಆಗ ಅಲ್ಲಿಂದ ವಿಡಿಯೋ ಶುರುವಾಗುತ್ತದೆ.

    ಕಿವಿಮಾತು: ವಿಡಿಯೋ ಇನ್ನೂ ಬೇಗಬೇಗ ಹಿಂದೆ ಹೋಗಬೇಕೆಂದರೆ ರಿವೈಂಡ್ ಗುಂಡಿಯನ್ನು ಪುನಃ ಪುನಃ ಒತ್ತಿ.

  • ಬಲಗಡೆ ಮುಖ ಮಾಡಿರುವ ಬಾಣದ ಗುರುತು: ಈ ಗುಂಡಿಯನ್ನು ಒತ್ತಿದರೆ ಪ್ಲೇ ಆಗುತ್ತಿರುವ ವಿಡಿಯೋ 10 ಸೆಕೆಂಡು ಮುಂದೆ ಹೋಗುತ್ತದೆ. ನಿಮಗೆ ಬೇಕಾದ ಕಡೆಗೆ ಬಂದಾಗ ಪ್ಲೇ ಗುಂಡಿ ಒತ್ತಿ.

  • ಎಡಗಡೆ ಮುಖ ಮಾಡಿರುವ ಬಾಣದ ಗುರುತು: ಈ ಗುಂಡಿಯನ್ನು ಒತ್ತಿದರೆ ಪ್ಲೇ ಆಗುತ್ತಿರುವ ವಿಡಿಯೋ 10 ಸೆಕೆಂಡು ಹಿಂದೆ ಹೋಗುತ್ತದೆ. ನಿಮಗೆ ಬೇಕಾದ ಕಡೆಗೆ ಬಂದಾಗ ಪ್ಲೇ ಗುಂಡಿ ಒತ್ತಿ.

  • ಕೆಳಗೆ ಮುಖ ಮಾಡಿರುವ ಬಾಣದ ಗುರುತು: ಈ ಗುಂಡಿ ಒತ್ತಿದರೆ ವಿಡಿಯೋ ಕುರಿತ ಮಾಹಿತಿಯನ್ನು ಸ್ವಲ್ಪ ಸೆಕೆಂಡುಗಳ ತನಕ ತೋರಿಸುತ್ತದೆ. ಪುನಃ ಈ ಬಾಣದ ಗುಂಡಿಯನ್ನು ಒತ್ತಿದರೆ ಮಾಹಿತಿ ಹೊರಟು ಹೋಗುತ್ತದೆ.

  • ಮೇಲೆ ಮುಖ ಮಾಡಿರುವ ಬಾಣದ ಗುರುತು/ಬ್ಯಾಕ್‌: ಈ ಗುಂಡಿ ಒತ್ತಿದರೆ ವಿಡಿಯೋದ ಬಗ್ಗೆ ವಿವರಣೆ ಇರುವ ಪುಟಕ್ಕೆ ವಾಪಸ್ಸು ಹೋಗುತ್ತದೆ.

 ಹೊಸ ವಿಡಿಯೋಗಳನ್ನು ಅಥವಾ ವಿಶೇಷ ವಿಡಿಯೋಗಳನ್ನು ನೋಡಲು

JW ಪ್ರಸಾರದ ಮುಖಪುಟದಲ್ಲಿರುವ ವಿಡಿಯೋ ಆನ್‌ ಡಿಮ್ಯಾಂಡ್ನಲ್ಲಿ ಎರಡು ವಿಶೇಷ ಗುಂಪುಗಳಿವೆ:

  1. ವಿಶೇಷ ವಿಡಿಯೋಗಳು: ಈ ಗುಂಪಿನಲ್ಲಿ ಆಸಕ್ತಿ ಹುಟ್ಟಿಸುವಂಥ ವಿಡಿಯೋಗಳು ಇರುತ್ತವೆ. ಇದರಲ್ಲಿ ನಮ್ಮ ವಾರದ ಕೂಟಗಳಿಗೆ ಮತ್ತು ಕುಟುಂಬ ಆರಾಧನೆಗೆ ಸಂಬಂಧಪಟ್ಟ ವಿಡಿಯೋಗಳು ಇರುತ್ತವೆ.

  2. ಹೊಸ ವಿಡಿಯೋಗಳು: ಇತ್ತೀಚೆಗೆ ಬಂದಿರುವ ಆರು ಹೊಸ ವಿಡಿಯೋಗಳು ಇದರಲ್ಲಿರುತ್ತವೆ.

ಈ ಎರಡು ಗುಂಪಿನಲ್ಲಿರುವ ಯಾವುದಾದರೊಂದು ವಿಡಿಯೋವನ್ನು ಆಯ್ಕೆಮಾಡಲು ಹೀಗೆ ಮಾಡಿ:

  • ಮೇಲೆ ಅಥವಾ ಕೆಳಗೆ ಮುಖ ಮಾಡಿರುವ ಬಾಣದ ಗುರುತನ್ನು ಬಳಸಿ ನಿಮಗೆ ಬೇಕಾದ ಗುಂಪನ್ನು ಎದ್ದುಕಾಣುವಂತೆ ಮಾಡಿ.

  • ಆ ಗುಂಪಿನಲ್ಲಿ ಯಾವ್ಯಾವ ವಿಡಿಯೋಗಳಿವೆ ಎಂದು ನೋಡಲು ಓಕೆ ಗುಂಡಿಯನ್ನು ಒತ್ತಿ.

  • ಗುಂಪಿನಲ್ಲಿರುವ ವಿಡಿಯೋಗಳಲ್ಲಿ ನಿಮಗೆ ಬೇಕಾದ ವಿಡಿಯೋವನ್ನು ಎದ್ದುಕಾಣುವಂತೆ ಮಾಡಲು ಮೇಲೆ ಅಥವಾ ಕೆಳಗೆ ಮುಖಮಾಡಿರುವ ಬಾಣದ ಗುರುತನ್ನು ಒತ್ತಿ.

  • ಆ ವಿಡಿಯೋವನ್ನು ಆಯ್ಕೆಮಾಡಲು ಮತ್ತು ಆ ವಿಡಿಯೋದ ವಿವರಣೆ ಇರುವ ಪುಟವನ್ನು ತೆರೆಯಲು ಓಕೆ ಒತ್ತಿ.

    ಗಮನಿಸಿ: ಪ್ಲೇ ಆಲ್‌ ಇನ್‌ ದಿಸ್‌ ಕಲೆಕ್ಷನ್‌ ಗುಂಡಿಯನ್ನು ಒತ್ತಿದರೆ ನೀವು ಆರಿಸಿಕೊಂಡಿರುವ ವಿಶೇಷ ಗುಂಪಿನಲ್ಲಿರುವ ಎಲ್ಲಾ ವಿಡಿಯೋಗಳು ಪ್ಲೇ ಆಗುತ್ತವೆ.